Tata Capital Scholorship-ಟಾಟಾ ಕ್ಯಾಪಿಟಲ್ ವತಿಯಿಂದ ಡಿಪ್ಲೊಮಾ, ಐಟಿಐ 18,000 ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

September 4, 2026 | Siddesh
Tata Capital Scholorship-ಟಾಟಾ ಕ್ಯಾಪಿಟಲ್ ವತಿಯಿಂದ ಡಿಪ್ಲೊಮಾ, ಐಟಿಐ 18,000 ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!
Share Now:

ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ ಕಾರ್ಯಕ್ರಮ 2026-2027 ನೇ ಸಾಲಿನಲ್ಲಿ ಭಾರತದಾದ್ಯಂತ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿಪೂರ್ವ ಪದವಿಗಳು, ಡಿಪ್ಲೊಮಾಗಳು ಅಥವಾ ಐಟಿಐ ಕೋರ್ಸ್‌ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ವಿದ್ಯಾರ್ಥಿವೇತನವು ಸಮಾಜದಲ್ಲಿ ಆರ್ಥಿಕ ದುರ್ಬಲ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು ಮುಂದುವರಿಸಲು ಈ ಕಾರ್ಯಕ್ರಮವು ಬೆಂಬಲವನ್ನು ನೀಡುತ್ತದೆ. ಈ ವಿದ್ಯಾರ್ಥಿವೇತನದ ಪ್ರಯೋಜನವನ್ನು ಪಡೆಯಲು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಲು ಕೋರಿದೆ.

ಇದನ್ನೂ ಓದಿ: Women SHG Subsidy-ಮಹಿಳಾ ಸ್ವ-ಸಹಾಯ ಯೋಜನೆಯಡಿ 2.00 ಲಕ್ಷ ಸಹಾಯಧನ!

ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಅರ್ಜಿಯನ್ನು ಸಲ್ಲಿಸುವ ವಿಧಾನಗಳಾವುವು? ಕೊನೆಯ ದಿನಾಂಕ ಯಾವುದು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Last Date For Apply-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಅಕ್ಟೋಬರ್ 2026

ಇದನ್ನೂ ಓದಿ: Subsidy Schemes 2026: ಕರ್ನಾಟಕ ಆರ್ಯ ವೈಶ್ಯ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!

Uses Of This Scheme-ಈ ಯೋಜನೆಯ ಅಡಿಯಲ್ಲಿ ಒದಗುವ ಪ್ರಯೋಜನಗಳಾವುವು?

ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನದ ಅಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಈ ಕೆಳಗೆ ತಿಳಿಸಿರುವ ವಿದ್ಯಾರ್ಥಿವೇತನವನ್ನು ಪಡೆಯಬಹುದು:

ಶೇ. 60 ರಿಂದ ಶೇ. 80 ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳು ಬೋಧನಾ/ಕೋರ್ಸ್ ಶುಲ್ಕದ ಶೇ. 80 ಅಥವಾ ರೂ. 12,000 ವರೆಗೆ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.

ಶೇ. 80 ಕ್ಕಿಂತ ಹೆಚ್ಚು ಮತ್ತು ಶೇ. 90 ರಷ್ಟು ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳು ಬೋಧನಾ/ಕೋರ್ಸ್ ಶುಲ್ಕದ 90% ವರೆಗೆ ಅಥವಾ ರೂ. 15,000 ವರೆಗೆ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.

90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳು ಬೋಧನಾ/ಕೋರ್ಸ್ ಶುಲ್ಕದ 100% ವರೆಗೆ ಅಥವಾ 18,000 ವರೆಗೆ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.

ಇದನ್ನೂ ಓದಿ: Ganga Kalyana Scheme-ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಯಲು ಅರ್ಜಿ ಆಹ್ವಾನ!

Eligibility Critiria-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರಿರುತ್ತಾರೆ?

ಅರ್ಜಿ ದಾರ ವಿದ್ಯಾರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.

ವಿದ್ಯಾರ್ಥಿಯು ಭಾರತದಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪದವಿಪೂರ್ವ ಪದವಿ ಕಾರ್ಯಕ್ರಮ ಹಾಗೂ ಡಿಪ್ಲೊಮಾ / ಐಟಿಐ ಕೋರ್ಸ್‌ಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ವಿದ್ಯಾರ್ಥಿಗಳು ಹಿಂದಿನ ತರಗತಿ, ಸೆಮಿಸ್ಟರ್ ವರ್ಷದಲ್ಲಿ ಕನಿಷ್ಟ 60% ಅಂಕಗಳನ್ನು ಪಡೆದಿರಬೇಕು.

ಅರ್ಜಿದಾರ ಅಭ್ಯರ್ಥಿಯ ಪೋಷಕರ ವಾರ್ಷಿಕ ಆದಾಯದವು 4 ಲಕ್ಷ ಮೀರಿರಬಾರದು.

ಭಾರತದಲ್ಲಿ ಮಾನ್ಯತೆ ಪಡೆದ ಕಾಲೇಜು, ವಿಶ್ವವಿದ್ಯಾಲಯ ಅಥವಾ ತಾಂತ್ರಿಕ ಸಂಸ್ಥೆಯಿಂದ ಶಿಕ್ಷಣ ಪಡೆಯುತ್ತಿರಬೇಕು.

ಟಾಟಾ ಕ್ಯಾಪಿಟಲ್ ಲಿಮಿಟೆಡ್ ಮತ್ತು ಬಡ್ಡಿ4ಸ್ಟಡಿ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: MBA Scholorship-ಎಂಬಿಎ, ಪಿಜಿಡಿಎಂ,ಪಿಜಿಪಿ ವಿದ್ಯಾರ್ಥಿಗಳಿಗೆ 8 ಲಕ್ಷದವರೆಗೆ ವಿದ್ಯಾರ್ಥಿವೇತನ!

Documents Required-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

  • ಆಧಾರ್ ಕಾರ್ಡ/Aadhar Card
  • ಪ್ರವೇಶದ ಪುರಾವೆ/Entrance Certificate
  • ಪ್ರಸ್ತುತ ಶೈಕ್ಷಣಿಕ ವರ್ಷದ ಶುಲ್ಕ ರಶೀದಿ/Fee Receipt
  • ಆದಾಯ ಪ್ರಮಾಣ ಪತ್ರ/Income Cetificate
  • ಜಾತಿ ಪ್ರಮಾಣ ಪತ್ರ/Caste Certificate
  • ಹಿಂದಿನ ವರ್ಷದ ಅಂಕಪಟ್ಟಿ/Marks card
  • ಬ್ಯಾಂಕ್ ಪಾಸ್ ಪುಸ್ತಕ/Bank passbook
  • ಮೊಬೈಲ್ ನಂಬರ್/Mobile number

ಇದನ್ನೂ ಓದಿ: Fish Farming subsidy-ಮೀನುಗಾರಿಕೆ ಇಲಾಖೆಯಡಿ ಮೀನುಗಾರಿಕೆ ಸಲಕರಣೆ ಕಿಟ್ ಪಡೆಯಲು ಅರ್ಜಿ!

degree scholorship

ಇದನ್ನೂ ಓದಿ: Taxi Subsidy Scheme-ಸ್ವಾವಲಂಬಿ ಸಾರಥಿ ಯೋಜನೆ ವಾಹನ ಖರೀದಿಗೆ 3.0 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Online Application Process-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನಗಳಾವುವು?

ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ ಟಾಟಾ ಕ್ಯಾಪಿಟಲ್ ವತಿಯಿಂದ ವಿದ್ಯಾರ್ಥಿವೇತನವನ್ನು ಆಯೋಜಿಸಲಾಗಿದ್ದು ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಲು ಕೋರಿದೆ.

Step-1: ಮೊದಲಿಗೆ ವಿದ್ಯಾರ್ಥಿಗಳು ಇಲ್ಲಿ ನೀಡಿರುವ ಈ ಲಿಂಕ್ "Tata Capital Scholarship" ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು.

Step-2: ನಂತರ “Apply Now” ಬಟನ್ ಮೇಲೆ ಕ್ಲಿಕ್ ಮಾಡಬೇಕು. ವಿದ್ಯಾರ್ಥಿಗಳು ಈ ವೆಬ್ಸೈಟ್ ಅನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದರೆ “Create an Account” ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೊಸ ಖಾತೆಯನ್ನು ರಚನೆ ಮಾಡಿಕೊಳ್ಳಬೇಕು.

Step-3: ತದನಂತರ “Login” ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರಗಳನ್ನು ನಮೂದಿಸಿ Log In ಆಗಬೇಕು. ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-4: ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ “Submit” ಬಟನ್ ಕ್ಲಿಕ್ ಮಾಡಿ್ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Engineering Scholarship-ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 1 ಲಕ್ಷ ವಿದ್ಯಾರ್ಥಿವೇತನ!

More Information-ಈ ಕಾರ್ಯಕ್ರಮದ ಬಗ್ಗೆ ಇನ್ನೂ ಹೆಚ್ಚಿನ ವಿವರವನ್ನು ಪಡೆಯಲು ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: