Free Photography Training-ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ!

October 23, 2025 | Siddesh
Free Photography Training-ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ!
Share Now:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯನ್ನು(Free Photography And Videography Training)ಪಡೆಯಲು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು ನಿರುದ್ಯೋಗಿ ಯುವಕರು ಈ ತರಬೇತಿಯ ಪ್ರಯೋಜನವನ್ನು ಪಡೆಯಲು ಈ ಅಂಕಣದಲ್ಲಿ ವಿವರಿಸಿರುವ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಕೂಡಲೇ ನೋಂದಾಯಿಸಿಕೊಳ್ಳಿ.

ಪ್ರಸ್ತುತ ಡಿಜಿಟಲ್ ಯುಗ ಮತ್ತು ವೃತ್ತಿ ಪೈಪೋಟಿ ಕಾಲ ಘಟದಲ್ಲಿ ಉದ್ಯೋಗವನ್ನು ಪಡೆಯಲು ಪದವಿಯ ಜೊತೆಗೆ ಕೌಶ್ಯಲವನ್ನು ಸಹ ಕಲಿತುಕೊಳ್ಳುವುದು ಅತೀ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಕಾಲ ಕಾಲಕ್ಕೆ ಸ್ವ-ಉದ್ಯೋಗ ತರಬೇತಿಗಳನ್ನು ಆಯೋಜನೆ ಮಾಡಲಾತ್ತದೆ. ಪ್ರಸ್ತುತ ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಗೆ((Free Photography And Videography Training Application) ನೋಂದಣಿ ಮಾಡಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: PF Amount Withdrawal-ಪಿಎಫ್ ನಿಯಮದಲ್ಲಿ ಭಾರೀ ಬದಲಾವಣೆ! ಇನ್ಮುಂದೆ ಶೇ 75% ಹಣ ವಿತ್ ಡ್ರಾ ಮಾಡಬಹುದು!

ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯಲ್ಲಿ ಭಾಗವಹಿಸಲು ಯಾರೆಲ್ಲ ನೋಂದಾಯಿಸಿಕೊಳ್ಳಬಹುದು? ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವ ವಿಧಾನ ಹೇಗೆ? ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ಎಷ್ಟು ದಿನ ಆಯೋಜನೆ ಮಾಡಲಾಗಿದೆ? ತರಬೇತಿಯಲ್ಲಿ ಯಾವೆಲ್ಲ ವಿಷಯದ ಕುರಿತು ಮಾಹಿತಿಯನ್ನು ತಿಳಿಸಲಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Free Photography And Videography Training Eligibility -ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿರುವ "ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ"ಯಲ್ಲಿ ಈ ಕೆಳಗಿನ ಅರ್ಹತೆಯನ್ನು ಹೊಂದಿರುವ ಎಲ್ಲಾ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು.

ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಗ್ರಾಮೀಣ ಭಾಗದ ಹಾಗೂ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯಿರುತ್ತದೆ.
ಅಭ್ಯರ್ಥಿಯ ವಯಸ್ಸು 18 ರಿಂದ 45 ವರ್ಷ ಒಳಗಿರಬೇಕು.
ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

ಇದನ್ನೂ ಓದಿ: Mahindra Scholarship-ಮಹೀಂದ್ರಾ ಎಂಪವರ್‌ಹರ್ ಸ್ಕಾಲರ್‌ಶಿಪ್ ರೂ 5,500/- ಪಡೆಯಲು ಅರ್ಜಿ ಅಹ್ವಾನ!

Photography And Videography Training Certificate-ತರಬೇತಿ ಬಳಿಕ ಪ್ರಮಾಣ ಪತ್ರ ವಿತರಣೆ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ತರಬೇತಿಯನ್ನು ಪಡೆದ ಬಳಿಕ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ.

Free Photography And Videography Training-ಸಂಪೂರ್ಣ ಉಚಿತ ತರಬೇತಿ:

ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯನ್ನು ಪಡೆಯಲು ಆಯ್ಕೆಯಾಗುವ ಅಭ್ಯರ್ಥಿಗಳು ಪ್ರವೇಶ ಶುಲ್ಕ, ಊಟ ಮತ್ತು ವಸತಿಗೆ ಯಾವುದೇ ಬಗ್ಗೆಯ ಹಣವನ್ನು ಪಾವತಿಸಬೇಕಿಲ್ಲ ಏಕೆಂದರೆ ಈ ತರಬೇತಿಯು ಸಂಪೂರ್ಣ ಉಚಿತವಾಗಿದ್ದು ತರಬೇತಿ ಕೇಂದ್ರದಲ್ಲೇ ಉಚಿತವಾಗಿ ಊಟ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: B-Khata To A-Khata-ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಡೆಯಿರಿ!

Free Photography Training

ಇದನ್ನೂ ಓದಿ: Cotton MSP-ಹತ್ತಿ ಬೆಳೆಗಾರರಿಗೆ ಸಿಹಿ ಸುದ್ದಿ: ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಗೆ ನೋಂದಣಿ ಪ್ರಾರಂಭ!

Photography And Videography Training Duration-ತರಬೇತಿ ಅವಧಿ:

ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯು ದಿನಾಂಕ: 13 ನವೆಂಬರ್ 2025 ರಿಂದ ಪ್ರಾರಂಭವಾಗಿ ಒಟ್ಟು 31 ದಿನ ನಡೆಯಲಿದೆ.

Photography And Videography Training Center-ತರಬೇತಿ ಕೇಂದ್ರದ ವಿಳಾಸ:

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯನ್ನು ಏರ್ಪಡಿಸಲಾಗಿದೆ.

ಇದನ್ನೂ ಓದಿ: Best Farmer Award-ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕಾ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ!

Photography And Videography Training Interview-ನೇರ ಸಂದರ್ಶನ:

ಆಸಕ್ತಿಯುಳ್ಳ ಅಭ್ಯರ್ಥಿಗಳು ದಿನಾಂಕ: 30/10/2025 ಗುರುವಾರ ಬೆಳಗ್ಗೆ 10.00 ಘಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುವ ಸಂದರ್ಶನದಲ್ಲಿ ನೇರವಾಗಿ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗುವಂತೆ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

Photography And Videography Training Registration-ಮುಂಚಿತವಾಗಿ ಹೆಸರ ನೋಂದಾಯಿಸಲು ಸಂಪರ್ಕಸಿ:

ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯನ್ನು ಪಡೆಯಲು ಆಸಕ್ತ ಅಭ್ಯರ್ಥಿಗಳು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಈ ಕೆಳಕಂಡ ದೂರವಾಣಿ ಸಂಖ್ಯೆ 8970476050, 9591514154, 9686248369, 9505894247 ಗಳಿಗೆ ಸಂಪರ್ಕಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: