Farmer Award Application-ಮುಂಗಾರು ಬೆಳೆ ಸ್ಪರ್ಧೆಗೆ ರೈತರಿಂದ ಅರ್ಜಿ ಆಹ್ವಾನ!ರೂ 50,000/- ದ ವರೆಗೆ ಬಹುಮಾನ ನಿಗದಿ!

August 17, 2026 | Siddesh
Farmer Award Application-ಮುಂಗಾರು ಬೆಳೆ ಸ್ಪರ್ಧೆಗೆ ರೈತರಿಂದ ಅರ್ಜಿ ಆಹ್ವಾನ!ರೂ 50,000/- ದ ವರೆಗೆ ಬಹುಮಾನ ನಿಗದಿ!
Share Now:

ರಾಜ್ಯ ಕೃಷಿ ಇಲಾಖೆಯು ರೈತರ ಶ್ರಮವನ್ನು ಗುರುತಿಸಿ, ಕೃಷಿ ಕ್ಷೇತ್ರದಲ್ಲಿ ಹೊಸ ಉತ್ಸಾಹ ತುಂಬುವ ಉದ್ದೇಶದಿಂದ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಯನ್ನು(Farmer Award Application) ಆಯೋಜಿಸಿದೆ. ಮಣ್ಣಿನ ಮಕ್ಕಳ ಸಾಧನೆಯನ್ನು ಶ್ಲಾಘಿಸಲು ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಅರ್ಹ ರೈತರು ಮತ್ತು ರೈತ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಪ್ರಶಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಯಸುವ ರೈತರು ಇಲಾಖೆಯ 'ಕೆ-ಕಿಸಾನ್' (K-KISAN) ಪೋರ್ಟಲ್ ಮೂಲಕ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ(Farmer Award Application-2026) ಸಲ್ಲಿಸಬಹುದು ಅಥವಾ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ನಿಗದಿತ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು.

ಇದನ್ನೂ ಓದಿ: Diploma In Organic Farming-ಬೆಂಗಳೂರು ಕೃಷಿ ವಿವಿಯಿಂದ 2 ವರ್ಷದ ದೂರ ಶಿಕ್ಷಣ ಡಿಪ್ಲೊಮಾ ಕೋರ್ಸ್ ಗೆ ಅರ್ಜಿ ಆಹ್ವಾನ!

ಮುಂಗಾರು ಋತುವಿನಲ್ಲಿ ಉತ್ತಮ ಬೆಳೆ ಬೆಳೆದು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಪ್ರತಿಯೊಬ್ಬ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಕೃಷಿ ಇಲಾಖೆಯು ನೀಡುವ ಈ ಪ್ರಶಸ್ತಿಯು ಕೇವಲ ನಗದು ಬಹುಮಾನ ಮಾತ್ರವಲ್ಲದೆ, ಸಮಾಜದಲ್ಲಿ ರೈತರಿಗೆ ಗೌರವ ಹಾಗೂ ಪ್ರೋತ್ಸಾಹವನ್ನು ನೀಡುವ ಉದ್ದೇಶವನ್ನು ಹೊಂದಿದ್ದು. ಆದ್ದರಿಂದ ಅರ್ಹ ಮತ್ತು ಆಸಕ್ತ ರೈತರು ಆಗಸ್ಟ್ 31, 2026ರ ಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು ಸಲ್ಲಿಸಿ, ಈ ಸ್ಪರ್ಧೆಯ ಪ್ರಯೋಜನ ಪಡೆದುಕೊಳ್ಳಬೇಕಾಗಿ ಇಲಾಖೆಯ ಅಧಿಕಾರಿಗಳು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Who Can Apply-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರ ಹೆಸರಿನಲ್ಲೇ ಕೃಷಿ ಜಮೀನನ್ನು ಹೊಂದಿರಬೇಕು.
ಬೆಳೆ ಸ್ಪರ್ಧೆಗೆ ನಿಗದಿಪಡಿಸಿರುವ ಬೆಳೆಯನೇ ರೈತರು ಬೆಳೆದಿರಬೇಕು.
ಈ ಹಿಂದೆ ಈಗಾಗಲೇ ಯೋಜನೆ ಅಡಿಯಲ್ಲಿ ಆರ್ಥಿಕ ನೆರವನ್ನು ಪಡೆದಿರುವವರು ಮತ್ತೊಮ್ಮೆ ಪ್ರಯೋಜನವನ್ನು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

How To Apply-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ತಮ್ಮ ಹೋಬಳಿ/ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Free CCTV Training-ಉಚಿತ ಸಿಸಿಟಿವಿ ಅಳವಡಿಕೆ ತರಬೇತಿ: ನಿರುದ್ಯೋಗಿ ಯುವಕರಿಗೆ ಬಂಪರ್ ಅವಕಾಶ!

Farmer Award Prize Amount-ಪ್ರಶಸ್ತಿ ಮೊತ್ತವೇಷ್ಟು?

ಅರ್ಜಿ ಸಲ್ಲಿಸಿದ ಬಳಿಕ ಬೆಳೆ ಇಳುವರಿಯ ಆಧಾರದ ಮೇಲೆ ಅರ್ಹತೆಯ ಅನುಗುಣವಾಗಿ ಒಟ್ಟು 3 ವಿಭಾಗದಲ್ಲಿ ರೈತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ವಿಭಾಗವಾರು/ಮಟ್ಟವಾರು ಪ್ರಶಸ್ತಿಯ ಮೊತ್ತದ ವಿವರ ಹೀಗಿದೆ:

1) ತಾಲ್ಲೂಕು ಮಟ್ಟ(Taluk Level):

  • ಪ್ರಥಮ ಬಹುಮಾನ: ₹10,000/-
  • ದ್ವಿತೀಯ ಬಹುಮಾನ: ₹7,500/-
  • ತೃತೀಯ ಬಹುಮಾನ: ₹5,000/-

2) ಜಿಲ್ಲಾ ಮಟ್ಟ(District Level):

  • ಪ್ರಥಮ ಬಹುಮಾನ: ₹30,000/-
  • ದ್ವಿತೀಯ ಬಹುಮಾನ: ₹25,000/-
  • ತೃತೀಯ ಬಹುಮಾನ: ₹20,000/-

ಇದನ್ನೂ ಓದಿ: Azim Premji Scholarship-ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ! ವಿದ್ಯಾರ್ಥಿನಿಯರಿಗೆ ₹30,000 ವಿದ್ಯಾರ್ಥಿವೇತನ!

3) ರಾಜ್ಯ ಮಟ್ಟ(State Level):

  • ಪ್ರಥಮ ಬಹುಮಾನ: ₹50,000/-
  • ದ್ವಿತೀಯ ಬಹುಮಾನ: ₹40,000/-
  • ತೃತೀಯ ಬಹುಮಾನ: ₹35,000/

Required Documents For Application-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಕೃಷಿ ಪ್ರಶಸ್ತಿಯನ್ನು ಪಡೆಯಲು ರೈತರು ಅರ್ಜಿ ಸಲ್ಲಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸಬೇಕು.ಇವುಗಳ ಪಟ್ಟಿ ಈ ಕೆಳಗಿನಂತಿವೆ:

1) ಆಧಾರ್ ಕಾರ್ಡ.
2) ಬ್ಯಾಂಕ್ ಪಾಸ್ ಬುಕ್.
3) ಜಮೀನಿನ ಪಹಣಿ.
4) ರೈತರ ಪೋಟೋ.

ಇದನ್ನೂ ಓದಿ: Free Sewing Machine Scheme-ಈ ಜಿಲ್ಲೆಯ ಕುಶಲಕರ್ಮಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ!

Farmer Award Selection Process-ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಒಮ್ಮೆ ರೈತರು ಅಗತ್ಯ ದಾಖಲೆಗಳ ಸಮೇತ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಕೃಷಿ ಇಲಾಖೆಯ ಅಧಿಕಾರಿಯ ತಂಡವು ರೈತರ ಬೆಳೆ ಕಟಾವಿಗೆ ಬಂದ ಸಮಯದಲ್ಲಿ 5*5 ಮೀಟರ್ ಅಳತೆಯಲ್ಲಿ ರೈತರ ತಾಕಿನ ಬೆಳೆಯನ್ನು ಕಟಾವು ಮಾಡಿ ಇಳುವರಿಯನ್ನು ದಾಖಲು ಮಾಡಲಾಗುತ್ತದೆ ಇದೇ ಮಾದರಿಯಲ್ಲಿ ಅರ್ಜಿ ಸಲ್ಲಿಸಿದ ಇತರೆ ರೈತರ ಬೆಳೆಯನ್ನು ದಾಖಲಿಸಲಾಗುತ್ತದೆ ಅತೀ ಹೆಚ್ಚು ಇಳುವರಿ ಬಂದ ಮೊದಲು 3 ರೈತರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.

  • For More Information-ಇನ್ನು ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್- Click Here
  • Helpline Number-ಸಹಾಯವಾಣಿ-1800 425 3553

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: