Free Heavy Vehicle Training-ಉಚಿತ ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ!

August 11, 2026 | Siddesh
Free Heavy Vehicle Training-ಉಚಿತ ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ!
Share Now:

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಜಂಟಿ ಸಹಯೋಗದಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಫಲಾನುಭವಿಗಳಿಗೆ ಉಚಿತ ಲಘು (LMV) ಹಾಗೂ ಭಾರಿ (HPV) ವಾಹನ ಚಾಲನಾ ತರಬೇತಿ ಮತ್ತು ಚಾಲನಾ ಪರವಾನಗಿ (Driving License) ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ತರಬೇತಿ ಯೋಜನೆಯ ವಿಶೇಷತೆಯೆಂದರೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಸಾರಿಗೆ ಇಲಾಖೆಯ (RTO) ಸಹಯೋಗದೊಂದಿಗೆ ಸಂಪೂರ್ಣ ತರಬೇತಿಯನ್ನು(Heavy Vehicle Driving Training) ನೀಡಲಾಗುತ್ತಿದ್ದು, ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದವರಿಗೆ ಉಚಿತವಾಗಿ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ನೀಡಲಾಗುತ್ತದೆ. ಉದ್ಯೋಗಾಸಕ್ತರಿಗೆ ಹಾಗೂ ವೃತ್ತಿಪರ ಚಾಲಕರಾಗಲು ಬಯಸುವವರಿಗೆ ಇದು ಸುವರ್ಣಾವಕಾಶವಾಗಿದೆ.

ಇದನ್ನೂ ಓದಿ: SSP Scholarship-2026: ವಿದ್ಯಾರ್ಥಿವೇತನ ಪಡೆಯಲು ಎಲ್ಲಾ ತರಗತಿಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ!

ರಾಜ್ಯದ ವಿವಿಧ ಭಾಗಗಳಲ್ಲಿರುವ ಕೆ.ಆರ್.ಆರ್.ಸಾ ನಿಗಮದ ತರಬೇತಿ ಕೇಂದ್ರಗಳಲ್ಲಿ(Heavy Vehicle Driving Training Center) ಈ ಉಚಿತ ತರಬೇತಿ ನಡೆಯಲಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಕ್ಷಣವೇ ತಮ್ಮ ಹತ್ತಿರದ ಕೇಂದ್ರಗಳನ್ನು ಸಂಪರ್ಕಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ತರಬೇತಿ ಕೇಂದ್ರಗಳನ್ನು ಸಂಪರ್ಕಿಸಲು ಅಧಿಕೃತ ಪ್ರಕಟಣೆಯಲ್ಲಿ ಶಿವಕುಮಾರ್ ಕೆ ಬಿ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Traning Details-ಉಚಿತ ತರಬೇತಿ ವಿವರ:

ವಿವರಗಳುಲಘು ವಾಹನ ಚಾಲನಾ ತರಬೇತಿ (LMV)ಭಾರಿ ವಾಹನ ಚಾಲನಾ ತರಬೇತಿ (HPV)
ತರಬೇತಿ ಅವಧಿ30 ದಿನ30 ದಿನ
ವಯೋಮಿತಿ20 (ಕನಿಷ್ಠ) ರಿಂದ 45 (ಗರಿಷ್ಠ) ವರ್ಷಗಳು20 (ಕನಿಷ್ಠ) ರಿಂದ 45 (ಗರಿಷ್ಠ) ವರ್ಷಗಳು
ವಿಶೇಷ ಅರ್ಹತೆ-ಲಘು ವಾಹನ (LMV) ಪರವಾನಗಿ ಪಡೆದು 1 ವರ್ಷ ಪೂರ್ಣಗೊಂಡಿರಬೇಕು

ಇದನ್ನೂ ಓದಿ: Land RTC-ಜಮೀನಿನ ಪಹಣಿಯ ಹಿಸ್ಸಾ ಸಂಖ್ಯೆ ಎಂದರೇನು? ಹಿಸ್ಸಾ ಸಂಖ್ಯೆ ಹೇಗೆ ಬರುತ್ತದೆ?ಇಲ್ಲಿದೆ ಅಗತ್ಯ ಮಾಹಿತಿ!

Who Can Apply-ಯಾರ‍ೆಲ್ಲ ಅರ್ಜಿ ಸಲ್ಲಿಸಬಹುದು?

  • ಕರ್ನಾಟಕದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವರ್ಗಕ್ಕೆ ಸೇರಿದ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.
  • 20 ವರ್ಷದಿಂದ 45 ವರ್ಷಗಳ ಒಳಗಿನ ಅಭ್ಯರ್ಥಿಗಳು.
  • ಭಾರಿ ವಾಹನ (HPV) ತರಬೇತಿಗೆ್ ಲಘು ವಾಹನ (LMV) ಚಾಲನಾ ಪರವಾನಗಿ ಪಡೆದು ಕನಿಷ್ಠ 1 ವರ್ಷ ಪೂರ್ಣಗೊಂಡಿರಬೇಕು.

How To Apply-ಎಲ್ಲಿ ಅರ್ಜಿ ಸಲ್ಲಿಸಬೇಕು?

ರಾಜ್ಯದ ಕೆ.ಆರ್.ಆರ್.ಸಾ ನಿಗಮದ (KSRTC) ಅಧಿಕೃತ ತರಬೇತಿ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Ration Card-ರೇಷನ್ ಕಾರ್ಡ್‍ದಾರರ ಗಮನಕ್ಕೆ: ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರ ಜಂಟಿಯಾಗಿ ವಿತರಣೆ!

Free Heavy Vehicle Training

Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಜಾತಿ ಪ್ರಮಾಣ ಪತ್ರ (Caste Certificate)
  • ಆಧಾರ್ ಕಾರ್ಡ್ (Aadhaar Card)
  • ಇತ್ತೀಚಿನ 4 ಭಾವಚಿತ್ರಗಳು (Passport size photos)
  • ಭಾರಿ ವಾಹನ ತರಬೇತಿಗೆ: 1 ವರ್ಷ ಹಳೆಯ ಲಘು ವಾಹನ ಚಾಲನಾ ಪರವಾನಗಿ (LMV DL).

Training Center In Karnataka-ರಾಜ್ಯದಲ್ಲಿ ಎಲ್ಲೆಲ್ಲಿ ತರಬೇತಿ ಕೇಂದ್ರಗಳಿವೆ?

1) ಮಾಲೂರು.
2) ಚಿಕ್ಕಮಗಳೂರು.
3) ಮಳವಳ್ಳಿ.
4) ಹಾಸನ.
5) ಹೊಳಲ್ಕೆರೆ.

ಇದನ್ನೂ ಓದಿ: Scholorship Amount-BE/B.Tech ವಿದ್ಯಾರ್ಥಿಗಳಿಗೆ ₹70,250 ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

ಅರ್ಹ ಹಾಗೂ ಆಸಕ್ತ ಫಲಾನುಭವಿಗಳು ತಮ್ಮ ಹತ್ತಿರದ ತರಬೇತಿ ಕೇಂದ್ರಗಳ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸುವುದರ ಬಗ್ಗೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದು:

  • ಮಾಲೂರು- 7760994432
  • ಚಿಕ್ಕಮಗಳೂರು- 9449997805
  • ಮಳವಳ್ಳಿ- 9632788571
  • ಹಾಸನ- 9686684655
  • ಹೊಳಲ್ಕೆರೆ- 7019072560

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: