Life Insurance-₹456 ಇದ್ದರೆ ಸಾಕು ಕುಟುಂಬಕ್ಕೆ ₹4 ಲಕ್ಷದ ಭದ್ರತೆ! ಈ ವಿಮಾ ಯೋಜನೆಯ ಬಗ್ಗೆ ತಪ್ಪದೇ ತಿಳಿಯಿರಿ!

May 18, 2026 | Siddesh
Life Insurance-₹456 ಇದ್ದರೆ ಸಾಕು ಕುಟುಂಬಕ್ಕೆ ₹4 ಲಕ್ಷದ ಭದ್ರತೆ! ಈ ವಿಮಾ ಯೋಜನೆಯ ಬಗ್ಗೆ ತಪ್ಪದೇ ತಿಳಿಯಿರಿ!
Share Now:

ಇಂದಿನ ಲೇಖನದಲ್ಲಿ ಕೇಂದ್ರ ಸರ್ಕಾರದ ಎರಡು ಪ್ರಮುಖ ವಿಮಾ ಯೋಜನೆಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು ಈಗಾಗಲೇ ಅನೇಕ ನಾಗರಿಕರು ಈ ಯೋಜನೆಯ ಬಗ್ಗೆ ತಿಳಿದಿದ್ದು ಹಲವು ಕುಟುಂಬಗಳು ಯೋಜನೆಯ(Best Life Insurance Plans) ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ ಅದರೆ ಇನ್ನು ಅನೇಕ ಕುಟುಂಬಗಳಿಗೆ ಈ ಯೋಜನೆಯ ಬಗ್ಗೆ ಮಾಹಿತಿ ಕೊರತೆ ಇರುವುದರಿಂದ ಇಂದಿನ ಲೇಖನದಲ್ಲಿ ಎರಡು ಯೋಜನೆಯ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇಂದಿನ ಕಾಲದಲ್ಲಿ ಅನೇಕ ಕುಟುಂಬಗಳು ಮನೆಯಲ್ಲಿನ ಒಬ್ಬರ ಆದಾಯದ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿವೆ. ಕುಟುಂಬದ ಮುಖ್ಯ(Insurance) ಆಧಾರವಾಗಿರುವ ತಂದೆ, ತಾಯಿ ಅಥವಾ ಮಕ್ಕಳಿಗೆ ಏನಾದರೂ ಅನಾಹುತ ಸಂಭವಿಸಿದರೆ, ಅದು ಕೇವಲ ಒಂದು ವ್ಯಕ್ತಿಯ ನಷ್ಟವಾಗುವುದಿಲ್ಲ ಇಡೀ ಕುಟುಂಬದ ಬದುಕಿನ ದಿಕ್ಕೇ ಬದಲಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Free Hostel Admission-2026: ಉಚಿತ ಹಾಸ್ಟೇಲ್ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

ಅಪಘಾತ, ಅನಾರೋಗ್ಯ ಅಥವಾ ಅಕಾಲಿಕ ಮರಣ ಯಾವಾಗ ಸಂಭವಿಸಬಹುದು ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಆದರೆ ಇಂತಹ ಕಠಿಣ ಸಂದರ್ಭಗಳಲ್ಲಿ ಕುಟುಂಬಕ್ಕೆ ಕನಿಷ್ಠ ಆರ್ಥಿಕ ನೆರವು ದೊರಕಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ(Insurance Schemes) ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಎರಡು ಪ್ರಮುಖ ವಿಮಾ ಯೋಜನೆಗಳನ್ನು ಜಾರಿಗೆ ತಂದಿದೆ. ಆಶ್ಚರ್ಯವೆಂದರೆ, ವರ್ಷಕ್ಕೆ ಕೇವಲ ₹456 ಪಾವತಿಸಿದರೆ ₹4 ಲಕ್ಷದವರೆಗೆ ಭದ್ರತೆ ಪಡೆಯಬಹುದಾಗಿದೆ.

Best Life Insurance Schemes-ಎರಡು ಮಹತ್ವದ ಸಾಮಾಜಿಕ ಭದ್ರತಾ ಯೋಜನೆಗಳು

1. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ (PMSBY)

ಈ ಯೋಜನೆಯ ವಾರ್ಷಿಕ ಪ್ರೀಮಿಯಂ ಕೇವಲ ₹20 ಮಾತ್ರ. ಅಪಘಾತದಿಂದ ಮರಣ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದರೆ ₹2 ಲಕ್ಷದವರೆಗೆ ವಿಮಾ ರಕ್ಷಣೆ ದೊರೆಯುತ್ತದೆ. ಒಂದು ದಿನದ ಚಹಾ-ತಿಂಡಿ ವೆಚ್ಚಕ್ಕಿಂತಲೂ ಕಡಿಮೆ ಹಣದಲ್ಲಿ ಒಂದು ವರ್ಷದ ಭದ್ರತೆ ಸಿಗುವುದು ಈ ಯೋಜನೆಯ ವಿಶೇಷತೆ.

2. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನಾ (PMJJBY)

ಈ ಯೋಜನೆಗೆ ವರ್ಷಕ್ಕೆ ₹436 ಪಾವತಿಸಬೇಕು. ಯಾವುದೇ ಕಾರಣದಿಂದ ವಿಮಾದಾರರ ಮರಣ ಸಂಭವಿಸಿದರೆ ಕುಟುಂಬಕ್ಕೆ ₹2 ಲಕ್ಷ ಪರಿಹಾರ ದೊರೆಯುತ್ತದೆ. ಅನೇಕರು ಮೊಬೈಲ್ ರೀಚಾರ್ಜ್, ಇಂಟರ್ನೆಟ್ ಪ್ಯಾಕ್‌ಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಕುಟುಂಬದ ಭವಿಷ್ಯವನ್ನು ರಕ್ಷಿಸುವ ಈ ರೀತಿಯ ಯೋಜನೆಗಳ ಕಡೆ ಗಮನ ಹರಿಸದಿರುವುದು ವಿಷಾದಕರ ಸಂಗತಿ.

ಇದನ್ನೂ ಓದಿ: Property Registration-ಬಿ ಖಾತಾದಾರರಿಗೆ ಎ ಖಾತಾ ವಿತರಣೆಗೆ ರಾಜ್ಯ ಸರ್ಕಾರದಿಂದ ಅಭಿಯಾನ!

Eligibility Criteria-ಯಾರಿಗೆ ಅನ್ವಯ?

ಈ ಎರಡು ಯೋಜನೆಗಳ ವಿಶೇಷತೆ ಎಂದರೆ ಯಾವುದೇ ಜಾತಿ, ಧರ್ಮ, ಆದಾಯ ಮಿತಿ ಅಥವಾ BPL/APL ಆಧಾರದ ನಿರ್ಬಂಧ ಇಲ್ಲ. ಸರ್ಕಾರಿ ನೌಕರರು, ಖಾಸಗಿ ಉದ್ಯೋಗಿಗಳು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಈ ಯೋಜನೆಗಳಿಗೆ ಸೇರಬಹುದು. ಅಪಾಯ ಯಾರಿಗೆ, ಯಾವಾಗ ಎದುರಾಗುತ್ತದೆ ಎಂಬುದನ್ನು ಯಾರೂ ಹೇಳಲು ಸಾಧ್ಯವಿಲ್ಲ.

ಈಗ ಜನರು ಮಾಡಬೇಕಾದದ್ದು ಏನು?

ಪ್ರತಿ ವರ್ಷ ಸಾಮಾನ್ಯವಾಗಿ ಮೇ 25ರಿಂದ ಜೂನ್ 1ರೊಳಗೆ ಬ್ಯಾಂಕ್ ಖಾತೆಯಿಂದ ಪ್ರೀಮಿಯಂ ಮೊತ್ತ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ. ಆದರೆ ಖಾತೆಯಲ್ಲಿ ಅಗತ್ಯ ಹಣ ಇಲ್ಲದಿದ್ದರೆ ಯೋಜನೆ ನವೀಕರಣವಾಗದೇ ಸ್ವಯಂ ರದ್ದಾಗುತ್ತದೆ. ನಂತರ ಯಾವುದೇ ದುರ್ಘಟನೆ ಸಂಭವಿಸಿದರೂ ವಿಮಾ ಸೌಲಭ್ಯ ದೊರೆಯುವುದಿಲ್ಲ.

ಆದ್ದರಿಂದ ಜನರು ಈ ವಿಷಯಗಳಲ್ಲಿ ಎಚ್ಚರಿಕೆಯಿಂದಿರಬೇಕು:

  • ಉಳಿತಾಯ ಖಾತೆಯಲ್ಲಿ ಕನಿಷ್ಠ ₹456 ಇರುವುದನ್ನು ಖಚಿತಪಡಿಸಿಕೊಳ್ಳಬೇಕು
  • ಈಗಾಗಲೇ ಹಣ ಕಡಿತಗೊಂಡಿದೆಯೇ ಎಂದು ಪರಿಶೀಲಿಸಬೇಕು
  • ಕಡಿತವಾಗದಿದ್ದರೆ ತಕ್ಷಣ ಬ್ಯಾಂಕ್ ಅಥವಾ ಅಂಚೆ ಕಚೇರಿಯನ್ನು ಸಂಪರ್ಕಿಸಬೇಕು
  • ಕುಟುಂಬದ ಎಲ್ಲ ಸದಸ್ಯರಿಗೆ ಯೋಜನೆಗಳ ಮಾಹಿತಿ ನೀಡಬೇಕು

ಈ ಯೋಜನೆಗಳು ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಅಂಚೆ ಕಚೇರಿಗಳ ಮೂಲಕ ಲಭ್ಯವಿವೆ.

ಇದನ್ನೂ ಓದಿ: Vasati Yojane-ವಸತಿ ಯೋಜನೆ-2026: ಸ್ವಂತ ಮನೆ ಕನಸು ನನಸು ಮಾಡಿಕೊಳ್ಳಲು ಸುವರ್ಣಾವಕಾಶ; ಇಂದೇ ಅರ್ಜಿ ಸಲ್ಲಿಸಿ!

ಯುವಜನತೆಯಲ್ಲಿ ಅರಿವಿನ ಕೊರತೆ

ಇತ್ತೀಚೆಗೆ 21 ವರ್ಷ ಮೇಲ್ಪಟ್ಟ 40 ಪದವಿ ವಿದ್ಯಾರ್ಥಿಗಳ ಗುಂಪಿನಲ್ಲಿ ನಡೆಸಿದ ಅನೌಪಚಾರಿಕ ಪ್ರಶ್ನೋತ್ತರದಲ್ಲಿ ಕೇವಲ 10 ಮಂದಿಗೆ ಮಾತ್ರ ಈ ಯೋಜನೆಗಳ ಬಗ್ಗೆ ಮಾಹಿತಿ ಇರುವುದು ಬೆಳಕಿಗೆ ಬಂದಿದೆ. ಇಂದಿನ ಯುವಜನತೆಗೆ ಹೊಸ ಮೊಬೈಲ್ ಆ್ಯಪ್‌ಗಳು, ಸಾಮಾಜಿಕ ಜಾಲತಾಣಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ಸಾಕಷ್ಟು ತಿಳಿದಿದೆ. ಆದರೆ ತಮ್ಮ ಕುಟುಂಬದ ಭದ್ರತೆಗೆ ಸಂಬಂಧಿಸಿದ ಮೂಲಭೂತ ಸಾಮಾಜಿಕ ಭದ್ರತಾ ಯೋಜನೆಗಳ ಅರಿವು ಕಡಿಮೆಯಿರುವುದು ಕಳವಳಕಾರಿ ಬೆಳವಣಿಗೆ.

ಕಾಲೇಜು ಪ್ರವೇಶದ ಸಮಯದಲ್ಲಿ ಬ್ಯಾಂಕ್ ಖಾತೆ, ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯಗೊಳಿಸುವಂತೆ, ಈ ಎರಡು ವಿಮಾ ಯೋಜನೆಗಳ ಜಾಗೃತಿ ಮತ್ತು ಚಂದಾದಾರಿಕೆಯನ್ನು ಕೂಡ ಉತ್ತೇಜಿಸಿದರೆ, ಅದು ಯುವಕರಿಗೆ ಮೊದಲ ಆರ್ಥಿಕ ಸಾಕ್ಷರತಾ ಪಾಠವಾಗಬಹುದು.

ಇದನ್ನೂ ಓದಿ: Ration Card News-ರೇಶನ್ ಕಾರ್ಡ್‌ದಾರರಿಗೆ ಸಿಹಿ ಸುದ್ದಿ: ಅಕ್ಕಿಯೊಂದಿಗೆ ಈಗ ರಾಗಿ ಮತ್ತು ಜೋಳ ವಿತರಣೆ!

ಒಂದು ಸಣ್ಣ ನಿರ್ಧಾರ… ದೊಡ್ಡ ರಕ್ಷಣೆ

ವರ್ಷಕ್ಕೆ ₹456 ಎನ್ನುವುದು ಬಹುತೇಕ ಜನರಿಗೆ ದೊಡ್ಡ ಮೊತ್ತವಲ್ಲ. ಆದರೆ ಅದೇ ಸಣ್ಣ ಮೊತ್ತ, ಅನಿರೀಕ್ಷಿತ ಸಂದರ್ಭಗಳಲ್ಲಿ ಒಂದು ಕುಟುಂಬಕ್ಕೆ ದೊಡ್ಡ ಆಧಾರವಾಗಬಹುದು. ವಿಮೆ ಎಂದರೆ ಕೇವಲ ಖರ್ಚು ಅಲ್ಲ — ಅದು ಕುಟುಂಬದ ಭದ್ರತೆಗೆ ತೆಗೆದುಕೊಳ್ಳುವ ಜವಾಬ್ದಾರಿಯ ನಿರ್ಧಾರ.

ಒಂದು ಸಣ್ಣ ಜಾಗೃತಿ, ಒಂದು ಸಣ್ಣ ಮೊತ್ತ ಮತ್ತು ಒಂದು ಸರಿಯಾದ ನಿರ್ಧಾರ ನಾಳೆ ಒಂದು ಕುಟುಂಬದ ಬದುಕನ್ನು ಉಳಿಸಬಹುದು.

ಇದನ್ನೂ ಓದಿ: Free Sheep Farming Training-ಉಚಿತ ಕುರಿ ಸಾಕಾಣಿಕೆ ಮತ್ತು ಹೈನುಗಾರಿಕೆ ತರಬೇತಿ: ನಿರುದ್ಯೋಗಿ ಯುವಜನತೆಗೆ ಸುವರ್ಣಾವಕಾಶ!

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: