Brahmana Nigama Scheme-ಬ್ರಾಹ್ಮಣ ನಿಗಮದಿಂದ ನೇರ ಸಾಲ ಯೋಜನೆಯಡಿ ರೂ. 40,000 ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

July 26, 2026 | Siddesh
Brahmana Nigama Scheme-ಬ್ರಾಹ್ಮಣ ನಿಗಮದಿಂದ ನೇರ ಸಾಲ ಯೋಜನೆಯಡಿ ರೂ. 40,000 ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
Share Now:

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ ಬಾಂಧವರು ಸ್ವಯಂ ಉದ್ಯೋಗ ಕಂಡುಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಶುಭಸುದ್ದಿ ನೀಡಿದೆ. 2026-27ನೇ ಸಾಲಿನ ‘ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆ’ಯಡಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಸಣ್ಣ ಹಾಗೂ ಗುಡಿ ಕೈಗಾರಿಕೆ, ಕ್ಯಾಟರಿಂಗ್ ಮತ್ತು ಹೋಟೆಲ್ ಉದ್ಯಮ, ಚಿಲ್ಲರೆ ಅಂಗಡಿ ಸ್ಥಾಪನೆ, ಟೈಲರಿಂಗ್, ಟ್ಯಾಕ್ಸಿ ಖರೀದಿ ಮತ್ತು ಹಸು ಸಾಕಾಣಿಕೆಯಂತಹ ವಿವಿಧ ರೀತಿಯ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡಲಾಗುತ್ತದೆ. ಯೋಜನೆಯಲ್ಲಿ ಎರಡು ರೀತಿಯ ಘಟಕ ವೆಚ್ಚಗಳಿದ್ದು, ₹1,00,000 ವೆಚ್ಚದ ಘಟಕಕ್ಕೆ ₹20,000 ಸಹಾಯಧನ (ಸಬ್ಸಿಡಿ) ಹಾಗೂ ಉಳಿದ ₹80,000 ಸಾಲದ ರೂಪದಲ್ಲಿ ಸಿಗಲಿದೆ. ಅದೇ ರೀತಿ, ₹2,00,000 ವೆಚ್ಚದ ಘಟಕಕ್ಕೆ ₹40,000 ಸಹಾಯಧನ ಹಾಗೂ ₹1,60,000 ಸಾಲ ದೊರೆಯಲಿದೆ. ಈ ಸಾಲದ ಮೊತ್ತಕ್ಕೆ ವಾರ್ಷಿಕ ಕೇವಲ ಶೇ. 4 ರಷ್ಟು ಕನಿಷ್ಠ ಬಡ್ಡಿದರ ಇರಲಿದ್ದು, ಒಟ್ಟು 34 ಕಂತುಗಳಲ್ಲಿ ಮರುಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Navodaya Admission-2027: ನವೋದಯ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, 18 ರಿಂದ 65 ವರ್ಷ ವಯೋಮಿತಿಯೊಳಗಿರಬೇಕು. ಜೊತೆಗೆ, ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಪ್ರಮಾಣಪತ್ರ ಹೊಂದುವುದು ಕಡ್ಡಾಯ. ಈ ಯೋಜನೆಯಲ್ಲಿ ಮಹಿಳೆಯರಿಗೆ ಶೇ. 33 ಹಾಗೂ ದಿವ್ಯಾಂಗರಿಗೆ ಶೇ. 5 ರಷ್ಟು ವಿಶೇಷ ಮೀಸಲಾತಿ ನೀಡಲಾಗಿದೆ. ಕುಟುಂಬ ಒಂದರಿಂದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಹರಾಗಿರುವುದಿಲ್ಲ.

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 31, 2026 (ಸಂಜೆ 5:30 ರವರೆಗೆ)

Who Can apply-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಈ ಯೋಜನೆಯಡಿ ಸಬ್ಸಿಡಿಯನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿ ನಮೂದಿಸಿರುವ ಅರ್ಹತಾ ಮಾನದಂಡಗಳನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು:

  • ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಜಿದಾರರು ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರಮಾಣಪತ್ರ (EWS ಪ್ರಮಾಣ ಪತ್ರ) ಹೊಂದಿರಬೇಕು.
  • ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರ ವಯಸ್ಸು 18 ರಿಂದ 65 ವರ್ಷದ ಒಳಗಿನವರಾಗಿರಬೇಕು.
  • ಒಂದು ಕುಟುಂಬದಿಂದ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
  • ಮಹಿಳೆಯರಿಗೆ 33% ಮೀಸಲಾತಿಯನ್ನು ನೀಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
  • ವಿಶೇಷಚೇತನರಿಗೆ ಶೇ 5% ಮೀಸಲಾತಿ ಇರುತ್ತದೆ.
  • ಅರ್ಜಿದಾರರ ಆಧಾರ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು ಮತ್ತು ಬ್ಯಾಂಕ್ ಖಾತೆ ಸೀಡ್ ಆಗಿರಬೇಕು.

ಇದನ್ನೂ ಓದಿ: Manipal Health Card-ಮಣಿಪಾಲ ಆರೋಗ್ಯ ಕಾರ್ಡ್-2026 ನೋಂದಣಿ ಆರಂಭ ಆಗಸ್ಟ್ 31ರವರೆಗೆ ಅವಕಾಶ!

Subsidy Amount Details-ಸಾಲ ಸೌಲಭ್ಯ ಮತ್ತು ಸಹಾಯಧನದ ವಿವರ :

ಈ ಯೋಜನೆಯಲ್ಲಿ ಎರಡು ರೀತಿಯ ಘಟಕ ವೆಚ್ಚದ ಸಾಲ ಸೌಲಭ್ಯ ಲಭ್ಯವಿದ್ದು, ರೂ. 1,00,000 ಘಟಕ ವೆಚ್ಚದಡಿ ಸಾಲ ಸೌಲಭ್ಯ ಒದಗಿಸಲಿದ್ದು, ಇದರಲ್ಲಿ ರೂ. 20,000 ಸಹಾಯಧನ (ಸಬ್ಸಿಡಿ) ಸಿಗಲಿದ್ದು, ಉಳಿದ ರೂ. 80,000 ಸಾಲದ ಮೊತ್ತವಾಗಿರುತ್ತದೆ ಹಾಗೂ ರೂ. 2,00,000 ಘಟಕ ವೆಚ್ಚದಡಿ ಸಾಲ ಸೌಲಭ್ಯ ಒದಗಿಸಲಿದ್ದು, ಇದರಲ್ಲಿ ರೂ. 40,000 ಸಹಾಯಧನ ಸಿಗಲಿದ್ದು, ಉಳಿದ ರೂ. 1,60,000 ಸಾಲದ ಮೊತ್ತವಾಗಿರುತ್ತದೆ.

ಸಾಲದ ಮೊತ್ತಕ್ಕೆ ವಾರ್ಷಿಕ ಶೇಕಡ 4 ರಷ್ಟು ಕನಿಷ್ಠ ಬಡ್ಡಿ ದರ ವಿಧಿಸಲಾಗುತ್ತಿದ್ದು, ಮೊತ್ತವನ್ನು 34 ಕಂತುಗಳಲ್ಲಿ ಮರುಪಾವತಿಸಲು ಅವಕಾಶ ನೀಡಲಾಗಿದೆ.

Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ:

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಈ ಕೆಳಗಿನ ವಿಧಾನವನ್ನು ಅನುಸರಿಸಿ ಒಂದೆರಡು ಕ್ಲಿಕ್ ನಲ್ಲೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Step-1: ಅರ್ಜಿದಾರರು ಮೊದಲಿಗೆ "Apply Now" ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಗಮದ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: FID Update-ರೈತ ಬಾಂಧವರ ಗಮನಕ್ಕೆ: FID ಅನ್ನು ಕೇಂದ್ರ ಸರ್ಕಾರದ ಐಡಿಗೆ ಅಪ್ಡೇಟ್ ಮಾಡಲು ಸೂಚನೆ!

Brahmana Nigama Subsidy Scheme

Step-2: ಇದಾದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣಿಸುವ "ಮತ್ತಷ್ಟು ಓದಿ" ಬಟನ್ ಮೇಲೆ ಕ್ಲಿಕ್ ಮಾಡಿ ನಂತರ "ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Step-3: ನಂತರ "ಲಾಗಿನ್/Login" ಬಟನ್ ಮೇಲೆ ಒತ್ತಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಅನ್ನು ಹಾಕಿ ಲಾಗಿನ್ ಅಗಿ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: Harvester Hub Scheme-ಕೃಷಿ ಇಲಾಖೆಯಿಂದ ಹಾರ್ವೆಸ್ಟರ್ ಖರೀದಿಗೆ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Helpline Number-ಹೆಚ್ಚಿನ ಮಾಹಿತಿಗಾಗಿ:

ಹೆಚ್ಚಿನ ವಿವರಗಳು ಅಥವಾ ಸಂದೇಹಗಳಿದ್ದಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 5:30 ರವರೆಗೆ 080 2960 5888 ಅಥವಾ 8762249230 ಸಂಖ್ಯೆಯನ್ನು ಸಂಪರ್ಕಿಸಬಹುದು. ಅಷ್ಟೇ ಅಲ್ಲದೆ, ನಿಮ್ಮ ಜಿಲ್ಲೆಯ 'ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ (KSDC)' ಜಿಲ್ಲಾ ಕಚೇರಿಯನ್ನು ಕೂಡ ಭೇಟಿ ಮಾಡಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: