Revenue Site Khata-ರೆವಿನ್ಯೂ ಸೈಟ್ ಗೂ ಇನ್ಮುಂದೆ ಸಿಗಲಿದೆ ಇ-ಖಾತಾ!

November 22, 2025 | Siddesh
Revenue Site Khata-ರೆವಿನ್ಯೂ ಸೈಟ್ ಗೂ ಇನ್ಮುಂದೆ ಸಿಗಲಿದೆ ಇ-ಖಾತಾ!
Share Now:

ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯಿಂದ(RDPR) ಗ್ರಾಮೀಣ ಭಾಗದ ಆಸ್ತಿಯ ಮಾಲೀಕರಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಲು ಮುಂದಾಗಿದ್ದು ಕಂದಾಯ ಜಮೀನನ್ನು ಪರಿವರ್ತನೆ ಮಾಡದೇ ಮನೆ/ನಿವೇಶನವನ್ನು ನಿರ್ಮಾಣ ಮಾಡಿಕೊಂಡಿರುವ ಆಸ್ತಿಯ ಮಾಲೀಕರಿಗೆ ಇ-ಖಾತಾವನ್ನು ವಿತರಣೆ ಮಾಡಲು ರಾಜ್ಯ ಸರಕಾರದಿಂದ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲು ಅಂತಿಮಗೊಳಿಸಲಾಗಿದೆ.

ಸಾಮಾನ್ಯವಾಗಿ ಬಹುತೇಕ ನಾಗರಿಕರಿಗೆ ತಿಳಿದಿರುವ ಹಾಗೆಯೇ ಕಂದಾಯ ಜಮೀನಿನಲ್ಲಿ(Revenue Land) ಭೂ ಪರಿವರ್ತನೆಯನ್ನು ಮಾಡದೇ ನಿವೇಶನ/ಮನೆಯನ್ನು ನಿರ್ಮಾಣ ಮಾಡಿಕೊಂಡಿರುವ ಆಸ್ತಿಯ ಮಾಲೀಕರಿಗೆ ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಯ ಪ್ರಯೋಜನ ಮತ್ತು ಆ ಆಸ್ತಿಯ ಮೇಲೆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಈ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ರೆವಿನ್ಯೂ/ಕಂದಾಯ ಸೈಟ್ ಗಳಿಗೂ ಸಹ ಅಧಿಕೃತ ಇ-ಖಾತಾವನ್ನು ವಿತರಣೆ ಮಾಡುವ ನೂತನ ಯೋಜನೆಗೆ ಅಧಿಸೂಚನೆಯನ್ನು ಹೊರಡಿಸಲು ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: AI Fact Check Training-ಎಐ ಹಾಗೂ ಫ್ಯಾಕ್ಟ್‌ಚೆಕ್‌ ಕುರಿತು ಒಂದು ದಿನದ ತರಬೇತಿಗೆ ಅರ್ಜಿ ಆಹ್ವಾನ!

ಯಾವೆಲ್ಲ ಆಸ್ತಿಗಳಿಗೆ ಇನ್ಮುಂದೆ ಇ-ಖಾತಾ ಸಿಗಲಿದೆ? ಇ-ಖಾತಾ(e-Khata) ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಇ-ಖಾತಾ ಪಡೆಯುವುದರಿಂದ ಅಗುವ ಪ್ರಯೋಜನಗಳೇನು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Revenue Property e-Khata-ರೆವಿನ್ಯೂ ಸೈಟ್ ಗಳಿಗೂ ಇ-ಖಾತಾ:

ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಿಡಿಎ/BDA, ಕೆಎಚ್.ಬಿ/KHB, ಕೆಐಎಡಿಬಿ/KIEDB ಸೇರಿದಂತೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯನ್ನು ಪಡೆಯದೇ ಹಾಗೂ ಕಂದಾಯ ಭೂಮಿಯಲ್ಲೇ ಯಾವುದೇ ಪರಿವರ್ತನೆ ಇಲ್ಲದೇ ಲಕ್ಷಾಂತರ ನಾಗರಿಕರು ಮನೆ/ನಿವೇಶನಗಳನ್ನು ನಿರ್ಮಾಣ ಮಾಡಿಕೊಂಡಿದ್ದು ಈ ಎಲ್ಲಾ ಮಾಲೀಕರಿಗೆ ರಾಜ್ಯ ಸರಕಾರ ಸಿಹಿ ಸುದ್ದಿಯನ್ನು ನೀಡಿದ್ದು, ಈ ಆಸ್ತಿಗಳಿಗೆ ಇ-ಖಾತಾವನ್ನು ವಿತರಣೆ ಮಾಡಲು ನೂತನ ನಿಯಮಕ್ಕೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲು ಅಂತಿಮ ಸಿದ್ಧತೆಯನ್ನು ಪೂರ್ಣಗೊಳಿಸಿದೆ.

ಇದನ್ನೂ ಓದಿ: PUC Scholarship-ಧಾರ್ಮಿಕ ದತ್ತಿ ಇಲಾಖೆಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ₹5,000/- ಪ್ರೋತ್ಸಾಹಧನ!

What Is e-Khata-ಏನಿದು ಇ-ಖಾತಾ:

ಈಗಾಗಲೇ ರಾಜ್ಯದ ಬಹುತೇಕ ಎಲ್ಲಾ ನಗರ ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತಾ ದಾಖಲೆಯನ್ನು ವಿತರಣೆ ಮಾಡುವ ಕಾರ್ಯಕ್ಕೆ ತಿಂಗಳ ಹಿಂದಿನಿಂದಲೇ ಚಾಲನೆ ಮಾಡಲಾಗಿದ್ದು ಇದೇ ಮಾದರಿಯಲ್ಲಿ ಪ್ರಸ್ತುತ ಗ್ರಾಮೀಣ ಭಾಗದ ಆಸ್ತಿಗಳಿಗೆ ಅಧಿಕೃತ ಮಾಲೀಕತ್ವವನ್ನು ಡಿಜಿಟಲ್ ಮಾದರಿಯಲ್ಲಿ ಸಾಬೀತುಪಡಿಸುವ ದಾಖಲೆ ವಿತರಣೆಗೆ ಚಾಲನೆ ಸಿಗಲಿದೆ.

ಒಂದು ಆಸ್ತಿಗೆ ಸಂಬಂಧಪಟ್ಟ ಅಧಿಕೃತ ಮಾಲೀಕರ ಹೆಸರು, ವಿಳಾಸ, ಸ್ಥಳದ ಜಿಪಿಎಸ್ ವಿಳಾಸ, ಆಸ್ತಿಯ ವಿಸ್ತೀರ್ಣ ಸೇರಿದಂತೆ ಎಲ್ಲಾ ಮಾಹಿತಿಯನ್ನು ನಿಖರವಾಗಿ ಸಾಬೀತುಪಡಿಸುವ ಅಧಿಕೃತ ಡಿಜಿಟಲ್ ದಾಖಲೆಗೆ ಇ-ಖಾತಾ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Nirani Sugars-ನಿರಾಣಿ ಶುಗರ್ಸ್ ವತಿಯಿಂದ ಕಬ್ಬಿನ ದರ ನಿಗದಿ ಕುರಿತು ಅಧಿಕೃತ ಆದೇಶ ಪ್ರಕಟ!

Property e-Khata Importance-ಇ-ಖಾತಾ ಏಕೆ ಮುಖ್ಯ:

ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಯಡಿ ಸಹಾಯಧನ ಆಧಾರಿತ ಯೋಜನೆಗಳ(ವಸತಿ ಯೋಜನೆಗಳು) ಪ್ರಯೋಜನವನ್ನು ಪಡೆಯಲು ಇ-ಖಾತಾ ಕಡ್ಡಾಯವಾಗಿದೆ.

ಬ್ಯಾಂಕ್ ಮೂಲಕ ಆಸ್ತಿಯ ಮೇಲೆ ಸಾಲವನ್ನು ಪಡೆಯಲು ಆಸ್ತಿಯ ಮಾಲೀಕರು ಕಡ್ಡಾಯವಾಗಿ ಇ-ಖಾತಾ(ನಮೂನೆ-11ಎ) ದಾಖಲೆಯನ್ನು ಹೊಂದಿರಬೇಕಾಗುತ್ತದೆ.

e-Khata-ಎಲ್ಲಾ ನಮೂನೆಗಳಿಗೆ ಇ-ಖಾತಾ:

ಪ್ರಸ್ತುತ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತಿಯಿಂದ ರೆವಿನ್ಯೂ ಸೈಟ್ ಸೇರಿದಂತೆ ಇನ್ನಿತರೆ ಆಸ್ತಿಗಳಿಗೆ ನಮೂನೆ-9, ನಮೂನೆ-9A, ನೀಡಲಾಗಿದ್ದು ಜೊತೆಗೆ ಗ್ರಾಮಠಾಣಾ ಪ್ರದೇಶದ ಆಸ್ತಿಗಳಿಗೆ ನಮೂನೆ-11A ಪತ್ರಗಳನ್ನು ವಿತರಿಸಲಾಗಿರುತ್ತದೆ ಎಲ್ಲಾ ನಮೂನೆಯ ಆಸ್ತಿಗಳಿಗೆ ಇ-ಖಾತಾ ಡಿಜಿಟಲ್ ದಾಖಲೆಯನ್ನು ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: Anganwadi Worker Salary-ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!

Documents For Grama Panchayat e-Khata-ಇ-ಖಾತಾ ಪಡೆಯಲು ಅವಶ್ಯವಿರುವ ದಾಖಲೆಗಳು:

ಆಸ್ತಿಯ ಮಾಲೀಕರು ತಮ್ಮ ಆಸ್ತಿಗೆ ಇ-ಖಾತಾವನ್ನು ಪಡೆಯಲು ಅರ್ಜಿ ಜೊತೆಗೆ ಅಗತ್ಯವಾಗಿ ಸಲ್ಲಿಸಬೇಕಾದ ದಾಖಲೆಗಳ ವಿವರ ಹೀಗಿದೆ:

ಅರ್ಜಿದಾರರ ಆಧಾರ್ ಕಾರ್ಡ
ವಂಶವೃಕ್ಷ
ಪೋಟೋ
ಸ್ಥಳದಲ್ಲಿ ನಿಂತ ಪೋಟೋ
ಕಂದಾಯ ರಶೀದಿ
ವಿದ್ಯುತ್ ಬಿಲ್
ಮೊಬೈಲ್ ನಂಬರ್
ಕಟ್ಟಡ ನಿಯಮ ಉಲ್ಲಂಘಿಸಿ ಕೃಷಿ ಜಮೀನಿನಲ್ಲಿ ಅಥವಾ ಭೂ ಪರಿವರ್ತಿತ ಭೂಮಿಯಲ್ಲಿನ ಕಟ್ಟಡಗಳಿಗೆ ಇ-ಖಾತಾ ಪಡೆಯಲು ನೋಂದಾಯಿತ ಪ್ರಮಾಣ ಪತ್ರ/ತೆರಿಗೆ ಪಾವತಿ ರಶೀದಿ (2025ರ ಏಪ್ರಿಲ್ 7 ಪೂರ್ವದ್ದು), ವಿದ್ಯುತ್ ໖ (20250 2.7 ). ಪಹಣಿ, ಋಣಭಾರ ಪ್ರಮಾಣ ಪತ್ರ(ಇಸಿ) ಕಡ್ಡಾಯವಾಗಿದೆ. ಭೂ ಪರಿವರ್ತನೆ ಆದೇಶ ಐಚ್ಛಿಕವಾಗಿದೆ.

ಪರಿವರ್ತನೆ ಇಲ್ಲದ/ ಕೃಷಿ ಜಮೀನಿನ ನಿವೇಶನಗಳಿಗೆ ನೋಂದಾಯಿತ ಪ್ರಮಾಣ ಪತ್ರ. ಪಹಣಿ, ಋಣಭಾರ ಪ್ರಮಾಣ ಪತ್ರ(ಇಸಿ) ಕಡ್ಡಾಯ. ಭೂ ಪರಿವರ್ತನೆ ಆದೇಶ ಐಚಿಕ.

ಇದನ್ನೂ ಓದಿ: PM Kisan Status-ಇಂದು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಬಿಡುಗಡೆ! ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ!

e khata

How To Apply For e-Khata-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Rolls Royce India Scholarship-ರೋಲ್ಸ್ ರಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ ₹35,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

E-Khata Application Process-ಅರ್ಜಿ ವಿಲೇವಾರಿಗೆ 15 ದಿನ ಗಡುವು ನಿಗದಿ:

ಗ್ರಾಮ ಪಂಚಾಯತಿಯ ಅಧಿಕಾರಿಗಳು ಆಸ್ತಿಯ ಮಾಲೀಕರಿಗೆ ಇ-ಖಾತಾವನ್ನು ವಿತರಣೆ ಮಾಡಲು ಅರ್ಜಿಯನ್ನು ಸ್ವೀಕರಿಸಿದ ಬಳಿಕ ಕರ್ತವ್ಯದ 4 ದಿನಗಳಲ್ಲಿ ಅರ್ಜಿ ಮತ್ತು ಅರ್ಜಿಯೊಂದಿಗೆ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ನಂತರ ತಂತ್ರಾಂಶದಲ್ಲಿ ಮಾಹಿತಿಯನ್ನು ದಾಖಲಿಸಿ 2 ದಿನಗಳಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಅನುಮೋದನೆಯನ್ನು ಪಡೆದು ನಂತರ ದಿನಗಳ ಒಳಗಾಗಿ ಅಗತ್ಯ ಕ್ರಮವನ್ನು ಕೈಗೊಂಡು ಒಟ್ಟು 15 ಕರ್ತವ್ಯ ದಿನಗಳ ಒಳಗಾಗಿ ಆಸ್ತಿ ಮಾಲೀಕರಿಗೆ ಇ-ಖಾತಾವನ್ನು ವಿತರಣೆ ಮಾಡಬೇಕು.

  • Grama Panchayat-ಗ್ರಾಮೀಣ ಭಾಗದ ನಾಗರಿಕರು ಇ-ಖಾತಾ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಗ್ರಾಮ ಪಂಚಾಯತಿ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ.
  • Grama Panchayat Helpline-ಸಹಾಯವಾಣಿ-8277506000

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: