Free Tailoring Course-ಉಚಿತ ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ! ಸಬ್ಸಿಡಿಯಲ್ಲಿ ಹೋಲಿಗೆ ಯಂತ್ರ!

August 26, 2025 | Siddesh
Free Tailoring Course-ಉಚಿತ ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ! ಸಬ್ಸಿಡಿಯಲ್ಲಿ ಹೋಲಿಗೆ ಯಂತ್ರ!
Share Now:

ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಕೇಂದ್ರದಿಂದ(Tailoring Course Application) ಗ್ರಾಮೀಣ ಮತ್ತು ನಗರ ಭಾಗದ ಅರ್ಹ ಮಹಿಳೆಯರಿಗೆ ಉಚಿತವಾಗಿ ಹೋಲಿಗೆ ಯಂತ್ರ ತರಬೇತಿಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ ತರಬೇತಿಯನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇಂದಿನ ಈ ಅಂಕಣದಲ್ಲಿ ಉಚಿತ ಹೋಲಿಗೆ ತರಬೇತಿಯನ್ನು ಪಡೆಯಲು ಯಾರೆಲ್ಲ(Free Tailoring Course) ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ತರಬೇತಿಯನ್ನು ಪಡೆದ ಬಳಿಕ ಹೋಲಿಗೆ ಯಂತ್ರವನ್ನು ಖರೀದಿ ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಯಾವೆಲ್ಲ ಯೋಜನೆಗಳು ಪ್ರಸ್ತುತ ಜಾರಿಯಲ್ಲಿವೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Free Beautician Course-ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

ಗ್ರಾಮೀಣ ಮತ್ತು ನಗರ ಭಾಗದ ಮಹಿಳೆಯರು ಸ್ವಾವಲಂಬನೆಯ ಜೀವನವನ್ನು ರೂಪಿಸಿಕೊಳ್ಳಲು ಈ ತರಬೇತಿಯು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಮಹಿಳೆಯರು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಈ ತರಬೇತಿಯ(Holige Yantra Tarabeti) ಪ್ರಯೋಜನವನ್ನು ಪಡೆದುಕೊಳ್ಳಬಹುದು ಇದಕ್ಕಾಗಿ ಅವಶ್ಯವಿರುವ ಪೂರಕ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Free Tailoring Course Eligibility Criteria-ತರಬೇತಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಅರ್ಹರು:

ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ ಉಚಿತ ಹೋಲಿಗೆ ತರಬೇತಿಯನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತಾ ಮಾನದಂಡಗಳನ್ನು ಹೊಂದಿರುವ ಮಹಿಳೆಯರು ಅರ್ಜಿಯನ್ನು ಸಲ್ಲಿಸಬಹುದು.

  • ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಬಿಪಿಎಲ್ ಕಾರ್ಡ ಹೊಂದಿರುವ ಗ್ರಾಮೀಣ ಭಾಗದ ಮಹಿಳೆಯರಿಗೆ ಮೊದಲ ಆದ್ಯತೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
  • ಅರ್ಜಿದಾರ ಮಹಿಳೆಯರಿಗೆ ಕನ್ನಡ ಓದಲು ಮತ್ತು ಬರೆಯಲು ಬರುವುದು ಕಡ್ಡಾಯವಾಗಿದೆ.
  • ಅರ್ಜಿದಾರ ಮಹಿಳೆಯರ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು.

ಇದನ್ನೂ ಓದಿ: Gruhalakshmi Amount-ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಈಗಲೇ ಚೆಕ್ ಮಾಡಿ!

Free Tailoring Course Date-ತರಬೇತಿ ಆರಂಭ ದಿನಾಂಕ:

ಉಚಿತ ಹೋಲಿಗೆ ತರಬೇತಿಯು ದಿನಾಂಕ: 05 ಸೆಪ್ಟೆಂಬರ್ 2025 ರಿಂದ ಆರಂಭವಾಗಿ ದಿನಾಂಕ: 05 ಅಕ್ಟೋಬರ್ 2025ಕ್ಕೆ ಮುಕ್ತಾಯವಾಗುತ್ತದೆ ಒಟ್ಟು 31 ದಿನದ ತರಬೇತಿ ಇದಾಗಿರುತ್ತದೆ.

Free Tailoring Course Training Center-ತರಬೇತಿ ಆಯೋಜನೆ ಮಾಡಿರುವ ಕೇಂದ್ರದ ವಿಳಾಸ ಹೀಗಿದೆ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ,ಕುಮಟಾ,ಉತ್ತರಕನ್ನಡ-581343

ಇದನ್ನೂ ಓದಿ: Phonepe App Useful Tips-ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಇದೆಯಾ? ತಪ್ಪದೇ ಈ ಸುದ್ದಿ ನೋಡಿ!

Documents For Free Tailoring Course-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

  • ಅಭ್ಯರ್ಥಿಯ ನಾಲ್ಕು ಪಾಸ್ ಪೋರ್ಟ್ ಸೈಟ್ ಪೋಟೋ
  • ಬ್ಯಾಂಕ್ ಪಾಸ್ ಬುಕ್
  • ರೇಶನ್ ಕಾರ್ಡ ಪ್ರತಿ
  • ಆಧಾರ್ ಕಾರ್ಡ ಪ್ರತಿ
  • ಪಾನ್ ಕಾರ್ಡ ಪ್ರತಿ
  • ಮೊಬೈಲ್ ನಂಬರ್

Free Tailoring Course Online Application-ಆನ್ಲೈನ್ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬಹುದು:

ಅರ್ಹ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಲು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ತರಬೇತಿಯಲ್ಲಿ ಭಾಗವಹಿಸಲು ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು.

ಹಂತ-1: ಮೊದಲಿಗೆ "Apply Online" ಇಲ್ಲಿ ಕ್ಲಿಕ್ ಮಾಡಿ ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಗೂಗಲ್ ಪಾರ್ಮ್ ಅರ್ಜಿ ನಮೂನೆಯನ್ನು ಪ್ರವೇಶ ಮಾಡಬೇಕು.

ಹಂತ-2: ಇದಾದ ಬಳಿಕ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಮತ್ತು ತರಬೇತಿ ವಿವರವನ್ನು ಆಯ್ಕೆ ಮಾಡಿಕೊಂಡು ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Free Medical Equipment-60 ವರ್ಷ ಮೇಲ್ಪಟವರಿಗೆ ಉಚಿತವಾಗಿ ವೈದ್ಯಕೀಯ ಸಾಧನಗಳನ್ನು ಪಡೆಯಲು ಅರ್ಜಿ ಆಹ್ವಾನ!

Tailoring Course-ಮುಂಚಿತವಾಗಿ ಹೆಸರು ನೋಂದಾಯಿಸಲು ಕರೆ ಮಾಡಿ:

ಉಚಿತ ಹೋಲಿಗೆ ಯಂತ್ರ ತರಬೇತಿಯಲ್ಲಿ ಭಾಗವಹಿಸಲು ಈ 08386-220530/9449860007/9538281989/9916783825/8880444612ದೂರವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.

Holige Yantra Tarabeti-ವಸತಿ-ಊಟ ಸಂಪೂರ್ಣ ಉಚಿತ ತರಬೇತಿ:

ಹೊಲಿಗೆ ಯಂತ್ರ ತರಬೇತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಇದಲ್ಲದೇ ತರಬೇತಿ ನಡೆಯುವ ದಿನಗಳಲ್ಲಿ ಅಭ್ಯರ್ಥಿಯು ವಾಸ್ತವ್ಯ ಮಾಡಲು ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯನ್ನು ತರಬೇತಿ ಕೇಂದ್ರದಿಂದಲೇ ಆಯೋಜನೆ ಮಾಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Reliance Foundation Scholarship-ರಿಲಯನ್ಸ್ ಫೌಂಡೇಶನ್ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ₹2 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

Holige Yantra Subsidy Schemes In Karnataka-ಸಬ್ಸಿಡಿಯಲ್ಲಿ ಯಂತ್ರ ಪಡೆಯಲು ಅವಕಾಶ:

ಮಹಿಳೆಯರು ಈ ಮೇಲೆ ತಿಳಿಸಿರುವ ತರಬೇತಿಯನ್ನು ಪಡೆದ ಬಳಿಕ ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಯಡಿ ಹೋಲಿಗೆ ಯಂತ್ರವನ್ನು ಖರೀದಿ ಮಾಡಲು ಸಬ್ಸಡಿಯನ್ನು ಪಡೆಯಲು ಅವಕಾಶವಿದ್ದು ಇದರ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

A) ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆ/PM Vishwakarma:

ಕೇಂದ್ರ ಸರಕಾರದ ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆ ಅಡಿಯಲ್ಲಿ ಅರ್ಹ ಮಹಿಳೆಯರಿಗೆ ಹೋಲಿಗೆ ಯಂತ್ರವನ್ನು ಖರೀದಿ ಮಾಡಲು ಆರ್ಥಿಕ ನೆರವನ್ನು ನೀಡಲಾಗುತ್ತದೆ. ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಲು ಇಲ್ಲಿ ಕ್ಲಿಕ್ ಮಾಡಿ- Click Here

ಇದನ್ನೂ ಓದಿ: Subsidy Schemes Application-ವಿಕಲಚೇತನರ ಇಲಾಖೆಯಿಂದ ಟಾಕಿಂಗ್ ಲ್ಯಾಪ್ ಟಾಪ್ ವಿತರಣೆ ಸೇರಿ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ!

B) ರಾಜ್ಯ ಸರ್ಕಾರದ ವಿವಿಧ ನಿಗಮ ಯೋಜನೆಯಡಿ/Karnataka Nigamagalu:

ರಾಜ್ಯದಲ್ಲಿ ಪ್ರಸ್ತುತ ವಿವಿಧ ನಿಗಮಗಳಿಂದ ಹೋಲಿಗೆ ಯಂತ್ರವನ್ನು ಸಹಾಯಧನದಲ್ಲಿ ಪಡೆಯಲು ಅವಕಾಶವಿದ್ದು ಇದಕ್ಕಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಈ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ವೆಬ್ಸೈಟ್ ಲಿಂಕ್-Click Here

C) ಜಿಲ್ಲಾ ಕೈಗಾರಿಕಾ ಕೇಂದ್ರಗಳ ಯೋಜನೆ:

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರಗಳಲ್ಲಿ ಲಭ್ಯವಿರುವ ಸಹಾಯಧನ ಆಧಾರಿತ ಯೋಜನೆ ಅಡಿಯಲ್ಲಿ ಮಹಿಳೆಯರು ಅರ್ಜಿಯನ್ನು ಸಲ್ಲಿಸಿ ಸಬ್ಸಿಡಿಯಲ್ಲಿ ಹೋಲಿಗೆ ಯಂತ್ರವನ್ನು ಪಡೆಯಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಜಿಲ್ಲೆಯ ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: