Scholarship Application-ಕಾರ್ಮಿಕರ ಮಕ್ಕಳಿಗೆ 25,000/- ವಿದ್ಯಾರ್ಥಿವೇತನ! ಆನ್‍ಲೈನ್ ಅರ್ಜಿ ಆಹ್ವಾನ!

July 29, 2026 | Siddesh
Scholarship Application-ಕಾರ್ಮಿಕರ ಮಕ್ಕಳಿಗೆ 25,000/- ವಿದ್ಯಾರ್ಥಿವೇತನ! ಆನ್‍ಲೈನ್ ಅರ್ಜಿ ಆಹ್ವಾನ!
Share Now:

ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಮಿಕ ಕಲ್ಯಾಣ ಯೋಜನೆಯಡಿ 2026-27ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ, ಬೀಡಿ, ಸಿನೆಮಾ ಹಾಗೂ ಸುಣ್ಣದ ಕಲ್ಲು (ಲೈಮ್‍ಸ್ಟೋನ್) ಮತ್ತು ಡೊಲಮೈಟ್ ಗಣಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಧನಸಹಾಯ/ವಿದ್ಯಾರ್ಥಿವೇತನ(Scholaship Online Application) ನೀಡಲು ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಬಾರಿಯ ವಿದ್ಯಾರ್ಥಿವೇತನ ಯೋಜನೆಯು 1ನೇ ತರಗತಿಯ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವೃತ್ತಿಪರ (Professional) ಪದವಿ ಕೋರ್ಸ್ ಹಾಗೂ ಉನ್ನತ ಸಂಶೋಧನಾ ಹಂತದವರೆಗಿನ ವಿದ್ಯಾರ್ಥಿಗಳಿಗೆ ವಿಸ್ತರಿಸಿದೆ. ಸಚಿವಾಲಯವು ರಾಷ್ಟ್ರೀಯ ವಿದ್ಯಾರ್ಥಿವೇತನ(Scholaship) ಪೋರ್ಟಲ್ (NSP) ಮೂಲಕ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಿದ್ದು, ವಿದ್ಯಾರ್ಥಿಗಳು ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ನೈಜ ಫಲಾನುಭವಿಗಳಾಗಿ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಹಂತಕ್ಕೆ ಅನುಗುಣವಾಗಿ ವಾರ್ಷಿಕ ಸಾವಿರ ರೂಪಾಯಿಗಳಿಂದ ಹಿಡಿದು ಗರಿಷ್ಠ 25,000 ರೂಪಾಯಿಗಳವರೆಗೆ ಧನಸಹಾಯ ಪಡೆಯಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: Coconut Farm-ತೆಂಗು ಬೆಳೆಗಾರರ ಗಮನಕ್ಕೆ: ಹೊಸ ತೋಟ ಸ್ಥಾಪನೆಗೆ ₹56,000 ವರೆಗೆ ಸಹಾಯಧನ!

ಇಂದಿನ ಲೇಖನದಲ್ಲಿ ವಿದ್ಯಾರ್ಥಿಗಳು ಈ ಯೋಜನೆಯಡಿ ವಿದ್ಯಾರ್ಥಿವೇತನವನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದಿಯಾ? ಅರ್ಜಿ ಸಲ್ಲಿಸಿದ ಬಳಿಕ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಪಾವತಿ ಮಾಡಲು ಅನುಸರಿಸುವ ವಿಧಾನದ ವಿವರ ಹಾಗೂ ಅರ್ಜಿ ಸಲ್ಲಿಸಲು ಅವಶ್ಯವಿರುವ ಅಗತ್ಯ ದಾಖಲೆಗಳು ಯಾವುವು? ವಿದ್ಯಾರ್ಥಿವೇತನದ ಮೊತ್ತದ ಮಾಹಿತಿ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Scholaship Online Application-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಆಸಕ್ತ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅಧಿಕೃತ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (Link- scholarships.gov.in) ಮೂಲಕವೇ ಆನ್‍ಲೈನ್ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಈ ಬಾರಿ ಒನ್ ಟೈಮ್ ರಿಜಿಸ್ಟ್ರೇಷನ್ (OTR) ಕಡ್ಡಾಯಗೊಳಿಸಲಾಗಿದ್ದು, ಇದಕ್ಕೆ ವಿದ್ಯಾರ್ಥಿಯ ಸಕ್ರಿಯ ಆಧಾರ್ ಸಂಖ್ಯೆ ಅಗತ್ಯವಿರುತ್ತದೆ. ಒಮ್ಮೆ ನೋಂದಾಯಿಸಿದ ನಂತರ ಸಿಸ್ಟಮ್‍ನಲ್ಲಿ ಅಭ್ಯರ್ಥಿಯ ವಿವರಗಳು ಹಾಗೂ ಶುಲ್ಕದ ವಿವರಗಳು ಸ್ವಯಂಚಾಲಿತವಾಗಿ ಆಟೋ-ಫಿಲ್ (Auto-populate) ಆಗುವುದರಿಂದ ಅರ್ಜಿ ಪ್ರಕ್ರಿಯೆ ಸರಳವಾಗಲಿದೆ. ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Kotak Kanya Scholarship-ಪದವೀದರ ವಿದ್ಯಾರ್ಥಿಗಳಿಗೆ 1.5 ಲಕ್ಷ ವಿದ್ಯಾರ್ಥಿವೇತನ!ಇಲ್ಲಿದೆ ಸಂಪೂರ್ಣ ಮಾಹಿತಿ!

Scholaship Payment Method-ವಿದ್ಯಾರ್ಥಿವೇತನ ಪಾವತಿ ವಿಧಾನ:

ವಿದ್ಯಾರ್ಥಿವೇತನದ ಮೊತ್ತವನ್ನು ನೇರವಾಗಿ ಅರ್ಹ ವಿದ್ಯಾರ್ಥಿಗಳ ಖಾತೆಗೆ ತಲುಪಿಸಲು 'ಆಧಾರ್ ಪೇಮೆಂಟ್ ಬ್ರಿಡ್ಜ್' (APB) ವ್ಯವಸ್ಥೆಯನ್ನು ಬಳಸಲಾಗುತ್ತದೆ. ಆದ್ದರಿಂದ ಅರ್ಜಿದಾರರು ಯಾವುದೇ ರಾಷ್ಟ್ರೀಕೃತ, ನಿಗದಿತ, ಸಹಕಾರಿ, ಗ್ರಾಮೀಣ ಅಥವಾ ಖಾಸಗಿ ಬ್ಯಾಂಕ್‍ನಲ್ಲಿ ತಮ್ಮ ಹೆಸರಿನಲ್ಲಿಯೇ ಸ್ವಂತ ಉಳಿತಾಯ ಖಾತೆ ಹೊಂದಿರಬೇಕು. ಈ ಬ್ಯಾಂಕ್ ಖಾತೆಯು ಕಡ್ಡಾಯವಾಗಿ ಆಧಾರ್ ಲಿಂಕ್ ಆಗಿರಬೇಕು ಹಾಗೂ NEFT ಮತ್ತು CBS ಸೌಲಭ್ಯವನ್ನು ಹೊಂದಿರಬೇಕಾಗುತ್ತದೆ.

Required Documents-ಅಗತ್ಯ ದಾಖಲೆಗಳು:

ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಕುಟುಂಬದ ಅಧಿಕೃತ ಆದಾಯ ಪ್ರಮಾಣಪತ್ರವನ್ನು ಅಪ್‍ಲೋಡ್ ಮಾಡಬೇಕು. ಇದರೊಂದಿಗೆ, ಪೋಷಕರು ಉದ್ಯೋಗದಲ್ಲಿರುವುದನ್ನು ದೃಢೀಕರಿಸಲು ಸಂಬಂಧಪಟ್ಟ ಆಡಳಿತ ಮಂಡಳಿಯಿಂದ ನೀಡಲಾದ ಬೀಡಿ/ಗಣಿ ಕಾರ್ಮಿಕರ ಗುರುತಿನ ಚೀಟಿ (ID Card) ಕಡ್ಡಾಯವಾಗಿ ಅಪ್‍ಲೋಡ್ ಮಾಡಬೇಕಾಗುತ್ತದೆ. ಇದರ ಜೊತೆಗೆ ವಿದ್ಯಾರ್ಥಿಯ ಪೋಟೋ, ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್ ಒದಗಿಸಬೇಕಾಗುತ್ತದೆ.

ಇದನ್ನೂ ಓದಿ: Brahmana Nigama Scheme-ಬ್ರಾಹ್ಮಣ ನಿಗಮದಿಂದ ನೇರ ಸಾಲ ಯೋಜನೆಯಡಿ ರೂ. 40,000 ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Scholarship Scheme

Scholarship Amount-ತರಗತಿವಾರು ವಿದ್ಯಾರ್ಥಿವೇತನದ ಮೊತ್ತದ ವಿವರ:

ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕೋರ್ಸ್ ಹಾಗೂ ತರಗತಿಗಳ ಆಧಾರದ ಮೇಲೆ ವಾರ್ಷಿಕ ಪ್ರೋತ್ಸಾಹ ಧನವನ್ನು ನಿಗದಿಪಡಿಸಲಾಗಿದೆ:

  • 1 ರಿಂದ 4 ನೇ ತರಗತಿ: ರೂ. 1,000/-
  • 5 ರಿಂದ 8 ನೇ ತರಗತಿ: ರೂ. 1,500/-
  • 9 ಮತ್ತು 10 ನೇ ತರಗತಿ: ರೂ. 2,000/-
  • ಪ್ರಥಮ ಹಾಗೂ ದ್ವಿತೀಯ ಪಿಯುಸಿ: ರೂ. 3,000/-
  • ಐಟಿಐ, ಪಾಲಿಟೆಕ್ನಿಕ್ ಮತ್ತು ಪದವಿ (ಬಿ.ಎಸ್ಸಿ ಕೃಷಿ ಸೇರಿದಂತೆ): ರೂ. 6,000/-
  • ವೃತ್ತಿಪರ (Professional) ಕೋರ್ಸ್‌ಗಳು: ರೂ. 25,000/-

Application Last Date-ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ:

ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಪಟ್ಟಿ ಈ ಕೆಳಗಿನಂತಿದೆ:

  • ಮೆಟ್ರಿಕ್ ಪೂರ್ವ ಯೋಜನೆ (1 ರಿಂದ 10 ನೇ ತರಗತಿ): ಆಗಸ್ಟ್ 31, 2026
  • ಮೆಟ್ರಿಕ್ ನಂತರದ ಯೋಜನೆ (11 ನೇ ತರಗತಿ ಮತ್ತು ಮೇಲ್ಪಟ್ಟು): ಅಕ್ಟೋಬರ್ 31, 2026

ಇದನ್ನೂ ಓದಿ: Manipal Health Card-ಮಣಿಪಾಲ ಆರೋಗ್ಯ ಕಾರ್ಡ್-2026 ನೋಂದಣಿ ಆರಂಭ ಆಗಸ್ಟ್ 31ರವರೆಗೆ ಅವಕಾಶ!

For More Information-ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

  • ಸಹಾಯವಾಣಿ- 9148240554 / 080-23471406
  • ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: