Bangalore Krishi Mela-2026: ಇಂದಿನಿಂದ 3 ದಿನ ಜಿ.ಕೆ.ವಿ.ಕೆ.ಯಲ್ಲಿ ಕೃಷಿಮೇಳ!

November 16, 2026 | Siddesh
Bangalore Krishi Mela-2026: ಇಂದಿನಿಂದ 3 ದಿನ ಜಿ.ಕೆ.ವಿ.ಕೆ.ಯಲ್ಲಿ ಕೃಷಿಮೇಳ!
Share Now:

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಕೃಷಿ ನಾವಿನ್ಯತೆಗಳು ಹಾಗೂ ಬರ ನಿರ್ವಹಣಾ ತಂತ್ರಜ್ಞಾನಗಳನ್ನು ಪರಿಚಯಿಸುವ ಸಲುವಾಗಿ 2026ರ ನವೆಂಬರ್ 16, 17 ಮತ್ತು 18ರಂದು ಮೂರು ದಿನಗಳ 'ಕೃಷಿಮೇಳ'ವನ್ನು(GKVK Krishi Mela) ಜಿ.ಕೆ.ವಿ.ಕೆ. ಆವರಣದಲ್ಲಿ ಆಯೋಜಿಸಲಾಗಿದೆ ಎಂದು ವಿವಿಯ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಬಾರಿಯ ಕೃಷಿ ಮೇಳದಲ್ಲಿ(Bangalore Krishi Mela) ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತವಾದ ಬರ ನಿರ್ವಹಣಾ ತಂತ್ರಜ್ಞಾನಗಳು, ಬರ ಪರಿಸ್ಥಿತಿಗೆ ತಡೆಯೊಡ್ಡುವ ಬೆಳೆಗಳು, ತಳಿಗಳು ಹಾಗೂ ಸೂಕ್ತ ಬೆಳೆ ಪ್ರತ್ಯಕ್ಷಿಕೆಗಳ ಪ್ರದರ್ಶನ ಇರಲಿದೆ. ವಿಶ್ವವಿದ್ಯಾನಿಲಯದ ಸಂಶೋಧನಾ ವಿಭಾಗಗಳು, ರಾಜ್ಯದ ವಿವಿಧ ಕೃಷಿ ವಿ.ವಿ.ಗಳು, ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಮತ್ತು ಅಭಿವೃದ್ಧಿ ಇಲಾಖೆಗಳ ವತಿಯಿಂದ ತಂತ್ರಜ್ಞಾನ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Koli Mari Vitarane-ಪಶುಪಾಲನಾ ಇಲಾಖೆಯಿಂದ ಉಚಿತ ಕೋಳಿ ಮರಿ ಪಡೆಯಲು ಅರ್ಜಿ ಆಹ್ವಾನ!

ಇದಲ್ಲದೆ, ಎಲ್ ನಿನೋ ಪರಿಣಾಮ ಮತ್ತು ಭವಿಷ್ಯದ ಸಿದ್ಧತೆಗಳು, ಹವಾಮಾನ ವೈಪರೀತ್ಯ ಚತುರ ಕೃಷಿ ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆ ಕುರಿತು ನುರಿತ ತಜ್ಞರಿಂದ ಉಪನ್ಯಾಸ ಹಾಗೂ ವಿಚಾರ ಸಂಕಿರಣಗಳು ನಡೆಯಲಿವೆ. ರೈತರ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಸಲಹಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಹಾಗೂ ಕೃಷಿಮೇಳದ ಅಂಗವಾಗಿ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅತ್ಯುತ್ತಮ ಪ್ರಗತಿಪರ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದು ಮಾಹಿತಿಯನ್ನು ತಿಳಿಸಿದ್ದಾರೆ.

GKVK Krishi Mela-2026: ಕೃಷಿ ಮೇಳದಲ್ಲಿ ಏನೆಲ್ಲ ಇರಲಿದೆ?

ರೈತರಿಗೆ ಈ ಬಾರಿಯ ಕೃಷಿ ಮೇಳದಲ್ಲಿ ಈ ಕೆಳಗೆ ತಿಳಿಸಿರುವ ವಿಷಯದ ಕುರಿತು ಅಗತ್ಯ ಪ್ಯಾತ್ಯಕ್ಷಿಕೆ ಮತ್ತು ಪ್ರಯೋಗಿಕ ಮಾಹಿತಿಯನ್ನು ಪಡೆಯಬಹುದಾಗಿದೆ.

  • ಬರ ನಿರ್ವಹಣಾ ತಂತ್ರಜ್ಞಾನಗಳು, ಬರ ಪರಿಸ್ಥಿತಿಗೆ ತಡೆಯೊಡ್ಡುವ ಬೆಳೆಗಳು, ತಳಿಗಳು ಹಾಗೂ ಸೂಕ್ತ ಬೆಳೆ ಪ್ರತ್ಯಕ್ಷಿಕೆಗಳ ಪ್ರದರ್ಶನ.
  • ಕೃಷಿ ನಾವಿನ್ಯತೆಗಳು.
  • ಕೃಷಿ ವಸ್ತುಪ್ರದರ್ಶನ ಮಳಿಗೆ.
  • ಕೃಷಿ ಪೂರಕ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ.
  • ಬರ ನಿರ್ವಹಣೆ ತಂತ್ರಜ್ಞಾನಗಳ ಕುರಿತು ಕಾರ್ಯಗಾರ.

ಇದನ್ನೂ ಓದಿ: Sujnananidhi Scholarship-ಸುಜ್ಞಾನನಿಧಿ ಶಿಷ್ಯವೇತನ ಯೋಜನೆಯಡಿ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿವೇತನ!

GKVK Krishi Mela Date-ಎಷ್ಟು ದಿನ ಮೇಳ ನಡೆಯಲಿದೆ?

ಬೆಂಗಳೂರು ಜಿಕೆವಿಕೆ ಕೃಷಿ ಮೇಳವು ವಿವಿಯ ಆವರಣದಲ್ಲಿ ಒಟ್ಟೂ ಮೂರು ದಿನ ನಡೆಯಲಿದ್ದು ನವೆಂಬರ್ 16, 17 ಮತ್ತು 18ರಂದು ಪ್ರತಿ ದಿನ ಬೆಳಗ್ಗೆ 9-00 ಸಂಜೆ 7-00 ರ ವರೆಗೆ ಪ್ರದರ್ಶನ ಮಳಿಗೆಗಳು ತೆರೆದಿರಲಿವೆ.

ನವೆಂಬರ್ 16ರಂದು ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ಸರ್ಕಾರದ ಮಾನ್ಯ ಕೃಷಿ ಸಚಿವರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಗಳಾದ ಶ್ರೀ ಪಿ.ಎಂ. ನರೇಂದ್ರಸ್ವಾಮಿ ನೆರವೇರಿಸಲಿದ್ದಾರೆ. ಬೃಹತ್ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಇದನ್ನೂ ಓದಿ: Swavalambi Sarathi Scheme-ಸರಕು ಸಾಗಣೆ ವಾಹನ ಖರೀದಿಗೆ 4 ಲಕ್ಷ ಸಹಾಯಧನ! ಇಂದೇ ಅರ್ಜಿ ಸಲ್ಲಿಸಿ!

ಈ ಸಂದರ್ಭದಲ್ಲಿ ಕೃಷಿ ವಿ.ವಿ. ಕುಲಪತಿಗಳಾದ ಡಾ. ಪಿ. ವೆಂಕಟರವಣ ಸೇರಿದಂತೆ ಹಲವು ಗಣ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿರಲಿದ್ದಾರೆ.

ಈ ಕೃಷಿಮೇಳದಲ್ಲಿ ರೈತರು, ರೈತ ಮಹಿಳೆಯರು, ಕೃಷಿ ಆಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೃಷಿ ಮಾಹಿತಿ ಘಟಕದ ಹಿರಿಯ ವಾರ್ತಾತಜ್ಞರು ಹಾಗೂ ಮುಖ್ಯಸ್ಥರಾದ ಡಾ. ಕೆ.ಪಿ. ರಘುಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Parihara DBT Payment-ರೈತರ ಖಾತೆಗೆ ನೇರವಾಗಿ ₹5,000 ಬರ ಪರಿಹಾರ! ಮೊದಲ ಕಂತಿನ ಹಣ ಬಿಡುಗಡೆ! 

Krishi Mela-ಮೊಬೈಲ್ ನಲ್ಲೇ ಕೃಷಿ ಮೇಳವನ್ನು ವಿಕ್ಷೀಸಲು ಅವಕಾಶ:

ವಿವಿಧ ಕೆಲಸದ ನಿಮಿತ್ತ ನೇರವಾಗಿ ವಿವಿಯ ಆವರಣವನ್ನು ಹೋಗಿ ಮೇಳದಲ್ಲಿ ಭಾಗವಹಿಸಲು ಸಾದ್ಯವಾಗದೇ ಇರುವ ಆಸಕ್ತ ನಾಗರಿಕರು ತಾವಿರುವ ಜಾಗದಿಂದೇ ಆನ್ಲೈನ್ ಮೂಲಕ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಬೆಂಗಳೂರು ಕೃಷಿ ವಿವಿಯ ಕೃಷಿ ಮೇಳದ ನೇರ ಪ್ರಸಾರವನ್ನು ವಿಕ್ಷೀಸಬಹುದು.

GKVK Krishi Mela Live Link-ಅಧಿಕೃತ ಲಿಂಕ್- Watch Now

GKVK Website-ಇನ್ನು ಹೆಚ್ಚಿನ ಮಾಹಿತಿಗಾಗಿ ಜಿ.ಕೆ.ವಿ.ಕೆ ಕೃಷಿ ವಿವಿಯ ಅಧಿಕೃತ ವೆಬ್ಸೈಟ್ ಲಿಂಕ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: