Dairy Farming-ಉಚಿತ ಕುರಿ-ಆಡು ಸಾಕಾಣಿಕೆ ಜೊತೆ ಹೈನುಗಾರಿಕೆಗೆ ತರಬೇತಿ!ಇಂದೇ ಅರ್ಜಿ ಸಲ್ಲಿಸಿ!

November 20, 2026 | Siddesh
Dairy Farming-ಉಚಿತ ಕುರಿ-ಆಡು ಸಾಕಾಣಿಕೆ ಜೊತೆ ಹೈನುಗಾರಿಕೆಗೆ ತರಬೇತಿ!ಇಂದೇ ಅರ್ಜಿ ಸಲ್ಲಿಸಿ!
Share Now:

ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ(Dairy Farming) ಮತ್ತು ಕುರಿ ಅಡು ಸಾಕಾಣಿಕೆಯನ್ನು ಆರಂಭಿಸಲು ಅನೇಕ ಯುವಕರು ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ಬರುತ್ತಿದ್ದು ಈ ನಿಟ್ಟಿನಲ್ಲಿ ಪ್ರಾರಂಭಿಕ ಹಂತದಲ್ಲಿ ಈ ಕ್ಷೇತ್ರದಲ್ಲಿ ತರಬೇತಿಯನ್ನು ಪಡೆಯಲು ರುಡ್ ಸೆಟ್ ಸಂಸ್ಥೆಯಿಂದ ಉಚಿತ ತರಬೇತಿಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಮೀಣ ಪ್ರದೇಶದ ಯುವಕರಿಗೆ ಸ್ವಂತ ಉದ್ಯಮವನ್ನು(Free Dairy Farming Training) ಪ್ರಾರಂಭ ಮಾಡಿ ಸ್ವಾವಲಂಬಿಯಾಗಿ ಜೀವನ ನಡೆಸಬೇಕೆಂಬ ಅಸೆ ಎಲ್ಲಾ ಜನರಲ್ಲೂ ಸಹಜವಾಗಿರುತ್ತದೆ. ಅದರಲ್ಲೂ ಕೃಷಿಯ ಜೊತೆಗೆ ಕುರಿ ಸಾಕಾಣಿಕೆ, ಆಡು ಸಾಕಾಣಿಕೆ ಹಾಗೂ ಹೈನುಗಾರಿಕೆ ಆರಂಭಿಸುವ ಮೂಲಕ ಉತ್ತಮ ಆದಾಯ ಗಳಿಸಲು ಹಲವು ಅವಕಾಶಗಳಿವೆ.

ಇದನ್ನೂ ಓದಿ: Beat Forester Job-ಅರಣ್ಯ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ! 355 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕುರಿ-ಆಡು ಸಾಕಾಣಿಕೆ ಮತ್ತು ಹೈನುಗಾರಿಕೆಯನ್ನು ಉದ್ಯಮವಾಗಿ ಪ್ರಾರಂಭಿಸಲು ರುಡ್ ಸೆಟ್ ಸಂಸ್ಥೆ, ವಿಜಯಪುರ ವತಿಯಿಂದ 13 ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ತರಬೇತಿಯನ್ನು ಪಡೆದು ಅದರ ಜೊತೆಗೆ PMEGP ಯೋಜನೆಯ ಅಡಿಯಲ್ಲಿ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡಲು ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಈ ತರಬೇತಿಯ ಪ್ರಮಾಣ ಪತ್ರ ಸಹಾಯಕರಿಯಾಗಿದೆ.

Training Date-ತರಬೇತಿ ನೆಡೆಯುವ ದಿನಾಂಕ:

ಈ ತರಬೇತಿಯು 13 ದಿನಗಳ ಕಾಲ ನೆಡೆಯಲಿದ್ದು ದಿನಾಂಕ: 23-11-2026 ರಿಂದ ದಿನಾಂಕ 05-12-2026 ರ ವರೆಗೆ ನೆಡೆಯಲಿದ್ದು ಈ ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ.

Who Can Apply-ತರಬೇತಿ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

  • ಅಭ್ಯರ್ಥಿಯು ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ.
  • ಬಿಪಿಎಲ್ ಅಥವಾ ಪಿಎಚ್‌ಹೆಚ್ ಅಥವಾ ಅಂತ್ಯೋದಯ ಕಾರ್ಡ್ ಅಥವಾ ನರೇಗಾ ಕಾರ್ಡ್ ಹೊಂದಿರುವವರಿಗೆ ಮೊದಲ ಆದ್ಯತೆ.
  • ಅಭ್ಯರ್ಥಿಯ ವಯಸ್ಸು 19 ರಿಂದ 50 ವರ್ಷದೊಳಗಿರಬೇಕು.
  • ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

ಇದನ್ನೂ ಓದಿ: e-Swathu Document-ಕೃಷಿ ಜಮೀನಿನ ಕಟ್ಟಡಕ್ಕೆ ಇ-ಸ್ವತ್ತು ಪಡೆಯಲು ಈ ದಾಖಲೆ ಕಡ್ಡಾಯ!

Documents-ತರಬೇತಿ ಪಡೆಯಲು ಯಾವೆಲ್ಲಾ ದಾಖಲಾತಿಗಳನ್ನು ಸಲ್ಲಿಸಬೇಕು?

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • ಬ್ಯಾಂಕ್ ಪಾಸ್‌ಬುಕ್
  • ವಿದ್ಯಾರ್ಹತೆ ಪ್ರಮಾಣಪತ್ರ

Training Application-ತರಬೇತಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ದೂರವಾಣಿ ಸಂಖ್ಯೆಗೆ ಕರೆಮಾಡಿ ನೊಂದಣಿ ಮಾಡಿಕೊಳ್ಳಬಹುದು.
ದೂರವಾಣಿ ಸಂಖ್ಯೆ : 9739511914, 9060186109, 9480078829, 9845490323

ಇದನ್ನೂ ಓದಿ: Ration Card KYC-ರೇಶನ್ ಕಾರ್ಡದಾರರಿಗೆ ಮಹತ್ವದ ಸುದ್ದಿ! ಇ-ಕೆವೈಸಿಯಲ್ಲಿ ನೂತನ ಬದಲಾವಣೆ ಜಾರಿ!

Subsidy Schemes-ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ ಆರಂಭಿಸಲು ಲಭ್ಯವಿರುವ ಸರ್ಕಾರಿ ಯೋಜನೆಗಳು:

1) PMEGP:

ವೆಬ್ಸೈಟ್ ಮತ್ತು ಈ ಯೋಜನೆಯಲ್ಲಿನ ಮಾರ್ಗಸೂಚಿಯಲ್ಲಿನ ನವೀಕರಣದಿಂದಾಗಿ ಪ್ರಸ್ತುತ ಸಬ್ಸಿಡಿ ಪಡೆಯಲು ಅರ್ಜಿ ಸಲ್ಲಿಸಲು ಈ ಯೋಜನೆಯಡಿ ಅವಕಾಶವಿಲ್ಲ ಮುಂದಿನ ಕೆಲವು ತಿಂಗಳಲ್ಲಿ ಈ ಯೋಜನೆಯಡಿ ಶೇ 25-35% ಸಹಾಯಧನದಲ್ಲಿ ಹೈನುಗಾರಿಕೆ,ಕುರಿ ಸಾಕಾಣಿಕೆಯನ್ನು ಮಾಡಲು ಅರ್ಜಿ ಸಲ್ಲಿಸಬಹುದು.

2) Rashtriya Gokul Mission:

ಗೋಶಾಲೆ ಮಾದರಿಯಲ್ಲಿ ಹೈನುಗಾರಿಕೆಯನ್ನು ಮಾಡಲು ಈ ಯೋಜನೆಯಡಿ ಸಹಾಯಧನ ಪಡೆಯಲು ಅವಕಾಶವಿದ್ದು ನಿಮ್ಮ ಹತ್ತಿರದ ಪಶು ಆಸ್ಪತ್ರೆಯನ್ನು ಭೇಟಿ ಮಾಡಿ ಈ ಯೋಜನೆಯ ಬಗ್ಗೆ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: Ration Card KYC-ರೇಶನ್ ಕಾರ್ಡದಾರರಿಗೆ ಮಹತ್ವದ ಸುದ್ದಿ! ಇ-ಕೆವೈಸಿಯಲ್ಲಿ ನೂತನ ಬದಲಾವಣೆ ಜಾರಿ!

3) AHIDF(Animal Husbandry Infrastructure Development Fund):

ಪ್ರಸ್ತುತ ಈ ಯೋಜನೆಯ ಜಾರಿಯಲ್ಲಿದ್ದು ಶೇ 6% ಬಡ್ಡಿಯಲ್ಲಿ ಗರಿಷ್ಠ 2 ಕೋಟಿಯ ವರೆಗಿನ ಹೈನುಗಾರಿಕೆ ಯೋಜನೆಯನ್ನು ಈ ಸ್ಕೀಮ್ ನಲ್ಲಿ ಮಾಡಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ AHIDF Portal ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ.

4) National Livestock Mission (NLM):

ಪ್ರಸ್ತುತ ಈ ಯೋಜನೆಯಡಿ ಅರ್ಜಿ ಸ್ವೀಕಾರ ಮಾಡುತ್ತಿಲ್ಲ ಕೆಲವು ತಾಂತ್ರಿಕ ಕಾರಣಗಳಿಂದ ಹೀಗೆ ಅಗಿದ್ದು ಮುಂದಿನ ದಿನಗಳಲ್ಲಿ ಅರ್ಜಿ ಆಹ್ವಾನಿಸಬಹುದು. ಈ ಯೋಜನೆಯಡಿ ಶೇ 50% ಸಹಾಯಧನದಲ್ಲಿ ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆಯನ್ನು ಆರಂಭಿಸಲು ಅವಕಾಶವಿದೆ.

5) ಅಮೃತ ಸ್ವಾಭಿಮಾನಿ ಕುರಿಗಾಹಿ / ಅಮೃತ ಸ್ವಾಭಿಮಾನಿ ಕುರಿಗಾಹಿ:

5) ಅಮೃತ ಸ್ವಾಭಿಮಾನಿ ಕುರಿಗಾಹಿ / ಅಮೃತ ಸ್ವಾಭಿಮಾನಿ ಕುರಿಗಾಹಿ: 20+1 ಕುರಿ/ಆಡು ಘಟಕ (ಯುನಿಟ್ ಕಾಸ್ಟ್ ≈₹1.75 ಲಕ್ಷ) ನಿಮ್ಮ ತಾಲ್ಲೂಕಿನ ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಚೇರಿ (Animal Husbandry & Veterinary Services Department) ಅಥವಾ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: