Swavalambi Sarathi Scheme-ಸರಕು ಸಾಗಣೆ ವಾಹನ ಖರೀದಿಗೆ 4 ಲಕ್ಷ ಸಹಾಯಧನ! ಇಂದೇ ಅರ್ಜಿ ಸಲ್ಲಿಸಿ!

November 5, 2026 | Siddesh
Swavalambi Sarathi Scheme-ಸರಕು ಸಾಗಣೆ ವಾಹನ ಖರೀದಿಗೆ 4 ಲಕ್ಷ ಸಹಾಯಧನ! ಇಂದೇ ಅರ್ಜಿ ಸಲ್ಲಿಸಿ!
Share Now:

2026-2027 ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಸ್ವಾವಲಂಭಿ ಸಾರಥಿ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಪಂಗಡದ ಯುವಕರು ಮತ್ತು ಮಹಿಳೆಯರಿಗೆ ನಿಗಮದಿಂದ ಸಬ್ಸಿಡಿ ಮತ್ತು ಸಣ್ಣ ವ್ಯಾಪಾರ, ಸಣ್ಣ ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಸ್ವ-ಉದ್ಯೋಗ ಘಟಕಗಳನ್ನು ಪ್ರಾರಂಭಿಸಲು ಸರ್ಕಾರದಿಂದ ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸ್ವಂತವಾಗಿ ಸರಕು ಸಾಗಣೆ ವಾಹನ ಅಥವಾ ಟ್ರ್ಯಾಕ್ಟರ್ ಖರೀದಿಸಿ ವ್ಯಾಪಾರ, ಕೃಷಿ ಸಂಬಂಧಿತ ಚಟುವಟಿಕೆ ಹಾಗೂ ಸೇವಾ ವಲಯದಲ್ಲಿ ಉದ್ಯೋಗ ಆರಂಭಿಸಲು ಬಯಸುವವರಿಗೆ ಈ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ. ಹೀಗೆ ಸ್ವಂತ ವಾಹನವನ್ನು ಆದಾಯದ ಮೂಲವನ್ನಾಗಿ ಮಾಡಿಕೊಂಡು ಕುಟುಂಬದ ಆರ್ಥಿಕ ಸ್ಥಿತಿಯನ್ನು ನೆಡೆಸಲು ಸಹಾಯಕಾರಿಯಾಗಿದೆ.

ಇದನ್ನೂ ಓದಿ: Land Purchase Scheme-ಸ್ವಂತ ಕೃಷಿ ಜಮೀನು ಖರೀದಿಸಲು ಸರ್ಕಾರದಿಂದ ₹12.50 ಲಕ್ಷ ಸಹಾಯಧನ!ಇಂದೇ ಅರ್ಜಿ ಸಲ್ಲಿಸಿ!

ಈ ಯೋಜನೆಯ ಅಡಿಯಲ್ಲಿ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳನ್ನು ಲಗತ್ತಿಸಬೇಕು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿ ಸಲ್ಲಿಸಲು ಯಾವೆಲ್ಲಾ ಹಂತಗಳನ್ನು ಅನುಸರಿಸಬೇಕು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ದಿನಾಂಕ: 30 ನವೆಂಬರ್ 2026

ಇದನ್ನೂ ಓದಿ: PM Kisan 24th Installment-ಪಿಎಂ ಕಿಸಾನ್ 24ನೇ ಕಂತಿನ ಹಣ ಬಿಡುಗಡೆ! ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯಾ ಚೆಕ್ ಮಾಡಿ!

ಸ್ವಾವಲಂಭಿ ಸಾರಥಿ ಯೋಜನೆಯ ಮುಖ್ಯ ಉದ್ದೇಶಗಳಾವುವು?

  • ಪರಿಶಿಷ್ಟ ಪಂಗಡದ ಯುವಕರು ಮತ್ತು ಮಹಿಳೆಯರಿಗೆ ಸ್ವಂತ ಉದ್ಯೋಗ ಪ್ರಾರಂಭ ಮಾಡಲು ಸಹಾಯ ನೀಡುವುದು.
  • ಸರಕು ಸಾಗಣೆ ವಾಹನ ಮತ್ತು ಟ್ರ್ಯಾಕ್ಟರ್ ಖರೀದಿಗೆ ಆರ್ಥಿಕ ಸಹಾಯಧನವನ್ನು ಒದಗಿಸುವುದು.
  • ಬ್ಯಾಂಕ್ ಸಾಲದ ಸಹಾಯದಿಂದ ಸ್ವಂತ ಉದ್ಯೋಗ ಘಟಕಗಳನ್ನು ಆರಂಭ ಮಾಡಲು ಪ್ರೋತ್ಸಾಹಿಸುವುದು.
  • ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು.
  • ಅರ್ಜಿದಾರ ಅಭ್ಯರ್ಥಿಗಳು ಸ್ವಂತ ಆದಾಯ ಗಳಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಕರಿಸುವುದು.

ಯೋಜನೆಯಡಿ ಎಷ್ಟು ಸಹಾಯಧನವನ್ನು ಪಡೆಯಬಹುದು?

ಈ ಯೋಜನೆಯಡಿ ವಾಹನ ಅಥವಾ ಟ್ರ್ಯಾಕ್ಟರ್ ಖರೀದಿಸಲು ಘಟಕ ವೆಚ್ಚದ ಶೇ.70ರಷ್ಟು ಅಥವಾ ಗರಿಷ್ಠ ₹4 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಬ್ಯಾಂಕ್ ಸಾಲದ ರೂಪದಲ್ಲಿ ಒದಗಿಸಲಾಗುತ್ತದೆ.

ಇದನ್ನೂ ಓದಿ: Ganga Kalyana Scheme-ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಕೊಳವೆಬಾವಿ ಕೊರೆಸಲು ₹4.75 ಲಕ್ಷದವರೆಗೆ ನೆರವು!

ಸಹಾಯಧನವನ್ನು ಪಡೆಯಲು ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಸ್ವಾವಲಂಭಿ ಸಾರಥಿ ಯೋಜನೆಯಡಿ ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  1. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  2. ಯೋಜನೆಯ ಉದ್ದೇಶದಂತೆ ಪರಿಶಿಷ್ಟ ಪಂಗಡದ ಯುವಕರು ಮತ್ತು ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  3. ಅರ್ಜಿದಾರರ ಅಭ್ಯರ್ಥಿಯು ಪರಿಶಿಷ್ಟ ಪಂಗಡಕ್ಕೆ (ST) ಸೇರಿದವರಾಗಿರಬೇಕು.
  4. ಸ್ವಂತ ಉದ್ಯೋಗ ಆರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.
  5. ಬ್ಯಾಂಕ್ ಸಾಲ ಪಡೆಯಲು ಅಗತ್ಯವಿರುವ ಅರ್ಹತೆ ಮತ್ತು ದಾಖಲೆಗಳನ್ನು ಹೊಂದಿರಬೇಕು.
  6. ಕುಟುಂಬದ ಆದಾಯ, ವಯೋಮಿತಿ ಹಾಗೂ ಇತರ ಷರತ್ತುಗಳನ್ನು ನಿಗಮದ ಅಧಿಸೂಚನೆಯ ಪ್ರಕಾರ ಪೂರೈಸಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳಾವುವು?

  • ಆಧಾರ್ ಕಾರ್ಡ್.
  • ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ.
  • ಆದಾಯ ಪ್ರಮಾಣಪತ್ರ.
  • ನಿವಾಸದ ದಾಖಲೆ.
  • ಪಾಸ್‌ಪೋರ್ಟ್ ಫೋಟೋ
  • ಬ್ಯಾಂಕ್ ಪಾಸ್‌ಬುಕ್ ಪ್ರತಿ.
  • ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.
  • ವಾಹನ ಅಥವಾ ಟ್ರ್ಯಾಕ್ಟರ್‌ನ ಅಂದಾಜು ದರಪಟ್ಟಿ (Quotation).
  • ಚಾಲನಾ ಪರವಾನಗಿ (ಅಗತ್ಯವಿದ್ದಲ್ಲಿ).
  • ಸ್ವಯಂ ಘೋಷಣಾ ಪತ್ರ.
  • ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳು.

ಇದನ್ನೂ ಓದಿ: PU Students Scholorship-SML ಮಹೀಂದ್ರಾ ವಿದ್ಯಾರ್ಥಿವೇತನದಡಿ ಪಿಯುಸಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ!

Swavalambi Sarathi Scheme

ಇದನ್ನೂ ಓದಿ: Ganga Kalyana Scheme-3B ವರ್ಗದ ರೈತರಿಗೆ ಗುಡ್ ನ್ಯೂಸ್! ಜೀವಜಲ ಯೋಜನೆಯಡಿ ಕೊಳವೆಬಾವಿ ಕೊರೆಯಲು ಸಹಾಯಧನ!

ಅರ್ಜಿ ಸಲ್ಲಿಸುವ ವಿಧಾನಗಳಾವುವು?

ಅರ್ಹ ಫಲಾನುಭವಿಗಳು ಎರಡು ಮಾರ್ಗಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಲು ಅಗತ್ಯವಿರುತ್ತದೆ.

ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಸೇವಾ ಸಿಂಧು ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ ಕೇಳಿದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಅಥವಾ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರಗಳ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ಮಾಡಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: B Com, BA Scholorship-ಬಿಬಿಎ,ಬಿ.ಕಾಂ,ಬಿಎ ವಿದ್ಯಾರ್ಥಿಗಳಿಗೆ 5 ಲಕ್ಷದವರೆಗೆ ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ:

ಅಧಿಕೃತ ವೆಬ್ಸೈಟ್ ಲಿಂಕ್: Click Here
ಸೇವಾ ಸಿಂಧು ವೆಬ್‌ಸೈಟ್ ಲಿಂಕ್:
Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: