Poultry Scheme-ಉಚಿತ ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ!

November 24, 2025 | Siddesh
Poultry Scheme-ಉಚಿತ ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ!
Share Now:

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ(Veterinary department) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನುದಾನ ಲಭ್ಯತೆಯ ಆಧಾರದ ಮೇಲೆ ಅರ್ಹ ರೈತರಿಗೆ ನಾಟಿ ಕೋಳಿ ಸಾಕಾಣಿಕೆಗೆ ಉತೇಜನವನ್ನು ನೀಡಲು ಉಚಿತ ಕೋಳಿ ಮರಿಗಳನ್ನು ವಿತರಣೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ಬದಲಾಗುತ್ತಿರುವ ವಾತಾವರಣದಲ್ಲಿ ರೈತರು ಕೇವಲ ಕೃಷಿ ಬೆಳೆಗಳ ಆದಾಯವನ್ನು ಮಾತ್ರ ನೆಚ್ಚಿಕೊಳ್ಳದೇ ಇದರೊಟ್ಟಿಗೆ ಹೈನುಗಾರಿಕೆ/ಕೋಳಿ ಮತ್ತು ಕುರಿ ಸಾಕಾಣಿಕೆಯನ್ನು(Koli Sakanike)ಸಹ ಮಾಡುವುದ ಅತ್ಯಗತ್ಯವಾಗಿ ಆರ್ಥಿಕ ಸ್ಥಿರತೆಯನ್ನು ಹೊಂದಲು ರೈತರು ಈ ಚಟುವಟಿಕೆಯನ್ನು ಆರಂಭಿಸುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ: Engineering scholarship-ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಆಹ್ವಾನ!

ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಅನೇಕ ಸಹಾಯಧನ ಆಧಾರಿತ ಯೋಜನೆಗಳನ್ನು(Koli Sakanike Yojane) ಅನುಷ್ಥಾನ ಮಾಡಲಾಗುತ್ತಿದ್ದು ಇದರಲ್ಲಿ ಒಂದಾದ ನಾಟಿ ಕೋಳಿ ಸಾಕಾಣಿಕೆ ಉಚಿತವಾಗಿ ನಾಲ್ಕು ವಾರದ ಕೋಳಿ ಮರಿಗಳನ್ನು ನೀಡಲು ಯೋಜನೆಗೆ ಪ್ರಸ್ತುತ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಪ್ರಯೋಜನವನ್ನು ಪಡೆಯಲು ಇದಕ್ಕಾಗಿ ರೈತರು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇನ್ನಿತರೆ ಅವಶ್ಯಕ ವಿವರವನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Nati Koli Sakanike-ನಾಟಿ ಕೋಳಿ ಸಾಕಾಣಿಕೆ:

ಈಗಾಗಲೇ ನಾಟಿ ಕೋಳಿ ಮರಿಗಳನ್ನು ತೆಗೆದುಕೊಂಡು ಪ್ರಯೋಗಿಕ ಅನುಭವವನ್ನು ಹೊಂದಿರುವವರು ಮಾತ್ರ ಇದರ ಪ್ರಯೋಜನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದರೆ ಉತ್ತಮ ಏಕೆಂದರೆ ಪ್ರಾರಂಭಿಕ ಹಂತದಲ್ಲಿ ಕೋಳಿ ಮರಿಗಳನ್ನು ಸಾಕಾಣಿಕೆ ಮಾಡಲು ಉತ್ತಮ ಪ್ರಯೋಗಿಕ ಅನುಭವ ಇರಬೇಕಾಗುತ್ತದೆ ಏಕೆಂದರೆ ಹಲವು ಬಗ್ಗೆಯ ರೋಗಗಳು ಬರುವ ಕಾರಣ ಹುಟ್ಟಿದ ಮಗುವನ್ನು ಪಾಲನೆ ಮಾಡಿದ ರೀತಿಯಲ್ಲಿ ಕೋಳಿ ಮರಿಗಳನ್ನು 3-4 ತಿಂಗಳ ವರೆಗೆ ಪಾಲನೆ ಮಾಡಬೇಕಾಗುತ್ತದೆ.

ನಾಟಿ ಕೋಳಿ ಮೊಟ್ಟೆ ಮತ್ತು ಮಂಸಕ್ಕೆ ಪ್ರಸ್ತುತ ದಿನಗಳಲ್ಲಿ ಉತ್ತಮ ಮಾರುಕಟ್ಟೆಯಿದ್ದು ಕಡಿಮೆ ಬೆಲೆಯಲ್ಲಿ ಮರಿಗಳನ್ನು ತಂದು ಉತ್ತಮವಾಗಿ ಸಾಕಾಣಿಕೆ ಮಾಡಿ ಉತ್ತಮ ದರಕ್ಕೆ ಮಾರಾಟ ಮಾಡಲು ರೈತರಿಗೆ ಅವಕಾಶವಿರುತ್ತದೆ.

ಇದನ್ನೂ ಓದಿ: Fisheries-ಮೀನುಗಾರಿಕೆ ಇಲಾಖೆ ಪರಿಹಾರ ನಿಧಿಯಡಿ ಪರಿಹಾರ ಮೊತ್ತ 10.00 ಲಕ್ಷರೂ.ಗಳಿಗೆ ಏರಿಕೆ- ಸಿದ್ದರಾಮಯ್ಯ

Poultry Scheme in karnataka

ಇದನ್ನೂ ಓದಿ: Revenue Site Khata-ರೆವಿನ್ಯೂ ಸೈಟ್ ಗೂ ಇನ್ಮುಂದೆ ಸಿಗಲಿದೆ ಇ-ಖಾತಾ!

Poultry Scheme In Karnataka-ಪಶುಪಾಲಾನಾ ಇಲಾಖೆಯಿಂದ ಉಚಿತ ಕೋಳಿ ಮರಿ ವಿತರಣೆ:

ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಕೋಳಿ ಸಾಕಾಣಿಕೆಯ ಮೂಲಕ ಆರ್ಥಿಕ ಸ್ವಾವಲಂಬನೆ ಜೀವನವನ್ನು ರೂಪಿಸಿಕೊಳ್ಳಲು ಐದು ವಾರದ ನಾಟಿ ಕೋಳಿ ಮರಿ ವಿತರಣೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

Who Can Apply-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ನಾಟಿ ಕೋಳಿ ಮರಿಗಳನ್ನು ಪಡೆಯಲು ಎಲ್ಲಾ ವರ್ಗದ ರೈತ ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಕೃಷಿ ಚಟುವಟಿಯಲ್ಲಿ ತೊಡಗಿಕೊಂಡಿರುವವರು ರೈತ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸ ಅವಕಾಶವಿರುತ್ತದೆ.

ಈಗಾಗಲೇ ಹಿಂದಿನ ವರ್ಷದಲ್ಲಿ ಇಲಾಖೆಯಿಂದ ಕೋಳಿ ಮರಿ ಪಡೆದಿರುವವರು ಮತ್ತೊಮ್ಮೆ ಈ ವರ್ಷ ಅರ್ಜಿ ಸಲ್ಲಿಸಲು ಬರುವುದಿಲ್ಲ.

ಇದನ್ನೂ ಓದಿ: Free Treatment-ನಾಯಿ, ಹಾವು ಕಡಿತಕ್ಕೆ ತಕ್ಷಣ ಉಚಿತ ಚಿಕಿತ್ಸೆ ಕಡ್ಡಾಯ ಸುಪ್ರೀಂ ಕೋರ್ಟ್ ಆದೇಶ!

Apply Method-ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಆಸಕ್ತ ಮತ್ತು ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ತಾಲ್ಲೂಕಿನ ಪಶುಪಾಲಾನಾ ಇಲಾಖೆಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Required Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ನಾಟಿ ಕೋಳಿ ಮರಿಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

  • ಆಧಾರ್ ಕಾರ್ಡ/Adhar
  • ಪೋಟೋ/Photo
  • ಬ್ಯಾಂಕ್ ಪಾಸ್ ಬುಕ್/Bank Pass Book
  • ಜಮೀನಿನ ಪಹಣಿ/RTC
  • ಮೊಬೈಲ್ ನಂಬರ್/Mobile Number

ಇದನ್ನೂ ಓದಿ: AI Fact Check Training-ಎಐ ಹಾಗೂ ಫ್ಯಾಕ್ಟ್‌ಚೆಕ್‌ ಕುರಿತು ಒಂದು ದಿನದ ತರಬೇತಿಗೆ ಅರ್ಜಿ ಆಹ್ವಾನ!

ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ತಾಲ್ಲೂಕಿನ ಪಶು ಆಸ್ಪತ್ರೆಯನ್ನು ಕಚೇರಿ ಸಮಯದಲ್ಲಿ ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದು.
ಇಲಾಖೆಯ ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: