Parihara DBT Payment-ರೈತರ ಖಾತೆಗೆ ನೇರವಾಗಿ ₹5,000 ಬರ ಪರಿಹಾರ! ಮೊದಲ ಕಂತಿನ ಹಣ ಬಿಡುಗಡೆ! 

November 12, 2026 | Siddesh

ಕರ್ನಾಟಕ ರಾಜ್ಯದಲ್ಲಿ 2026ರ ಮುಂಗಾರು ಹಂಗಾಮಿನಲ್ಲಿ ಮಳೆಯ ತೀವ್ರ ಕೊರತೆಯಿಂದಾಗಿ ರೈತರು ಬೆಳೆದ ಬೆಳೆಗಳು ಹಾನಿಗೊಳಗಾಗಿದ್ದು, ಕೃಷಿ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬಿದ್ದಿದೆ, ಇದರ ಹಿನ್ನಲೆಯಲ್ಲಿ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಆರ್ಥಿಕ ನೆರವು ನೀಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ವಿಧಾನಸೌಧದಲ್ಲಿ ಬರ ಪರಿಹಾರದ ಮೊದಲ ಕಂತಿನ ಹಣ ಬಿಡುಗಡೆ ಮಾಡಲು ಘೋಷಣೆಯನ್ನು ನೀಡಿದ್ದಾರೆ. 

ಈ ಯೋಜನೆಯ ಅಡಿಯಲ್ಲಿ ಅರ್ಹ ರೈತರಿಗೆ ಒಟ್ಟು ₹5,000 ಬರ ಪರಿಹಾರ ನೀಡಲು ತೀರ್ಮಾನಿಸಲಾಗಿದ್ದು, ಮೊದಲ ಕಂತಿನ ₹2,500 ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ನವೆಂಬರ್ 5, 2026ರಂದು ಚಾಲನೆ ನೀಡಲಾಗಿದೆ.

ಇದನ್ನೂ ಓದಿ: Swavalambi Sarathi Scheme-ಸರಕು ಸಾಗಣೆ ವಾಹನ ಖರೀದಿಗೆ 4 ಲಕ್ಷ ಸಹಾಯಧನ! ಇಂದೇ ಅರ್ಜಿ ಸಲ್ಲಿಸಿ!

ಈ ಬಾರಿ ರೈತರು ಬರ ಪರಿಹಾರದ ಹಣಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಪರಿಹಾರ ಪೋರ್ಟಲ್, FRUITS ಮತ್ತು ಡಿಜಿಟಲ್ ಬೆಳೆ ಸಮೀಕ್ಷೆಯಲ್ಲಿರುವ ಮಾಹಿತಿಯ ಆಧಾರದ ಮೇಲೆ ಅರ್ಹ ರೈತರನ್ನು ಗುರುತಿಸಿ ಹಣ ಪಾವತಿಸಲಾಗುತ್ತದೆ. ಹಾಗಾದರೆ ಈ ₹5,000 ಬರ ಪರಿಹಾರ ಯಾರಿಗೆ ಸಿಗಲಿದೆ? ನಿಮ್ಮ ಖಾತೆಗೆ ಮೊದಲ ಕಂತಿನ ಹಣ ಯಾವಾಗ ಜಮ ಆಗಲಿದೆ? ಹಣವನ್ನು ಹೇಗೆ ಪರಿಶೀಲಿಸಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. 

ಬರ ಪರಿಹಾರದ ಹಣ ಯಾರಿಗೆ ಸಿಗಲಿದೆ?

2026ರ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ಬೆಳೆ ಹಾನಿ ಅನುಭವಿಸಿರುವ ಹಾಗೂ ಸರ್ಕಾರದ ಸಮೀಕ್ಷೆಯಲ್ಲಿ ಅರ್ಹರೆಂದು ಗುರುತಿಸಿರುವ ಈ ಕೆಳಗೆ ತಿಳಿಸಿರುವ ರೈತರಿಗೆ ಪರಿಹಾರದ ಹಣ ದೊರೆಯಲಿದೆ. 

ಕರ್ನಾಟಕ ಸರ್ಕಾರ ಬರಪೀಡಿತ ಎಂದು ಘೋಷಿಸಿರುವ 226 ತಾಲೂಕುಗಳ ವ್ಯಾಪ್ತಿಯಲ್ಲಿ ಜಮೀನು ಹೊಂದಿರುವ ರೈತರಿಗೆ ಈ ಹಣ ದೊರೆಯಲಿದೆ. 

2026 ರ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾಗಿರಬೇಕು.

ರೈತರು ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಬೆಳೆ ಹಾನಿ ಸಮೀಕ್ಷೆಯಲ್ಲಿ ಜಮೀನು ಮತ್ತು ಬೆಳೆ ಹಾನಿಯ ವಿವರಗಳು ದಾಖಲಾಗಿರಬೇಕು.

ರೈತರ ಜಮೀನಿನ ವಿವರಗಳು FRUITS ಪೋರ್ಟಲ್‌ನಲ್ಲಿ ನೋಂದಣಿಯಾಗಿರಬೇಕು.

ಗರಿಷ್ಠ ಎರಡು ಹೆಕ್ಟೇರ್ ಭೂಮಿಯ ಮಿತಿಯೊಳಗೆ ಪರಿಹಾರವನ್ನು ಲೆಕ್ಕಹಾಕಲಾಗುತ್ತದೆ.

ಇದನ್ನೂ ಓದಿ: Land Purchase Scheme-ಸ್ವಂತ ಕೃಷಿ ಜಮೀನು ಖರೀದಿಸಲು ಸರ್ಕಾರದಿಂದ ₹12.50 ಲಕ್ಷ ಸಹಾಯಧನ!ಇಂದೇ ಅರ್ಜಿ ಸಲ್ಲಿಸಿ!

ರೈತರ ಬರದಿಂದ ₹62,481 ಕೋಟಿ ಆರ್ಥಿಕ ನಷ್ಟ! 

ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯಿಂದ ಕೃಷಿ ವಲಯಕ್ಕೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಎದುರಾಗಿದ್ದು, ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆಯನ್ನು ನೆಡೆಸಲಾಗಿದೆ. 

ಇಲ್ಲಿ ನೆಡೆಸಿರುವ ಸಮೀಕ್ಷೆಯ ಪ್ರಕಾರ:

- ರಾಜ್ಯದ ಒಟ್ಟು ಬಿತ್ತನೆ ಗುರಿ – 84.10 ಲಕ್ಷ ಹೆಕ್ಟೇರ್.

- ವಾಸ್ತವವಾಗಿ ಬಿತ್ತನೆಯಾದ ಪ್ರದೇಶ – 69.57 ಲಕ್ಷ ಹೆಕ್ಟೇರ್.

- ಬೆಳೆ ಹಾನಿಗೊಳಗಾದ ಪ್ರದೇಶ – 57.93 ಲಕ್ಷ ಹೆಕ್ಟೇರ್.

- ಬಿತ್ತನೆಯಾದ ಪ್ರದೇಶದಲ್ಲಿ ಹಾನಿಗೊಳಗಾದ ಪ್ರಮಾಣ – ಶೇ.83.26.

- ಅಂದಾಜು ಆರ್ಥಿಕ ನಷ್ಟ – ₹62,481.88 ಕೋಟಿ.

ಇದನ್ನೂ ಓದಿ: PM Kisan 24th Installment-ಪಿಎಂ ಕಿಸಾನ್ 24ನೇ ಕಂತಿನ ಹಣ ಬಿಡುಗಡೆ! ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯಾ ಚೆಕ್ ಮಾಡಿ!

ಕೇಂದ್ರಕ್ಕೆ ₹22,400 ಕೋಟಿ ಬರ ಪರಿಹಾರಕ್ಕೆ ಮನವಿ? 

ಇದೀಗ ಪ್ರಸ್ತುತ ಕರ್ನಾಟಕದಲ್ಲಿ ಎದುರಿಸುತ್ತಿರುವ ಬರ ಪರಿಸ್ಥಿತಿಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (NDRF) ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಒಟ್ಟು ₹22,400.58 ಕೋಟಿ ಆರ್ಥಿಕ ನೆರವು ನೀಡುವಂತೆ ಮನವಿ ಸಲ್ಲಿಸಿದೆ.

ಈ ಮೊತ್ತವನ್ನು ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಬರ ಪರಿಹಾರ ಸಿಗದಿದ್ದರೆ ರೈತರು ಏನು ಮಾಡಬೇಕು?

ಅರ್ಹ ಪಟ್ಟಿಯಲ್ಲಿದ್ದರೂ ರೈತರ ಖಾತೆಗೆ ಪರಿಹಾರದ ಹಣ ಜಮಯಾಗದಿದ್ದರೆ ಈ ಕೆಳಗಿನ ತಿಳಿಸಿರುವ ಕ್ರಮಗಳನ್ನು ಕೈಗೊಳ್ಳಬಹುದು.

- ನಿಮ್ಮ ಜಮೀನಿನ ವಿವರಗಳು FRUITS ಪೋರ್ಟಲ್‌ನಲ್ಲಿ ಸರಿಯಾಗಿದಿಯಾ ಚೆಕ್ ಮಾಡಿಕೊಳ್ಳಬೇಕು. 

- ಡಿಜಿಟಲ್ ಬೆಳೆ ಸಮೀಕ್ಷೆಯಲ್ಲಿ ಬೆಳೆ ವಿವರಗಳು ಸರಿಯಾಗಿ ದಾಖಲಾಗಿದಿಯಾ ಇಲ್ಲಾವ ಚೆಕ್ ಮಾಡಿಕೊಳ್ಳಿ. 

- ಬ್ಯಾಂಕ್ ಖಾತೆ ಸಕ್ರಿಯವಾಗಿದೆಯೇ ಮತ್ತು ಆಧಾರ್ ಸೀಡಿಂಗ್ ಆಗಿದೆಯೇ ಪರಿಶೀಲಿಸಿಕೊಳ್ಳಬೇಕು. 

- ಪರಿಹಾರ ಪೋರ್ಟಲ್‌ನಲ್ಲಿ ಫಲಾನುಭವಿ ವಿವರಗಳನ್ನು ಪರಿಶೀಲಿಸಿ.

- ಮೇಲಿನ ಎಲ್ಲಾ ಕ್ರಮಗಳಲ್ಲೂ ಸರಿಯಿದ್ದರೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿ. 

ಇದನ್ನೂ ಓದಿ: Ganga Kalyana Scheme-ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಕೊಳವೆಬಾವಿ ಕೊರೆಸಲು ₹4.75 ಲಕ್ಷದವರೆಗೆ ನೆರವು!

ಯಾದಗಿರಿ ಜಿಲ್ಲೆಯಲ್ಲಿ ಮೊದಲ ಕಂತಿನ ಹಣ ಬಿಡುಗಡೆ? 

ರಾಜ್ಯದಲ್ಲಿ ಬರ ಪರಿಹಾರ ವಿತರಣೆಗೆ ಯಾದಗಿರಿ ಜಿಲ್ಲೆಯಿಂದ ಚಾಲನೆ ನೀಡಲಾಗಿದ್ದು, ಮೊದಲ ಹಂತದಲ್ಲಿ ಜಿಲ್ಲೆಯ 1,06,462 ಅರ್ಹ ಎಲ್ಲಾ ರೈತರಿಗೂ ₹2,500 ರಂತೆ ಒಟ್ಟು ₹17.43 ಕೋಟಿ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ.

ಯಾದಗಿರಿ ಜಿಲ್ಲೆಯ ಅರ್ಹ ರೈತರಿಗೆ ಪಾವತಿಸಬೇಕಾದ ಒಟ್ಟು ಇನ್‌ಪುಟ್ ಸಬ್ಸಿಡಿ ಮೊತ್ತ ₹168.30 ಕೋಟಿ ನೀಡಲಾಗಿದ್ದು, ಉಳಿದ ಮೊತ್ತದ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಇನ್ನು ಉತ್ತರ ಕನ್ನಡ, ಕೋಲಾರ, ಕೊಪ್ಪಳ, ಚಾಮರಾಜನಗರ, ಧಾರವಾಡ, ಬಳ್ಳಾರಿ, ಬೀದರ್, ಬೆಂಗಳೂರು ನಗರ, ಹಾವೇರಿ, ಬೆಂಗಳೂರು ದಕ್ಷಿಣ, ದಾವಣಗೆರೆ, ದಕ್ಷಿಣ ಕನ್ನಡ, ಕಲಬುರಗಿ, ಮಂಡ್ಯ ಮತ್ತು ವಿಜಯನಗರ ಸೇರಿದಂತೆ 15 ಜಿಲ್ಲೆಗಳಲ್ಲಿ ಪಾವತಿ ಪ್ರಕ್ರಿಯೆ ಸಿದ್ಧಪಡಿಸಲಾಗುತ್ತಿದೆ ಎಂದು ಸರ್ಕಾರವು ಮನವಿಯನ್ನು ಮಾಡಲಾಗಿದೆ. 

ಇದನ್ನೂ ಓದಿ: PU Students Scholorship-SML ಮಹೀಂದ್ರಾ ವಿದ್ಯಾರ್ಥಿವೇತನದಡಿ ಪಿಯುಸಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ!

ಇದನ್ನೂ ಓದಿ: Ganga Kalyana Scheme-3B ವರ್ಗದ ರೈತರಿಗೆ ಗುಡ್ ನ್ಯೂಸ್! ಜೀವಜಲ ಯೋಜನೆಯಡಿ ಕೊಳವೆಬಾವಿ ಕೊರೆಯಲು ಸಹಾಯಧನ!

ಬರ ಪರಿಹಾರದ ಹಣವನ್ನು ಚೆಕ್ ಮಾಡುವುದು ಹೇಗೆ?

ಕರ್ನಾಟಕದ ರೈತರು ತಮ್ಮ ಬ್ಯಾಂಕ್ ಖಾತೆಗೆ ₹2,500 ಮೊದಲ ಕಂತಿನ ಬರ ಪರಿಹಾರದ ಹಣ ಜಮ ಆಗಿದಿಯಾ? ಇಲ್ಲಾವಾ? ಎಂಬುದನ್ನು ಈ ಕೆಳಗಿನ ತಿಳಿಸಿರುವ ವಿಧಾನಗಳ ಮೂಲಕ ಚೆಕ್ ಮಾಡಬಹುದು. 

Step-1: ಅರ್ಹ ರೈತರು ಮೊದಲು ಇಲ್ಲಿ ನೀಡಲಾಗಿರುವ ಲಿಂಕ್ ಮೇಲೆ Click Here ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರದ ಅಧಿಕೃತ ಪರಿಹಾರ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

Step-2: ನಂತರ ಜಾಲತಾಣದಲ್ಲಿ ಲಭ್ಯವಿರುವ ಅರ್ಹ ಫಲಾನುಭವಿಯ ಪಾವತಿ ಸ್ಥಿತಿಯ ವರದಿಯನ್ನು ಆಯ್ಕೆ ಮಾಡಬೇಕು. 

Step-3: ತದನಂತರ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮದ ವಿವರಗಳನ್ನು ಆಯ್ಕೆಮಾಡಿ ನಂತರ ರೈತರ ಹೆಸರು ಅಥವಾ ನೋಂದಣಿ ವಿವರಗಳ ಮೂಲಕ ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸಬಹುದು. 

Step-4: ಬಳಿಕ ಹಣ ಬಿಡುಗಡೆಯಾಗಿದೆಯೇ ಇಲ್ಲಾವಾ ಎಂಬುದನ್ನು ತಿಳಿದುಕೊಳ್ಳಲು ನಿಮ್ಮ ಬ್ಯಾಂಕ್ ಪಾಸ್‌ಬುಕ್ ಅಪ್‌ಡೇಟ್ ಮಾಡಿಸಿ ಅಥವಾ ಮೊಬೈಲ್ ಬ್ಯಾಂಕಿಂಗ್ ಆಪ್ ಅಲ್ಲಿ ಚೆಕ್ ಮಾಡಿ. 

ಇದನ್ನೂ ಓದಿ: B Com, BA Scholorship-ಬಿಬಿಎ,ಬಿ.ಕಾಂ,ಬಿಎ ವಿದ್ಯಾರ್ಥಿಗಳಿಗೆ 5 ಲಕ್ಷದವರೆಗೆ ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ: 

ವೆಬ್ಸೈಟ್ ಲಿಂಕ್: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: