Tarpaulin Subsidy 2026-ಕೃಷಿ ಇಲಾಖೆಯಿಂದ ಶೇ 90% ರಿಯಾಯಿತಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!

January 28, 2026 | Siddesh
Tarpaulin Subsidy 2026-ಕೃಷಿ ಇಲಾಖೆಯಿಂದ ಶೇ 90% ರಿಯಾಯಿತಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!
Share Now:

ಕೃಷಿಕರಿಗೆ ಇಲ್ಲಿದೆ ನೋಡಿ ಸುವರ್ಣ ಅವಕಾಶ, ಪ್ರತಿ ವರ್ಷದಂತೆ(Tarpaulin Subsidy)ಈ ವರ್ಷವೂ ಸಹ ಕರ್ನಾಟಕ ಸರ್ಕಾರವು ಕೃಷಿ ಇಲಾಖೆಯ ವತಿಯಿಂದ 50% ರಿಂದ 90% ಸಹಾಯಧನದಲ್ಲಿ ಟಾರ್ಪಾಲಿನ್ ಪಡೆಯಲು ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಮುಂಬರುವ ಮಳೆಗಾಲದಲ್ಲಿ ಬೆಳೆಗಳ ರಕ್ಷಣೆ, ಧಾನ್ಯ ಸಂಗ್ರಹಣೆ, ಕೃಷಿ ಯಂತ್ರೋಪಕರಣಗಳನ್ನು ಸುರಕ್ಷಿತವಾಗಿಡಲು ಈ ಟಾರ್ಪಾಲಿನ್ ಅತ್ಯಂತ(Krishi Ilake Subsidy Schemes) ಉಪಯುಕ್ತ ವಸ್ತುವಾಗಿದೆ. ಆದ್ದರಿಂದ ರೈತರು ಈ ಉಪಯೋಗವನ್ನು ಪಡೆದುಕೊಳ್ಳಲು ಕೋರಿದೆ. ಈ ಮಾಹಿತಿಯು ಉಪಯುಕ್ತವೆನಿಸಿದ್ದಲ್ಲಿ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: Aadhar App-ಇನ್ನುಂದೆ ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಇದ್ದರೆ! ಆಧಾರ್ ಕಾರ್ಡ ಬೇಕಿಲ್ಲ!

ಪ್ರಸ್ತುತ ಇಂದಿನ ಈ ಅಂಕಣದಲ್ಲಿ ಸಹಾಯಧನದಲ್ಲಿ ಟಾರ್ಪಾಲಿನ್ ಅನ್ನು ಪಡೆಯಲು ಯಾರೆಲ್ಲ ರೈತರು ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ? ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲಾತಿಗಳಾವುವು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸುವ ಹಂತಗಳಾವುವು? ಇನ್ನಿತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರರಿಸಲಾಗಿದೆ.

Purpose Of this SCheme-ಈ ಯೋಜನೆಯ ಪ್ರಮುಖ ಉದ್ದೇಶವೇನು?

ಕೃಷಿ ಉತ್ಪನ್ನಗಳ ರಕ್ಷಣೆ: ಧಾನ್ಯಗಳು, ಬೆಳೆಗಳು, ಗೊಬ್ಬರ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಮಳೆ, ಬಿಸಿಲು ಮತ್ತು ಧೂಳಿನಿಂದ ರಕ್ಷಿಸಲು ಟರ್ಪಾಲಿನ್ ಅನ್ನು ಬಳಸಲಾಗುತ್ತದೆ.

ಕೊಯ್ಲಿನ ನಂತರ ಬೆಳೆಗಳನ್ನು ತಾತ್ಕಾಲಿಕವಾಗಿ ಶೇಖರಿಸಲು ಇದು ಸಹಾಯಕವಾಗಿದೆ.

ಸಾಗಾಣಿಕೆ: ಕೃಷಿ ಉತ್ಪನ್ನಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವಾಗ ಟರ್ಪಾಲಿನ್‌ನಿಂದ ಮುಚ್ಚಿ, ಉತ್ಪನ್ನಗಳನ್ನು ಹವಾಮಾನದಿಂದ ರಕ್ಷಿಸಲಾಗುತ್ತದೆ.

ಇದನ್ನೂ ಓದಿ: Marriage Registration-ಇನ್ಮುಂದೆ ಮನೆಯಲ್ಲೇ ಕುಳಿತು ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿ!

ನೀರಿನ ಶೇಖರಣೆ: ಕೆಲವು ಸಂದರ್ಭಗಳಲ್ಲಿ, ಟರ್ಪಾಲಿನ್‌ನಿಂದ ಕೊಳವೆಗಳನ್ನು ರಚಿಸಿ ಮಳೆನೀರನ್ನು ಶೇಖರಿಸಲು ಬಳಸಲಾಗುತ್ತದೆ, ಇದು ನೀರಾವರಿಗೆ ಸಹಾಯಕವಾಗಿದೆ.

ತಾತ್ಕಾಲಿಕ ಆಶ್ರಯ: ಕೃಷಿಕರು ಕೃಷಿ ಕೆಲಸದ ವೇಳೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲು ಟರ್ಪಾಲಿನ್ ಬಳಸುತ್ತಾರೆ, ಇದು ಮಳೆ ಅಥವಾ ಬಿಸಿಲಿನಿಂದ ರಕ್ಷಣೆ ನೀಡುತ್ತದೆ.

ಪಶುಸಂಗೋಪನೆ: ಜಾನುವಾರುಗಳಿಗೆ ತಾತ್ಕಾಲಿಕ ಆಶ್ರಯವನ್ನು ಒದಗಿಸಲು ಅಥವಾ ಒಣಹುಲ್ಲು, ಮೇವು ಮುಂತಾದವುಗಳನ್ನು ರಕ್ಷಿಸಲು ಟರ್ಪಾಲಿನ್ ಬಳಕೆಯಾಗುತ್ತದೆ.

ಕೃಷಿ ಉಪಕರಣಗಳ ರಕ್ಷಣೆ: ಟ್ರಾಕ್ಟರ್, ಕೃಷಿ ಯಂತ್ರಗಳು ಮತ್ತು ಇತರ ಉಪಕರಣಗಳನ್ನು ಹವಾಮಾನದಿಂದ ರಕ್ಷಿಸಲು ಟರ್ಪಾಲಿನ್‌ನಿಂದ ಮುಚ್ಚಲಾಗುತ್ತದೆ.

ಇದನ್ನೂ ಓದಿ: Coconut Insurance-ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ: ಶೀಘ್ರದಲ್ಲೇ ಬೆಳೆ ವಿಮೆ ವ್ಯಾಪ್ತಿಗೆ ತೆಂಗು!

Subsidy Details-ಈ ಯೋಜನೆಯಡಿ ಎಷ್ಟು ಸಹಾಯಧನ ನೀಡಲಾಗುತ್ತದೆ?

ಕೃಷಿ ಇಲಾಖೆಯ ವತಿಯಿಂದ ಈ ಯೋಜನೆಯ ಅಡಿಯಲ್ಲಿ
ಸಾಮಾನ್ಯ ವರ್ಗದ ರೈತರಿಗೆ: ಶೇ 50 ಸಬ್ಸಿಡಿಯನ್ನು ನೀಡಲಾಗುತ್ತದೆ.
SC/ST ವರ್ಗದ ರೈತರಿಗೆ: ಶೇ 90% ಸಬ್ಸಿಡಿಯನ್ನು ನೀಡಲಾಗುತ್ತದೆ.

Tarpaulin measurments-ಟಾರ್ಪಲಿನ್ ನ ಅಳತೆ ವಿವರ:

ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ವಿತರಿಸಲಾಗುವ ಟರ್ಪಾಲಿನ್‌ನ ಗಾತ್ರವು 8 ಮೀಟರ್ ಉದ್ದ ಮತ್ತು 6 ಮೀಟರ್ ಅಗಲವನ್ನು ಹೊಂದಿರುತ್ತದೆ.

ಇದನ್ನೂ ಓದಿ: KMF New Products-ಕೆಎಂಎಫ್‌ನಿಂದ ನಂದಿನಿ ಬ್ರ್ಯಾಂಡ್‌ನ ಹೊಸ ಉತ್ಪನ್ನಗಳ ಬಿಡುಗಡೆ!

tarpalin subsidy

ಇದನ್ನೂ ಓದಿ: LPG Cylinder Subsidy-ಗ್ಯಾಸ್ ಸಿಲಿಂಡರ್ 300 ರೂ. ಸಬ್ಸಿಡಿ ನಿಮಗೆ ಬರುತ್ತಿದೆಯೇ? ಚೆಕ್ ಮಾಡುವುದು ಹೇಗೆ?

Documents Required-ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲಾತಿಗಳಾವುವು?

ಅಭ್ಯರ್ಥಿಯ ಆಧಾರ್ ಕಾರ್ಡ್/Aadhar card

ಬ್ಯಾಂಕ್ ಪಾಸ್‌ಬುಕ್/Bank passbook

ಜಮೀನಿನ ಪಹಣಿ/RTC

ರೈತರ ಭಾವಚಿತ್ರ/Photocopy

ಮೊಬೈಲ್ ಸಂಖ್ಯೆ/Mobile number

Where To Apply-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಕೃಷಿ ಇಲಾಖೆಯ ವತಿಯಿಂದ ನೀಡಲಾಗುವ ಸಬ್ಸಿಡಿಯನ್ನು ಟಾರ್ಪಲಿನ್ ಅನ್ನು ಪಡೆಯಲು ನಿಮ್ಮ ಹಳ್ಳಿಯ ವ್ಯಾಪ್ತಿಯಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Property Registration Rules-ಆಸ್ತಿ ನೋಂದಣಿಗೆ ಹೊಸ ನಿಯಮ ತಪ್ಪದೇ ಈ ಮಾಹಿತಿ ತಿಳಿಯಿರಿ!

For More Information-ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: