Cow Mat Subsidy-ಸಬ್ಸಿಡಿಯಲ್ಲಿ ರಬ್ಬರ್ ಮ್ಯಾಟ್ ಹಾಗೂ ಸೈಲೇಜ್ ಬ್ಯಾಗ್ ಪಡೆಯಲು ಅರ್ಜಿ ಆಹ್ವಾನ!

July 15, 2026 | Siddesh
Cow Mat Subsidy-ಸಬ್ಸಿಡಿಯಲ್ಲಿ ರಬ್ಬರ್ ಮ್ಯಾಟ್ ಹಾಗೂ ಸೈಲೇಜ್ ಬ್ಯಾಗ್ ಪಡೆಯಲು ಅರ್ಜಿ ಆಹ್ವಾನ!
Share Now:

ಬೆಂಗಳೂರು: ರಾಜ್ಯದಲ್ಲಿ ಹೈನುಗಾರಿಕೆಯನ್ನು (Dairy Farming) ನೆಚ್ಚಿಕೊಂಡಿರುವ ರೈತರು ಹಾಗೂ ಪಶುಪಾಲಕರಿಗೆ ರಾಜ್ಯ ಸರ್ಕಾರವು ಮತ್ತೊಂದು ಮಹತ್ವದ ಮತ್ತು ಉಪಯುಕ್ತ ಯೋಜನೆಯನ್ನು ಜಾರಿಗೆ ತಂದಿದೆ. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವತಿಯಿಂದ 2025-26ನೇ ಸಾಲಿನ ತಾಲ್ಲೂಕು ಪಂಚಾಯತ್ ಅನುದಾನದಡಿ ‘ವೈಜ್ಞಾನಿಕ ತಾಂತ್ರಿಕತೆ ಪರಿಚಯ ಕಾರ್ಯಕ್ರಮ’ದ ಅಡಿಯಲ್ಲಿ ಜಾನುವಾರುಗಳಿಗೆ ರಬ್ಬರ್ ನೆಲಹಾಸು (Rubber Mat) ಮತ್ತು ಸೈಲೇಜ್ ಬ್ಯಾಗ್ (Silage Bag) ವಿತರಿಸಲು ಅಧಿಕೃತವಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯು ರಾಜ್ಯದ(Karnataka Veterinary Department) ಪ್ರತಿಯೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೂ ಅನ್ವಯಿಸಲಿದ್ದು, ಅರ್ಹ ಹೈನುಗಾರರನ್ನು ಪಾರದರ್ಶಕವಾಗಿ ಆಯ್ಕೆ ಮಾಡಿ ಸೌಲಭ್ಯ ಒದಗಿಸಲು ಸರ್ಕಾರ ನಿರ್ಧರಿಸಿದೆ. ಇಲಾಖೆಯ ಈ ಮಹತ್ತರ ಹೆಜ್ಜೆಗೆ ಕರ್ನಾಟಕ ಹಾಲು ಮಹಾಮಂಡಳ (KMF) ಸಹ ಕೈಜೋಡಿಸಿದ್ದು, ತನ್ನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕವೂ ಅರ್ಹ ಫಲಾನುಭವಿಗಳಿಗೆ ರಬ್ಬರ್ ನೆಲಹಾಸು ಮತ್ತು ಸೈಲೇಜ್ ಬ್ಯಾಗ್‌ಗಳನ್ನು(Cow Mat And Silage Bag) ತಲುಪಿಸುವ ಜವಾಬ್ದಾರಿ ವಹಿಸಿಕೊಂಡಿದೆ. ಇದರಿಂದಾಗಿ ಹಳ್ಳಿಗಳ ಮಟ್ಟದಲ್ಲಿ ತಳಮಟ್ಟದ ರೈತರಿಗೂ ಈ ಯೋಜನೆಯ ಲಾಭ ಸಿಗುವಂತಾಗಿದ್ದು, ಆಧುನಿಕ ಡೈರಿ ಫಾರ್ಮಿಂಗ್ ಅಳವಡಿಸಿಕೊಳ್ಳಲು ಪೂರಕ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: Engineering Scholarship-ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 50,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ಮಾಹಿತಿ!

ಆಸಕ್ತ ರೈತರು ಮತ್ತು ಪಶುಪಾಲಕರು ತಡಮಾಡದೇ ತಮ್ಮ ಜಿಲ್ಲೆಯ ಮುಖ್ಯ ಪಶುವೈದ್ಯಾಧಿಕಾರಿಗಳ ಕಚೇರಿ ಅಥವಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನಾಂಕವಾಗಿದ್ದು, ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಲು ರೈತರು ತಕ್ಷಣವೇ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗಿ ಇಲಾಖೆ ವಿನಂತಿಸಿದೆ. ಪಶುಗಳ ಹಸಿರು ಮೇವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿಡಲು ಮತ್ತು ಕೊಟ್ಟಿಗೆಯ ಸ್ವಚ್ಛತೆ ಕಾಪಾಡಲು ಇಚ್ಛಿಸುವ ರೈತರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

Cow Mat And Silage Bag Subsidy Scheme-ಕಡಾ 50 ರಷ್ಟು ಸಹಾಯಧನ:

ಈ ಯೋಜನೆಯ ಅಡಿಯಲ್ಲಿ ಹಸುಗಳಿಗೆ ಬಳಸುವ ರಬ್ಬರ್ ನೆಲಹಾಸು (Rubber Mat) ಹಾಗೂ ಮೇವು ಸಂಗ್ರಹಣೆಯ ಸೈಲೇಜ್ ಬ್ಯಾಗ್ (Silage Bag) ಖರೀದಿಗೆ ಸರ್ಕಾರವು ಒಟ್ಟು ವೆಚ್ಚದಲ್ಲಿ ಶೇ. 50 ರಷ್ಟು ಸಬ್ಸಿಡಿಯನ್ನು ನೀಡುತ್ತದೆ. ಇನ್ನುಳಿದ ಶೇ. 50 ರಷ್ಟು ಮೊತ್ತವನ್ನು ಮಾತ್ರ ಫಲಾನುಭವಿ ರೈತರು ಪಾವತಿಸಬೇಕಾಗುತ್ತದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಪಶುಪಾಲಕರಿಗೂ ತಾಂತ್ರಿಕ ಉಪಕರಣಗಳನ್ನು ಕೊಳ್ಳಲು ಸಹಕಾರಿಯಾಗಿದೆ.

ಇದನ್ನೂ ಓದಿ: Crop Survey App-ಮುಂಗಾರು ಬೆಳೆ ಸಮೀಕ್ಷೆಗೆ ರೈತರ ಆಪ್ ಬಿಡುಗಡೆ, ಜುಲೈ 25 ಕೊನೆಯ ದಿನ!

Who Can Apply-ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು:

  • ಅರ್ಜಿದಾರರು ರಾಜ್ಯ ಖಾಯಂ ನಿವಾಸಿಯಾಗಿರಬೇಕು.
  • ರೈತರು ಹೈನುಗಾರಿಕೆಯಲ್ಲಿ ಕನಿಷ್ಠ ಅನುಭವ ಹೊಂದಿರಬೇಕು ಮತ್ತು ಅವರ ಬಳಿ ಕನಿಷ್ಠ 2 ರಾಸುಗಳು (ಜಾನುವಾರುಗಳು) ಇರಬೇಕಾದುದು ಕಡ್ಡಾಯವಾಗಿದೆ.
  • ಜೊತೆಗೆ ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ಜಾನುವಾರುಗಳನ್ನು ಸಾಕಿರುವುದಕ್ಕೆ ದೃಢೀಕರಣ ಪತ್ರ ಪಡೆದಿರಬೇಕು.
  • ಕಳೆದ 2 ವರ್ಷದಲ್ಲಿ ಈಗಾಗಲೇ ಈ ಯೋಜನೆಯಡಿಯಲ್ಲಿ ಸಬ್ಸಿಡಿಯನ್ನು ಪಡೆದವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಹ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಜಿ ಸಲ್ಲಿಸಲು 18 ಜುಲೈ 2026 ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ: Fish Farming Subsidy-ಮೀನು ಸಾಕಾಣಿಕೆ ಮಾಡಲು ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Cow Mat And Silage Bag Subsidy

FID Number-ಫ್ರೂಟ್ ಐಡಿ (Fruit ID) ಹೊಂದುವುದು ಕಡ್ಡಾಯ:

ಸರ್ಕಾರದ ಎಲ್ಲಾ ಕೃಷಿ ಸಂಬಂಧಿತ ಯೋಜನೆಗಳ ಸೌಲಭ್ಯ ಪಡೆಯಲು ರೈತರು ತಮ್ಮ ಹೆಸರಿನಲ್ಲಿ 'ಫ್ರೂಟ್ ಐಡಿ' (Fruit ID) ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ. ಇದುವರೆಗೆ ಫ್ರೂಟ್ ಐಡಿ ಮಾಡಿಸದ ರೈತರು ತಕ್ಷಣವೇ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರವನ್ನು ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ FID ಅನ್ನು ರಚನೆ ಮಾಡಿಕೊಳ್ಳಿ.

ಮೀಸಲಾತಿ ಹಾಗೂ ಎಲ್ಲ ಕ್ಷೇತ್ರಗಳಿಗೂ ವ್ಯಾಪ್ತಿ:

ಸರ್ಕಾರದ ನಿಯಮಾವಳಿಗಳ ಪ್ರಕಾರ ಈ ಯೋಜನೆಯಲ್ಲಿ ಮಹಿಳೆಯರು, ಅಂಗವಿಕಲರು ಹಾಗೂ ಅಲ್ಪಸಂಖ್ಯಾತ ಪಶುಪಾಲಕರಿಗೆ ವಿಶೇಷ ಮೀಸಲಾತಿ (Reservation) ಸೌಲಭ್ಯವನ್ನು ಕಲ್ಪಿಸಲಾಗಿದೆ. ಅಲ್ಲದೆ, ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಫಲಾನುಭವಿಗಳನ್ನು ಸಮಾನವಾಗಿ ಆಯ್ಕೆ ಮಾಡುವುದರಿಂದ ಇಡೀ ರಾಜ್ಯಾದ್ಯಂತ ಈ ಸೌಲಭ್ಯ ವಿಸ್ತರಣೆಯಾಗಲಿದೆ.

ಇದನ್ನೂ ಓದಿ: PUC Scholorship-ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ₹30,000 ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

How To Apply-ಎಲ್ಲಿ ಅರ್ಜಿ ಸಲ್ಲಿಸಬೇಕು?

ಆಸಕ್ತ ರೈತರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ತಮ್ಮ ತಾಲ್ಲೂಕಿನ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶು ಆಸ್ಪತ್ರೆಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ನಮೂನೆಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬೇಕು.

Documents For Application-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ರೈತರು ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ:

  • ಅರ್ಜಿದಾರರ ಆಧಾರ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ಪೋಟೋ
  • ರೇಶನ್ ಕಾರ್ಡ
  • ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ಜಾನುವಾರುಗಳನ್ನು ಸಾಕಿರುವುದಕ್ಕೆ ದೃಢೀಕರಣ ಪತ್ರ

Veterinary Department Helpline-ಇನ್ನು ಹೆಚ್ಚಿನ ಮಾಹಿತಿಗಾಗಿ ಇಲಾಖೆ ಸಹಾಯವಾಣಿ- 8277100200
ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: