Manipal Health Card-ಮಣಿಪಾಲ ಆರೋಗ್ಯ ಕಾರ್ಡ್-2026 ನೋಂದಣಿ ಆರಂಭ ಆಗಸ್ಟ್ 31ರವರೆಗೆ ಅವಕಾಶ!

July 21, 2026 | Siddesh
Manipal Health Card-ಮಣಿಪಾಲ ಆರೋಗ್ಯ ಕಾರ್ಡ್-2026 ನೋಂದಣಿ ಆರಂಭ ಆಗಸ್ಟ್ 31ರವರೆಗೆ ಅವಕಾಶ!
Share Now:

ಹೊನ್ನಾವರ: ಕಳೆದ 26 ವರ್ಷಗಳಿಂದ ಸಾರ್ವಜನಿಕರಿಗೆ ಅತ್ಯಂತ ಗುಣಮಟ್ಟದ ಹಾಗೂ ನಂಬಿಕಸ್ಥ ವೈದ್ಯಕೀಯ ಸೇವೆಯನ್ನು ಒದಗಿಸುತ್ತಾ, ಲಕ್ಷಾಂತರ ಕುಟುಂಬಗಳ ವಿಶ್ವಾಸಗಳಿಸಿರುವ ಮಣಿಪಾಲ ಆಸ್ಪತ್ರೆಯು(Manipal Hospital) ತನ್ನ ಬಹುನಿರೀಕ್ಷಿತ 'ಮಣಿಪಾಲ ಆರೋಗ್ಯ ಕಾರ್ಡ್-2026'ರ ನೋಂದಣಿ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದೆ. ಹೊನ್ನಾವರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರಾದ ಮೋಹನ್ ಶೆಟ್ಟಿ ಅವರು ಈ ಕುರಿತು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರಿಗೆ ಅತ್ಯಂತ ಕೈಗೆಟುಕುವ ವೆಚ್ಚದಲ್ಲಿ ಉತ್ತಮ ಆರೋಗ್ಯ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಕಾರ್ಯನಿರ್ವಹಿಸುತ್ತಿದ್ದು, ಪ್ರಸಕ್ತ ಸಾಲಿನ ನೋಂದಣಿಗೆ ಆಗಸ್ಟ್ 31, 2026 ರವರೆಗೆ ಅಂತಿಮ ಕಾಲಾವಕಾಶ ನೀಡಲಾಗಿದೆ.

ವರ್ಷದಿಂದ ವರ್ಷಕ್ಕೆ ಮಹತ್ತರ ಜನಪ್ರಿಯತೆ ಗಳಿಸುತ್ತಿರುವ ಈ ಆರೋಗ್ಯ ಯೋಜನೆಯು 2000ನೇ ಇಸವಿಯಲ್ಲಿ ಕೇವಲ 3,200 ಕುಟುಂಬಗಳೊಂದಿಗೆ ಸಣ್ಣದಾಗಿ ಆರಂಭವಾಗಿತ್ತು. ಆದರೆ ಇಂದು ಈ ಯೋಜನೆಯು ಬರೋಬ್ಬರಿ 6.72 ಲಕ್ಷಕ್ಕೂ ಅಧಿಕ ಸದಸ್ಯರನ್ನು(Manipal Health Card)ಹೊಂದುವ ಮೂಲಕ ಬೃಹತ್ ಮಟ್ಟದಲ್ಲಿ ಬೆಳೆದಿದ್ದು, ಕರ್ನಾಟಕ ಸೇರಿದಂತೆ ನೆರೆಯ ಇತರ ರಾಜ್ಯಗಳ ಲಕ್ಷಾಂತರ ಕುಟುಂಬಗಳಿಗೂ ಆರೋಗ್ಯ ರಕ್ಷಣೆಯ ನೆರವು ನೀಡುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲದ ವ್ಯವಸ್ಥಾಪಕರಾದ ಕೃಷ್ಣಪ್ರಸಾದ್ ಅವರು ಮಾತನಾಡಿ, ತಂತ್ರಜ್ಞಾನಕ್ಕೆ ಪೂರಕವಾಗಿ ಈ ಬಾರಿ ಆರೋಗ್ಯ ಕಾರ್ಡ್ ವಿತರಣಾ ಮತ್ತು ನೋಂದಣಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಪ್ರಕಟಿಸಿದರು.

ಇದನ್ನೂ ಓದಿ: FID Update-ರೈತ ಬಾಂಧವರ ಗಮನಕ್ಕೆ: FID ಅನ್ನು ಕೇಂದ್ರ ಸರ್ಕಾರದ ಐಡಿಗೆ ಅಪ್ಡೇಟ್ ಮಾಡಲು ಸೂಚನೆ!

ಈ ಯೋಜನೆಯಡಿ ಸಾರ್ವಜನಿಕರು ಅತ್ಯಂತ ಅಲ್ಪ ಮೊತ್ತವನ್ನು ಪಾವತಿಸುವ ಮೂಲಕ ಸುಲಭವಾಗಿ ಸದಸ್ಯತ್ವ ಪಡೆದುಕೊಳ್ಳಬಹುದು. ಈ ಕಾರ್ಡ್(Manipal Health Card Info) ಒಂದು ವರ್ಷದ ಅವಧಿಗೆ ಮಾತ್ರ ಮಾನ್ಯತೆ ಹೊಂದಿರಲಿದ್ದು, ಆಸ್ಪತ್ರೆಯ ವಿವಿಧ ವೈದ್ಯಕೀಯ ಸೇವೆಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ಪಡೆದುಕೊಳ್ಳಲು ಮೂರು ಪ್ರಮುಖ ವಿಭಾಗಗಳಲ್ಲಿ ಸದಸ್ಯತ್ವದ ಅವಕಾಶವನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ಸುಲಭವಾಗಿ ನೋಂದಣಿ ಮಾಡಿಕೊಳ್ಳಲು ಮತ್ತು ಕಾರ್ಡ್ ಮಾನ್ಯತೆಯನ್ನು ಪರೀಕ್ಷಿಸಲು ಡಿಜಿಟಲ್ ತಂತ್ರಜ್ಞಾನದ ವ್ಯವಸ್ಥೆ ಮಾಡಲಾಗಿದ್ದು, ಸದಸ್ಯರಿಗೆ ವಾಟ್ಸಾಪ್ (WhatsApp) ಮೂಲಕವೇ ಡಿಜಿಟಲ್ ಆರೋಗ್ಯ ಕಾರ್ಡ್ ಲಭ್ಯವಾಗುವಂತೆ ಅನುಕೂಲ ಮಾಡಿಕೊಡಲಾಗಿದೆ.

Manipal Health Card Registration-ನೋಂದಣಿ ಅವಧಿ ಮತ್ತು ಕಾರ್ಡ್ ಮಾನ್ಯತೆ:

'ಮಣಿಪಾಲ ಆರೋಗ್ಯ ಕಾರ್ಡ್-2026' ರ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಸದಸ್ಯತ್ವ ಪಡೆಯಲು ಆಗಸ್ಟ್ 31 ಕೊನೆಯ ದಿನಾಂಕವಾಗಿರುತ್ತದೆ. ಈ ಯೋಜನೆಯಡಿ ಪಡೆಯುವ ಸದಸ್ಯತ್ವ ಹಾಗೂ ಆರೋಗ್ಯ ಕಾರ್ಡ್‌ಗಳು ಒಂದು ವರ್ಷದ ಅವಧಿಗೆ ಮಾತ್ರ ಮಾನ್ಯತೆ ಹೊಂದಿರುತ್ತವೆ.

ಇದನ್ನೂ ಓದಿ: Harvester Hub Scheme-ಕೃಷಿ ಇಲಾಖೆಯಿಂದ ಹಾರ್ವೆಸ್ಟರ್ ಖರೀದಿಗೆ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Manipal Health Digital Card-ಸಂಪೂರ್ಣ ಡಿಜಿಟಲೀಕರಣ ಮತ್ತು ವಾಟ್ಸಾಪ್ ಸೇವೆ:

ಈ ಬಾರಿಯ ಆರೋಗ್ಯ ಕಾರ್ಡ್ ಅನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ. ಗ್ರಾಹಕರು 8867579797 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ತಮ್ಮ ನೋಂದಣಿ ಹಾಗೂ ಕಾರ್ಡ್ ಮಾನ್ಯತೆಯನ್ನು ಸುಲಭವಾಗಿ ಪರಿಶೀಲಿಸಬಹುದು ಮತ್ತು ವಾಟ್ಸಾಪ್ ಮೂಲಕ ಡಿಜಿಟಲ್ ಕಾರ್ಡ್ ಪಡೆಯಬಹುದು.

Manipal Hospital Card-ಕೈಗೆಟುಕುವ ವೆಚ್ಚ ಹಾಗೂ ವಿಶೇಷ ರಿಯಾಯಿತಿಗಳು:

ಸಮಾಜದ ಎಲ್ಲಾ ವರ್ಗದ ಜನರಿಗೂ ಒಪ್ಪುವಂತೆ ಕೈಗೆಟುಕುವ ವೆಚ್ಚದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಮೂರು ವಿಭಾಗಗಳಲ್ಲಿ ಸದಸ್ಯತ್ವದ ಅವಕಾಶವಿದ್ದು, ಅತ್ಯಲ್ಪ ಮೊತ್ತ ಪಾವತಿಸಿ ಆಸ್ಪತ್ರೆಯ ವಿವಿಧ ಆರೋಗ್ಯ ಸೇವೆಗಳ ಮೇಲೆ ಅತ್ಯಾಕರ್ಷಕ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: GKVK Bakery Training-ಬೇಕರಿ ಟೆಕ್ನಾಲಜಿ ಸರ್ಟಿಫಿಕೇಟ್ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

Manipal Health Card Discounts-ಮಣಿಪಾಲ ಆರೋಗ್ಯ ಕಾರ್ಡ್ ಪಡೆಯುವುದರಿಂದ ಎಷ್ಟು ರಿಯಾಯಿತಿ ಪಡೆಯಬಹುದು?

Manipal Health Card

Manipal Health Card Online Registration-ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ:

ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೇ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಕೆಳಗಿನ ವಿಧಾನವನ್ನು ಅನುಸರಿಸಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ಕಾರ್ಡ ಅನ್ನು ಪಡೆಯಲು ಮತ್ತು ಈಗಾಗಲೇ ಹೊಂದಿರುವ ಕಾರ್ಡ ಅನ್ನು ನವೀಕರಣ ಮಾಡಿಕೊಳ್ಳಬಹುದು.

Step-1: ಸಾರ್ವಜನಿಕರು ಮೊದಲಿಗೆ ಈ "Manipal Health Card Online Registration Link" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಕಾಣಿಸುವ Self Register/New Card/Renew Card ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಡಿಜಿಟಲ್ ಕಾರ್ಡ ಅನ್ನು ಪಡೆಯಬಹುದು.

ಇದನ್ನೂ ಓದಿ: Gruhajoythi Scheme-ಆಧಾರ್ ಅಪ್ಡೇಟ್ ಮಾಡದಿದ್ದರೆ ಗೃಹಜ್ಯೋತಿ ಕ್ಯಾನ್ಸಲ್ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!

Helpline Number-ಅಧಿಕೃತ ಸಂಪರ್ಕ ಸಂಖ್ಯೆಗಳು:

ಸಾರ್ವಜನಿಕರು ಆಸ್ಪತ್ರೆಯ ಅಧಿಕೃತ ಪ್ರತಿನಿಧಿಗಳ ಮೂಲಕ ಆರೋಗ್ಯ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 0820-2923748 ಅಥವಾ 9980854700

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: