Pearl Farming-ಕೃಷಿ ವಿಶ್ವವಿದ್ಯಾಲಯದಿಂದ ಮುತ್ತು ಕೃಷಿ ತರಬೇತಿಗೆ ಅರ್ಜಿ ಆಹ್ವಾನ!

September 2, 2025 | Siddesh
Pearl Farming-ಕೃಷಿ ವಿಶ್ವವಿದ್ಯಾಲಯದಿಂದ ಮುತ್ತು ಕೃಷಿ ತರಬೇತಿಗೆ ಅರ್ಜಿ ಆಹ್ವಾನ!
Share Now:

ಸಂಶೋಧನಾ ನಿರ್ದೇಶನಾಲಯ ಕೃಷಿ ವಿಶ್ವವಿದ್ಯಾಲಯ ಧಾರವಾಡ(Dharwad Agriculture University) ವತಿಯಿಂದ ಸಿಹಿ ನೀರಿನಲ್ಲಿ ಮುತ್ತು ಕೃಷಿಯನ್ನು ಹೇಗೆ ಮಾಡುವುದು ಎನ್ನುವುದರ ಕುರಿತು ಪ್ರಾಯೋಗಿಕ ತರಬೇತಿಯನ್ನು ಆಯೋಜನೆ ಮಾಡಲಾಗಿದ್ದು ಈ ತರಬೇತಿಯನ್ನು ಪಡೆಯಲು ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಸಿಹಿ ನೀರು ಮುತ್ತು ಕೃಷಿ(Pearl Farming Training) ತರಬೇತಿ ಕೇಂದ್ರ ಸಂಶೋಧನಾ ನಿರ್ದೇಶನಾಲಯ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸಿಹಿನೀರು ಮುತ್ತು ಸಾಕಣಿಯ ಕುರಿತು ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರವದಲ್ಲಿ ಭಾಗವಹಿಸುವವರಿಗೆ ಯಶಸ್ವಿಯಾಗಿ ಮುತ್ತುಸಾಕಣೆಯನ್ನು ಕೈಗೊಳ್ಳಲು ಅಗತ್ಯ ಜ್ಞಾನ ಮತ್ತು ಕೌಶಲ್ಯವನ್ನು ಪ್ರಾಯೋಗಿಕವಾಗಿ ನೀಡಲು ವಿನ್ಯಾಸಗೊಳಿಸಲಾಗಿದೆ ಮುತ್ತು ಸಾಕಣೆಯ ತಂತ್ರಜ್ಞಾನವು ಸ್ಥಳೀಯ ಕೃಷಿಕರಿಗೆ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ ಎಂದು ವಿವಿಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Computer Training-ಕೆನರಾ ಬ್ಯಾಂಕ್ ವತಿಯಿಂದ 3 ತಿಂಗಳ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ!

ಪ್ರಸ್ತುತ ಲೇಖನದಲ್ಲಿ ಮುತ್ತು ಕೃಷಿ(Pearl Farming Training Application) ತರಬೇತಿಯಲ್ಲಿ ಭಾಗವಹಿಸುವುದು ಹೇಗೆ? ತರಬೇತಿ ಶುಲ್ಕದ ವಿವರ, ತರಬೇತಿಯಲ್ಲಿ ಯಾವೆಲ್ಲ ವಿಷಯದ ಕುರಿತು ಪ್ರಯೋಗಿಕವಾಗಿ ಮಾಹಿತಿಯನ್ನು ತಿಳಿಸಲಾಗುತ್ತದೆ ಈ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Pearl Farming Training-ಮುತ್ತು ಕೃಷಿ ತರಬೇತಿಯ ಉದ್ದೇಶಗಳು ಹೀಗಿವೆ:

  • ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಕೌಶಲ್ಯವರ್ದನೆ.
  • ಮುತ್ತು ಕೃಷಿಯನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ತಜ್ಞರು ಮತ್ತು ಹೂಡಿಕೆದಾರರೊಂದಿಗೆ ಸಂಬಂದ ವೃದ್ಧಿಸುವಿಕೆ.
  • ಸಂಬಂದಿತ ಇಲಾಖೆಯೊಂದಿಗೆ ಒಡಂಬಡಿಕೆ.
  • ಸಾಕಣೆಯ ನಾವಿನ್ಯತೆಯ ಬಗ್ಗೆ ಸಂಶೋಧನೆ.
  • ಇತರ ಇಲಾಖೆ ಮತ್ತು ಸಚಿವಾಲಯಯೊಂದಿಗೆ ಸಮನ್ವಯ ಮತ್ತು ಸಂಪರ್ಕಸಾಧಿಸುವುದು.
  • ಮುತ್ತು ಕೃಷಿಯಲ್ಲಿ ಪರಿಣಿತ ವಿಜ್ಞಾನಿಗಳಿಂದ ತರಬೇತಿಯನ್ನು ನೀಡಲಾಗುವುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: CET Result-2025: ಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟ!

Pearl Farming Training Date-ತರಬೇತಿ ಪ್ರಾರಂಭ ದಿನಾಂಕ:

ಈ ತರಬೇತಿಯು 08 ಸೆಪ್ಟೆಂಬರ್ 2025 ರಿಂದ ಪ್ರಾರಂಭವಾಗಲಿದ್ದು ಒಟ್ಟು 20 ಜನ ಶಿಬಿರಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Pearl Farming Training Certificate-ಪ್ರಮಾಣ ಪತ್ರ ವಿತರಣೆ:

ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ತರಬೇತಿಯಲ್ಲಿ ಭಾಗವಹಿಸಲು ಶುಲ್ಕವನ್ನು ಪಾವತಿ ಮಾಡಿ ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕ ಯಶ್ವಸಿಯಾಗಿ ತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಒದಗಿಸಲಾಗುತ್ತದೆ ಎಂದು ವಿವಿಯಿಂದ ತಿಳಿಸಲಾಗಿದೆ.

ಇದನ್ನೂ ಓದಿ: Karmika Mandali Kit-ಕಾರ್ಮಿಕ ಮಂಡಳಿಯಿಂದ ಸುರಕ್ಷತಾ ಕಿಟ್ ವಿತರಣೆ! ಈಗಲೇ ಅರ್ಜಿ ಸಲ್ಲಿಸಿ!

Pearl Farming Training

ಇದನ್ನೂ ಓದಿ: Beauty Parlour-ಉಚಿತ ಬ್ಯೂಟಿಪಾರ್ಲರ್ ತರಬೇತಿ ಪಡೆದು ಸ್ವಂತ ಉದ್ಯೋಗ ಆರಂಭಿಸಿ!

Who Can Apply-ಮುತ್ತು ಕೃಷಿಗೆ ಉದ್ದೇಶಿತ ಶಿಬಿರಾರ್ಥಿಗಳು:

  • ಸಣ್ಣ ಉದ್ದಿಮೆದಾರರು
  • ಸಂಶೋಧನಾ ನಿರತ ವ್ಯಕ್ತಿಗಳು /ವಿದ್ಯಾರ್ಥಿಗಳು
  • ಇಲಾಖಾ/ಸ್ವಯಂಸಂಘಗಳ ಸಿಬ್ಬಂದಿ
  • ಮಹಿಳಾ ಉದ್ದಿಮೆದಾರರು /ಕೃಷಿಕರು

Training Fee-ತರಬೇತಿ ಶುಲ್ಕ:

ಸದರಿ ಕಾರ್ಯಕ್ರಮಕ್ಕೆ ರೂ. 5500/-ಗಳ ತರಬೇತಿ ಶುಲ್ಕವನ್ನು ನಿಗದಿಪಡಿಸಲಾಗಿದೆ ತರಬೇತಿಯ ಕೈಪಿಡಿ ಹಾಗೂ ಮೂರು ದಿನದ ವಸತಿ ಮತ್ತು ಊಟದ ವ್ಯವಸ್ತೆಯನ್ನು ಒಳಗೊಂಡಿರುತ್ತದೆ. ಸಂದಾಯಿಸಿದ ದೃಡಿಕರಣ ರಶೀದಿಯೊಂದಿಗೆ ತರಬೇತಿಗೆ ಹಾಜರಾಗತಕ್ಕದ್ದು.

ಇದನ್ನೂ ಓದಿ: Krishi Mela Dharwad-ಧಾರವಾಡ ಕೃಷಿ ಮೇಳ 2025: ರೈತರ ಹಬ್ಬಕ್ಕೆ ದಿನಾಂಕ ಘೋಷಣೆ!

How To Pay Training Fee-ತರಬೇತಿ ಶುಲ್ಕ ಪಾವತಿಸುವುದು ಹೇಗೆ?

ಮುತ್ತು ಕೃಷಿಯನ್ನು ಪಡೆಯಲು ಆಸಕ್ತಯನ್ನು ಹೊಂದಿರುವ ಅಭ್ಯರ್ಥಿಗಳು ಈ ಕೆಳಗಿನ ವಿಳಾಸಕ್ಕೆ ತರಬೇತಿ ಶುಲ್ಕವನ್ನು ಪಾವತಿ ಮಾಡಲು ಕೃಷಿ ವಿಶ್ವವಿದ್ಯಾಲಯದಿಂದ ಸೂಚನೆ ಹೊರಡಿಸಲಾಗಿದೆ.

  • Asst Comptroller, A.C Dharwad
  • A/c No: 43931781940
  • IFSC Code: SBIN0003151

For More Infomation-ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ:

9480459906 (ಡಾ. ನಾರಾಯನ ಮೊಗೇರ್, ಪ್ರಾದ್ಯಾಪಕರು) ಮತ್ತು

9886423980 (ಡಾ. ಕೆ. ವಿ. ಬಸವಕುಮಾರ, ಮುಖ್ಯ ವೈಜ್ಞಾನಿಕ ಅಧಿಕಾರಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: