PMFME Application-ಸ್ವಂತ ಉದ್ದಿಮೆ ಆರಂಭಿಸಲು ಶೇ 50% ಗರಿಷ್ಠ ₹15 ಲಕ್ಷ ಸಬ್ಸಿಡಿ! ಇಂದೇ ಅರ್ಜಿ ಸಲ್ಲಿಸಿ!

December 16, 2025 | Siddesh
PMFME Application-ಸ್ವಂತ ಉದ್ದಿಮೆ ಆರಂಭಿಸಲು ಶೇ 50% ಗರಿಷ್ಠ ₹15 ಲಕ್ಷ ಸಬ್ಸಿಡಿ! ಇಂದೇ ಅರ್ಜಿ ಸಲ್ಲಿಸಿ!
Share Now:

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಅಥವಾ PMFME ಯೋಜನೆಯಡಿ ಶೇ 50% ಸಬ್ಸಿಡಿಯಲ್ಲಿ ಆಹಾರ ಸಂಸ್ಕರಣೆ ಉದ್ದಿಮೆಯನ್ನು ಆರಂಭಿಸಲು ಅವಕಾಶವಿದ್ದು ಇಂದಿನ ಈ ಅಂಕಣದಲ್ಲಿ ಈ ಯೋಜನೆಯ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಆತ್ಮೀಯ ರೈತ ಬಾಂಧವರಿಗೆ, ವೈಯಕ್ತಿಕವಾಗಿ ಸ್ವ-ಉದ್ಯೋಗ(PMFME Subsidy) ಆರಂಭಿಸಲು ಆಸಕ್ತಿಯಿರುವವರಿಗೆ ಮತ್ತು ಸ್ವ-ಸಹಾಯ ಗುಂಪುಗಳಿಗೆ, ರೈತ ಉತ್ಪಾದಕ ಕಂಪನಿಗಳಿಗೆ, ಸಹಕಾರಿ ಸಂಘಗಳಿಗೆ- ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಯೋಜನೆ ಅಡಿಯಲ್ಲಿ ಯಾವುದೇ ಆಹಾರ ಪದಾರ್ಥಗಳ ಪ್ರಾಥಮಿಕ ಸಂಸ್ಕರಣೆ ಅಥವಾ ಮೌಲ್ಯವರ್ಧನಾ ಉತ್ಪನ್ನಗಳನ್ನು ತಯಾರಿಸುವ ಆಸಕ್ತಿ ಇದ್ದಲ್ಲಿ, ಅಂತವರಿಗೆ, ಬ್ಯಾಂಕ್ ಮೂಲಕ ಸಾಲದ ರೂಪದಲ್ಲಿ ಯೋಜನೆಗೆ ಬೇಕಾಗುವ ಹಣಕಾಸಿನ ಸೌಲಭ್ಯ ಹಾಗೂ ಸರ್ಕಾರದಿಂದ ಶೇಕಡ ಶೇ 50% ಸಬ್ಸಿಡಿಯಲ್ಲಿ ಅಥವಾ ಗರಿಷ್ಠ 15 ಲಕ್ಷ ದವರೆಗೆ ಸಹಾಯಧನವನ್ನು PMFME ಯೋಜನೆಯಡಿ ಪಡೆಯಬಹುದಾಗಿದೆ.

ಇದನ್ನೂ ಓದಿ: Udyam Certificate-ಬ್ಯಾಂಕ್ ಸಾಲ ಮತ್ತು ಸರ್ಕಾರಿ ಸೌಲಭ್ಯ ಪಡೆಯಲು ಈ ದಾಖಲೆ ಕಡ್ಡಾಯ! ಈ ದಾಖಲೆ ಪಡೆಯುವುದು ಹೇಗೆ!

PMFME ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು? ಎಷ್ಟು ಸಬ್ಸಿಡಿ ನೀಡಲಾಗುತ್ತದೆ? ಈ ಯೋಜನೆಯಡಿ ಯಾವೆಲ್ಲ ಉದ್ದಿಮೆಯನ್ನು ಆರಂಭಿಸಲು ಅವಕಾಶವಿದೆ ಈ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

PMFME Scheme Objective-ಯೋಜನೆಯ ಉದ್ದೇಶ:

ರೈತಾಪಿ ವರ್ಗದಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಉತೇಜನವನ್ನು ನೀಡುವ ಮೂಲಕ ಆರ್ಥಿಕವಾಗಿ ಅಭಿವೃದ್ದಿ ಹೊಂದಲು ನೆರವು ಒದಗಿಸುವುದು.

ರೈತರು ತಯಾರಿಸಿರುವ ಉತ್ಪನ್ನಗಳಿಗೆ ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಅನ್ನು ಬಲಪಡಿಸುವ ಮೂಲಕ ಸಂಘಟಿತ ಸರಬರಾಜು ಸರಪಳಿಯೊಂದಿಗೆ ಏಕೀಕರಣಗೊಳಿಸುವುದು.

ಇದನ್ನೂ ಓದಿ: Free Embroidery Training-ಮಹಿಳೆಯರಿಗೆ ಸಿಹಿ ಸುದ್ದಿ ಉಚಿತ ಎಂಬ್ರಾಯ್ಡರಿ ಕಲಿಕೆ ತರಬೇತಿ!

PMFME Yojane-ಯಾವೆಲ್ಲ ಉದ್ದಿಮೆಗೆ ಸಬ್ಸಿಡಿ ಪಡೆಯಬಹುದು?

PMFME ಯೋಜನೆಯಡಿ ಶೇ 50% ಸಬ್ಸಿಡಿಯನ್ನು ಪಡೆಯುವುದರ ಮೂಲಕ ಯಾವೆಲ್ಲ ಉದ್ದಿಮೆಯನ್ನು ಪ್ರಾರಂಭಿಸಬಹುದು ಎನ್ನುವ ವಿವರ ಈ ಕೆಳಗಿನಂತಿವೆ:

ತೆಂಗು: ಎಣ್ಣೆ ತೆಗೆಯುವ ಯಂತ್ರ, ತೆಂಗಿನ ತುರಿ ತಯಾರಿಸುವ ಯಂತ್ರ, ತೆಂಗಿನ ಹಾಲು ತಯಾರಿಸುವ ಯಂತ್ರ, ವರ್ಜಿನ್ ಎಣ್ಣೆ ಘಟಕ,
ಇತರೆ

ಮುರುಗಲು: ಬೀಜ ಬೇರ್ಪಡಿಸುವ ಯಂತ್ರ, ಜ್ಯೂಸ್ ತೆಗೆಯುವ ಯಂತ್ರ, ಚಾಕೊಲೇಟ್ ತಯಾರಿಸುವ ಯಂತ್ರ, ಇತರೆ

ಹಲಸು: ಹಪ್ಪಳ ತಯಾರಿಕಾ ಯಂತ್ರ, ಜ್ಯೂಸ್ ತಯಾರಿಕಾ ಯಂತ್ರ, ಚಾಕೋಲೇಟ್ ತಯಾರಿಕಾ ಯಂತ್ರ, ಪಲ್ಪ್ ತೆಗೆಯುವ ಯಂತ್ರ, ಚಿಪ್ಸ್ ತಯಾರಿಕಾ ಯಂತ್ರ

ಇದನ್ನೂ ಓದಿ: Subsidy Scheme-ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯಡಿ 1.00 ಲಕ್ಷ ಸಹಾಯಧನ! ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!

ಅರಿಶಿಣ ಮತ್ತು ಶುಂಠಿ: ತೊಳೆಯುವ ಯಂತ್ರ, ಕೊಚ್ಚುವ ಯಂತ್ರ, ಡ್ರೈಯರ್, ಪ್ಯಾಕಿಂಗ್ ಯಂತ್ರ, ಇತರೆ
ಅರಿಸಿನ ಹಿಟ್ಟು, ಅರಿಶಿಣ ಎಣ್ಣೆ, ಶುಂಠಿ ಹಿಟ್ಟು, ಶುಂಠಿ ಕ್ಯಾಂಡಿ, ಶುಂಠಿ ಪೇಸ್ಟ್ ಇತರೆ

ಇತರೆ ಆಹಾರ ಉತ್ಪನ್ನ: ಅನ್ವಯ:, ಪಶು ಆಹಾರ, ಸೈಲೇಜ್, ಟೊಮೆಟೊ ಸಾಸ್, ಕೆಚಪ್, ಜ್ಯಾಮ್, ಜೆಲ್ಲಿ, ಶುಂಟಿ ಬೆಳ್ಳುಳ್ಳಿ ಪೇಸ್ಟ್, ಉಪ್ಪಾಗೆ ತುಪ್ಪ, ಕಷಾಯ ಪುಡಿ, ಚಟ್ನಿ ಪುಡಿ, ಮಸಾಲ ಉತ್ಪನ್ನ, ಬೇಕರಿ ಉತ್ಪನ್ನ, ಉಪ್ಪಿನಕಾಯಿ, ಉದ್ದಿನ ಹಪ್ಪಳ, ಜ್ಯುಸ್, ಅಕ್ಕಿ-ಗೋದಿ-ರಾಗಿ ಧಾನ್ಯಗಳ ಹಿಟ್ಟು, ಮೆಣಸಿನ ಹಿಟ್ಟು, ಬಟಾಟೆ-ಗೆಣಸು-ಕೆಸುವಿನ ಚಿಪ್ಸ್, ಚಕ್ಕುಲಿ, ರೊಟ್ಟಿ, ಪರೋಟ, ಹೋಳಿಗೆ, ಚಾಕೊಲೇಟ್, ಲಸ್ಸಿ, ಹಾಲಿನ ಪೇಡಾ, ತುಪ್ಪ, ಪನ್ನೀರ್, ಚೀಸ್, ಲಾಡು, ಚಿಕ್ಕಿ, ಹಲ್ವಾ, ತೊಡೆದೇವು, ಅತ್ರಸಾ, ಖಾರಾ, ಮಸಾಲ ಗೇರುಬೀಜ, ಸೂಪ್, ಬೆಲ್ಲ, ಆರೋಗ್ಯ ಪೇಯ, , ಇತರೇ ಆಹಾರ ಉತ್ಪನ್ನ ತಯಾರಿಕಾ ಘಟಕ.

ಅಡಿಕೆಗೆ ಸಂಬಂಧಿಸಿದಂತೆ: ಹಸಿ ಅಡಿಕೆ / ಒಣ ಅಡಿಕೆ ಸುಲಿಯುವ ಯಂತ್ರ |ಅಡಿಕೆ ಬೇಯಿಸುವ ಪಾತ್ರೆ, ಅಡಿಕೆ ಗೊನೆ ಬಿಡಿಸುವ ಯಂತ್ರ, ಗೊರಬಲು ಪಾಲಿಷರ್, ಡ್ರೈಯರ್, ತಕ್ಕಡಿ ಇತರೆ ಉತ್ಪನ್ನ: ಸಿಹಿ ಅಡಿಕೆ ಪುಡಿ , ಅಡಿಕೆ ಟೀ, ಅಡಿಕೆ ಫ್ಲೇಕ್ಸ್ ತಯಾರಿಕಾ ಘಟಕ, ಇತರೆ

ಇದನ್ನೂ ಓದಿ: Bank OTS Scheme-ರಿಯಾಯಿತಿಯಲ್ಲಿ ಬ್ಯಾಂಕಿನ ಸಾಲ ಇತ್ಯರ್ಥ ಮಾಡಲು ನೂತನ ಯೋಜನೆ ಜಾರಿ!

ಕಾಳು ಮೆಣಸು: ಕಾಳು ಬೇರ್ಪಡಿಸುವ ಯಂತ್ರ, ಸ್ಪೈರಲ್ ಕ್ಲಿನರ್, ಬೊಳುಕಾಳುಮಾಡುವ ಯಂತ್ರ, ಗ್ರೇಡಿಂಗ್ ಯಂತ್ರ, ಇತರೆ ಉತ್ಪನ್ನ: ಕಾಳುಮೆಣಸು ಪುಡಿ, ಬೋಳು ಕಾಳು, ಉಪ್ಪಿನಕಾಯಿ, ಇತರೆ

ಬಾಳೆ: ಚೀಪ್ಸ್ ತಯಾರಾಕಾ ಯಂತ್ರ, ಹಪ್ಪಳ ತಯಾರಿಕಾ ಯಂತ್ರ, ಸುಕ್ಕೇಳಿ ತಯಾರಿಕಾ ಯಂತ್ರ, ಹಿಟ್ಟು ತಯಾರಿಕಾ ಯಂತ್ರ, ಜ್ಯೂಸ್ ತಯಾರಿಕಾ ಯಂತ್ರ, ಇತರೆ

PMFME Scheme

PMFME Subsidy Amount-ಎಷ್ಟು ಸಬ್ಸಿಡಿ ಪಡೆಯಬಹುದು?

PMFME ಯೋಜನೆಯಡಿ ಅರ್ಜಿ ಸಲ್ಲಿಸಿ ಬ್ಯಾಂಕ್ ಮೂಲಕ ಸಾಲವನ್ನು ಪಡೆಯುವ ಹಣಕ್ಕೆ ಕೇಂದ್ರ ಸರಕಾರವು ಶೇ 35% ಮತ್ತು ರಾಜ್ಯ ಸರಕಾರ ಶೇ 15% ಸೇರಿ ಒಟ್ಟು ಶೇ 50% ಸಬ್ಸಿಡಿಯನ್ನು ಪಡೆಯಬಹುದು.

1) ಅಭ್ಯರ್ಥಿಗಳ ವಂತಿಗೆ- ಶೇ 10% ಪರ್ಸೆಂಟ್
2) ಬ್ಯಾಂಕುಗಳಿಂದ- ಶೇ 40% ಪರ್ಸೆಂಟ್ ಸಾಲ
3) ಶೇ 50% ಸರ್ಕಾರದಿಂದ ಸಹಾಯಧನ (ಕ್ರೆಡಿಟ್ ಲಿಂಕ್ಡ್ ಬ್ಯಾಕೆಂಡ್ ಸಬ್ಸಿಡಿ) ಪಡೆಯಬಹುದು.

ಉದಾಹರಣೆಗೆ: ನೀವು ಉದ್ದಿಮೆಯನ್ನು ಪ್ರಾರಂಭಿಸಲು 10 ಲಕ್ಷದ ಯೋಜನಾ ವೆಚ್ಚದ ಅದರೆ ಈ ಯೋಜನೆಯಡಿ 5 ಲಕ್ಷ ಸಹಾಯಧನವನ್ನು ಪಡೆಯಬಹುದು.

ಇದನ್ನೂ ಓದಿ: Agriculture Subsidy Schemes-ಕೃಷಿ ಇಲಾಖೆಯಿಂದ ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 30 ಮಾರ್ಚ್ 2026

Who Can Apply For PMFME Yojana-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

18 ರಿಂದ 60 ವರ್ಷ ಒಳಗಿನ ಎಲ್ಲಾ ವರ್ಗದ ಅಭ್ಯರ್ಥಿಗಳು ಈ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.

How To Apply-ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಅಥವಾ PMFME ಯೋಜನೆಯಡಿ ಶೇ 50% ಸಬ್ಸಿಡಿಯಲ್ಲಿ ಉದ್ದಿಮೆಯನ್ನು ಆರಂಭಿಸಲು ಅರ್ಜಿ ಸಲ್ಲಿಸುವುದರ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ಪಡೆಯಲು Register Now ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ವಿವರವನ್ನು ಭರ್ತಿ ಮಾಡಿ.

ಇದನ್ನೂ ಓದಿ: PM Vikas Yojana-ಪಿಎಂ ವಿಕಾಸ ಯೋಜನೆಯಡಿ ಕೈಗಾರಿಕಾ ಕೌಶಲ್ಯ ತರಬೇತಿ ಹಾಗೂ ₹3000 ಸ್ಟೈಪೆಂಡ್!

Required Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ವೋಟರ್/ರೇಶನ್ ಕಾರ್ಡ
  • ಪಾನ್ ಕಾರ್ಡ
  • ಮಶಿನ್ ಖರೀದಿ ಮಾಡುವ ಸಂಸ್ಥೆಯಿಂದ ಕೋಟೇಶನ್/ದರ ವಿವರ ಪ್ರತಿ
  • ಅರ್ಜಿದಾರ ಅಭ್ಯರ್ಥಿಯು ಘಟಕ ಸ್ಥಾಪನೆ ಸ್ಥಳದಲ್ಲಿ ನಿಂತು ಜಿಪಿಎಸ್ ಪೋಟೋ

PMFME Application Process-ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ?

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಅಥವಾ PMFME ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ ಎನ್ನುವ ವಿವರ ಹೀಗಿದೆ:

ಮೊದಲಿಗೆ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಅಥವಾ PMFME ವೆಬ್ಸೈಟ್ ಅನ್ನು ಪ್ರವೇಶ ಮಾಡಿ ನಿಮ್ಮ ಜಿಲ್ಲೆಯ ಈ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ(DRP) ಅವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಅವರ ಬಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಯೋಜನಾ ವರದಿ ಮತ್ತು ಅರ್ಜಿಯನ್ನು ಸಿದ್ದಪಡಿಸಿಕೊಳ್ಳಬೇಕು ಬಳಿಕ ನಿಮ್ಮ ಅರ್ಜಿಯು DRP ಲಾಗಿನ್ ಮೂಲಕ DNO ಲಾಗಿನ್ ಗೆ ಹೋಗಿ ಅನುಮೋದನೆಯನ್ನು ಪಡೆದು ನಂತರ ನೇರವಾಗಿ ನೀವು ಅರ್ಜಿ ಸಲ್ಲಿಸುವಾಗ ನೀಡಿರುವ ಬ್ಯಾಂಕ್ ಶಾಖೆಗೆ ಆನ್ಲೈನ್ ಮೂಲಕವೇ ಹೋಗುತ್ತದೆ.

ಇದನ್ನೂ ಓದಿ: Bele Parihara-2025: ರಾಜ್ಯದ 14.21 ಲಕ್ಷ ರೈತರಿಗೆ 2249 ಕೋಟಿ ಬೆಳೆ ಪರಿಹಾರ ಬಿಡುಗಡೆ: ಸಚಿವ ಕೃಷ್ಣ ಬೈರೇಗೌಡ!

ಇದಾದ ನಂತರ ನೀವು ಯೋಜನಾ ವರದಿ ಮತ್ತು ಇನ್ನಿತರೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಈ ಯೋಜನೆಯಡಿ ಸಾಲವನ್ನು ಮಂಜೂರು ಮಾಡಿಸಿಕೊಳ್ಳಬೇಕು ಸಾಲ ಮಂಜೂರು ಅದ ಹಣವು ನೀವು ಅರ್ಜಿಯಲ್ಲಿ ನೀಡಿರುವ ಮಶಿನ್ ಸಪ್ಲೇಯರ್ ಖಾತೆಗೆ ವರ್ಗಾವಣೆ ಮಾಡಲಾಗಿರುತ್ತದೆ ಬಳಿಕ ನೀವು ಯಂತ್ರಗಳನ್ನು ಖರೀದಿಸಿ ನಿಮ್ಮ ಉದ್ದಿಮೆಯನ್ನು ಪ್ರಾರಂಭಿಸಬೇಕು.

Helpline-ಹೆಚ್ಚಿನ ಮಾಹಿತಿಗಾಗಿ:

  • ಅರ್ಜಿ ಸಲ್ಲಿಸಲು ಸಹಾಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ನೋಂದಣಿ ಮಾಡಿ- Register Now
  • ಯೋಜನೆಯ ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: