Cotton MSP Price-ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಗೆ 8,110/- ರಂತೆ ಹತ್ತಿ ಖರೀದಿಗೆ ರೈತರ ನೋಂದಣಿ ಆರಂಭ!

August 27, 2025 | Siddesh
Cotton MSP Price-ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಗೆ 8,110/- ರಂತೆ ಹತ್ತಿ ಖರೀದಿಗೆ ರೈತರ ನೋಂದಣಿ ಆರಂಭ!
Share Now:

ಕರ್ನಾಟಕ ಸರಕಾರದಡಿ ಬರುವ ಕೃಷಿ ಮಾರಾಟ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ(Krishi Marata Mandali)ಸಹಯೋಗದಲ್ಲಿ 2025-26 ನೇ ಸಾಲಿನಲ್ಲಿ ಹತ್ತಿ ಬೆಳೆಗಾರರಿಂದ ನೇರವಾಗಿ ಹತ್ತಿಯನ್ನು ಖರೀದಿ ಮಾಡಲು ರೈತರ ನೋಂದಣಿಯನ್ನು ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಭಾರತೀಯ ಹತ್ತಿ ನಿಗಮ ನಿಯಮಿತ(CCI)ವು ರಾಜ್ಯದ ಹತ್ತಿ ಬೆಳೆಗಾರರಿಂದ(Cotton MSP) ಬೆಂಬಲ ಬೆಲೆಯಲ್ಲಿ ಹತ್ತಿಯನ್ನು ಖರೀದಿ ಮಾಡಲು ತೀರ್ಮಾನಿಸಿದ್ದು ಇದಕ್ಕಾಗಿ ಅರ್ಜಿ ರೈತರನ್ನು ಗುರುತಿಸಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದ್ದು ಈ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Free Tailoring Course-ಉಚಿತ ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ! ಸಬ್ಸಿಡಿಯಲ್ಲಿ ಹೋಲಿಗೆ ಯಂತ್ರ!

ಹತ್ತಿ ಬೆಳೆಗಾರರು ಬೆಂಬಲ ಬೆಲೆಯಲ್ಲಿ(Bembala Bele) ಹತ್ತಿಯನ್ನು ಮಾರಾಟ ಮಾಡಲು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವುದು ಹೇಗೆ? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅವಶ್ಯಕ ದಾಖಲಾತಿಗಳೇನು? ಹತ್ತಿ ಬೆಳೆಗೆ ಎಷ್ಟು ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ? ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ ಮಾಹಿತಿ ವಿವರ ಸೇರಿದಂತೆ ಇನ್ನಿತರೆ ಅವಶ್ಯಕ ವಿವರವನ್ನು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ಪ್ರಕಟಣೆಯಲ್ಲಿ ಹೊರಡಿಸಲಾಗಿದ್ದು ಈ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Hatti Bembala Bele Yojana-ನೋಂದಣಿ ಮಾಡಿಕೊಳ್ಳಲು ನಿಗದಿಪಡಿಸಿರುವ ಅರ್ಹತಾ ಮಾನದಂಡಗಳೇನು?

ಅರ್ಜಿದಾರ ರೈತರು ಕರ್ನಾಟಕದ ನಿವಾಸಿಯಾಗಿರಬೇಕು.

ಹತ್ತಿಯನ್ನು ಬೆಳೆದಿರುವ ರೈತರು ಮಾತ್ರ ನೋಂದಣಿ ಮಾಡಿಕೊಳ್ಳಬೇಕು ಮಧ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ.

ಯಾರ ಹೆಸರಿಗೆ ಜಮೀನಿನ ಖಾತೆ ಇರುತ್ತದೆಯೋ ಆ ರೈತರ ಹೆಸರಿನಿಂದ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Free Beautician Course-ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

Last Date For Cotton MSP Registration-ರೈತರ ನೋಂದಣಿಗೆ ಪ್ರಮುಖ ದಿನಾಂಕಗಳು:

ಹತ್ತಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಆಸಕ್ತಿಯನ್ನು ಹೊಂದಿರುವ ರೈತರು ತನ್ನ ಹೆಸರನ್ನು ನೋಂದಣಿಯನ್ನು ಮಾಡಿಕೊಳ್ಳಲು ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ: 01 ಸೆಪ್ಟೆಂಬರ್ 2025 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ: 30 ಸೆಪ್ಟೆಂಬರ್ 2025 ಅಗಿರುತ್ತದೆ.

Cotton MSP Price-ಎಷ್ಟು ಮೊತ್ತಕ್ಕೆ ಖರೀದಿ ಮಾಡಲಾಗುತ್ತದೆ?

ಬೆಂಬಲ ಬೆಲೆಯಲ್ಲಿ ಹತ್ತಿ ಬೆಳೆಗಾರರಿಂದ ಹತ್ತಿಯನ್ನು ಖರೀದಿ ಮಾಡಲು ಸರಕಾರದಿಂದ ನಿಗದಿಪಡಿಸಿರುವ ಪ್ರತಿ ಕ್ವಿಂಟಾಲ್ ಗೆ ಖರೀದಿ ದರ ಪಟ್ಟಿ ಈ ಕೆಳಗಿನಂತಿದೆ.

  • ಹತ್ತಿ (ಮಧ್ಯಮ ಎಳೆ)- 7,710/- ರೂ
  • ಹತ್ತಿ (ಉದ್ದನೆಯ ಎಳೆ)-8,110/- ರೂ

ಇದನ್ನೂ ಓದಿ: Gruhalakshmi Amount-ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಈಗಲೇ ಚೆಕ್ ಮಾಡಿ!

How To Register For Cotton MSP Sell-ನೋಂದಣಿ ಮಾಡಿಕೊಳ್ಳುವುದು ಹೇಗೆ?

ಬೆಂಬಲ ಬೆಲೆಯಲ್ಲಿ ಹತ್ತಿಯನ್ನು ಮಾರಾಟ ಮಾಡಲು ಆಸಕ್ತಿಯನ್ನು ಹೊಂದಿರುವ ರೈತರು ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ "ಕಪಾಸ್ ಕಿಸಾನ್" ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ ಡೌನ್ಲೋಡ್ ಮಾಡಿಕೊಂಡು ಹತ್ತಿ ಮಾರಾಟ ಮಾಡಲು ನೋಂದಣಿಯನ್ನು ಮಾಡಿಕೊಳ್ಳಬಹುದು.

Farmer Register Method-ನೋಂದಣಿ ವಿಧಾನ ಹೇಗೆ?

ಹಂತ-1: ರೈತರು ಪ್ರಥಮದಲ್ಲಿ ಇಲ್ಲಿ ಕ್ಲಿಕ್ "Kapas Kisan App Donwload Link" ಮಾಡಿ ಗೂಗಲ್ ಪ್ಲೈ ಸ್ಟೋರ್ ಭೇಟಿ ಮಾಡಿ "ಕಪಾಸ್ ಕಿಸಾನ್" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಹಂತ-2: ಬಳಿಕ ಇಲ್ಲಿ ನಿಮ್ಮ ವೈಯಕ್ತಿಕ ವಿವರ ಮತ್ತು ಜಮೀನಿನ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಕಾಣುವ ಸ್ವಯಂ ಘೋಷಣೆ ಬಟನ್ ಮೇಲೆ ಕ್ಲಿಕ್ ಮಾಡಿ ಹತ್ತಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.

ಇದನ್ನೂ ಓದಿ: Phonepe App Useful Tips-ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಇದೆಯಾ? ತಪ್ಪದೇ ಈ ಸುದ್ದಿ ನೋಡಿ!

ಹತ್ತಿ ಬೆಳೆಗಾರರು ಭಾರತೀಯ ಹತ್ತಿ ನಿಗಮ ನಿಯಮಿತದಿಂದ ಹೊರಡಿಸಿರುವ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಹತ್ತಿಯನ್ನು ಮಾರಾಟ ಮಾಡಿ ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಕಾಲದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Helpline-ಹೆಚ್ಚಿನ ಮಾಹಿತಿ ಪಡೆಯಲು ಅವಶ್ಯಕ ವಿವರ ಹೀಗಿದೆ:

ಕಚೇರಿ ವಿಳಾಸ: ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, #16, 2ನೇ ರಾಜಭವನ ರಸ್ತೆ,ಬೆಂಗಳೂರು-01

ದೂರವಾಣಿ ಸಂಖ್ಯೆ: 080-22867369

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: