Sheep Farming Training-ಆರ್ ಸೆಟ್ ಸಂಸ್ಥೆಯಿಂದ ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ!

October 13, 2025 | Siddesh
Sheep Farming Training-ಆರ್ ಸೆಟ್ ಸಂಸ್ಥೆಯಿಂದ ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ!
Share Now:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದೋಗ ತರಬೇತಿ ಸಂಸ್ಥೆ ಬೆಂಗಳೂರು(Rseti Bangalore)ಕೇಂದ್ರದಿಂದ ಗ್ರಾಮೀಣ ಭಾಗದ ಯುವ ರೈತಾಪಿ ಅಭ್ಯರ್ಥಿಗಳಿಗೆ ಕೃಷಿಯ ಜೊತೆಗೆ ವೈಜ್ಞಾನಿಕವಾಗಿ ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಆರಂಭಿಸಲು ಉಚಿತವಾಗಿ ತರಬೇತಿಯನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ಬದಲಾಗುತ್ತಿರುವ ಹವಾಮಾಣ ಸನ್ನಿವೇಶದಲ್ಲಿ ಕೃಷಿ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಹೈನುಗಾರಿಕೆ ಮತ್ತು ಕುರಿ ಮತ್ತು ಮೇಕೆ ಸಾಕಾಣಿಕೆ(Sheep Farming Training)ಸಹ ಮಾಡುವುದು ಅತ್ಯಗತ್ಯವಾಗಿ ಏಕೆಂದರೆ ಕೃಷಿಯ ಜೊತೆ ಉಪ ಕಸುಬುಗಳನ್ನು ಮಾಡಿದ್ದಲ್ಲಿ ಮಾತ್ರ ಆರ್ಥಿಕವಾಗಿ ಸಬಲರಾಗಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ಆರಂಭಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದೋಗ ತರಬೇತಿ ಸಂಸ್ಥೆ ಉಚಿತ ತರಬೇತಿಯನ್ನು ಆಯೋಜನೆ ಮಾಡಲಾಗಿದೆ.

ಇದನ್ನೂ ಓದಿ: MSP Scheme in Karnataka-ಬೆಂಬಲ ಬೆಲೆಯಲ್ಲಿ ಶೇಂಗಾ,ಸೂರ್ಯಕಾಂತಿ ಸೇರಿದಂತೆ 5 ಉತ್ಪನ್ನಗಳ ಖರೀದಿ ಆರಂಭ! ಬೆಲೆ ಎಷ್ಟು?

ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು(Free Sheep And Goat Farming Training) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಿ ಭಾಗವಹಿಸಬಹುದು? ತರಬೇತಿ ಪಡೆಯಲು ಅವಶ್ಯಕ ದಾಖಲೆಗಳೇನು? ತರಬೇತಿಗೆ ನೋಂದಣಿ ಮಾಡುವುದು ಹೇಗೆ? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Sheep And Goat Farming Training Date-ತರಬೇತಿ ಆರಂಭ ದಿನಾಂಕ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದೋಗ ತರಬೇತಿ ಸಂಸ್ಥೆ ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೇಂದ್ರದಲ್ಲಿ ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯು ದಿನಾಂಕ: 27 ಅಕ್ಟೋಬರ್ 2025 ರಿಂದ ಆರಂಭವಾಗಿ ಒಟ್ಟು 13 ದಿನಗಳ ಕಾಲ ನಡೆಯಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Self Employment Loan Scheme-ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆಯಡಿ ಸಬ್ಸಿಡಿಯಲ್ಲಿ ₹2.0 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

Who can participate in free training-ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?

ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯಲ್ಲಿ ಭಾಗವಹಿಸಲು ಈ ಕೆಳಗೆ ತಿಳಿಸಿರುವ ಅರ್ಹತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.

  • ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅಭ್ಯರ್ಥಿಯ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು.
  • ತರಬೇತಿಯನ್ನು ಪಡೆದ ಬಳಿಕ ತಮ್ಮದೇ ಅದ ಸ್ವಂತ ಉದ್ದಿಮೆಯನ್ನು ಆರಂಭಿಸುವ ಇಚ್ಚೆಯಿರುವವರಿಗೆ ಮೊದಲ ಆದ್ಯತೆ ಇರುತ್ತದೆ.
  • ಬಿಪಿಎಲ್ ಕಾರ್ಡ ಮತ್ತು ಗ್ರ‍ಾಮೀಣ ಭಾಗದ ಯುವಕರಿಗೆ ಪ್ರಥಮ ಅವಕಾಶವಿರುತ್ತದೆ.

ಇದನ್ನೂ ಓದಿ: PM Svanidi Yojane 2025-ಪಿಎಂ ಸ್ವನಿಧಿ ಯೋಜನೆ ಎಂದರೇನು? ಎಷ್ಟು ಸಾಲ ಪಡೆಯಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ!

Kuri Sakanike Tarabeti

ಇದನ್ನೂ ಓದಿ: Bajaj scholarship 2025-ಇಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ 8 ಲಕ್ಷ ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

Free Sheep Farming Training-ತರಬೇತಿಯು ಸಂಪೂರ್ಣ ಉಚಿತ ಯಾವುದೇ ಶುಲ್ಕ ಪಾವತಿಸಬೇಕಿಲ್ಲ:

ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ ಇದಲ್ಲದೇ ತರಬೇತಿ ಸಮಯದಲ್ಲಿ ಕೇಂದ್ರದಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಉಚಿತವಾಗಿ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

How To Apply For Training-ತರಬೇತಿಯಲ್ಲಿ ಭಾಗವಹಿಸುವುದು ಹೇಗೆ?

ಆಸಕ್ತಿಯುಳ್ಳ ಅಭ್ಯರ್ಥಿಗಳು ದಿನಾಂಕ: 27/10/2025 ಸೋಮವಾರ ಬೆಳಗ್ಗೆ 9.00 ಘಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ),
ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುವ ತರಬೇತಿಗೆ ನೇರವಾಗಿ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗಬೇಕಾಗಿ ಈ ಮೂಲಕ ಸೂಚಿಸಲಾಗಿದೆ.

ಇದನ್ನೂ ಓದಿ: Period Leave Policy-ರಾಜ್ಯದ್ಯಂತ ಮಹಿಳಾ ನೌಕರಿಗೆ ಭರ್ಜರಿ ಸಿಹಿ ಸುದ್ದಿ: ಪ್ರತಿ ತಿಂಗಳು 1 ದಿನ ಋತುಚಕ್ರ ರಜೆ!

ಮುಂಚಿತವಾಗಿ ಹೆಸರು ನೋಂದಾಯಿಸಿ:

ಆಸಕ್ತ ಅಭ್ಯರ್ಥಿಗಳು ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿದ್ದು ಇದಕ್ಕಾಗಿ ಈ ಮೊಬೈಲ್ ಸಂಖ್ಯೆಗೆ ದೂರವಾಣಿ ಸಂಖ್ಯೆ 8970476050,9591514154, 9686248369 ಗೆ ಕರೆ ಮಾಡಿ ತಮ್ಮ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು.

Sheep And Goat Farming Training Details-ತರಬೇತಿಯಲ್ಲಿ ಯಾವೆಲ್ಲ ವಿಷಯದ ಕುರಿತು ಮಾಹಿತಿ ತಿಳಿಸಲಾಗುತ್ತದೆ?

ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆಯು ಒಟ್ಟೂ 13 ದಿನ ನಡೆಯಲಿದ್ದು ಈ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಈ ಕೆಳಗೆ ತಿಳಿಸಿರುವ ವಿಷಯಗಳ ಕುರಿತು ಮಾಹಿತಿಯನ್ನು ತಿಳಿಸಲಾಗುತ್ತದೆ.

  • ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ.
  • ವೈಜ್ಞಾನಿಕ ಮಾದರಿಯಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ಮನೆ ನಿರ್ಮಾಣ.
  • ಕುರಿ ಮತ್ತು ಮೇಕೆ ಸಾಕಾಣಿಕೆಗೆ ಬ್ಯಾಂಕ್ ಮೂಲಕ ಸಾಲ ಮತ್ತು ಸಬ್ಸಿಡಿ ಯೋಜನೆಯ ಮಾಹಿತಿ.
  • ಕುರಿ ಮತ್ತು ಮೇಕೆ ಮರಿ ಪಾಲನೆ ಮತ್ತು ಲಸಿಕೆ ಪದ್ದತಿ ವಿವರ ಒಟ್ಟಾರೆಯಾಗಿ ಪ್ರಯೋಗಿಕವಾಗಿ ಕುರಿ ಮತ್ತು ಮೇಕೆ ಸಾಕಾಣಿಕೆ ಕುರಿತು ಸಂಪೂರ್ಣ ವಿವರವನ್ನು ಈ ತರಬೇತಿಯಲ್ಲಿ ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: