Udyam Certificate-ಬ್ಯಾಂಕ್ ಸಾಲ ಮತ್ತು ಸರ್ಕಾರಿ ಸೌಲಭ್ಯ ಪಡೆಯಲು ಈ ದಾಖಲೆ ಕಡ್ಡಾಯ! ಈ ದಾಖಲೆ ಪಡೆಯುವುದು ಹೇಗೆ!

December 15, 2025 | Siddesh
Udyam Certificate-ಬ್ಯಾಂಕ್ ಸಾಲ ಮತ್ತು ಸರ್ಕಾರಿ ಸೌಲಭ್ಯ ಪಡೆಯಲು ಈ ದಾಖಲೆ ಕಡ್ಡಾಯ! ಈ ದಾಖಲೆ ಪಡೆಯುವುದು ಹೇಗೆ!
Share Now:

ಉದ್ಯಮ್ ಪ್ರಮಾಣ ಪತ್ರ(Udyam registration)ಎಂಬುದು ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MSME) ವತಿಯಿಂದ ನೀಡಲಾಗುವ ಅಧಿಕೃತ ನೋಂದಣಿ ಪ್ರಮಾಣಪತ್ರವಾಗಿದ್ದು, ಸ್ವಂತ ಉದ್ಯಮವನ್ನು(Udyam Certificate)ಆರಂಭಿಸಲು ಅಥವಾ ಈಗಾಗಲೇ ನಡೆಯುತ್ತಿರುವ ವ್ಯವಹಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಉದ್ಯಮಿಗಳು ಸರ್ಕಾರದ ವಿವಿದ ಯೋಜನೆಗಳ ಸಹಾಯಧನ ಹಾಗೂ ಸಾಲ ಸೌಲಭ್ಯಗಳನ್ನು ಪಡೆಯಲು ಪ್ರಮುಖ ದಾಖಲೆಯಾಗಿದೆ.

ಉದ್ಯಮ ಪ್ರಮಾಣಪತ್ರವನ್ನು MSME ನೋಂದಣಿ ಪ್ರಮಾಣಪತ್ರ (MSME Registration Certificate) ಎಂದೂ ಕರೆಯಲಾಗುತ್ತದೆ. ಇದು ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (Ministry of Micro, Small and Medium Enterprises – MSME) ವತಿಯಿಂದ ನೀಡಲಾಗುವ ಅಧಿಕೃತ ಪ್ರಮಾಣಪತ್ರವಾಗಿದೆ. ಈ ನೋಂದಣಿಯ ಮೂಲಕ ನಿಮ್ಮ ವ್ಯವಹಾರಕ್ಕೆ ಸರ್ಕಾರದ ಮಾನ್ಯತೆ ದೊರೆಯುತ್ತದೆ.

ಇದನ್ನೂ ಓದಿ: Free Embroidery Training-ಮಹಿಳೆಯರಿಗೆ ಸಿಹಿ ಸುದ್ದಿ ಉಚಿತ ಎಂಬ್ರಾಯ್ಡರಿ ಕಲಿಕೆ ತರಬೇತಿ!

MSME ನೋಂದಣಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಉದ್ಯಮಿಗಳಿಗೆ ಉದ್ಯಮ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರದ ಸಹಾಯದಿಂದ ಉದ್ಯಮಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳು, ಸಹಾಯಧನಗಳು, ಸಾಲ ಸೌಲಭ್ಯಗಳು ಮತ್ತು ಇತರೆ ಅನೇಕ ಪ್ರಯೋಜನಗಳನ್ನು ಸುಲಭವಾಗಿ ಪಡೆಯಬಹುದು.

ಈ ಅಂಕಣದಲ್ಲಿ ಯಾರು ಉದ್ಯಮ ಪ್ರಮಾಣಪತ್ರಕ್ಕೆ ಅರ್ಹರು? ಉದ್ಯಮ ಪ್ರಮಾಣಪತ್ರವನ್ನು ಪಡೆಯುವುದರಿಂದ ಏನೆಲ್ಲ ಲಾಭಗಳಿವೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು? ಸೇರಿದಂತೆ ಉದ್ಯಮ ನೋಂದಣಿಗೆ ಸಂಬಂಧಿಸಿದ ಸಂಪೂರ್ಣ ಮತ್ತು ಉಪಯುಕ್ತ ಮಾಹಿತಿಯನ್ನು ವಿವರವಾಗಿ ನೀಡಲಾಗಿದೆ.

ಇದನ್ನೂ ಓದಿ: Subsidy Scheme-ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯಡಿ 1.00 ಲಕ್ಷ ಸಹಾಯಧನ! ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!

Udyam Certificate-ಏನಿದು ಉದ್ಯಮ್ ನೋಂದಣಿ ಪ್ರಮಾಣಪತ್ರ?

ಭಾರತದಲ್ಲಿ ಸಣ್ಣ, ಮಧ್ಯಮ ಹಾಗೂ ಸೂಕ್ಷ್ಮ ಉದ್ಯಮಗಳಿಗೆ (MSME) ಕೇಂದ್ರ ಸರ್ಕಾರದ MSME ಸಚಿವಾಲಯವು ಉದ್ಯಮ ನೋಂದಣಿ ಪ್ರಮಾಣಪತ್ರ ಎಂಬ ಇ–ಪ್ರಮಾಣಪತ್ರವನ್ನು ನೀಡುತ್ತದೆ. ಈ ಪ್ರಮಾಣಪತ್ರವು ನಿಮ್ಮ ವ್ಯವಹಾರವು MSME ವರ್ಗಕ್ಕೆ ಸೇರಿದೆ ಎಂಬುದಕ್ಕೆ ಅಧಿಕೃತ ದೃಢೀಕರಣವಾಗಿದ್ದು, ಸರ್ಕಾರದಿಂದ ಲಭ್ಯವಿರುವ ವಿವಿಧ ಸೌಲಭ್ಯಗಳು ಮತ್ತು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತದೆ.

ಉದ್ಯಮಿಗಳು ಉದ್ಯಮ ಪೋರ್ಟಲ್ ಮೂಲಕ ಸುಲಭವಾಗಿ ಆನ್‌ಲೈನ್‌ನಲ್ಲಿ ಉದ್ಯಮ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕುಗಳಿಂದ ಸಾಲ ಪಡೆಯಲು, ಸರ್ಕಾರದ ಯೋಜನೆಗಳ ಲಾಭ ಪಡೆಯಲು ಮತ್ತು ನಿಮ್ಮ ವ್ಯವಹಾರಕ್ಕೆ ಅಧಿಕೃತ ಗುರುತನ್ನು ಪಡೆಯಲು ಉದ್ಯಮ ನೋಂದಣಿ ಪ್ರಮಾಣಪತ್ರವು ಬಹಳ ಉಪಯುಕ್ತವಾಗಿದೆ.

ಇದನ್ನೂ ಓದಿ: Bank OTS Scheme-ರಿಯಾಯಿತಿಯಲ್ಲಿ ಬ್ಯಾಂಕಿನ ಸಾಲ ಇತ್ಯರ್ಥ ಮಾಡಲು ನೂತನ ಯೋಜನೆ ಜಾರಿ!

Uses of this certificate-ಉದ್ಯಮ ಪ್ರಮಾಣಪತ್ರದಿಂದಾಗುವ ಪ್ರಯೋಜನಗಳು?

  • MSME ಆಗಿ ನೋಂದಾಯಿಸಿದ ನಂತರ ಬ್ಯಾಂಕುಗಳಿಂದ ಕಡಿಮೆ ಬಡ್ಡಿದರದಲ್ಲಿ (1%–1.5%) ಸಾಲ ಪಡೆಯುವ ಅವಕಾಶವಿರುತ್ತದೆ.
  • ವ್ಯವಹಾರವನ್ನು ಪ್ರಾರಂಭಿಸಲು ಹಾಗೂ ವಿಸ್ತರಿಸಲು ಹಣಕಾಸು ನೆರವು ಸುಲಭವಾಗಿ ಲಭ್ಯವಿರುತ್ತದೆ.
  • ಕನಿಷ್ಠ ಪರ್ಯಾಯ ತೆರಿಗೆ (MAT) ಕ್ರೆಡಿಟ್ ಅನ್ನು 10 ವರ್ಷಗಳ ಬದಲು 15 ವರ್ಷಗಳವರೆಗೆ ಮುಂದೂಡುವ ಸೌಲಭ್ಯವಿರುತ್ತದೆ.
  • ಪೇಟೆಂಟ್ ನೋಂದಣಿ ಮತ್ತು ಉದ್ಯಮ ಸ್ಥಾಪನೆ ವೆಚ್ಚದಲ್ಲಿ ರಿಯಾಯಿತಿ, ಸರ್ಕಾರದಿಂದ ಸಬ್ಸಿಡಿ ಪಡೆಯಲು ಅವಕಾಶವಿರುತ್ತದೆ.
  • ಸರ್ಕಾರಿ ಇ-ಮಾರುಕಟ್ಟೆ (GeM) ಮತ್ತು ರಾಜ್ಯ ಪೋರ್ಟಲ್‌ಗಳ ಮೂಲಕ ಸರ್ಕಾರಿ ಟೆಂಡರ್ ಮತ್ತು ಇ-ಟೆಂಡರ್‌ಗಳಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
  • ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿ ಭದ್ರತೆ ಇಲ್ಲದೇ ಸಾಲ ಪಡೆಯುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ.
  • ಒಂದೇ ನೋಂದಣಿಯಲ್ಲಿ ಸೇವೆ ಮತ್ತು ಉತ್ಪಾದನೆ ಎರಡನ್ನೂ ಸೇರಿಸಿಕೊಳ್ಳುವ ಅವಕಾಶ.
  • ಅಂತರರಾಷ್ಟ್ರೀಯ ವ್ಯಾಪಾರ ಮೇಳಗಳು ಮತ್ತು ಪ್ರದರ್ಶನಗಳಲ್ಲಿ ವಿಶೇಷ ಅವಕಾಶ.

ಇದನ್ನೂ ಓದಿ: Agriculture Subsidy Schemes-ಕೃಷಿ ಇಲಾಖೆಯಿಂದ ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

How To Apply udyam certificate-ಈ ಪ್ರಮಾಣ ಪತ್ರವನ್ನು ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು?

ಉದ್ಯಮ್ ಪ್ರಮಾಣ ಪತ್ರ ಅವಶ್ಯವಿರುವ ಅಭ್ಯರ್ಥಿಗಳು ಅರ್ಜಿಗೆ ಸಂಭದಿಸಿದ ಎಲ್ಲಾ ದಾಖಲಾತಿಗಳನ್ನು ಸಿದ್ದ ಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಅಥವಾ ಕಂಪ್ಯೂಟರ್ ಸೆಂಟರ್ ಗೆ ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಪ್ರಮಾಣ ಪತ್ರವನ್ನು ಪಡೆಯಬಹುದು.

Documents Required-ಉದ್ಯಮ್ ಪ್ರಮಾಣ ಪತ್ರ ಪಡೆಯಲು ಅಗತ್ಯ ದಾಖಲಾತಿಗಳಾವುವು?

ಆಧಾರ್ ಕಾರ್ಡ/Aadhar Card

ಬ್ಯಾಂಕ್ ಪಾಸ್ ಬುಕ್/Bank Passbook

ಪ್ಯಾನ್ ಕಾರ್ಡ/Pan Card

ಪೋಟೋ/Photocopy

ಮೊಬೈಲ್ ನಂಬರ್/Mobile Number

ಇದನ್ನೂ ಓದಿ: PM Vikas Yojana-ಪಿಎಂ ವಿಕಾಸ ಯೋಜನೆಯಡಿ ಕೈಗಾರಿಕಾ ಕೌಶಲ್ಯ ತರಬೇತಿ ಹಾಗೂ ₹3000 ಸ್ಟೈಪೆಂಡ್!

udyam certificate online

ಇದನ್ನೂ ಓದಿ: Bele Parihara-2025: ರಾಜ್ಯದ 14.21 ಲಕ್ಷ ರೈತರಿಗೆ 2249 ಕೋಟಿ ಬೆಳೆ ಪರಿಹಾರ ಬಿಡುಗಡೆ: ಸಚಿವ ಕೃಷ್ಣ ಬೈರೇಗೌಡ!

Under which scheme this certificate necessary-ಯಾವೆಲ್ಲ ಯೋಜನೆಯ ಸಬ್ಸಿಡಿ ಪಡೆಯಲು ಉದ್ಯಮ್ ಪ್ರಮಾಣ ಅವಶ್ಯಕ?

PMFME-ಪ್ರಧಾನ ಮಂತ್ರಿ ಕಿರು ಆಹಾರ ನಿಯಮಬದ್ಧಗೊಳಿಸುವಿಕೆ ಯೋಜನೆ

PMEGP-ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ

NLM-ರಾಷ್ಟ್ರಿಯ ಜಾನುವಾರು ಮಿಷನ್

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ವಿವಿಧ ನಿಗಮಗಳ ಮೂಲಕ ಅನುಷ್ಥಾನ ಮಾಡುವ ಸ್ವಾವಲಂಬಿ ಸಾರಥಿ(Swalambi Sarati Yojane),ಉದ್ಯೋಗಿನಿ ಯೋಜನೆ(Udyogini),ಸ್ವಯಂ ಉದ್ಯೋಗ ನೇರ ಸಾಲ ಯೋಜನೆ(Swayam Udyoga Sala Yojane) ಅಡಿಯಲ್ಲಿ ಸೌಲಭ್ಯ ಪಡೆಯಲು ಈ ದಾಖಲೆ ಅವಶ್ಯಕ.

ಇದನ್ನೂ ಓದಿ: Swaavlambi Saarathi Scheme-ಸ್ವಾವಲಂಬಿ ಸಾರಥಿ ಯೋಜನೆಯ ಅಡಿಯಲ್ಲಿ 3.00 ಲಕ್ಷ ಸಹಾಯಧನ ಪಡೆಯಲು ಅರ್ಜಿ!

Online Application process-ಉದ್ಯಮ್ ಪ್ರಮಾಣ ಪತ್ರವನ್ನು ಪಡೆಯಲು ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

Step-1: ಅಭ್ಯರ್ಥಿಯು ಮೊದಲು ಈ ಲಿಂಕ್ “Apply Now” ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ವೆಬ್ಸೈಟ್ ಗೆ ಭೇಟಿ ಮಾಡಿದ ನಂತರ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ID ಮತ್ತು Password ಅನ್ನು ರಚನೆ ಮಾಡಿಕೊಂಡು ಲಾಗಿನ್ ಆಗಬೇಕು.

Step-3: ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ನಂತರ ಅಲ್ಲಿ ಕೇಳುವ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ ನಿಮ್ಮ ಪೋಟೋ ವನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: