SIR In Karnataka-ನಿಮ್ಮ ಮತದಾನದ ಹಕ್ಕನ್ನು ಇಂದೇ ಭದ್ರಪಡಿಸಿಕೊಳ್ಳಿ! ಇಂದೇ ನಮೂನೆ ಭರ್ತಿ ಮಾಡಿ!

July 5, 2026 | Siddesh
SIR In Karnataka-ನಿಮ್ಮ ಮತದಾನದ ಹಕ್ಕನ್ನು ಇಂದೇ ಭದ್ರಪಡಿಸಿಕೊಳ್ಳಿ! ಇಂದೇ ನಮೂನೆ ಭರ್ತಿ ಮಾಡಿ!
Share Now:

ಬೆಂಗಳೂರು: ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾದ ಚುನಾವಣೆಗಳಲ್ಲಿ ಪ್ರತಿಯೊಬ್ಬ ನಾಗರಿಕನ ಧ್ವನಿಯೂ ಅತ್ಯಂತ ಮಹತ್ವದ್ದಾಗಿರುತ್ತದೆ. ಆದರೆ, ಈ ಧ್ವನಿಗೆ ಅಧಿಕೃತ ಶಕ್ತಿ ಸಿಗುವುದು ನಾವು ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರನ್ನು ನೋಂದಾಯಿಸಿಕೊಂಡಾಗ ಮಾತ್ರ. ಪ್ರಸ್ತುತ ರಾಜ್ಯದಲ್ಲಿ 'ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) 2026' ಅಭಿಯಾನವನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬ ಅರ್ಹ ಯುವಕ-ಯುವತಿಯರು ಹಾಗೂ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಸುವರ್ಣ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. "ಮತದಾನದ ಹಕ್ಕು, ಜೀವನದ ಹಕ್ಕು; ಇದನ್ನು ಕಳೆದುಕೊಳ್ಳಬೇಡಿ" ಎಂಬ ಸಂದೇಶದೊಂದಿಗೆ ಆರಂಭವಾಗಿರುವ ಈ ಪ್ರಕ್ರಿಯೆಯು ಪ್ರತಿಯೊಬ್ಬ ಮತದಾರನಿಗೆ ತನ್ನ ಹೆಸರನ್ನು ಪರಿಶೀಲಿಸಲು ಮತ್ತು ತಿದ್ದುಪಡಿಗಳನ್ನು ಮಾಡಿಕೊಳ್ಳಲು ಅತ್ಯಂತ ಸುಲಭವಾದ ಮಾರ್ಗಗಳನ್ನು ಒದಗಿಸಿದೆ.

ಈ ಪರಿಷ್ಕರಣಾ ಅಭಿಯಾನವು ವ್ಯವಸ್ಥಿತವಾದ ಹಂತಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಜೂನ್ 30 ರಿಂದ ಜುಲೈ 29 ರವರೆಗೆ ನಿಮ್ಮ ಏರಿಯಾದ ಬೂತ್ ಮಟ್ಟದ ಅಧಿಕಾರಿಗಳು (BLO) ನಿಮ್ಮ ಮನೆ ಮನೆಗೆ ಭೇಟಿ ನೀಡಿ ಅಗತ್ಯ ಫಾರಂಗಳನ್ನು ನೀಡುವ ಹಾಗೂ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ ಗಣತಿ ನಮೂನೆಯನ್ನು ಭರ್ತಿ ಮಾಡಿ ನಿಮ್ಮ ಬಿಎಲ್ಒ ಅವರಿಗೆ ಸಲ್ಲಿಸಲು ಜುಲೈ 29, 2026 ಕೊನೆಯ ದಿನಾಂಕವಾಗಿತ್ತು. ಇದೀಗ ಮುಂದಿನ ಮಹತ್ವದ ಹಂತವಾಗಿ ಆಗಸ್ಟ್ 5 ರಂದು ಅಧಿಕಾರಿಗಳು ಸಿದ್ಧಪಡಿಸಿದ ಕರಡು (ಮೊದಲ) ಮತದಾರರ ಪಟ್ಟಿಯು ಪ್ರಕಟಗೊಳ್ಳಲಿದೆ. ಒಂದು ವೇಳೆ ನಿಮ್ಮ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲದಿದ್ದರೆ ಅಥವಾ ಅದರಲ್ಲಿ ಯಾವುದೇ ತಪ್ಪುಗಳಿದ್ದಲ್ಲಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.

ಇದನ್ನೂ ಓದಿ: Beauty Parlour Training-ನಿರುದ್ಯೋಗಿ ಮಹಿಳೆಯರಿಗೆ ಸುವರ್ಣಾವಕಾಶ: ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಅಹ್ವಾನ!

ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ರವರೆಗಿನ ಅವಧಿಯಲ್ಲಿ ಸಾರ್ವಜನಿಕರು ಸೂಕ್ತ ಫಾರಂಗಳನ್ನು ಭರ್ತಿ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಅಥವಾ ನೇರವಾಗಿ ತಮ್ಮ ಬಿಎಲ್ಒ (BLO) ಮೂಲಕ ಹೊಸದಾಗಿ ಹೆಸರು ಸೇರಿಸಲು ಅಥವಾ ತಿದ್ದುಪಡಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲಾ ರೀತಿಯ ತಿದ್ದುಪಡಿಗಳು ಹಾಗೂ ಆಕ್ಷೇಪಣೆಗಳ ಪರಿಶೀಲನೆಯ ನಂತರ, ಅಕ್ಟೋಬರ್ 7 ರಂದು ನಿಮ್ಮ ಹೆಸರಿನೊಂದಿಗೆ ಅಧಿಕೃತವಾದ ಅಂತಿಮ ಮತದಾರರ ಪಟ್ಟಿಯು ಬಿಡುಗಡೆಯಾಗಲಿದೆ. ನಿಮ್ಮ ಹತ್ತಿರದ ಬಿಎಲ್ಒ ಬಳಿ ಹೋಗಿ, voters.eci.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನಿಮ್ಮ ಮೊಬೈಲ್‌ನಲ್ಲಿ 'ECINET' ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ನೀವು ಉಚಿತವಾಗಿ ಮತ್ತು ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು.

SIR-ನಿಮ್ಮ ಗಣತಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ:

ಸಾರ್ವಜನಿಕರು SIR ನ ನಿಮ್ಮ ಗಣತಿ ನಮೂನೆಯನ್ನು ಬೂತ್ ಮಟ್ಟದ ಅಧಿಕಾರಿಗೆ(BLO) ಸಲ್ಲಿಸಲು 29 ಜುಲೈ 2026 ಕೊನೆಯ ದಿನಾಂಕವಾಗಿದೆ.

SIR Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

ಸಾರ್ವಜನಿಕರು ಆನ್ಲೈನ್ ಮೂಲಕವು ಸಹ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ SIR ಆನ್ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಲು ಅವಕಾಶವಿರುತ್ತದೆ:

Step-1: ನಾಗರಿಕರು ಮೊದಲಿಗೆ ಈ Download Now ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ ಅಧಿಕೃತ ECINET ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: District Ministers-ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ!

Step-2: ಇದಾದ ಬಳಿಕ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು SIR-2026 ಪುಟದಲ್ಲಿ ಗಣತಿ ನಮೂನೆಯನ್ನು ಭರ್ತಿ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

Step-3: ನಂತರ ನಿಮ್ಮ Mobile No ಅಥವಾ ವೋಟರ್ ಐಡಿಯಲ್ಲಿರುವ EPIC No ಅನ್ನು ನಮೂದಿಸಿ ಅಲ್ಲೇ ಇರುವ ಕ್ಯಾಪ್ಚ್ ಕೋಡ್ ಹಾಕಿ "Request OTP" ಬಟನ್ ಮೇಲೆ ಕ್ಲಿಕ್ ಮಾಡಿ OTP ನಮೂದಿಸಿ ಲಾಗಿನ್ ಅಗಿ.

Step-4: ಲಾಗಿನ್ ಅದ ನಂತರ ಮತದಾರರ ವಿವರಗಳನ್ನು ಪಡೆಯಲು ರಾಜ್ಯವನು ಆಯ್ಕೆ ಮಾಡಿ ಮತ್ತು ನಿಮ್ಮ ವೋಟರ್ ಐಡಿಯ EPIC ಸಂಖ್ಯೆಯನ್ನು ನಮೂದಿಸಿ ನಿಮ್ಮ ವಿವರವನ್ನು ಹುಡುಕಿ 2002ರ ಮತದಾರರ ಪಟ್ಟಿಯನ್ನು ನಂತರ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ವಿವರಗಳನ್ನು ಪರಿಶೀಲಿಸಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Gruhajyothi New Update-ಗೃಹಜ್ಯೋತಿ ಯೋಜನೆ ಉಚಿತ ವಿದ್ಯುತ್ ಪಡೆಯಲು ತಪ್ಪದೇ ಈ ಮಾಹಿತಿ ತಿಳಿಯಿರಿ!

SIR In Karnataka

ಇದನ್ನೂ ಓದಿ: NMMS ವಿದ್ಯಾರ್ಥಿವೇತನ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ!

SIR ಗಣತಿಯಲ್ಲಿ ನೀವು ಏನನ್ನು ಪರಿಶೀಲಿಸಬೇಕು?

ಸಾರ್ವಜನಿಕರು ನಿಮ್ಮ ಭಾಗದ BLO ಅಧಿಕಾರಿಗಳು ಮನೆ ಭೇಟಿ ಮಾಡಿದಾಗ ಈ ಕೆಳಗಿನ ಅಂಶಗಳನ್ನು ವೋಟರ್ ಐಡಿ ಕುರಿತು ಪರಿಶೀಲಿಸಿ:

  • ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಎಂದು ಖಚಿತಪಡಿಸಿಕೊಳ್ಳಿ.
  • ವೋಟರ್ ಲಿಸ್ಟ್ ನಲ್ಲಿರು ಹೆಸರಿನಲ್ಲಿ ಏನಾದರು ವ್ಯತ್ಯಾಸವಿದ್ದಲ್ಲಿ ತಿದ್ದುಪಡಿ ಬಗ್ಗೆ ಮಾಹಿತಿ ನೀಡಿ ಜೊತೆಗೆ SIR ಗಣತಿಯ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಇತ್ತೀಚಿನ ನಿಮ್ಮ ಪೋಟೋವನ್ನು ಹಚ್ಚಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅವರಿಂದ ಸ್ವೀಕೃತಿ ರಶೀದಿಯನ್ನು ಪಡೆದುಕೊಳ್ಳಿ.
  • ನಿಮ್ಮ ಮನೆಯಲ್ಲಿ 01 ಅಕ್ಟೋಬರ್ 2026 ರ ವೇಳೆಗೆ ಕನಿಷ್ಥ 18 ವರ್ಷ ತುಂಬುವ ಯುವಕ/ಯುವತಿ ಇದ್ದರೆ ಹೆಸರನ್ನು ನೋಂದಾಯಿಸುವ ಬಗ್ಗೆ ಮಾಹಿತಿ ಪಡೆಯಿರಿ.

ಇದನ್ನೂ ಓದಿ: Voter list-2026: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ತಪ್ಪದೇ ಈ ಮಾಹಿತಿ ತಿಳಿಯಿರಿ!

Voter ID Application-ಅರ್ಜಿ ಸಲ್ಲಿಸಲು ವಿವಿಧ ನಮೂನೆ ಲಭ್ಯ:

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದರ ಜೊತೆಗೆ ಸ್ಥಳೀಯವಾಗಿ BLO ಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಲು ಅವಕಾಶವಿದ್ದು ಇದಕ್ಕಾಗಿ ವಿವಿಧ ತಿದ್ದುಪಡಿವಾರು ಅರ್ಜಿ ನಮೂನೆಗಳಿದ್ದು ಇವುಗಳ ವಿವರ ಹೀಗಿದೆ:

  • ನಮೂನೆ 6: ಹೊಸದಾಗಿ ಮತದಾರರಾಗಿ ಹೆಸರು ನೋಂದಾಯಿಸಲು.
  • ನಮೂನೆ 7 : ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು.
  • ನಮೂನೆ 8: ವಿಳಾಸ ಬದಲಾವಣೆ, ಹೆಸರು/ಫೋಟೋ ತಿದ್ದುಪಡಿ ಮಾಡಲು ಅಥವಾ ಹೊಸ ವೋಟರ್ ಐಡಿ ಪಡೆಯಲು ಈ ನಮೂನೆಯನ್ನು ಬಳಸಿ ಅರ್ಜಿಯನ್ನು ಸಲ್ಲಿಸಬೇಕು.

Voter ID Helpline-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಾಯವಾಣಿ ವಿವರ:

ಈ ಪ್ರಕ್ರಿಯೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಅಥವಾ ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಸಾರ್ವಜನಿಕರು ಅಧಿಕೃತ ವೆಬ್‌ಸೈಟ್‌ಗಳಾದ www.ceo.karnataka.gov.in ಅಥವಾ voters.eci.gov.in ಗೆ ಭೇಟಿ ನೀಡಬಹುದು ಹಾಗೂ ಸರ್ಕಾರದ ಉಚಿತ ಸಹಾಯವಾಣಿ ಸಂಖ್ಯೆ 1950 ಕ್ಕೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: