Harvester Hub Scheme-ಕೃಷಿ ಇಲಾಖೆಯಿಂದ ಹಾರ್ವೆಸ್ಟರ್ ಖರೀದಿಗೆ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

July 18, 2026 | Siddesh
Harvester Hub Scheme-ಕೃಷಿ ಇಲಾಖೆಯಿಂದ ಹಾರ್ವೆಸ್ಟರ್ ಖರೀದಿಗೆ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
Share Now:

ಕರ್ನಾಟಕ ರಾಜ್ಯದ ರೈತರಿಗೆ ಸಿಹಿ ಸುದ್ದಿ, 2026-27 ನೇ ಸಾಲಿಗೆ ಕೃಷಿ ಇಲಾಖೆಯಿಂದ(Karnataka Agriculture Department) ರೈತರಿಗೆ ಕೃಷಿ ಯಾಂತ್ರೀಕರಣವನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕೃಷಿ ಕ್ಷೇತ್ರದಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ದೊಡ್ಡ ಮಟ್ಟದ ಹಾರ್ವೆಸ್ಟರ್ ಯಂತ್ರಗಳನ್ನು ಹಾಗೂ ಇನ್ನಿತರೆ ಖರೀದಿಸಲು ಆರ್ಥಿಕ ನೆರವನ್ನು ಒದಗಿಸಲು ಸರ್ಕಾರವು ಹಾರ್ವೆಸ್ಟರ್ ಹಬ್ (Harvester Hub) ಘಟಕ ಯೋಜನೆ ಅಡಿಯಲ್ಲಿ ಸಬ್ಸಿಡಿಯನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರ ಕೊರತೆಯು ಹೆಚ್ಚಾಗುತ್ತಿದ್ದು, ಹೆಚ್ಚುತ್ತಿರುವ ಉತ್ಪಾದನೆ ಹಾಗೂ ಸಮಯಕ್ಕೆ ಸರಿಯಾಗಿ ಕೊಯ್ಲುಗಳನ್ನು ಪೂರ್ತಿ ಮಾಡಲು ಸರ್ಕಾರವು ಈ ಯೋಜನೆಯನ್ನು(Harvester Hub Scheme Application) ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಮಧ್ಯಮ ಹಾಗೂ ಸಣ್ಣ ವರ್ಗದ ರೈತರಿಗೆ ಅಗತ್ಯವಿರುವ ಸಮಯದಲ್ಲಿ ಕಡಿಮೆ ವೆಚ್ಚದಲ್ಲಿ ಬಳಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ:Teacher Recruitment-ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 15,105 ಶಿಕ್ಷಕರ ನೇಮಕಾತಿಗೆ ಸರ್ಕಾರ ಅಸ್ತು!

ಹಾಗಾದರೆ ಹಾರ್ವೆಸ್ಟರ್ ಹಬ್ ಯೋಜನೆ(Harvester Subsidy) ಎಂದರೇನು? ಯಾರು ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು? ಅರ್ಜಿ ಸಲ್ಲಿಸುವ ವಿಧಾನ ಯಾವುದು?ಸರ್ಕಾರದಿಂದ ಎಷ್ಟು ಸಹಾಯಧನ ದೊರೆಯುತ್ತದೆ? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು? ಈ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳೋಣ.

What Is Harvester Hub Scheme-ಹಾರ್ವೆಸ್ಟರ್ ಹಬ್ ಎಂದರೇನು?

ಈ ಯೋಜನೆಯಡಿ ಎಲ್ಲಾ ಬೆಳೆಗಳಿಗೆ ಸಂಬಂಧಪಟ್ಟ ಹಾರ್ವೆಸ್ಟರ್ ಯಂತ್ರಗಳನ್ನು ಖರೀದಿ ಮಾಡಲು ಅವಕಾಶವಿದ್ದು ಉದಾಹರಣೆಗೆ ಕಬ್ಬು ಕಟಾವು ಯಂತ್ರ, ಸೈಲೇಜ್ ಕಟಾವು ಮತ್ತು ಸೈಲೇಜ್ ಮಾಡುವ ಯಂತ್ರ, ರಾಗಿ/ಭತ್ತ ಕಟಾವು ಯಂತ್ರ ಇನ್ನಿತರೆ ಯಂತ್ರಗಳನ್ನು ಖರೀದಿ ಮಾಡಲು ಅವಕಾಶವಿರುತ್ತದೆ?

Application Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಜುಲೈ 2026

ಇದನ್ನೂ ಓದಿ: GKVK Bakery Training-ಬೇಕರಿ ಟೆಕ್ನಾಲಜಿ ಸರ್ಟಿಫಿಕೇಟ್ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಈ ಯೋಜನೆಯ ಅಡಿಯಲ್ಲಿ ಎಷ್ಟು ಸಹಾಯಧನವನ್ನು ಪಡೆಯಬಹುದು?

1) ಸಾಮಾನ್ಯ ವರ್ಗದ ರೈತರಿಗೆ ಘಟಕದ ವೆಚ್ಚದ ಮೇಲೆ ಗರಿಷ್ಠ ಶೇಕಡಾ 50 ರಷ್ಟು (ಗರಿಷ್ಠ ರೂ.40 ಲಕ್ಷಗಳವರೆಗೆ) ಸಹಾಯಧನವನ್ನು ಪಡೆಯಬಹುದು.

2) ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ರೈತರಿಗೆ ಶೇಕಡಾ 70 ರವರೆಗೆ ಸಬ್ಸಿಡಿಯನ್ನು ನೀಡಲಾಗುತ್ತದೆ.

3) ರೈತ ಉತ್ಪಾದಕರ ಸಂಸ್ಥೆಗಳು (FPO) ಮತ್ತು ಸಂಘ ಸಂಸ್ಥೆಗಳಿಗೆ ಶೇಕಡಾ 70 ರಷ್ಟು ಕ್ರೆಡಿಟ್ ಲಿಂಕ್ಡ್ ಬ್ಯಾಕ್‌ಎಂಡೆಡ್ ಸಬ್ಸಿಡಿ ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Gruhajoythi Scheme-ಆಧಾರ್ ಅಪ್ಡೇಟ್ ಮಾಡದಿದ್ದರೆ ಗೃಹಜ್ಯೋತಿ ಕ್ಯಾನ್ಸಲ್ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!

Who Can Apply-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಅರ್ಜಿದಾರರು ಅಭ್ಯರ್ಥಿಯು ರೈತರ ವರ್ಗಕ್ಕೆ ಸೇರಿದವರಾಗಿರಬೇಕು.
ವೈಯಕ್ತಿಕವಾಗಿಯು ಸಹ ಅರ್ಜಿಯನ್ನು ರೈತರು ಅರ್ಜಿ ಸಲ್ಲಿಸಬಹುದು.
ಕೃಷಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ನೋಂದಾಯಿತ ಸಂಸ್ಥೆಗಳು.
ರೈತರ ಉತ್ಪಾದಕರ ಸಂಸ್ಥೆಗಳು (FPO), ರೈತ ಸಂಘಗಳು, ಸಹಕಾರಿ ಸಂಘಗಳು, ಕೃಷಿ ಉದ್ಯಮಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

Required Documents For Application-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

ಅರ್ಜಿದಾರರು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಬೇಕು.

ರೈತರ ಆಧಾರ್ ಕಾರ್ಡ್/Aadhar
ಭೂ ದಾಖಲೆಗಳು (RTC/Pahani)
ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste And Income
ಬ್ಯಾಂಕ್ ಪಾಸ್ ಪುಸ್ತಕ/Bank Pass Book
ಮೊಬೈಲ್ ನಂಬರ್/Mobile Number

ಇದನ್ನೂ ಓದಿ: Cow Mat Subsidy-ಸಬ್ಸಿಡಿಯಲ್ಲಿ ರಬ್ಬರ್ ಮ್ಯಾಟ್ ಹಾಗೂ ಸೈಲೇಜ್ ಬ್ಯಾಗ್ ಪಡೆಯಲು ಅರ್ಜಿ ಆಹ್ವಾನ!

harvester hub

ಇದನ್ನೂ ಓದಿ: Engineering Scholarship-ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 50,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ಮಾಹಿತಿ!

How To Apply-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಆಸಕ್ತಿ ಇರುವ ಅರ್ಹ ಫಲಾನುಭವಿಗಳು ನಿಮ್ಮ ಜಿಲ್ಲೆಯ ಅಥವಾ ತಾಲೂಕಿನ ಕೃಷಿ ಇಲಾಖೆಯ ಕಚೇರಿಗೆ ನೇರವಾಗಿ ಭೇಟಿ ನೀಡಿ ಯೋಜನೆಯಗೆ ಸಂಬಂದಿಸಿದ ಅಧಿಕಾರಿಗಳ ಹತ್ತಿರ ಅರ್ಜಿಯನ್ನು ಸಲ್ಲಿಸಬಹುದು.

For More Information-ಇನ್ನು ಹೆಚ್ಚಿನ ಮಾಹಿತಿಗಾಗಿ-

Scheme Guidelines-ಯೋಜನೆಯ ಮಾರ್ಗಸೂಚಿ ಡೌನ್ಲೋಡ್ ಲಿಂಕ್- Download Now
Agriculture Department-ಕೃಷಿ ಇಲಾಖೆಯ ವೆಬ್ಸೈಟ್-Click Here

ವಿಶೇಷ ಸೂಚನೆ- ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆ ಲಭ್ಯವಿದ್ದು ಅನುದಾನದ ಲಭ್ಯತೆ ಆಧಾರದ ಮೇಲೆ ಆಯಾ ಜಿಲ್ಲೆಯಲ್ಲಿ ಈ ಯೋಜನೆಯನ್ನು ಅನುಷ್ಥಾನ ಮಾಡಲಾಗುತ್ತಿದ್ದು ಅರ್ಜಿ ಸಲ್ಲಿಸುವು ಮುನ್ನು ಒಮ್ಮೆ ನಿಮ್ಮ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು(JDA)ನೇರವಾಗಿ ಭೇಟಿ ಮಾಡಿ ಅಗತ್ಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: