B Com, BA Scholorship-ಬಿಬಿಎ,ಬಿ.ಕಾಂ,ಬಿಎ ವಿದ್ಯಾರ್ಥಿಗಳಿಗೆ 5 ಲಕ್ಷದವರೆಗೆ ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

October 5, 2026 | Siddesh
B Com, BA Scholorship-ಬಿಬಿಎ,ಬಿ.ಕಾಂ,ಬಿಎ ವಿದ್ಯಾರ್ಥಿಗಳಿಗೆ 5 ಲಕ್ಷದವರೆಗೆ ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!
Share Now:

2026-2027 ನೇ ಸಾಲಿನ ಬಿಬಿಎ, ಬಿಎಫ್‌ಐಎ, ಬಿ.ಕಾಂ (ಎಚ್, ಇ), ಬ್ಯಾಚುಲರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಎಂಎಸ್), ಇಂಟಿಗ್ರೇಟೆಡ್ ಪ್ರೋಗ್ರಾಂ ಇನ್ ಮ್ಯಾನೇಜ್‌ಮೆಂಟ್ (ಐಪಿಎಂ), ಬಿಎ (ಅರ್ಥಶಾಸ್ತ್ರ), ಮತ್ತು ಬ್ಯಾಚುಲರ್ ಇನ್ ಬಿಸಿನೆಸ್ ಸ್ಟಡೀಸ್ (ಬಿಬಿಎಸ್) ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಮನ್ ಕಾಂತ್ ಮುಂಜಾಲ್ ವಿದ್ಯಾರ್ಥಿವೇತನದ ಅಡಿಯಲ್ಲಿ ವಿದ್ಯರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳನ್ನು ಲಗತ್ತಿಸಬೇಕು? ಅರ್ಜಿ ಸಲ್ಲಿಸುವ ವಿಧಾನಗಳಾವುವು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Kayaka Kiran Scheme-ಕಾಯಕಕಿರಣ ಯೋಜನೆಯಡಿ ₹1 ಲಕ್ಷದವರೆಗೆ ನೇರ ಸಾಲ! ಶೇ 50% ಸಹಾಯಧನ!

Scholorship AMount-ಈ ಕಾರ್ಯಕ್ರಮದ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನವನ್ನು ಪಡೆಯಬಹುದು?

ರಾಮನ್ ಕಾಂತ್ ಮುಂಜಾಲ್ ವಿದ್ಯಾರ್ಥಿವೇತನದ ಅಡಿಯಲ್ಲಿ ಅವರ ಶಿಕ್ಷಣವನ್ನು ಪೂರ್ಣಗೊಳಿಸಲು ಮೂರು ವರ್ಷಗಳವರೆಗೆ ವರ್ಷಕ್ಕೆ40,000 ನಿಂದ 5,50,000 ವರೆಗಿನ ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶವಿರುತ್ತದೆ.

Last Date To APply-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ದಿನಾಂಕ: 15 ಅಕ್ಟೋಬರ್ 2026

ಇದನ್ನೂ ಓದಿ: Udyogini Yojana-ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ 1.5 ಲಕ್ಷ ಸಹಾಯಧನ!

Who Can Apply-ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳಾವುವು?

ವಿದ್ಯಾರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.

ಬಿಬಿಎ, ಬಿಎಫ್‌ಐಎ, ಬಿ.ಕಾಂ (ಎಚ್, ಇ), ಬ್ಯಾಚುಲರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಎಂಎಸ್), ಇಂಟಿಗ್ರೇಟೆಡ್ ಪ್ರೋಗ್ರಾಂ ಇನ್ ಮ್ಯಾನೇಜ್‌ಮೆಂಟ್ (ಐಪಿಎಂ), ಬಿಎ (ಅರ್ಥಶಾಸ್ತ್ರ), ಬ್ಯಾಚುಲರ್ ಇನ್ ಬಿಸಿನೆಸ್ ಸ್ಟಡೀಸ್ (ಬಿಬಿಎಸ್), ಅಥವಾ ಯಾವುದೇ ಇತರ ಹಣಕಾಸು-ಸಂಬಂಧಿತ ಪದವಿ ಕೋರ್ಸ್‌ನ ಮೊದಲ ವರ್ಷದಲ್ಲಿ ದಾಖಲಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಯು 10 ಹಾಗೂ 12 ತರಗತಿಯಲ್ಲಿ ಕನಿಷ್ಟ 80% ಅಂಕಗಳನ್ನು ಗಳಿಸಿರಬೇಕು.

ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯದ ಮಿತಿಯು 6 ಲಕ್ಷದ ಒಳಗಿರಬೇಕು.

ಹೀರೋ ಫಿನ್‌ಕಾರ್ಪ್, ರಾಮನ್ ಕಾಂತ್ ಮುಂಜಾಲ್ ಫೌಂಡೇಶನ್ ಮತ್ತು ಬಡ್ಡಿ4ಸ್ಟಡಿಯ ಉದ್ಯೋಗಿಗಳು/ಗುತ್ತಿಗೆ ನೌಕರರ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: New Rules-ನಿಮ್ಮ ಗ್ಯಾಸ್ ಸಬ್ಸಿಡಿ ಮತ್ತು ಬ್ಯಾಂಕ್ ಎಫ್‌ಡಿ ಸುರಕ್ಷಿತವಾಗಿರಬೇಕೇ? ಈ ನಿಯಮವನ್ನು ಪಾಲನೆ ಮಾಡಿ!

Documents Required-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

  • ವಿದ್ಯಾರ್ಥಿಯ ಆಧಾರ್ ಕಾರ್ಡ
  • ಪೋಷಕರ ಆಧಾರ್ ಕಾರ್ಡ, ಪ್ಯಾನ್ ಕಾರ್ಡ
  • ಪ್ರಸ್ತುತ ಶೈಕ್ಷಣಿಕ ದಾಖಲಾತಿಯ ಪುರಾವೆ
  • ಆದಾಯ ಪ್ರಮಾಣ ಪತ್ರ
  • 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿಗಳು
  • ಅರ್ಜಿದಾರರ ಲಿಂಕ್ಡ್‌ಇನ್ ಪ್ರೊಫೈಲ್‌ನ URL
  • ಬ್ಯಾಂಕ್ ಪಾಸ್ ಪುಸ್ತಕ
  • ಮೊಬೈಲ್ ನಂಬರ್

ಇದನ್ನೂ ಓದಿ: Muskaan Scholarship-ಪಿಯುಸಿ ವಿದ್ಯಾರ್ಥಿಗಳಿಗೆ 12,000 ವಿದ್ಯಾರ್ಥಿವೇತನ!ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

students scholorship

ಇದನ್ನೂ ಓದಿ: MBBS Scholorship-ಕಾನ್ಸೆಂಟ್ರಿಕ್ಸ್ ವಿದ್ಯಾರ್ಥಿವೇತನದ ಅಡಿಯಲ್ಲಿ MBBS ವಿದ್ಯಾರ್ಥಿನಿಯರಿಗೆ 65,000 ವಿದ್ಯಾರ್ಥಿವೇತನ!

Online APplication Process-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಹಂತಗಳಾವುವು?

ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗೆ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Step-1: ಅರ್ಹ ಅಭ್ಯರ್ಥಿಗಳು ಮೊದಲು ಇಲ್ಲಿ ನೀಡಿರುವ ಈ ಲಿಂಕ್ "Raman Kant Munjal Scholarship" ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು.

Step-2: ತದನಂತರ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿದಾರ ವಿದ್ಯಾರ್ಥಿಗಳು ಈ ಜಾಲತಾಣವನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದರೆ “Create an Account” ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೊಸ ಖಾತೆಯನ್ನು ರಚಿಸಿಕೊಳ್ಳಬೇಕು.

Step-3: ನಂತರ “Login” ಬಟನ್ ಮೂಲಕ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-4: ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ “Submit” ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Arivu Scheme 2026-ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ 5 ಲಕ್ಷದವರೆಗೆ ಕಡಿಮೆ ಬಡ್ಡಿ ಸಾಲ!

More Information-ಇನ್ನೂ ಉಪಯುಕ್ತ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ: Read More

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: