Negila Yogi Scheme-ಕೃಷಿ ಇಲಾಖೆಯಿಂದ ನೇಗಿಲಯೋಗಿ ಯೋಜನೆಯಡಿ ಗರಿಷ್ಥ 4500/- ಪ್ರೋತಾಹಧನ!

November 22, 2026 | Siddesh
Negila Yogi Scheme-ಕೃಷಿ ಇಲಾಖೆಯಿಂದ ನೇಗಿಲಯೋಗಿ ಯೋಜನೆಯಡಿ ಗರಿಷ್ಥ 4500/- ಪ್ರೋತಾಹಧನ!
Share Now:

ರೈತರಿಗೆ ಕೃಷಿ ಯಂತ್ರಗಳಿಂದ ಕೃಷಿ ಚಟುವಟಿಕೆಯನ್ನು ಮಾಡಲುವಾಗ ತಗಲುವ ವೆಚ್ಚಕ್ಕೆ ಸರಕಾರದಿಂದ ಆರ್ಥಿಕ ಬೆಂಬಲವನ್ನು ಒದಗಿಸುವ ನಿಟ್ಟಿ ನಲ್ಲಿ ಹೊಸದಾಗಿ ನೇಗಿಲಯೋಗಿ ಯೋಜನೆ(Negila Yogi Yojana) ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ ರೈತರಿಗೆ ಜಮೀನು ಉಳುಮೆಯಿಂದ ಕಟಾವಿನ ವರೆಗೆ ಬಳಸುವ ಕೃಷಿ ಯಂತ್ರದ ಬಾಡಿಗೆ ವೆಚ್ಚಕ್ಕೆ ಗರಿಷ್ಠ 4500/- ಪ್ರೋತಾಹಧನವನ್ನು ಒದಗಿಸಲು ಮಾರ್ಗಸೂಚಿಯನ್ನು ರೂಪಿಸಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಕೃಷಿ ಇಲಾಖೆಯ ವತಿಯಿಂದ ರೈತರು ಯಾಂತ್ರೀಕೃತ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತೇಜನ ನೀಡುವ ಉದ್ದೇಶದಿಂದ “ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ” ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಅರ್ಹ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ.

ಇದನ್ನೂ ಓದಿ: Scholarship Application-ಪಿಯುಸಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

ಏನಿದು ನೇಗಿಲಯೋಗಿ ಯೋಜನೆ? ರೈತರಿಗೆ ಈ ಯೋಜನೆಯಿಂದ ಯಾವೆಲ್ಲ ಪ್ರಯೋಜನಗಳಿವೆ? ನೇಗಿಲಯೋಗಿ ಯೋಜನೆಯಡಿ ಪ್ರಯೋಜನ ಪಡೆಯುವುದು ಹೇಗೆ? ಇನ್ನಿತರ ಅಗತ್ಯ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

Negila Yogi Yojane-ಯಾಂತ್ರೀಕೃತ ಕೃಷಿಗೆ ಪ್ರೋತ್ಸಾಹ

ಮಾನವ ಶ್ರಮದ ಅವಲಂಬನೆಯನ್ನು ಕಡಿಮೆ ಮಾಡಿ, ಕೃಷಿ ಚಟುವಟಿಕೆಗಳನ್ನು ಸುಲಭಗೊಳಿಸುವ ಜೊತೆಗೆ ಸಮಯ ಮತ್ತು ವೆಚ್ಚವನ್ನು ಉಳಿತಾಯ ಮಾಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ರೈತರು ಕೃಷಿ ಕಾರ್ಯಗಳಲ್ಲಿ ಯಂತ್ರೋಪಕರಣಗಳನ್ನು ಬಳಸುವುದಕ್ಕೆ ಉತ್ತೇಜನ ನೀಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ: e-Swathu Document-ಕೃಷಿ ಜಮೀನಿನ ಕಟ್ಟಡಕ್ಕೆ ಇ-ಸ್ವತ್ತು ಪಡೆಯಲು ಈ ದಾಖಲೆ ಕಡ್ಡಾಯ!

Negila Yogi Yojane Subsidy Amount-ಪ್ರತಿ ರೈತರಿಗೆ ಗರಿಷ್ಠ ₹4,500 ಸಹಾಯಧನ:

ಯೋಜನೆಯಡಿ ಪ್ರತಿ ಅರ್ಹ ರೈತರಿಗೆ ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠ 3.00 ಎಕರೆ ಪ್ರದೇಶದವರೆಗೆ ಹಾಗೂ ಗರಿಷ್ಠ ಮೂರು ಬಾರಿಗೆ ಯೋಜನೆಯ ಸೌಲಭ್ಯ ಪಡೆಯಲು ಅವಕಾಶವಿದ್ದು, ಒಟ್ಟು ₹4,500 ವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ.

ಪ್ರದೇಶದ ಪ್ರಮಾಣಕ್ಕೆ ಅನುಗುಣವಾಗಿ ಪ್ರೋತ್ಸಾಹಧನದ ಮೊತ್ತವೂ ಹೆಚ್ಚಾಗುತ್ತದೆ ಇದರ ವಿವರ ಹೀಗಿದೆ:

A) 1 ಎಕರೆಗೆ ₹1,500,
B) 2 ಎಕರೆಗೆ ₹3,000
C) 3 ಎಕರೆಗೆ ಗರಿಷ್ಠ ₹4,500 ವರೆಗೆ ಪ್ರೋತ್ಸಾಹಧನ ಪಡೆಯಲು ಅವಕಾಶವಿದೆ.

ಇದನ್ನೂ ಓದಿ: Bara Parihara-2026: ಬರ ಪರಿಹಾರ ಡಿಸೆಂಬರ್ ಅಂತ್ಯದೊಳಗೆ ರೈತರ ಖಾತೆಗೆ ₹5000!

Negila Yogi Yojane-ಯಾವ ಕೃಷಿ ಚಟುವಟಿಕೆಗಳಿಗೆ ಸೌಲಭ್ಯ?

ಯೋಜನೆಯಡಿ ಪ್ರಮುಖವಾಗಿ ಕೆಳಗಿನ ಯಾಂತ್ರೀಕೃತ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ:

  • ಭೂಮಿ ಸಿದ್ಧತೆ
  • ಬಿತ್ತನೆ
  • ನಾಟಿ
  • ಯಾಂತ್ರೀಕೃತ ಅಂತರ ಬೇಸಾಯ ಮತ್ತು ಕಳೆ ನಿಯಂತ್ರಣ
  • ಯಾಂತ್ರೀಕೃತ ಕಟಾವು

ಇದರಿಂದ ರೈತರು ಕೃಷಿ ಕಾರ್ಯಗಳನ್ನು ಕಡಿಮೆ ಸಮಯದಲ್ಲಿ ಹಾಗೂ ಕಡಿಮೆ ಶ್ರಮದಲ್ಲಿ ಪೂರ್ಣಗೊಳಿಸಲು ಸಹಕಾರಿಯಾಗಲಿದೆ ಜೊತೆಗೆ ಕೃಷಿ ಯಂತ್ರಗಳಿಗೆ ಬಾಡಿಕೆ ವೆಚ್ಚ ಭರಿಸಲು ಕೊಂಚ ಮಟ್ಟಿಗೆ ಆರ್ಥಿಕ ನೆರವನ್ನು ಒದಗಿಸಿ ರೈತರಿಗೆ ಹೊರೆಯನ್ನು ತಗ್ಗಿಸಿದಂತಾಗುತ್ತದೆ.

ಇದನ್ನೂ ಓದಿ: Dairy Farming-ಉಚಿತ ಕುರಿ-ಆಡು ಸಾಕಾಣಿಕೆ ಜೊತೆ ಹೈನುಗಾರಿಕೆಗೆ ತರಬೇತಿ!ಇಂದೇ ಅರ್ಜಿ ಸಲ್ಲಿಸಿ!

Negila Yogi Yojana App-“ನೇಗಿಲ ಯೋಗಿ” ಆ್ಯಪ್ ಮೂಲಕ ಸೇವೆ

ಯೋಜನೆಯ ಸೌಲಭ್ಯ ಪಡೆಯಲು ನೇಗಿಲ ಯೋಗಿ ಆ್ಯಪ್ ಮೂಲಕ ಸೇವೆ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ರೈತರು ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡು ಅಗತ್ಯ ಮಾಹಿತಿಯನ್ನು ಸಲ್ಲಿಸಬಹುದು.

ಟ್ರ್ಯಾಕ್ಟರ್, ಪವರ್ ಟಿಲ್ಲರ್, ಸ್ಪ್ರೇಯರ್ ಸೇರಿದಂತೆ ವಿವಿಧ ಕೃಷಿ ಯಂತ್ರೋಪಕರಣಗಳ ಸೇವೆಯನ್ನು ರೈತರು ಪಡೆಯಬಹುದಾಗಿದೆ. ರೈತರು ಮತ್ತು ಕೃಷಿ ಯಂತ್ರೋಪಕರಣಗಳ ಸೇವಾದಾರರ ನಡುವೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೂ ಇದರಿಂದ ಸಾಧ್ಯವಾಗುತ್ತದೆ.

ಇದನ್ನೂ ಓದಿ: Beat Forester Job-ಅರಣ್ಯ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ! 355 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

Negila Yogi Yojane In Karnataka-ಯೋಜನೆ ಜಾರಿ ಯಾವಾಗ? ಅಗಲಿದೆ:

ಪ್ರಸ್ತುತ ರಾಜ್ಯಾದ್ಯಂತ ಯೋಜನೆಯು ಜಾರಿಯಲ್ಲಿದ್ದು ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಹಾಗೂ ಅಗತ್ಯ ತಾಂತ್ರಿಕ ನೆರವಿಗಾಗಿ ಕೂಡಲೇ ನಿಮ್ಮ ಸಮೀಪದ ಕೃಷಿ ಇಲಾಖೆ ಕಚೇರಿ /ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: