Land Purchase Scheme-ಸ್ವಂತ ಕೃಷಿ ಜಮೀನು ಖರೀದಿಸಲು ಸರ್ಕಾರದಿಂದ ₹12.50 ಲಕ್ಷ ಸಹಾಯಧನ!ಇಂದೇ ಅರ್ಜಿ ಸಲ್ಲಿಸಿ!

November 2, 2026 | Siddesh
Land Purchase Scheme-ಸ್ವಂತ ಕೃಷಿ ಜಮೀನು ಖರೀದಿಸಲು ಸರ್ಕಾರದಿಂದ ₹12.50 ಲಕ್ಷ ಸಹಾಯಧನ!ಇಂದೇ ಅರ್ಜಿ ಸಲ್ಲಿಸಿ!
Share Now:

2026-2027 ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಭೂ ಖರೀದಿ ಯೋಜನೆಯ ಅಡಿಯಲ್ಲಿ ಮಹಿಳೆಯರ ಹೆಸರಿನಲ್ಲಿ ಕೃಷಿ ಜಮೀನು ಖರೀದಿಸಲು ₹10 ಲಕ್ಷದಿಂದ ₹12.50 ಲಕ್ಷದವರೆಗೆ ಸಹಾಯಧನವನ್ನು ಪಡೆಯಲು ಸುವರ್ಣಾವಕಾಶವನ್ನು ಒದಗಿಸಲಾಗಿದ್ದು, ಸಹಾಯಧನವನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಯ ಭೂರಹಿತ ಕೃಷಿ ಕಾರ್ಮಿಕ ಕುಟುಂಬಗಳ ಆರ್ಥಿಕ ಅಭಿವೃದ್ಧಿಗಾಗಿ ಭೂ ಖರೀದಿ ಯೋಜನೆಯನ್ನು ಜಾರಿಗೊಳಿಸಿದ್ದು, ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಅನೇಕ ಕುಟುಂಬಗಳಿಗೆ ಸ್ವಂತ ಜಮೀನು ಇಲ್ಲದಿರುವುದರಿಂದ ಕೃಷಿ ಚಟುವಟಿಕೆಗಳನ್ನು ಸ್ವತಂತ್ರವಾಗಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: PM Kisan 24th Installment-ಪಿಎಂ ಕಿಸಾನ್ 24ನೇ ಕಂತಿನ ಹಣ ಬಿಡುಗಡೆ! ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯಾ ಚೆಕ್ ಮಾಡಿ!

ಈ ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಗೆ ಕೃಷಿ ಜಮೀನು ಖರೀದಿಸಲು ಸರ್ಕಾರದಿಂದ ಶೇ.50ರಷ್ಟು ಸಹಾಯಧನ ಹಾಗೂ ಉಳಿದ ಶೇ.50ರಷ್ಟು ಮೊತ್ತವನ್ನು ಸಾಲದ ರೂಪದಲ್ಲಿ ಒದಗಿಸಲಾಗುತ್ತದೆ. ಖರೀದಿಸುವ ಜಮೀನನ್ನು ಕುಟುಂಬದ ಮಹಿಳೆಯ ಹೆಸರಿನಲ್ಲಿ ನೋಂದಣಿ ಮಾಡಲಾಗುತ್ತದೆ.

ಈ ಯೋಜನೆಯ ಅಡಿಯಲ್ಲಿ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳನ್ನು ಲಗತ್ತಿಸಬೇಕು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿ ಸಲ್ಲಿಸಲು ಯಾವೆಲ್ಲಾ ಹಂತಗಳನ್ನು ಅನುಸರಿಸಬೇಕು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Ganga Kalyana Scheme-ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಕೊಳವೆಬಾವಿ ಕೊರೆಸಲು ₹4.75 ಲಕ್ಷದವರೆಗೆ ನೆರವು!

ಈ ಯೋಜನೆಯ ಪ್ರಮುಖ ಉದ್ದೇಶವೇನು?

ಕುಟುಂಬದಲ್ಲಿ ಮಹಿಳೆಯರಿಗೆ ಜಮೀನಿನ ಮಾಲೀಕತ್ವ ಕಲ್ಪಿಸುವುದು.

ಪರಿಶಿಷ್ಟ ಜಾತಿಯ ವರ್ಗದ ಕುಟುಂಬಗಳಿಗೆ ಭೂರಹಿತ ಕೃಷಿ ಕಾರ್ಮಿಕ ಸ್ವಂತ ಕೃಷಿ ಜಮೀನು ಒದಗಿಸುವುದು.

ಕೃಷಿ ಚಟುವಟಿಕೆಗಳ ಮೂಲಕ ಕುಟುಂಬದ ಆದಾಯ ಹೆಚ್ಚಿಸಲು ಸಹಾಯಕಾರಿಯಾಗಿದೆ.

ಗ್ರಾಮೀಣ ಭಾಗದ ಬಡ ಕುಟುಂಬಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಪ್ರಮುಖ ಉದ್ದೇಶವಾಗಿದೆ.

ಕೃಷಿ ಭೂಮಿಯಿಲ್ಲದ ಕುಟುಂಬಗಳಿಗೆ ಸ್ವಂತ ಜಮೀನು ಹೊಂದುವ ಅವಕಾಶ ಕಲ್ಪಿಸುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ನವೆಂಬರ್ 2026

ಇದನ್ನೂ ಓದಿ: PU Students Scholorship-SML ಮಹೀಂದ್ರಾ ವಿದ್ಯಾರ್ಥಿವೇತನದಡಿ ಪಿಯುಸಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ!

ಈ ಯೋಜನೆಯ ಅಡಿಯಲ್ಲಿ ಯಾರು ಅರ್ಜಿ ಸಲ್ಲಿಸಬಹುದು?

  • ಅರ್ಜಿದಾರರ ಅಭ್ಯರ್ಥಿಯು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
  • ಅರ್ಜಿದಾರರು ಭೂರಹಿತ ಕೃಷಿ ಕಾರ್ಮಿಕ ಕುಟುಂಬಕ್ಕೆ ಸೇರಿದ ಮಹಿಳೆಯಾಗಿರಬೇಕು.
  • ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಸಾಮಾನ್ಯ ಅರ್ಹತಾ ನಿಯಮಗಳ ಪ್ರಕಾರ ಕನಿಷ್ಠ 15 ವರ್ಷಗಳ ವಾಸದ ದಾಖಲೆ ಹೊಂದಿರಬೇಕು.
  • ಯೋಜನೆಯ ಸಾಮಾನ್ಯ ವಯೋಮಿತಿ 18 ರಿಂದ 60 ವರ್ಷ ಮೀರಿರಬಾರದು.
  • ಕುಟುಂಬದ ವಾರ್ಷಿಕ ಆದಾಯವು ಸರ್ಕಾರ ನಿಗದಿಪಡಿಸಿದ ಮಿತಿಯೊಳಗಿರಬೇಕು.
  • ಕುಟುಂಬದ ಸದಸ್ಯರು ಸರ್ಕಾರಿ ಅಥವಾ ಅರೆ ಸರ್ಕಾರಿ ಉದ್ಯೋಗದಲ್ಲಿರಬಾರದು.
  • ಅರ್ಜಿದಾರರು ಈ ಹಿಂದೆ ನಿಗಮದ ಯೋಜನೆಯಡಿ ಇದೇ ರೀತಿಯ ಸೌಲಭ್ಯ ಪಡೆದಿರಬಾರದು.
  • ಖರೀದಿಸಲು ಉದ್ದೇಶಿಸಿರುವ ಜಮೀನಿನ ಮಾಲೀಕರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬಾರದು.

ಇದನ್ನೂ ಓದಿ: Ganga Kalyana Scheme-3B ವರ್ಗದ ರೈತರಿಗೆ ಗುಡ್ ನ್ಯೂಸ್! ಜೀವಜಲ ಯೋಜನೆಯಡಿ ಕೊಳವೆಬಾವಿ ಕೊರೆಯಲು ಸಹಾಯಧನ!

ಈ ಯೋಜನೆಯ ಅಡಿಯಲ್ಲಿ ಎಷ್ಟು ಸಹಾಯಧನವನ್ನು ಪಡೆಯಬಹುದು?

2026-27ನೇ ಸಾಲಿನ ಪರಿಷ್ಕೃತ ಘಟಕ ವೆಚ್ಚದ ಪ್ರಕಾರ ಜಿಲ್ಲೆಗಳಿಗೆ ಅನುಗುಣವಾಗಿ ಆರ್ಥಿಕ ನೆರವು ನಿಗದಿಪಡಿಸಲಾಗಿದೆ. ಒಟ್ಟು ಘಟಕ ವೆಚ್ಚದಲ್ಲಿ ಶೇ.50ರಷ್ಟು ಸಹಾಯಧನ ಮತ್ತು ಶೇ.50ರಷ್ಟು ಸಾಲ ನೀಡಲಾಗುತ್ತದೆ.

ಜಿಲ್ಲೆಗಳ ವಿವರಒಟ್ಟು ಘಟಕ ವೆಚ್ಚಸಹಾಯಧನ ಶೇ.50%ಸಾಲ ಶೇ.50%
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ.₹25 ಲಕ್ಷ₹12.50 ಲಕ್ಷ₹12.50 ಲಕ್ಷ
ಉಳಿದ 27 ಜಿಲ್ಲೆಗಳು₹20 ಲಕ್ಷ₹10 ಲಕ್ಷ₹10 ಲಕ್ಷ

ಇದನ್ನೂ ಓದಿ: B Com, BA Scholorship-ಬಿಬಿಎ,ಬಿ.ಕಾಂ,ಬಿಎ ವಿದ್ಯಾರ್ಥಿಗಳಿಗೆ 5 ಲಕ್ಷದವರೆಗೆ ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

  • ಅರ್ಜಿದಾರರ ಆಧಾರ್ ಕಾರ್ಡ್.
  • ಪರಿಶಿಷ್ಟ ಜಾತಿ ಪ್ರಮಾಣಪತ್ರ.
  • ಆದಾಯ ಪ್ರಮಾಣಪತ್ರ.
  • ಪಡಿತರ ಚೀಟಿ.
  • ಅರ್ಜಿದಾರರ ಭಾವಚಿತ್ರ.
  • ಬ್ಯಾಂಕ್ ಪಾಸ್‌ಬುಕ್ ಪ್ರತಿ.
  • ನಿವಾಸದ ದಾಖಲೆ.
  • ಭೂರಹಿತ ಕೃಷಿ ಕಾರ್ಮಿಕರೆಂಬ ದೃಢೀಕರಣ ಪತ್ರ.
  • ಖರೀದಿಸಲು ಉದ್ದೇಶಿಸಿರುವ ಜಮೀನಿನ ದಾಖಲೆಗಳು.
  • ಜಮೀನು ಮಾಲೀಕರ ಒಪ್ಪಿಗೆ ಪತ್ರ ಹಾಗೂ ಸಂಬಂಧಿತ ದಾಖಲೆಗಳು.

ಅರ್ಜಿ ಸಲ್ಲಿಸುವ ವಿಧಾನಗಳಾವುವು?

ಅರ್ಹ ಫಲಾನುಭವಿಗಳು ಎರಡು ಮಾರ್ಗಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಲು ಅಗತ್ಯವಿರುತ್ತದೆ.

ಇದನ್ನೂ ಓದಿ: Kayaka Kiran Scheme-ಕಾಯಕಕಿರಣ ಯೋಜನೆಯಡಿ ₹1 ಲಕ್ಷದವರೆಗೆ ನೇರ ಸಾಲ! ಶೇ 50% ಸಹಾಯಧನ!

ganga kalyana scheme

ಇದನ್ನೂ ಓದಿ: Udyogini Yojana-ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ 1.5 ಲಕ್ಷ ಸಹಾಯಧನ!

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕ್ Click Here ಮೇಲೆ ಕ್ಲಿಕ್ ಮಾಡಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ವೆಬ್‌ಸೈಟ್‌ನಲ್ಲಿ 2026-27ನೇ ಸಾಲಿನ ಯೋಜನೆಗಳ ಅರ್ಜಿ ಆಹ್ವಾನ ಮತ್ತು ಭೂ ಖರೀದಿ ಯೋಜನೆಯ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 3: ಅರ್ಜಿ ಸಲ್ಲಿಸುವ ಲಿಂಕ್ ಲಭ್ಯವಿದ್ದರೆ ಅದನ್ನು ಆಯ್ಕೆ ಮಾಡಿಕೊಂಡು ಅಗತ್ಯ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.

ಹಂತ 4: ತದನಂತರ ಆಧಾರ್ ಸಂಖ್ಯೆ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಬ್ಯಾಂಕ್ ವಿವರಗಳು ಮತ್ತು ಇತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.

ಹಂತ 5: ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.

ಹಂತ 6: ಅರ್ಜಿಯಲ್ಲಿರುವ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ. ಅರ್ಜಿ ಸ್ವೀಕೃತಿ ಸಂಖ್ಯೆ ಅಥವಾ ಅರ್ಜಿಯ ಪ್ರತಿಯನ್ನು ಭವಿಷ್ಯದ ಬಳಕೆಗಾಗಿ ಉಳಿಸಿಕೊಳ್ಳಿ.

ಹಂತ 7: ಅರ್ಜಿ ಸಲ್ಲಿಸಿದ ನಂತರ ನಿಗಮದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಾರೆ. ಜಮೀನಿನ ಸ್ಥಳ ಪರಿಶೀಲನೆ ಹಾಗೂ ಬೆಲೆ ನಿಗದಿಪಡಿಸುವ ಪ್ರಕ್ರಿಯೆ ನಡೆಯುತ್ತದೆ. ಜಿಲ್ಲಾ ಸಮಿತಿಯಿಂದ ಅನುಮೋದನೆ ದೊರೆತ ನಂತರವೇ ಮುಂದಿನ ಖರೀದಿ ಮತ್ತು ನೋಂದಣಿ ಪ್ರಕ್ರಿಯೆ ಕೈಗೊಳ್ಳಬೇಕು.

ಅಥವಾ

ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರಗಳ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ಮಾಡಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Muskaan Scholarship-ಪಿಯುಸಿ ವಿದ್ಯಾರ್ಥಿಗಳಿಗೆ 12,000 ವಿದ್ಯಾರ್ಥಿವೇತನ!ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

ಹೆಚ್ಚಿನ ಮಾಹಿತಿಯನ್ನು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:

ಅಧಿಕೃತ ವೆಬ್ಸೈಟ್ ಲಿಂಕ್: Read More
ಸೇವಾ ಸಿಂಧು ವೆಬ್‌ಸೈಟ್ ಲಿಂಕ್: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: