Ration Card-ರೇಷನ್ ಕಾರ್ಡ್‍ದಾರರ ಗಮನಕ್ಕೆ: ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರ ಜಂಟಿಯಾಗಿ ವಿತರಣೆ!

August 8, 2026 | Siddesh
Ration Card-ರೇಷನ್ ಕಾರ್ಡ್‍ದಾರರ ಗಮನಕ್ಕೆ: ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರ ಜಂಟಿಯಾಗಿ ವಿತರಣೆ!
Share Now:

ಬೆಂಗಳೂರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನದಂತೆ, ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಆಗಸ್ಟ್-2026 ಹಾಗೂ ಸೆಪ್ಟೆಂಬರ್-2026 ಈ ಎರಡೂ ತಿಂಗಳ ಆಹಾರ ಧಾನ್ಯಗಳ ವಿತರಣೆಯನ್ನು ಆಗಸ್ಟ್ ಮಾಹೆಯಲ್ಲೇ ಒಟ್ಟಿಗೆ (ಜಂಟಿಯಾಗಿ) ನೀಡಲು ನಿರ್ಧರಿಸಲಾಗಿದೆ. ಸರ್ಕಾರದ ಈ ತೀರ್ಮಾನದಿಂದಾಗಿ ಪಡಿತರ ದಾರರು ಎರಡು ತಿಂಗಳ ಧಾನ್ಯವನ್ನು ಒಂದೇ ಬಾರಿ ಪಡೆಯಲು ಅವಕಾಶವಾಗಿದೆ.

ಈ ನೂತನ ಹಂಚಿಕೆಯಡಿ ಅಂತ್ಯೋದಯ ಅನ್ನ ಯೋಜನೆ (AAY), ಕೇಂದ್ರ ಆದ್ಯತಾ ಕುಟುಂಬ (Central PHH) ಹಾಗೂ ರಾಜ್ಯ ಆದ್ಯತಾ ಕುಟುಂಬ (State PHH) ಪಡಿತರ ಚೀಟಿದಾರರಿಗೆ ಅವರವರ ಕಾರ್ಡ್‌ಗಳ ವರ್ಗೀಕರಣಕ್ಕೆ ತಕ್ಕಂತೆ ಅಗತ್ಯ ಪ್ರಮಾಣದ ಅಕ್ಕಿ ಹಾಗೂ ರಾಗಿಯನ್ನು ವಿತರಿಸಲಾಗುತ್ತಿದೆ. ಎರಡು ತಿಂಗಳ ಆಹಾರ ಧಾನ್ಯವನ್ನು ಒಂದೇ ಮಾಹೆಯಲ್ಲಿ ವಿತರಿಸುತ್ತಿರುವುದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಯಾವುದೇ ಗೊಂದಲ ಉಂಟಾಗದಂತೆ ವ್ಯವಸ್ಥಿತವಾಗಿ ಹಂಚಿಕೆ ಮಾಡಲು ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ: Scholorship Amount-BE/B.Tech ವಿದ್ಯಾರ್ಥಿಗಳಿಗೆ ₹70,250 ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

ವಿಶೇಷವಾಗಿ ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶದ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅಥವಾ ಕಾರ್ಡ್‌ದಾರರಿಗೆ ಯಾವುದೇ ರೀತಿಯ ತೊಂದರೆ ಅಥವಾ ಸಮಸ್ಯೆಗಳು ಎದುರಾದಲ್ಲಿ, ಸಾರ್ವಜನಿಕರ ನೆರವಿಗಾಗಿ ಇಲಾಖೆಯು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಈ ಸಂಪೂರ್ಣ ವಿತರಣಾ ಪ್ರಕ್ರಿಯೆ ಸರಾಗವಾಗಿ ನಡೆಯಲು ಸಾರ್ವಜನಿಕರು ಹಾಗೂ ಪಡಿತರ ಚೀಟಿದಾರರು ಸಂಪೂರ್ಣ ಸಹಕಾರ ನೀಡಬೇಕೆಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಬೆಂಗಳೂರು ಪಶ್ಚಿಮ ವಲಯದ ಜಂಟಿ ನಿರ್ದೇಶಕರು ಕೋರಿದ್ದಾರೆ.

AAY Card-ಅಂತ್ಯೋದಯ ಅನ್ನ ಯೋಜನೆ:

ಪ್ರತಿ ಕುಟುಂಬಕ್ಕೆ 28 ಕೆ.ಜಿ ಅಕ್ಕಿ ಮತ್ತು 42 ಕೆ.ಜಿ ರಾಗಿ ಸೇರಿ ಒಟ್ಟು 70 ಕೆ.ಜಿ ಆಹಾರ ಧಾನ್ಯ ವಿತರಣೆಯಾಗಲಿದೆ.

ಇದನ್ನೂ ಓದಿ: Dam Water Level-ರಾಜ್ಯದ ಜಲಾಶಯಗಳಿಗೆ ಒಂದೇ ದಿನದಲ್ಲಿ 34 TMC ನೀರು ಸಂಗ್ರಹ! ಇಲ್ಲಿದೆ ಡ್ಯಾಂವಾರು ಇಂದಿನ ನೀರಿನ ಮಟ್ಟ!

Central PHH Cards-ಕೇಂದ್ರ ಆದ್ಯತಾ ಕುಟುಂಬ ಪಡಿತರ ಚೀಟಿ:

ಪ್ರತಿ ಸದಸ್ಯರಿಗೆ 4 ಕೆ.ಜಿ ಅಕ್ಕಿ ಮತ್ತು 6 ಕೆ.ಜಿ ರಾಗಿ ಸೇರಿ ಒಟ್ಟು 10 ಕೆ.ಜಿ ಆಹಾರ ಧಾನ್ಯ ಸಿಗಲಿದೆ.

State PHH Cards-ರಾಜ್ಯ ಆದ್ಯತಾ ಕುಟುಂಬ ಪಡಿತರ ಚೀಟಿ:

ಪ್ರತಿ ಸದಸ್ಯರಿಗೆ ಒಟ್ಟು 10 ಕೆ.ಜಿ ಅಕ್ಕಿ ನೀಡಲಾಗುವುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: VAO Last Date-ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

Ration Card Biometric-ಬಯೋಮೆಟ್ರಿಕ್ ಕಡ್ಡಾಯ:

ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ ಪಡೆಯುತ್ತಿರುವುದರಿಂದ, ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಎರಡು ಬಾರಿ ಪ್ರತ್ಯೇಕವಾಗಿ ತಮ್ಮ ಆಧಾರ್ ಆಧಾರಿತ ಬೆರಳಚ್ಚು (Biometric) ನೀಡುವುದು ಕಡ್ಡಾಯವಾಗಿದೆ.

Helpline Number-ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ:

ಪಡಿತರ ವಿತರಣೆಯಲ್ಲಿ ಸಮಸ್ಯೆಗಳಿದ್ದಲ್ಲಿ ಪಶ್ಚಿಮ ವಲಯ ಕಚೇರಿ ದೂರವಾಣಿ ಸಂಖ್ಯೆ 080-23153259 ಹಾಗೂ ಉಚಿತ ಸಹಾಯವಾಣಿ 1967 ಕ್ಕೆ ದೂರು ನೀಡಬಹುದು.

ಇದನ್ನೂ ಓದಿ: Ration Distribution-ಪಡಿತರದಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ನ್ಯಾಯಬೆಲೆ ಅಂಗಡಿಗಳು ಓಪನ್!

Ahara Ilake Website-ರೇಶನ್ ಕಾರ್ಡ ಕುರಿತು ಮಾಹಿತಿಗಾಗಿ ಅಧಿಕೃತ ವೆಬ್ಸೈಟ್:

ನಾಗರಿಕರು ಇಲ್ಲಿ ನೀಡಿರುವ "Ration Card Status" ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ನಿಮ್ಮ ಪಡಿತರ ಚೀಟಿ/ರೇಶನ್ ಕಾರ್ಡ ಕುರಿತು ಸಂಪೂರ್ಣ ಮಾಹಿತಿಯನ್ನು ಮೊಬೈಲ್ ನಲ್ಲೇ ಪಡೆಯಬಹುದಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: