BPL Ration Card-ಪ್ರತಿ ತಿಂಗಳು ರೇಶನ್ ಪಡೆಯಲು ನ್ಯಾಯಬೆಲೆ ಅಂಗಡಿ ಆಯ್ಕೆಗೆ ನೂತನ ವ್ಯವಸ್ಥೆ ಜಾರಿ!

November 18, 2026 | Siddesh
BPL Ration Card-ಪ್ರತಿ ತಿಂಗಳು ರೇಶನ್ ಪಡೆಯಲು ನ್ಯಾಯಬೆಲೆ ಅಂಗಡಿ ಆಯ್ಕೆಗೆ ನೂತನ ವ್ಯವಸ್ಥೆ ಜಾರಿ!
Share Now:

ನಮ್ಮ ರಾಜ್ಯದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪ್ರತಿ ತಿಂಗಳು ರೇಶನ್ ಕಾರ್ಡ ಅನ್ನು ಹೊಂದಿರುವ ಗ್ರಾಹಕರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ರೇಶನ್ ಅನ್ನು ವಿತರಣೆ ಮಾಡಲಾಗುತ್ತದೆ ಪ್ರಸ್ತುತ ಈ ವ್ಯವಸ್ಥೆಯಲ್ಲಿ ನೂತನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಏನಿದು ನೂತನ ವ್ಯವಸ್ಥೆ? ಇದರಿಂದ ರೇಶನ್ ಕಾರ್ಡದಾರರಿಗೆ ಯಾವೆಲ್ಲ ಪ್ರಯೋಜನಗಳಿವೆ? ಎನ್ನುವದರ ಬಗ್ಗೆ ಇಲ್ಲಿ ತಿಳಿಯೋಣ ಕಾರ್ಡದಾರರು ಈಗಾಗಲೇ ಪ್ರತಿ ತಿಂಗಳು ರೇಶನ್ ಅನ್ನು ನಿಗದಿಪಡಿಸಿರುವ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ರೇಶನ್/ಪಡಿತರವನ್ನು ಪಡೆದುಕೊಳ್ಳಬೇಕಾಗಿತ್ತು ಇಲ್ಲಿ ಕಳಪೆ ಧಾನ್ಯ ಸಿಕ್ಕರು ಹಾಗೇ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಸರಿಯಾಗಿ ಸ್ಪಂದಿಸದೇ ಇದ್ದರು ಸಹ ಇಲ್ಲಿಯೇ ರೇಶನ್ ಪಡೆಯಬೇಕಾಗಿತ್ತು.

ಇದನ್ನೂ ಓದಿ: Agriculture Subsidy Scheme-ಕೃಷಿ ಇಲಾಖೆಯಿಂದ ವಿವಿಧ ಯಂತ್ರಗಳ ಖರೀದಿಗೆ ಶೇ 50% ಸಬ್ಸಿಡಿ!ಇಲ್ಲಿದೆ ಸಂಪೂರ್ಣ ಮಾಹಿತಿ!

ಅದರೆ ಈಗ ಈ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಲು ಕೇಂದ್ರ ಸರಕಾರವು ಇನ್ನು ಮುಂದೆ ರೇಶನ್ ವಿತರಣೆ ಸಮಯದಲ್ಲಿ ಕಳಪೆ ಧಾನ್ಯ ಸಿಕ್ಕರೆ ಅಥವಾ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಸರಿಯಾಗಿ ಸ್ಪಂದನೆ ಮಾಡದಿದ್ದಲ್ಲಿ ನಾಗರಿಕರು ತಕ್ಷಣವೇ ಮುಂದಿನ ತಿಂಗಳಿನಿಂದ ರೇಶನ್ ಅಂಗಡಿ ಅನ್ನು ಬದಲಾಯಿಸುವ ಅವಕಾಶವನ್ನು ಕಾರ್ಡದಾರಿಗೆ ನೀಡಲಾಗಿದೆ.

Ration Card-ನ್ಯಾಯಬೆಲೆ ಅಂಗಡಿಯನ್ನು ಬದಲಾಯಿಸುವುದು ಹೇಗೆ?

ಈ ಹಿಂದೆ ರೇಶನ್ ಕಾರ್ಡನಲ್ಲಿ ನಮೂದಿಸಿರುವ ನ್ಯಾಯಬೆಲೆ ಅಂಗಡಿಯಲ್ಲೇ ಪ್ರತಿ ತಿಂಗಳು ರೇಶನ್ ಅನ್ನು ಪಡೆಯಬೇಕಾಗಿತ್ತು ಅದರೆ ಈಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ "ಒನ್ ನೇಷನ್ ಒನ್ ರೇಷನ್ ಕಾರ್ಡ" ಯೋಜನೆ ಅಡಿಯಲ್ಲಿ ಕಾರ್ಡದಾರರು ನ್ಯಾಯಬೆಲೆ ಅಂಗಡಿಯನ್ನು ಬದಲಾವಣೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

Step-1: ಪ್ರಥಮ ಹಂತದಲ್ಲಿ ಈ "Download Now" ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ "Mera Ration App" ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ: Janaushadhi Kendra-ಜನೌಷಧಿ ಕೇಂದ್ರ ತೆರೆಯಲು ಅರ್ಜಿ ಆಹ್ವಾನ! ಸ್ವಂತ ಉದ್ಯಮ ಆರಂಭಿಸಲು ಸುವರ್ಣಾವಕಾಶ!

Step-2: ಬಳಿಕ ಇಲ್ಲಿ ಈ ಪೇಜ್ ನಲ್ಲಿ ಭಾಷೆಯನ್ನು ಅಯ್ಕೆ ಮಾಡಿಕೊಂಡು ನಿಮ್ಮ ರೇಶನ್ ಕಾರ್ಡ ವಿವರವನ್ನು ಹಾಕಿ ಲಾಗಿನ್ ಅಗಬೇಕು.

Step-3: ಇದಾದ ನಂತರ ಲಾಗಿನ್ ಅಗಿ "Locate Nearest FPS: Find nearby Fair Price Shops (FPS)" ಮೂಲಕ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯ ವಿಳಾಸವನ್ನು ಭೇಟಿ ಮಾಡಿ ರೇಶನ್ ಅನ್ನು ಪಡೆಯಬಹುದು.

ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಚೆಕ್ ಮಾಡಬಹುದು ಅಥವಾ ಈ ಲಿಂಕ್ Click Here ಮೇಲೆ ಕ್ಲಿಕ್ ಮಾಡಿ UMANG ಪೋರ್ಟನ್ ಭೇಟಿ ಮಾಡಿ ಚೆಕ್ ಮಾಡಬಹುದು.

ಇದನ್ನೂ ಓದಿ: Anganwadi Worker-ಅಂಗನವಾಡಿಯಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದು ಹೇಗೆ! ಇಲ್ಲಿದೆ ಸಂಪೂರ್ಣ ಮಾಹಿತಿ!

Ration Distribution New Rules Benefits-ನ್ಯಾಯಬೆಲೆ ಅಂಗಡಿ ಆಯ್ಕೆಯಿಂದ ನಾಗರಿಕರಿಗೆ ಹಲವು ಪ್ರಯೋಜನಗಳು:

ಇನ್ನು ಮುಂದೆ ಕಳದೆ ಧಾನ್ಯ ಕಡಿಮೆ ತೂಕ ಅಥವಾ ಡೀಲರ್ ಕಿರಿಕಿರಿ ನೀಡಿದರೆ ತಕ್ಷಣ ನ್ಯಾಯಬೆಲೆ ಅಂಗಡಿ ಬದಲಾಯಿಸಬಹುದು.

ಉದ್ಯೋಗ ಅರಸಿ ಅಥವಾ ಇನ್ನಿತರೆ ಕೆಲಸದ ನಿಮಿತ್ತ ದೇಶದ ಬೇರೆ ಯಾವುದೇ ಭಾಗಕ್ಕೆ ನಾಗರಿಕರು ಪ್ರಯಾಣ ಮಾಡಿದ್ದರೆ ಅದೇ ಭಾಗದಲ್ಲಿ ಇರುವ ನ್ಯಾಯಬೆಲೆ ಅಂಗಡಿ ಮೂಲಕ ಪ್ರತಿ ತಿಂಗಳು ರೇಶನ್ ಪಡೆಯಬಹುದು.

ಒಂದೇ ಕುಟುಂಬದ ಪಡಿತರ/ರೇಶನ್ ಅನ್ನು ಎರಡು ಭಾಗ ಮಾಡಿಯು ಸಹ ಪಡೆಯಲು ಅವಕಾಶ ನೀಡಲಾಗಿದೆ. ಹಳ್ಳಿಯಲ್ಲಿ ಇರುವ ಕುಟುಂಬದವರು ನಗರ ಅಥವಾ ಇತರೆ ಭಾಗಕ್ಕೆ ಹೋದ ಅದೇ ಕುಟುಂಬದ ಸದಸ್ಯರು ಒಂದು ಭಾಗವನ್ನು ಪಡೆಯಬಹುದು.

ಇದನ್ನೂ ಓದಿ: Bangalore Krishi Mela-2026: ಇಂದಿನಿಂದ 3 ದಿನ ಜಿ.ಕೆ.ವಿ.ಕೆ.ಯಲ್ಲಿ ಕೃಷಿಮೇಳ!

ಪ್ರತಿ ತಿಂಗಳು ರೇಶನ್ ಅನ್ನು ನ್ಯಾಯಬೆಲೆ ಅಂಗಡಿಯ ಮೂಲಕ ನೀಡುವ ಡೀಲರ್ ಗಳಿಗೆ ಸರ್ಕಾರದಿಂದ ಕಮಿಷನ್ ಅನ್ನು ನೀಡಲಾಗುತ್ತದೆ ಇನ್ನು ಮುಂದೆ ಈ ವ್ಯವಸ್ಥೆ ಜಾರಿಯಿಂದ ಡೀಲರ್ ಗಳು ಗುಣಮಟ್ಟದ ಸೇವೆಯನ್ನು ನಾಗರಿಕರಿಗೆ ನೀಡಲು ಸಹಕಾರಿಯಾಗಲಿದೆ ಎಂದು ಇಲಾಕೆಯ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Ration Card e-KYC Last Date-ರೇಶನ್ ಕಾರ್ಡ ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ:

ಈಗಾಗಲೇ ರಾಜ್ಯಾದ್ಯಂತ ರೇಶನ್ ಕಾರ್ಡನಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿಯನ್ನು ನ್ಯಾಯಬೆಲೆ ಅಂಗಡಿಯ ಮೂಲಕ ಮಾಡಲಾಗುತ್ತಿದ್ದು ಇನ್ನು ದೊಡ್ಡ ಸಂಖ್ಯೆಯ ಕಾರ್ಡದಾರ ಇ-ಕೆವೈಸಿ ಬಾಕಿ ಉಳಿದಿರುವುದರಿಂದ 30 ನವೆಂಬರ್ 2026 ರ ವರೆಗೆ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: