Kayaka Kiran Scheme-ಕಾಯಕಕಿರಣ ಯೋಜನೆಯಡಿ ₹1 ಲಕ್ಷದವರೆಗೆ ನೇರ ಸಾಲ! ಶೇ 50% ಸಹಾಯಧನ!

October 5, 2026 | Siddesh
Kayaka Kiran Scheme-ಕಾಯಕಕಿರಣ ಯೋಜನೆಯಡಿ ₹1 ಲಕ್ಷದವರೆಗೆ ನೇರ ಸಾಲ! ಶೇ 50% ಸಹಾಯಧನ!
Share Now:

2026-2027 ನೇ ಸಾಲಿನ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ನಿಯಮಿತದ ವತಿಯಿಂದ ಕಾಯಕಕಿರಣ ( ಸ್ವಯಂ ಉದ್ಯೋಗ ನೇರ ಸಾಲ) ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ವೀರಶೈವ ಲಿಂಗಾಯತ ಜಾತಿ ಹಾಗೂ ಉಪಜಾತಿಗೆ ಸೇರಿದ ಸಮುದಾಯ ಜನರ(ಪ್ರವರ್ಗ-IIIಬಿ) ಅಭಿವೃದ್ದಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಿ ಸದುಪಯೋಗ ಪಡೆಯಲು ಕೋರಿದೆ.

ಈ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿ ಸಲ್ಲಿಸಲು ಯಾವೆಲ್ಲಾ ಹಂತಗಳನ್ನು ಅನುಸರಿಸಬೇಕು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Udyogini Yojana-ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ 1.5 ಲಕ್ಷ ಸಹಾಯಧನ!

Subsidy Amount-ಈ ಯೋಜನೆಯ ಅಡಿಯಲ್ಲಿ ಎಷ್ಟು ಸಹಾಯಧನವನ್ನು ಪಡೆಯಬಹುದು?

ಕಾಯಕಕಿರಣ ( ಸ್ವಯಂ ಉದ್ಯೋಗ ನೇರ ಸಾಲ) ಯೋಜನೆಯ ಅಡಿಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳು ಈ ಕೆಳಕಂಡ ಸಹಾಯಧನ ಹಾಗೂ ಸಾಲ ಸೌಲಭ್ಯವನ್ನು ಪಡೆಯಬಹುದು:

ಘಟಕ ವೆಚ್ಚ ₹1,00,000/- ಇದ್ದಲ್ಲಿ, ಶೇ.20ರಷ್ಟು ಗರಿಷ್ಠ ₹20,000/- ಸಹಾಯಧನ ಹಾಗೂ ಉಳಿದ ₹80,000/- ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡಲಾಗುತ್ತದೆ.

ಘಟಕ ವೆಚ್ಚ ₹2,00,000/- ಇದ್ದಲ್ಲಿ, ಶೇ.15ರಷ್ಟು ಗರಿಷ್ಠ ₹30,000/- ಸಹಾಯಧನ ಹಾಗೂ ಉಳಿದ ₹1,70,000/- ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡಲಾಗುತ್ತದೆ.

Last Date To Apply-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಅಕ್ಟೋಬರ್ 2026

ಇದನ್ನೂ ಓದಿ: New Rules-ನಿಮ್ಮ ಗ್ಯಾಸ್ ಸಬ್ಸಿಡಿ ಮತ್ತು ಬ್ಯಾಂಕ್ ಎಫ್‌ಡಿ ಸುರಕ್ಷಿತವಾಗಿರಬೇಕೇ? ಈ ನಿಯಮವನ್ನು ಪಾಲನೆ ಮಾಡಿ!

Documents Required-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

  • ಆಧಾರ್ ಕಾರ್ಡ್/Aadhar Card
  • ಜಾತಿ ಪ್ರಮಾಣಪತ್ರ/Caste Certificate
  • ಆದಾಯ ಪ್ರಮಾಣಪತ್ರ/Income Certificate
  • ಪಡಿತರ ಚೀಟಿ/Ration Card
  • ಬ್ಯಾಂಕ್ ಪಾಸ್‌ಬುಕ್ ಪ್ರತಿ/Bank Passbook
  • ತರಬೇತಿ ಪ್ರಮಾಣಪತ್ರ/Training Certificate
  • ಫೋಟೋ/Photocopy

ಇದನ್ನೂ ಓದಿ: Muskaan Scholarship-ಪಿಯುಸಿ ವಿದ್ಯಾರ್ಥಿಗಳಿಗೆ 12,000 ವಿದ್ಯಾರ್ಥಿವೇತನ!ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

Eligibity Crtitiria-ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರಿರುತ್ತಾರೆ?

ಅರ್ಜಿದಾರ ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 55 ವರ್ಷ ಮೀರಿರಬಾರದು.

ಈ ಯೋಜನೆಯಲ್ಲಿ ಅಭ್ಯರ್ಥಿಯು ಸರ್ಕಾರದ ಆದೇಶ ಸಂಖ್ಯೆ: ಸಕಇ 225 ಬಿಸಿಎ 2000, ದಿನಾಂಕ 30/03/2002 ರಲ್ಲಿ ಗುರುತಿಸಿದ ಪುವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು.

ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದವರಾದರೆ ರೂ.98,000/ಗಳು ಹಾಗೂ ನಗರ ಪ್ರದೇಶದವರಿಗೆ ರೂ.1,20,000/- ಒಳಗಿರಬೇಕು.

ಪ್ರವರ್ಗ-1 ರಡಿಯಲ್ಲಿನ ಜಾತಿಗಳಲ್ಲಿ ಬರುವ ಅರ್ಜಿದಾರರು ಕನಿಷ್ಠ 7ನೇ ತರಗತಿ ಹಾಗೂ ಉಳಿದ ಇತರೆ ಪ್ರವರ್ಗಗಳಲ್ಲಿನ ಅರ್ಜಿದಾರರಯ 10ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ನಿರುದ್ಯೋಗಿಯಾಗಿರಬೇಕು.

ಇದನ್ನೂ ಓದಿ: MBBS Scholorship-ಕಾನ್ಸೆಂಟ್ರಿಕ್ಸ್ ವಿದ್ಯಾರ್ಥಿವೇತನದ ಅಡಿಯಲ್ಲಿ MBBS ವಿದ್ಯಾರ್ಥಿನಿಯರಿಗೆ 65,000 ವಿದ್ಯಾರ್ಥಿವೇತನ!

veerashiva lingayata scheme

ಇದನ್ನೂ ಓದಿ: Arivu Scheme 2026-ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ 5 ಲಕ್ಷದವರೆಗೆ ಕಡಿಮೆ ಬಡ್ಡಿ ಸಾಲ!

ಸರ್ಕಾರದ /ನಿಗಮದ ಬೇರೆ ಯಾವುದಾದರೂ ಯೋಜನೆಗಳಲ್ಲಿ ಸಾಲ ಅಥವಾ ಇತರ ಆರ್ಥಿಕ ಸವಲತ್ತುಗಳನ್ನು ಪಡೆದಿರಬಾರದು.

ಮಹಿಳೆಯರಿಗೆ ಈ ಯೋಜನೆಯಲ್ಲಿ ಶೇ.50ರನ್ನು ಮೀಸಲು ನಿಗದಿಪಡಿಸಿದೆ.

ಅಂಗವಿಕಲರಿಗೆ ಈ ಯೋಜನೆಯಲ್ಲಿ ಶೇ.4ನ್ನು ಮೀಸಲು ನಿಗದಿಪಡಿಸಿದೆ.

ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು.

How To Apply-ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸುವ ವಿಧಾನ:

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ನಿಯಮಿತದ ವತಿಯಿಂದ ಕಾಯಕಕಿರಣ ( ಸ್ವಯಂ ಉದ್ಯೋಗ ನೇರ ಸಾಲ) ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯುವ ವೀರಶೈವ ಲಿಂಗಾಯುತ ಸಮುದಾಯದ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್ ನಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಅಥವಾ ಗ್ರಾಮ ಒನ್/ಬೆಂಗಳೂರು ಒನ್/ ಕರ್ನಾಟಕ ಒನ್ ಗಳ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Aditya Birla Capital Scholarship-ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್‌ನ ವತಿಯಿಂದ 60,000 ವಿದ್ಯಾರ್ಥಿವೇತನ!

More Information-ಹೆಚ್ಚಿನ ಮಾಹಿತಿಯನ್ನು ಪಡೆಯಲು:

ಲಿಂಗಾಯುತ ಸಮುದಾಯದ ಅಧಿಕೃತ ವೆಬ್ಸೈಟ್ ಭೇಟಿ ಮಾಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ: Click Here
ದೂರವಾಣಿ ಸಂಖ್ಯೆ: 080 22865522/9900012351/9900012352

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: