Samudaya Bhavana-ಸಮುದಾಯ ಭವನ ನಿರ್ಮಾಣ ಮಾಡಲು ಸಹಾಯಧನ! ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!

September 8, 2026 | Siddesh
Samudaya Bhavana-ಸಮುದಾಯ ಭವನ ನಿರ್ಮಾಣ ಮಾಡಲು ಸಹಾಯಧನ! ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!
Share Now:

2026-2027 ನೇ ಸಾಲಿನ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ಅಡಿಯಲ್ಲಿ ಸಮುದಾಯ ಭವನ ನಿರ್ಮಾಣ ಯೋಜನೆಯನ್ನು ಜಾರಿಗೆ ತಂದಿದ್ದು, ಗರಿಷ್ಠ ರೂ. 1.00 ಕೋಟಿವರೆಗೆ ಅನುದಾನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಜಿಲ್ಲಾ ಕೇಂದ್ರ ಸ್ಥಾನಗಳು/ಮಹಾನಗರ ಪಾಲಿಕೆಗಳಲ್ಲಿ ಸಮುದಾಯ ಭವನಗಳಿಗೆ ಗರಿಷ್ಠ ರೂ. 1.00 ಕೋಟಿವರೆಗೆ ಹಾಗೂ ಇತರೆ ಸ್ಥಳಗಳಲ್ಲಿ ಗರಿಷ್ಠ ರೂ. 50.00 ಲಕ್ಷಗಳವರೆಗೆ ಅನುದಾನ ಮಂಜೂರು ಮಾಡಲಾಗುವುದು. ಅಂದಾಜು ಮೊತ್ತವು ಇದರಿಗಿಂತ ಕಡಿಮೆ ಇದ್ದಲ್ಲಿ, ಅಂದಾಜು ಮೊತ್ತದಷ್ಟೇ ಅನುದಾನವನ್ನು ನೀಡಲಾಗುತ್ತದೆ.

ಅನುದಾನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಕೊನೆಯ ದಿನಾಂಕ ಯಾವುದು? ಹೇಗೆ ಅರ್ಜಿ ಸಲ್ಲಿಸಬೇಕು? ಇನ್ನಿತರ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಸೆಪ್ಟೆಂಬರ್ 2026

ಇದನ್ನೂ ಓದಿ: Mahindra EmpowerHer Scholarship-ಮಹೀಂದ್ರಾ ಎಂಪವರ್‌ಹರ್ ಸ್ಕಾಲರ್‌ಶಿಪ್ ಯೋಜನೆಯಡಿ ವಿದ್ಯಾರ್ಥಿವೇತನ!

ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳಾವುವು?

1) ಈ ಯೋಜನೆಯಡಿಯಲ್ಲಿ ಅನುದಾನ ಪಡೆಯಲು ನೊಂದಾಯಿತ ಕ್ರಿಶ್ಚಿಯನ್ ಸಮುದಾಯದಸರ್ಕಾರಿ ಸ್ವಾಮ್ಯದ ಬೋರ್ಡು ಮತ್ತು ಕಾರ್ಪೊರೇಷನ್‌ಗಳು, ಖಾಸಗಿ ಸಂಘ, ಸ್ವಯಂ ಸೇವಾ ಸಂಸ್ಥೆಗಳು /ಟ್ರಸ್‌ಟ್‌ಮಾತ್ರ ಅರ್ಹರಿರುತ್ತಾರೆ.

2) ಅನುದಾನ ಪಡೆಯುವ ಸರ್ಕಾರಿ ಸ್ವಾಮ್ಯದ ಬೋರ್ಡ್ ಕಾರ್ಪೋರೇನ್/ಖಾಸಗಿ ಸಂಘ, ಸ್ವಯಂ ಸೇವಾ ಸಂಸ್ಥೆಗಳು/ಟ್ರಸ್‌ಟ್‌ಗಳು ರಾಜ್ಯದಲ್ಲಿನ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ಅಥವಾ ಟ್ರಸ್ಟ್ ಕಾಯ್ದೆಯನ್ವಯ ಅಥವಾ ಇತರ ಸಂಬಂಧಪಟ್ಟ ಕಾಯ್ದೆಯಡಿಯಲ್ಲಿ ನೋಂದಣಿಯಾಗಿ ಕನಿಷ್ಠ 3 ವರ್ಷಗಳಾಗಿರಬೇಕು.

3) ಅನುದಾನ ಬಯಸುವ ಸ್ವಯಂ ಸೇವಾ ಸಂಸ್ಥೆಗಳು/ ಟ್ರಸ್ಟ್ ಗಳು ಸಂಘಗಳು 3 ವರ್ಷಗಳ ಆಡಿಟ್ ವರದಿಗಳನ್ನು ಚಾರ್ಟಡ್ ಅಕೌಂಟಿಂಟ್ ರವರಿಂದ UDIN ಸಂಖ್ಯೆಯೊಂದಿಗೆ ಆಡಿಟ್ ಮಾಡಿಸಿ ಸಲ್ಲಿಸಬೇಕು.

4) ಸದರಿ ಸಮುದಾಯಭವನದ ಕಟ್ಟಡವು ಜಿಲ್ಲಾ ಕೇಂದ್ರಗಳಲ್ಲಿ 500 ಜನ ಹಾಗೂ ಇತರೇ ಸ್ಥಳಗಳಲ್ಲಿ 200 ಜನರಿಗೆ ಸ್ಥಳಾವಕಾಶವಿರುವಂತಹ ಹಾಲ್‌ಗಳನ್ನು ಹೊಂದಿರತಕ್ಕದ್ದು.

ಇದನ್ನೂ ಓದಿ: JK Tyre Scholarship-JK ಟೈರ್ ಶಿಕ್ಷಾ ಸಾರಥಿ ಯೋಜನೆಯಡಿ 25,000 ವಿದ್ಯಾರ್ಥಿವೇತನ! ಇನ್ನೂ 5 ದಿನ ಬಾಕಿ!

5) ಅನುದಾನದ ದುರುಪಯೋಗವಾಗಿದ್ದಲ್ಲಿ ಅಥವಾ ಕಾಮಗಾರಿಯು ಸ್ಥಗಿತವಾಗಿದ್ದಲ್ಲಿ ಆಯಾ ಸಂಘ ಸಂಸ್ಥೆ/ಟ್ರಸ್ಟ್ಗಳ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಿ ಸರ್ಕಾರದ ಅನುದಾನವನ್ನು ಶೇ. 10% ರಷ್ಟು ಬಡ್ಡಿಯೊಂದಿಗೆ ಮರುಪಾವತಿಸಲು ಕ್ರಮವಹಿಸತಕ್ಕದ್ದು.

6) ಜಿಲ್ಲಾ ಕೇಂದ್ರ ಸ್ಥಾನ/ಮಹಾನಗರಪಾಲಿಕೆಗಳಲ್ಲಿ ಸಮುದಾಯ ಭವನಗಳ ನಿರ್ಮಾಣದ ಅಂದಾಜಿನ ಮೊತ್ತವು ರೂ.1.00ಕೋಟಿಗಿಂತ ಜಾಸ್ತಿ ಇದ್ದಲ್ಲಿ ಗರಿಷ್ಠ ರೂ.1.00 ಕೋಟಿಗಳನ್ನು ರೂ.1.00 ಕೋಟಿಗಿಂತ ಕಡಿಮೆ ಇದ್ದಲ್ಲಿ ಅಂದಾಜು ಮೊತ್ತದಷ್ಟು ಅನುದಾನವನ್ನು ಮಂಜೂರು ಮಾಡತಕ್ಕದ್ದು.

7) ಜಿಲ್ಲಾ ಕೇಂದ್ರ ಸ್ಥಾನಗಳನ್ನು ಹೊರತುಪಡಿಸಿ ಇತರೆ ಸ್ಥಳಗಳಲ್ಲಿ ಸಮುದಾಯ ಭವನಗಳ ನಿರ್ಮಾಣದ ಅಂದಾಜಿನ ಮೊತ್ತವು ರೂ. 50.00 ಲಕ್ಷಗಳಿಗಿಂತ ಜಾಸ್ತಿ ಇದ್ದಲ್ಲಿ, ಗರಿಷ್ಠ ರೂ. 50.00 ಲಕ್ಷಗಳನ್ನು ರೂ. 50.00 ಲಕ್ಷಗಳಿಗಿಂತ ಕಡಿಮೆ ಇದ್ದಲ್ಲಿ ಅಂದಾಜು ಮೊತ್ತದಷ್ಟು ಅನುದಾನವನ್ನು ಮಂಜೂರು ಮಾಡತಕ್ಕದ್ದು.

8) ಚರ್ಚಿನ/ಸಂಸ್ಥೆಯ ಸದಸ್ಯರು ಒಂದೇ ಕುಟುಂಬದ ಸದಸ್ಯರಾಗಿರಬಾರದು.

ಇದನ್ನೂ ಓದಿ: Tata Capital Scholorship-ಟಾಟಾ ಕ್ಯಾಪಿಟಲ್ ವತಿಯಿಂದ ಡಿಪ್ಲೊಮಾ, ಐಟಿಐ 18,000 ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

ಅರ್ಜಿ ಸಲ್ಲಿಸಲು ದಾಖಲಾತಿಗಳಾವುವು?

  • ಚರ್ಚ್ / ಸಂಸ್ಥೆ ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ, 1960 / ಟ್ರಸ್ಟ್ ಕಾಯಿದೆ / ಸಂಬಂಧಪಟ್ಟ ಕಾಯ್ದೆಯಡಿ ಪಡೆದ ನೋಂದಣಿ ಪ್ರಮಾಣಪತ್ರ ಮತ್ತು ಬೈಲಾ
  • ಕಳೆದ 2023-24 ವರ್ಷಗಳ ಲೆಕ್ಕಪರಿಶೋಧನಾ ವರದಿಗಳು, ಯುಡಿಐಎನ್ (UDIN) ಸಂಖ್ಯೆಯೊಂದಿಗೆ ಚಾರ್ಟರ್ಡ್ ಅಕೌಂಟೆಂಟ್‌ನಿಂದ ತಯಾರಿಸಲ್ಪಟ್ಟವು.
  • ಸಮುದಾಯ ಭವನ ನಿರ್ಮಾಣ ನಿವೇಶನವು ಭೂ ಪರಿವರ್ತನೆಯಾಗಿದ್ದಲ್ಲಿ ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿತವಾಗಿರುವ ಬಗ್ಗೆ ದಾಖಲೆ
  • ಸಮುದಾಯ ಭವನ ನಿರ್ಮಾಣ ನಿವೇಶನಕ್ಕೆ ಸಂಬಂಧಿಸಿದ ಋಣಭಾರ ಪ್ರಮಾಣ ಪತ್ರ
  • ಸಮುದಾಯ ಭವನ ಕಟ್ಟಡ ಯೋಜನೆ (ವಿನ್ಯಾಸ ಮತ್ತು ನಿರ್ಮಾಣ ವಿವರಗಳು)
  • ಸಮುದಾಯ ಭವನ ನಿರ್ಮಾಣ ಅನುಮೋದನಾ ಪತ್ರ NOC (ನಿರ್ಮಾಣ ಅನುಮತಿ ಮತ್ತು ಯೋಜನೆ ಮಂಜೂರು)
  • ಸಮುದಾಯ ಭವನ ನಿರ್ಮಾಣದ ಕುರಿತು ನಿಗಮದಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ನು ಪಾಲಿಸುವ ಬಗ್ಗೆ ರೂ.100 ಮುಚ್ಚಳಿಕೆ ಪ್ರಮಾಣ ಪತ್ರ (ಎಲ್ಲಾ ಷರತ್ತುಗಳನ್ನು ಒಳಗೊಂಡಿರಬೇಕು)

ಇದನ್ನೂ ಓದಿ: Women SHG Subsidy-ಮಹಿಳಾ ಸ್ವ-ಸಹಾಯ ಯೋಜನೆಯಡಿ 2.00 ಲಕ್ಷ ಸಹಾಯಧನ!

  • ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಪಟ್ಟ ಚರ್ಚ್ ಅಥವಾ ಸಂಸ್ಥೆಯಿಂದ ಶೇಕಡ 50ರಷ್ಟು ಅನುದಾನ ಭರಿಸುವ ಬಗ್ಗೆ ₹100 ಮುಖಬೆಲೆಯ ಮುಚ್ಚಳಿಕೆ ಪ್ರಮಾಣ ಪತ್ರ
  • ಟ್ರಸ್ಟ್ / ಸಂಸ್ಥೆಯ ಆಡಳಿತ ಮಂಡಳಿ ಒಂದೇ ಕುಟುಂಬಕ್ಕೆ ಸೇರಿರುವುದಿಲ್ಲ ಎಂದು ಘೋಷಿಸುವ ₹100 ಮುಖಬೆಲೆಯ ಮುಚ್ಚಳಿಕೆ ಪ್ರಮಾಣ ಪತ್ರ
  • ಅನುದಾನದ ಷರತ್ತುಗಳನ್ನು ಪಾಲಿಸುವುದಾಗಿ ಹಾಗೂ ಯಾವುದೇ ಉಲ್ಲಂಘನೆ ನಡೆದಲ್ಲಿ ಸರ್ಕಾರಕ್ಕೆ ಅನುದಾನದ ಮೊತ್ತವನ್ನು ಹಿಂತಿರುಗಿಸುವುದಾಗಿ ಒಪ್ಪಿಕೊಂಡಿರುವ ₹100 ಮೌಲ್ಯದ ಸ್ಟಾಂಪ್ ಪೇಪರ್‌ನ ಮೇಲಿನ ಪರಿಹಾರ ಬಾಂಡ್ / ಅಫಿಡವಿಟ್
  • ಸದರಿ ಸಂಸ್ಥೆಯು ಇದೇ ಉದ್ದೇಶಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಪಡೆದಿರುವುದಿಲ್ಲ ಎಂದು ಮುಚ್ಚಳಿಕೆ ಪತ್ರ
  • ಪ್ರಸ್ತಾವಿತ ಕಾಮಗಾರಿಗಳ ವಿವರವಾದ ಅಂದಾಜು ಪತ್ರವನ್ನು ಸರ್ಕಾರದ ಇಂಜಿನಿಯರ್ ಅಥವಾ ನೋಂದಾಯಿತ ಇಂಜಿನಿಯರ್‌ನಿಂದ ಪಡೆಯಬೇಕು (ಅಗತ್ಯವಿದ್ದಲ್ಲಿ, ಇಂಜಿನಿಯರ್‌ನ ಮಾನ್ಯ ನೋಂದಣಿ ಪ್ರಮಾಣಪತ್ರದೊಂದಿಗೆ).
  • ಸಮುದಾಯ ಭವನ ನಿರ್ಮಾಣದ ಅನುಮೋದಿತ ನಕ್ಷೆ (ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಅನುಮೋದಿತವಾಗಿರಬೇಕು)

ಇದನ್ನೂ ಓದಿ: Subsidy Schemes 2026: ಕರ್ನಾಟಕ ಆರ್ಯ ವೈಶ್ಯ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!

Samudaya Bhavana grant,
  • ಕಳೆದ ಒಂದು ವಾರದೊಳಗೆ ಸಮುದಾಯ ಭವನದ ವಿವಿಧ ಕೋನಗಳಿಂದ ತೆಗೆದ, GPS ಸೌಲಭ್ಯ ಹೊಂದಿರುವ ಮೂರು ಇತ್ತೀಚಿನ ಛಾಯಾಚಿತ್ರಗಳನ್ನು ಅಪ್‌ಲೋಡ್ ಮಾಡಿ.
  • ಕಳೆದ 2024-25 ವರ್ಷಗಳ ಲೆಕ್ಕಪರಿಶೋಧನಾ ವರದಿಗಳು, ಯುಡಿಐಎನ್ (UDIN) ಸಂಖ್ಯೆಯೊಂದಿಗೆ ಚಾರ್ಟರ್ಡ್ ಅಕೌಂಟೆಂಟ್‌ನಿಂದ ತಯಾರಿಸಲ್ಪಟ್ಟವು.
  • ಕಳೆದ 2025-26 ವರ್ಷಗಳ ಲೆಕ್ಕಪರಿಶೋಧನಾ ವರದಿಗಳು, ಯುಡಿಐಎನ್ (UDIN) ಸಂಖ್ಯೆಯೊಂದಿಗೆ ಚಾರ್ಟರ್ಡ್ ಅಕೌಂಟೆಂಟ್‌ನಿಂದ ತಯಾರಿಸಲ್ಪಟ್ಟವು.
  • ಚರ್ಚ್ / ಸಂಸ್ಥೆಯ ಜಮೀನಿಗೆ ಸಂಬಂಧಿಸಿದ ಎಲ್ಲಾ ಭೂ ದಾಖಲೆಗಳು (RTC, ಇ-ಸ್ವತ್ತು / ಖಾತಾ ಉಲ್ಲೇಖ / ಮಾರಾಟ ಪತ್ರ / ದಾನ ಪತ್ರ ಹಾಗೂ ಇತರೆ ಸಂಬಂಧಿತ ದಾಖಲೆಗಳು in PDF).
  • ಚರ್ಚ್ / ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರ ಪ್ರಮಾಣೀಕೃತ ಪಟ್ಟಿ
  • ಕಳೆದ 6 ತಿಂಗಳ ಬ್ಯಾಂಕ್ ಖಾತೆ ವಿವರ
  • ಸಂಸ್ಥೆಯ ಬ್ಯಾಂಕ್ ಪಾಸ್‌ಬುಕ್

ಇದನ್ನೂ ಓದಿ: Ganga Kalyana Scheme-ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಯಲು ಅರ್ಜಿ ಆಹ್ವಾನ!

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ?

ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Step-1: ಅರ್ಜಿದಾರರು ಮೊದಲು ಇಲ್ಲಿ ನೀಡಿರುವ ಲಿಂಕ್ "Online Application" ಮೇಲೆ ಕ್ಲಿಕ್ ಮಾಡಿ ಅಧಿಕೃತ "ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ"ದ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ನಂತರ ಅದೇ ಪುಟದಲ್ಲಿ ಕಾಣುವ "ಸಮುದಾಯ ಭವನ ನಿರ್ಮಾಣ ಯೋಜನೆ" ಯ ಮುಂದೆ ಕಾಣಿಸುವ "ಅರ್ಜಿ ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: MBA Scholorship-ಎಂಬಿಎ, ಪಿಜಿಡಿಎಂ,ಪಿಜಿಪಿ ವಿದ್ಯಾರ್ಥಿಗಳಿಗೆ 8 ಲಕ್ಷದವರೆಗೆ ವಿದ್ಯಾರ್ಥಿವೇತನ!

Step-3: ಅರ್ಜಿದಾರರೇನಾದರು ಮೊದಲ ಬಾರಿಗೆ ಈ ವೆಬ್ಸೈಟ್ ಅನ್ನು ಭೇಟಿ ಮಾಡುತ್ತಿದ್ದರೆ? ಹಾಗದರೆ ಇಲ್ಲಿ ನೋಂದಾಯಿಸಿ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ OTP ಅನ್ನು ಪಡೆದು ಬಳಕೆದಾರ ಐಡಿಯನ್ನು ನೋಂದಣಿ ಮಾಡಿಕೊಂಡು Password ಅನ್ನು ಸಿದ್ದ ಮಾಡಿಕೊಂಡು Log In ಆಗಬೇಕು.

Step-4: ಲಾಗಿನ್ ಆದ ನಂತರ ಅಧಿಕೃತ ಅರ್ಜಿ ಪ್ರತಿ ಓಪನ್ ಆಗುತ್ತದೆ. ನಂತರ ಅಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: