Beat Forester Job-ಅರಣ್ಯ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ! 355 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

November 20, 2026 | Siddesh
Beat Forester Job-ಅರಣ್ಯ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ! 355 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ!
Share Now:

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಸರ್ಕಾರಿ(Forest Department Recruitment 2026) ಉದ್ಯೋಗ ಪಡೆಯಲು ಕಾಯುತ್ತಿರುವ ಯುವಕ-ಯುವತಿಯರಿಗೆ ಇಲಾಖೆಯು ಸಿಹಿ ಸುದ್ದಿ ನೀಡಿದೆ. ಇಲಾಖೆಯಲ್ಲಿ ಖಾಲಿಯಿರುವ 355 ಫಾರೆಸ್ಟರ್ (ಅರಣ್ಯ ರಕ್ಷಕ) ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿಶೇಷವಾಗಿ ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಉತ್ತಮ ಉದ್ಯೋಗಾವಕಾಶವಾಗಿದೆ. ಇಂದಿನ ಲೇಖನದಲ್ಲಿ ಈ ನೇಮಕಾತಿಯಲ್ಲಿ ಎಷ್ಟು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ? ವಿದ್ಯಾರ್ಹತೆ ಏನು? ವಯೋಮಿತಿ ಎಷ್ಟಿರಬೇಕು? ದೈಹಿಕ ಪರೀಕ್ಷೆಯಲ್ಲಿ ಯಾವೆಲ್ಲ ಮಾನದಂಡಗಳಿವೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.

ಇದನ್ನೂ ಓದಿ: e-Swathu Document-ಕೃಷಿ ಜಮೀನಿನ ಕಟ್ಟಡಕ್ಕೆ ಇ-ಸ್ವತ್ತು ಪಡೆಯಲು ಈ ದಾಖಲೆ ಕಡ್ಡಾಯ!

Beat Forester Vacancies-ಒಟ್ಟು 355 ಹುದ್ದೆಗಳ ನೇಮಕಾತಿ:

ಕರ್ನಾಟಕ ಅರಣ್ಯ ಇಲಾಖೆಯ ಬೀಟ್ ಫಾರೆಸ್ಟರ್ ನೇಮಕಾತಿ 2026ರ ಅಡಿಯಲ್ಲಿ ಒಟ್ಟು 355 ಹುದ್ದೆಗಳನ್ನು ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ:

  • ಸಾಮಾನ್ಯ ಹುದ್ದೆಗಳು: 320
  • ಬ್ಯಾಕ್‌ಲಾಗ್ ಹುದ್ದೆಗಳು: 35
  • ಒಟ್ಟು ಹುದ್ದೆಗಳು: 355

Forest Guard Application Important Date-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಅರಣ್ಯ ಇಲಾಖೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಲಾಖೆಯಿಂದ ನಿಗದಿಪಡಿಸಿರುವ ಪ್ರಮುಖ ದಿನಾಂಕಗಳ ವಿವರ ಹೀಗಿದೆ:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ- 23-11-2026
  • ಅರ್ಜಿ ಸಲ್ಲಿಸಲು ಕೊನೆಯ ದಿನ- 22-12-2026
  • ಹಾಲ್ ಟಿಕೆಟ್ ಬಿಡುಗಡೆ- 23-12-2026

ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ.

ಇದನ್ನೂ ಓದಿ: Ration Card KYC-ರೇಶನ್ ಕಾರ್ಡದಾರರಿಗೆ ಮಹತ್ವದ ಸುದ್ದಿ! ಇ-ಕೆವೈಸಿಯಲ್ಲಿ ನೂತನ ಬದಲಾವಣೆ ಜಾರಿ!

How To Apply For Beat Forester Job-ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಅಭ್ಯರ್ಥಿಗಳು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್ ಹಾಗೂ ನೇಮಕಾತಿ ಸಂಬಂಧಿತ ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

  • ಅರಣ್ಯ ಇಲಾಖೆಯ ವೆಬ್‌ಸೈಟ್: aranya.gov.in
  • ನೇಮಕಾತಿ / ಪರೀಕ್ಷಾ ಪೋರ್ಟಲ್: KEA ಅಧಿಕೃತ ವೆಬ್‌ಸೈಟ್
    ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯಲ್ಲಿ ಹುದ್ದೆಗಳ ವರ್ಗವಾರು ಹಂಚಿಕೆ, ಅರ್ಜಿ ಶುಲ್ಕ, ಅಗತ್ಯ ದಾಖಲೆಗಳು, ದೈಹಿಕ ಮಾನದಂಡಗಳು ಮತ್ತು ಆಯ್ಕೆ ವಿಧಾನದ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ.

Beat Forester Selection Procces-ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ದೈಹಿಕ ಪರೀಕ್ಷೆ, ಸಾಮಾನ್ಯ ಸಾಮರ್ಥ್ಯಕ್ಕೆ ಸಂಬಂಧಿಸಿದ ಪರೀಕ್ಷೆ ಹಾಗೂ ಮೆರಿಟ್ ಆಧಾರಿತ ಆಯ್ಕೆ ಪ್ರಕ್ರಿಯೆ ಒಳಗೊಂಡಿರುತ್ತದೆ.

ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಅಂಕಗಳ ಹಂಚಿಕೆ ಈ ಕೆಳಗಿನಂತಿದೆ.

  • ಗಣಿತ: 40 ಅಂಕಗಳು
  • ಸಾಮಾನ್ಯ ಜ್ಞಾನ: 60 ಅಂಕಗಳು
  • ಒಟ್ಟು: 100 ಅಂಕಗಳು

ಇದನ್ನೂ ಓದಿ: BPL Ration Card-ಪ್ರತಿ ತಿಂಗಳು ರೇಶನ್ ಪಡೆಯಲು ನ್ಯಾಯಬೆಲೆ ಅಂಗಡಿ ಆಯ್ಕೆಗೆ ನೂತನ ವ್ಯವಸ್ಥೆ ಜಾರಿ!

ಅಂತಿಮ ಮೆರಿಟ್:

  • ಪಿಯುಸಿ ಅಂಕಗಳು: ಶೇ.50
  • ಅಪ್ಟಿಟ್ಯೂಡ್ ಪರೀಕ್ಷೆ: ಶೇ.50

ಅಂದರೆ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹಾಗೂ ಅಪ್ಟಿಟ್ಯೂಡ್ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸುವ ಮಾಹಿತಿ ನೀಡಲಾಗಿದೆ.

ದೈಹಿಕ ಪರೀಕ್ಷೆಯ ಮಾನದಂಡಗಳು ಏನು?

ಅರಣ್ಯ ರಕ್ಷಕ ಹುದ್ದೆಯು ದೈಹಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಉದ್ಯೋಗವಾಗಿರುವುದರಿಂದ ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯವಾಗಿದೆ.

  • ಪುರುಷ ಅಭ್ಯರ್ಥಿಗಳು: 1600 ಮೀಟರ್ ಓಟವನ್ನು 7 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು.
  • ಮಹಿಳೆಯರು / ಮಾಜಿ ಸೈನಿಕರು: 1000 ಮೀಟರ್ ಓಟವನ್ನು 6 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು.
    ಇದರ ಜೊತೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಇತರೆ ನಿಗದಿತ ದೈಹಿಕ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.

ಆದ್ದರಿಂದ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈಗಿನಿಂದಲೇ ಓಟ ಮತ್ತು ದೈಹಿಕ ಸಾಮರ್ಥ್ಯದ ಅಭ್ಯಾಸ ಆರಂಭಿಸುವುದು ಉತ್ತಮ.

ಇದನ್ನೂ ಓದಿ: Agriculture Subsidy Scheme-ಕೃಷಿ ಇಲಾಖೆಯಿಂದ ವಿವಿಧ ಯಂತ್ರಗಳ ಖರೀದಿಗೆ ಶೇ 50% ಸಬ್ಸಿಡಿ!ಇಲ್ಲಿದೆ ಸಂಪೂರ್ಣ ಮಾಹಿತಿ!

Beat Forester Age Limit-ವಯೋಮಿತಿ ಎಷ್ಟಿರಬೇಕು?

ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ ವರ್ಗವಾರು ಈ ಕೆಳಗಿನಂತಿದೆ.

  • ಸಾಮಾನ್ಯ ವರ್ಗ:- 32 ವರ್ಷ
  • 2A, 2B, 3A, 3B 35 ವರ್ಷ:- 35 ವರ್ಷ
  • SC/ST ಮತ್ತು ಪ್ರವರ್ಗ-1:- 37 ವರ್ಷ

ಇದನ್ನೂ ಓದಿ: Janaushadhi Kendra-ಜನೌಷಧಿ ಕೇಂದ್ರ ತೆರೆಯಲು ಅರ್ಜಿ ಆಹ್ವಾನ! ಸ್ವಂತ ಉದ್ಯಮ ಆರಂಭಿಸಲು ಸುವರ್ಣಾವಕಾಶ!

Beat Forester Education Qualification-ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು:

ಅರ್ಜಿದಾರ ಅಭ್ಯರ್ಥಿಗಳು ದ್ವಿತೀಯ ಪಿಯುಸಿ (12ನೇ ತರಗತಿ) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

  • Forest Department Helpline-ಅರಣ್ಯ ಇಲಾಖೆಯ ಸಹಾಯವಾಣಿ-8277781926
  • Forest Department Website-ಅಧಿಕೃತ ವೆಬ್ಸೈಟ್-Click here
  • Beat Forester Notification-ಅಧಿಕೃತ ಅಧಿಸೂಚನೆ-Download Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: