Voter list-2026: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ತಪ್ಪದೇ ಈ ಮಾಹಿತಿ ತಿಳಿಯಿರಿ!

June 30, 2026 | Siddesh
Voter list-2026: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ತಪ್ಪದೇ ಈ ಮಾಹಿತಿ ತಿಳಿಯಿರಿ!
Share Now:

ಬೆಂಗಳೂರು: ಪ್ರಜಾಪ್ರಭುತ್ವದ ಅತಿ ದೊಡ್ಡ ಶಕ್ತಿಯಾಗಿರುವ ಮತದಾನದ ಹಕ್ಕನ್ನು ಚಲಾಯಿಸಲು ಅರ್ಹ ನಾಗರಿಕರೆಲ್ಲರಿಗೂ ಮುಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು "ವಿಶೇಷ ಸಮಗ್ರ ಪರಿಷ್ಕರಣೆ (SIR)" ಪ್ರಕ್ರಿಯೆಯನ್ನು ಹಮ್ಮಿಕೊಂಡಿದೆ. ಈ ವಿಶೇಷ ಅಭಿಯಾನದ ಪ್ರಮುಖ ಉದ್ದೇಶವು ರಾಜ್ಯದ ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದಾಗಿದೆ. ಮುಂಬರುವ ದಿನಗಳಲ್ಲಿ ನಡೆಯಲಿರುವ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಜಾಗೃತ ನಾಗರಿಕನೂ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಇರುವುದನ್ನು ಪರಿಶೀಲಿಸಿ, ಖಚಿತಪಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. 2026ರ ಅಕ್ಟೋಬರ್ 1ನೇ ದಿನಾಂಕವನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಲಾಗಿದ್ದು, ಅಷ್ಟರೊಳಗೆ 18 ವರ್ಷ ತುಂಬುವ ಎಲ್ಲಾ ಯುವಕ-ಯುವತಿಯರು ಈ ಪ್ರಕ್ರಿಯೆಯ ಸದುಪಯೋಗ ಪಡೆದುಕೊಳ್ಳಬಹುದು.

ಈ ಮಹತ್ವದ ಅಭಿಯಾನದ ಯಶಸ್ಸಿಗಾಗಿ ಬೂತ್ ಮಟ್ಟದ ಅಧಿಕಾರಿಗಳು (BLO) ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೂನ್ 30, 2026 ರಿಂದ ಜುಲೈ 29, 2026 ರವರೆಗೆ ಬಿಎಲ್‌ಓ ಅಧಿಕಾರಿಗಳು ಪ್ರತಿಯೊಂದು ಮನೆ ಮನೆಗೂ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಅವಧಿಯಲ್ಲಿ ನಿಮ್ಮ ಮನೆಗೆ ಬರುವ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸುವುದು ನಿಮ್ಮ ಕರ್ತವ್ಯವಾಗಿದೆ. ಅಧಿಕಾರಿಗಳು ಒಲಾಗಿಸುವ ಅರ್ಜಿ ನಮೂನೆಗಳನ್ನು ಭರ್ತಿ ಮಾಡುವ ಮೂಲಕ ಹೊಸ ಮತದಾರರ ನೋಂದಣಿ, ಹೆಸರು ತೆಗೆದುಹಾಕುವುದು ಅಥವಾ ಮತದಾರರ ಗುರುತಿನ ಚೀಟಿಯಲ್ಲಿರುವ ತಪ್ಪುಗಳನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಗಸ್ಟ್ 5, 2026 ರಂದು ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು.

ಇದನ್ನೂ ಓದಿ: Dairy Farmers App-ರೈತರು ಪ್ರತಿ ನಿತ್ಯ ಡೈರಿಗೆ ಹಾಕುವ ಹಾಲಿನ ಸಂಪೂರ್ಣ ಮಾಹಿತಿಯನ್ನು ಮೊಬೈಲ್ ನಲ್ಲೇ ಪಡೆಯಬಹುದು!

ತಂತ್ರಜ್ಞಾನದ ಇಂದಿನ ಯುಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಆನ್‌ಲೈನ್ ಮೂಲಕವೂ ಮತದಾರರ ಪಟ್ಟಿ ಪರಿಶೀಲನೆಗೆ ಮುಕ್ತ ಅವಕಾಶ ನೀಡಲಾಗಿದೆ. ನಾಗರಿಕರು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (voters.eci.gov.in) ಅಥವಾ ECINET ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂಬುದನ್ನು ಮನೆಯಲ್ಲೇ ಕುಳಿತು ಸುಲಭವಾಗಿ ಪರಿಶೀಲಿಸಬಹುದು. ಒಂದು ವೇಳೆ ಕರಡು ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಅಥವಾ ಬದಲಾವಣೆಗಳಿದ್ದರೆ, ಆಗಸ್ಟ್ 5 ರಿಂದ ಸೆಪ್ಟೆಂಬರ್ 4, 2026 ರೊಳಗಿನ ನಿಗದಿತ ಅವಧಿಯಲ್ಲಿ ಆಕ್ಷೇಪಣೆ ಹಾಗೂ ಹಕ್ಕುಗಳನ್ನು ಸಲ್ಲಿಸಬಹುದಾಗಿದೆ. ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಅಕ್ಟೋಬರ್ 7, 2026 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.

Voter ID Correction-ಈ ಅಭಿಯಾನದ ಮುಖ್ಯಾಂಶಗಳು:

ಮನೆ ಮನೆಗೆ ಅಧಿಕಾರಿಗಳ ಭೇಟಿ:

ಜೂನ್ 30 ರಿಂದ ಜುಲೈ 29, 2026 ರ ಅವಧಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ ಎನ್ವಿರಾನ್‌ಮೆಂಟ್ ಫಾರಂಗಳನ್ನು ವಿತರಿಸಿ, ಭರ್ತಿ ಮಾಡಲು ಸಾರ್ವಜನಿಕರಿಗೆ ಸೂಕ್ತ ನೆರವು ನೀಡಲಿದ್ದಾರೆ.

ಇದನ್ನೂ ಓದಿ: Pulse Polio Campaign-5 ವರ್ಷದೊಳಗಿನ ಪ್ರತಿ ಮಗುವಿಗೆ ಪೋಲಿಯೋ ಲಸಿಕೆ!ಯಾವುದೇ ನಿರ್ಲಕ್ಷ್ಯ ಮಾಡಬೇಡಿ!

Voter list-2026

ಕರಡು ಪಟ್ಟಿ ಪ್ರಕಟಣೆ ಮತ್ತು ಆಕ್ಷೇಪಣೆ ಸಲ್ಲಿಕೆ:

ಅಗಸ್ಟ್ 05, 2026 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಸಾರ್ವಜನಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಆಗಸ್ಟ್ 05 ರಿಂದ ಸೆಪ್ಟೆಂಬರ್ 04, 2026 ರವರೆಗೆ ಕಾಲಾವಕಾಶ ನೀಡಲಾಗಿದೆ.

ವಿವಿಧ ಅರ್ಜಿ ನಮೂನೆಗಳ ಲಭ್ಯತೆ:

ಹೊಸ ಮತದಾರರ ನೋಂದಣಿಗಾಗಿ 'ನಮೂನೆ 6', ಅನಿವಾಸಿ ಭಾರತೀಯರಿಗಾಗಿ 'ನಮೂನೆ 6ಎ', ಹೆಸರು ತೆಗೆದುಹಾಕಲು 'ನಮೂನೆ 7' ಹಾಗೂ ವಿಳಾಸ ಬದಲಾವಣೆ ಅಥವಾ ತಿದ್ದುಪಡಿಗಳಿಗಾಗಿ 'ನಮೂನೆ 8' ಅನ್ನು ಬಳಸಬಹುದಾಗಿದೆ.

ಇದನ್ನೂ ಓದಿ: District Ministers-ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ!

ಡಿಜಿಟಲ್ ವೇದಿಕೆಗಳ ಸೌಲಭ್ಯ:

ಸಾರ್ವಜನಿಕರು ಆನ್‌ಲೈನ್‌ನಲ್ಲಿ ಇಲಾಖೆಯ ಅಧಿಕೃತ ವೆಬ್‌ಸೈಟ್ (www.ceo.karnataka.gov.in) ಅಥವಾ ECINET ಮೊಬೈಲ್ ಆಪ್ ಬಳಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು ಮತ್ತು ಅರ್ಜಿ ಸಲ್ಲಿಸಬಹುದು.

ಅಂತಿಮ ಪಟ್ಟಿ ಪ್ರಕಟಣೆ ಮತ್ತು ಸಹಾಯವಾಣಿ:

ಎಲ್ಲಾ ಆಕ್ಷೇಪಣೆಗಳ ಇತ್ಯರ್ಥದ ಬಳಿಕ ಅಕ್ಟೋಬರ್ 07, 2026 ರಂದು ಅಧಿಕೃತ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಉಚಿತ ಸಹಾಯವಾಣಿ ಸಂಖ್ಯೆ 1950 ಅನ್ನು ಸಂಪರ್ಕಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: