Kotak Mahidra Scholarship-ಮಹೀಂದ್ರ ಗ್ರೂಪ್ ನಿಂದ ವೃತ್ತಿಪರ ಪದವಿ ವಿದ್ಯಾರ್ಥಿಗಳಿಗೆ ₹1.5 ಲಕ್ಷ ಸ್ಕಾಲರ್‌ಶಿಪ್!

August 17, 2025 | Siddesh
Kotak Mahidra Scholarship-ಮಹೀಂದ್ರ ಗ್ರೂಪ್ ನಿಂದ ವೃತ್ತಿಪರ ಪದವಿ ವಿದ್ಯಾರ್ಥಿಗಳಿಗೆ ₹1.5 ಲಕ್ಷ ಸ್ಕಾಲರ್‌ಶಿಪ್!
Share Now:

2025-26 ನೇ ಶೈಕ್ಷಣಿಕ ಸಾಲಿನಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ(Kotak Mahidra Scholarship) ಉನ್ನತ ವ್ಯಾಸಂಗ ಮಾಡಲು ಉತ್ತಮ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರಿಗೆ ₹1.5 ಲಕ್ಷ ಸ್ಕಾಲರ್‌ಶಿಪ್ ಅನ್ನು ಒದಗಿಸಲು ಅರ್ಹ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

"ಕೋಟಕ್ ಕನ್ಯಾ ವಿದ್ಯಾರ್ಥಿವೇತನ/Kotak Kanya Scholarship 2025" ಎನ್ನುವ ಹೆಸರಿನ ಮೂಲಕ ವಿದ್ಯಾರ್ಥಿವೇತನವನ್ನು ವಿತರಣೆ ಮಾಡುವ ಯೋಜನೆಯನ್ನು ಮಹೀಂದ್ರ ಗ್ರೂಪ್ ಕಂಪನಿ ಹಾಕಿಕೊಂಡಿದ್ದು, ಕೋಟಕ್ ಕನ್ಯಾ ವಿದ್ಯಾರ್ಥಿವೇತನವು ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳು ಮತ್ತು ಕೋಟಕ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದ ಸಿಎಸ್ಆರ್ ಯೋಜನೆ ಇದಾಗಿದೆ.

ಇದನ್ನೂ ಓದಿ: Hero Scholarship-ಹೀರೋ ಕಂಪನಿ ವತಿಯಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಕೋಟಕ್ ಕನ್ಯಾ ವಿದ್ಯಾರ್ಥಿವೇತನ(Mahidra Company Scholarship Application) ಪಡೆಯಲು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಮಾನದಂಡಗಳೇನು? ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳೇನು? ಎಷ್ಟು ಮೊತ್ತದ ವಿದ್ಯಾರ್ಥಿವೇತನ ಪಡೆಯಲು ಅವಕಾಶವಿದೆ? ಇನ್ನಿತರೆ ಉಪಯುಕ್ತ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

Mahidra Company Scholarship Eligibility-ಮಹೀಂದ್ರ ಗ್ರೂಪ್ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಲು ಅರ್ಹರು:

ಮಹೀಂದ್ರ ಗ್ರೂಪ್ ಕಂಪನಿಯಿಂದ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಸಲ್ಲಿಸಲು ಈ ಕೆಳಗೆ ತಿಳಿಸಿರುವ ಮಾನದಂಡಗಳನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರ ವಿದ್ಯಾರ್ಥಿಯು 12 ನೇ ತರಗತಿ/ಪಿಯುಸಿ ಬೋರ್ಡ್ ಪರೀಕ್ಷೆಗಳಲ್ಲಿ ಕನಿಷ್ಠ 75% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಅಥವಾ ಸಮಾನವಾದ CGPA ಅನ್ನು ಪಡೆದಿರಬೇಕು.

ಇದನ್ನೂ ಓದಿ: Free Phenyl Soap Making Training-ಉಚಿತ ಫಿನಾಯಿಲ್,ಸೋಪ್ ಗೃಹ ಬಳಕೆ ವಸ್ತು ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ!

ವಿದ್ಯಾರ್ಥಿನಿಯರು ಮಾತ್ರ ಈ ಕಾರ್ಯಕ್ರಮದಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸ್ಕಾಲರ್‌ಶಿಪ್ ಪಡೆಯಲು ಅವಕಾಶವಿರುತ್ತದೆ.

ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು 2025-26ನೇ ಶೈಕ್ಷಣಿಕ ವರ್ಷದಲ್ಲಿ NIRF/NAAC ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೃತ್ತಿಪರ ಪದವಿ ಪದವಿಗಳಾದ ಎಂಜಿನಿಯರಿಂಗ್, MBBS, ಇಂಟಿಗ್ರೇಟೆಡ್ LLB (5 ವರ್ಷಗಳು), ಇಂಟಿಗ್ರೇಟೆಡ್ BS-MS/BS-Research, ISER, IISC (ಬೆಂಗಳೂರು) ಅಥವಾ ಇತರ ವೃತ್ತಿಪರ ಕೋರ್ಸ್‌ಗಳಲ್ಲಿ (ವಿನ್ಯಾಸ, ವಾಸ್ತುಶಿಲ್ಪ, ಇತ್ಯಾದಿ) ಮಾನ್ಯತೆ ಪಡೆದ ಪದವಿ ಕಾರ್ಯಕ್ರಮಗಳ ಮೊದಲ ವರ್ಷಕ್ಕೆ ಪ್ರವೇಶ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿಯರು.

ಮಹೀಂದ್ರ ಗ್ರೂಪ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೋಷಕರ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: Best Farmer Award-ಕೃಷಿ ಇಲಾಖೆಯಿಂದ ಕೃಷಿ ಪ್ರಶಸ್ತಿ ವಿತರಣೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Kotak Kanya Scholarship

Kotak Mahidra Scholarship Amount-ವಿದ್ಯಾರ್ಥಿವೇತನದ ಮೊತ್ತ ಎಷ್ಟು?

ಕೋಟಕ್ ಮಹೀಂದ್ರಾ ಗ್ರೂಪ್ ಸಂಸ್ಥೆಯ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅರ್ಹ ವಿದ್ಯಾರ್ಥಿಗಳಿಗೆ ಪದವಿ ಕೋರ್ಸ್/ಪದವಿ ಪೂರ್ಣಗೊಳ್ಳುವವರೆಗೆ ವರ್ಷಕ್ಕೆ INR 1.5 ಲಕ್ಷ ವಿದ್ಯಾರ್ಥಿವೇತ ಮೊತ್ತವನ್ನು ನೀಡಲಾಗುತ್ತದೆ ಎಂದು ಅಧಿಕೃತ www.buddy4study.com ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

Kotak Mahidra Scholarship Application Last Date- ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ- 31 ಆಗಸ್ಟ್ 2025

How To Apply For Kotak Mahidra Scholarship-ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಮಹೀಂದ್ರ ಗ್ರೂಪ್ ನಿಂದ ವೃತ್ತಿಪರ ಪದವಿ ವಿದ್ಯಾರ್ಥಿಗಳು ₹1.5 ಲಕ್ಷ ಸ್ಕಾಲರ್‌ಶಿಪ್ ಅನ್ನು ಪಡೆಯಲು ತಮ್ಮ ಮೊಬೈಲ್ ಮೂಲಕೆವೇ ಈ ಕೆಳಗಿನ ಹಂತಗಳನ್ನು ಅನುಸರಿಸಿ ಅಧಿಕೃತ ವಿದ್ಯಾರ್ಥಿವೇತನದ "www.buddy4study.com" ಜಾಲತಾಣವನ್ನು ಪ್ರವೇಶ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಮೊದಲಿಗೆ "Mahidra Scholarship Application" ಇಲ್ಲಿ ಕ್ಲಿಕ್ ಮಾಡಿ ಅಧಿಕೃತ www.buddy4study.com ತಂತ್ರಾಂಶವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Business Loan-ರಾಜ್ಯದ SC ST ಸಮುದಾಯದವರಿಗೆ ಗುಡ್ ನ್ಯೂಸ್! ಸ್ವಂತ ಉದ್ದಿಮೆಗೆ ₹2.0 ಲಕ್ಷ ಸಬ್ಸಿಡಿ!

Step-2: ನಂತರ ಈ ಪೇಜ್ ನಲ್ಲಿ ತೋರಿಸುವ "Apply Now" ಆಯ್ಕೆಯ ಮೇಲೆ ಒತ್ತಿ ನಿಮ್ಮ ಮೊಬೈಲ್ ನಂಬರ್ ಮತ್ತು ಪಾಸ್ವರ್ಡ್ ಅನ್ನು ಹಾಕಿ "Login" ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಮಾಡಿಕೊಳ್ಳಿ. ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳದವರು ಈ ಪುಟದಲ್ಲಿ ಕೆಳಗೆ ಕಾಣುವ "Create an account" ಆಯ್ಕೆಯ ಮೇಲೆ ಒತ್ತಿ ಖಾತೆಯನ್ನು ರಚನೆ ಮಾಡಿಕೊಂಡು ಲಾಗಿನ್ ಅಗಬೇಕು.

Step-3: ಇಲ್ಲಿ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.

ಇದನ್ನೂ ಓದಿ: Mobile Canteen Subsidy-ಮೊಬೈಲ್ ಕ್ಯಾಂಟಿನ್ ಸ್ಥಾಪನೆಗೆ ₹4.0 ಲಕ್ಷ ಸಹಾಯಧನ ಪಡೆಯಲು ಅರ್ಜಿ!

Documents For Kotak Mahidra Scholarship-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅಗತ್ಯವಾಗಿ ಒದಗಿಸಬೇಕಾದ ಅವಶ್ಯಕ ದಾಖಲೆಗಳ ವಿವರ ಈ ಕೆಳಗಿನಂತಿದೆ:

  • ವಿದ್ಯಾರ್ಥಿಯ ಆಧಾರ್ ಕಾರ್ಡ/Adhar
  • ಪೋಟೋ/Photo
  • ಬ್ಯಾಂಕ್ ಪಾಸ್ ಬುಕ್/Bank Pass Book
  • ವಿದ್ಯಾರ್ಥಿಯಅಂಕಪಟ್ಟಿ/Marks Card
  • ವಿದ್ಯಾರ್ಥಿಯ ಪಾನ್ ಕಾರ್ಡ್/Pan Card
  • ವಿದ್ಯಾರ್ಥಿ ಕುಟುಂಬದ ಆದಾಯ ಪ್ರಮಾಣ ಪತ್ರ/Income Certificate
  • ಕಾಲೇಜು ಶುಲ್ಕ ಪಾವತಿ ರಶೀದಿ/College Fee structure
  • ಕಾಲೇಜು ಪ್ರವೇಶ ಪತ್ರ/Study Certificate

For More Details Please Contact-ಹೆಚ್ಚಿನ ಮಾಹಿತಿ ಪಡೆಯಲು:

Helpline Number-ಸಹಾಯವಾಣಿ-011-430-92248 (ವಿಸ್ತರಣೆ: 262) (ಸೋಮವಾರದಿಂದ ಶುಕ್ರವಾರದವರೆಗೆ)
Mail ID: [email protected]

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: