MBA Scholorship-ಎಂಬಿಎ, ಪಿಜಿಡಿಎಂ,ಪಿಜಿಪಿ ವಿದ್ಯಾರ್ಥಿಗಳಿಗೆ 8 ಲಕ್ಷದವರೆಗೆ ವಿದ್ಯಾರ್ಥಿವೇತನ!

August 28, 2026 | Siddesh
MBA Scholorship-ಎಂಬಿಎ, ಪಿಜಿಡಿಎಂ,ಪಿಜಿಪಿ ವಿದ್ಯಾರ್ಥಿಗಳಿಗೆ 8 ಲಕ್ಷದವರೆಗೆ ವಿದ್ಯಾರ್ಥಿವೇತನ!
Share Now:

ಬಜಾಜ್ ಫಿನ್‌ಸರ್ವ್ ಸ್ಕಾಲರ್‌ಶಿಪ್ ಪ್ರೋಗ್ರಾಂ FY 2026-2027 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ BE/B.Tech., ME/M.Tech., MBA, PGDM ಮತ್ತು PGP ಕಾರ್ಯಕ್ರಮಗಳನ್ನು ಅನುಸರಿಸುವ ಅರ್ಹ ವಿದ್ಯಾರ್ಥಿಗಳಿಗೆ ಬಜಾಜ್ ಫಿನ್‌ಸರ್ವ್ ವತಿಯಿಂದ 8 ಲಕ್ಷದವರೆಗೆ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯವಿಲ್ಲದೆ ಮುಂದಿನ ಶಿಕ್ಷಣವನ್ನು ಮದ್ಯಂತರದಲ್ಲೇ ಬಿಡುತ್ತಿರುವ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿದ್ದು, ಸದುಪಯೋಗವನ್ನು ಪಡೆದುಕೊಳ್ಳಲು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಲು ಕೋರಿದೆ.

ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲಾ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಕೊನೆಯ ದಿನಾಂಕ ಯಾವುದು? ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Last date to Apply-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 5 ಅಕ್ಟೋಬರ್ 2026

ಇದನ್ನೂ ಓದಿ: Fish Farming subsidy-ಮೀನುಗಾರಿಕೆ ಇಲಾಖೆಯಡಿ ಮೀನುಗಾರಿಕೆ ಸಲಕರಣೆ ಕಿಟ್ ಪಡೆಯಲು ಅರ್ಜಿ!

Uses Of this Scholorship-ಈ ಕಾರ್ಯಕ್ರಮದ ಅಡಿಯಲ್ಲಿ ಒದಗುವ ಪ್ರಯೋಜನಗಳಾವುವು?

ಆಯ್ಕೆಯಾದ ವಿದ್ಯಾರ್ಥಿಗಳು ಈ ಕೆಳಗಿನ ಶುಲ್ಕ-ಸಂಬಂಧಿತ ವಿದ್ಯಾರ್ಥಿವೇತನ ಸ್ಲಾಬ್‌ಗಳ ಪ್ರಕಾರ ವಿದ್ಯಾರ್ಥಿವೇತನ ಪ್ರಯೋಜನಗಳನ್ನು ಪಡೆಯುತ್ತಾರೆ:

ಮೊದಲ ವರ್ಷದ ಶುಲ್ಕ
ಕೋರ್ಸ್‌ನ ಅವಧಿಗೆ ವರ್ಷಕ್ಕೆ ನಿಗದಿತ ವಿದ್ಯಾರ್ಥಿವೇತನ ಮೊತ್ತ
5,00,000 ರೂಪಾಯಿಗಳವರೆಗೆ
5,00,000 ರೂಪಾಯಿಗಳು
5,00,000 ಕ್ಕಿಂತ ಹೆಚ್ಚು ಮತ್ತು 8,00,000 ವರೆಗೆ
8,00,000 ರೂ.
8,00,000 ಕ್ಕಿಂತ ಹೆಚ್ಚು
10,00,000 ರೂಪಾಯಿಗಳು

ಇದನ್ನೂ ಓದಿ: Taxi Subsidy Scheme-ಸ್ವಾವಲಂಬಿ ಸಾರಥಿ ಯೋಜನೆ ವಾಹನ ಖರೀದಿಗೆ 3.0 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

What are the Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

  • ಆಧಾರ್ ಕಾರ್ಡ
  • 10 & 12 ತರಗತಿ ಅಂಕಪಟ್ಟಿ
  • ಸ್ನಾತಕೋತ್ತರ ಅರ್ಜಿದಾರರಿಗೆ ಪದವಿಪತ್ರ ಮತ್ತು ಅಂಕಪಟ್ಟಿ
  • ಪ್ರಸ್ತುತ ಶೈಕ್ಷಣಿಕ ವರ್ಷದ ಕಾಲೇಜು ಗುರುತಿನ ಚೀಟಿ
  • ಇತ್ತೀಚಿನ ಶುಲ್ಕ ರಶೀದಿ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಪುಸ್ತಕ
  • ಮೊಬೈಲ್ ನಂಬರ್

ಇದನ್ನೂ ಓದಿ: Engineering Scholarship-ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 1 ಲಕ್ಷ ವಿದ್ಯಾರ್ಥಿವೇತನ!

Eligibility Critiria-ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳಾವುವು?

ಅರ್ಜಿದಾರ ವಿದ್ಯಾರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರರು ಪೂರ್ಣ ಸಮಯದ 2-ವರ್ಷದ ಸ್ನಾತಕೋತ್ತರ ಕಾರ್ಯಕ್ರಮದ ಮೊದಲ ವರ್ಷದಲ್ಲಿ ಎಂಬಿಎ,
ಪಿಜಿಡಿಎಂ,ಪಿಜಿಪಿ, ದಾಖಲಾಗಿರಬೇಕು.

ಅರ್ಜಿದಾರ ವಿದ್ಯಾರ್ಥಿಯು 10 ಮತ್ತು 12 ನೇ ತರಗತಿಯಲ್ಲಿ ಕನಿಷ್ಠ 75% ಅಂಕಗಳನ್ನು ಗಳಿಸಿರಬೇಕು.

ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯವು 15 ಲಕ್ಷದ ಒಳಗಿರಬೇಕು.

ಬಡ್ಡಿ4ಸ್ಟಡಿ ಅಥವಾ ಬಜಾಜ್ ಫಿನ್‌ಸರ್ವ್ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: Free Media Kit-ಹಿಂದುಳಿದ ವರ್ಗಗಳ ಕಾರ್ಯನಿರತ ಪತ್ರಕರ್ತರಿಗೆ ಉಚಿತ ಮೀಡಿಯಾ ಕಿಟ್: ಅರ್ಜಿ ಅಹ್ವಾನ!

ಇದನ್ನೂ ಓದಿ: Sheep Farming Training-ಬೆಂಗಳೂರು ಕೃಷಿ ವಿವಿಯಿಂದ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!

Online Application Process-ಆನ್ಲೈನ್ ಮುಲಕ ಅರ್ಜಿ ಸಲ್ಲಿಸುವ ವಿಧಾನಗಳಾವುವು?

ಬಜಾಜ್ ಫಿನ್‌ಸರ್ವ್ ಸ್ಕಾಲರ್‌ಶಿಪ್ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯಲು ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಅರ್ಜಿ ಸಲ್ಲಿಸಲು ಕೋರಿದೆ.

Step-1: ವಿದ್ಯಾರ್ಥಿಗಳು ಮೊದಲಿಗೆ ಈ ಲಿಂಕ್ "Bajaj Finserv Scholarship" ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ನಂತರ “Apply Now” ಬಟನ್ ಮೇಲೆ ಕ್ಲಿಕ್ ಮಾಡಬೇಕು. ವಿದ್ಯಾರ್ಥಿಗಳು ಈ ವೆಬ್ಸೈಟ್ ಅನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದರೆ “Create an Account” ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೊಸ ಖಾತೆಯನ್ನು ಸಿದ್ದ ಮಾಡಿಕೊಳ್ಳಬೇಕು.

Step-3: ತದನಂತರ “Login” ಬಟನ್ ಮೂಲಕ ಅಗತ್ಯ ವಿವರಗಳನ್ನು ನಮೂದಿಸಿ Log In ಆಗಬೇಕು. ಲಾಗಿನ್ ಆದ ನಂತರ ಅರ್ಜಿ ನಮೂನೆ ಓಪನ್ ಆಗುತ್ತದೆ.

Step-4: ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ “Submit” ಬಟನ್ ಕ್ಲಿಕ್ ಮಾಡಿ್ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Parivartan Programme-ಪರಿವರ್ತನ್ ECSS ಕಾರ್ಯಕ್ರಮ ವತಿಯಿಂದ ₹18,000 ವಿದ್ಯಾರ್ಥಿವೇತನ!ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!

Information-ವಿದ್ಯಾರ್ಥಿವೇತನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ: Read Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: