e-Swathu Document-ಕೃಷಿ ಜಮೀನಿನ ಕಟ್ಟಡಕ್ಕೆ ಇ-ಸ್ವತ್ತು ಪಡೆಯಲು ಈ ದಾಖಲೆ ಕಡ್ಡಾಯ!

November 19, 2026 | Siddesh
e-Swathu Document-ಕೃಷಿ ಜಮೀನಿನ ಕಟ್ಟಡಕ್ಕೆ ಇ-ಸ್ವತ್ತು ಪಡೆಯಲು ಈ ದಾಖಲೆ ಕಡ್ಡಾಯ!
Share Now:

ಈಗಾಗಲೇ ನಮ್ಮ ಪುಟದಲ್ಲಿ ಹಿಂದಿನ ಲೇಖನದಲ್ಲಿ ಕೃಷಿ ಜಮೀನಿನಲ್ಲಿ ನಿರ್ಮಾಣ ಮಾಡಿಕೊಂಡಿರುವ ಕಟ್ಟಡ ಮತ್ತು ಮನೆಗಳಿಗೆ ಗ್ರಾಮ ಪಂಚಾಯಿತಿಯಿಂದ ಅಧಿಕೃತವಾಗಿ ಇ-ಸ್ವತ್ತು ದಾಖಲೆಯನ್ನು ಪಡೆಯಲು ಸರ್ಕಾರದಿಂದ ಪ್ರಸ್ತುತ ಇರುವ ನಿಯಮದಲ್ಲಿ ಸಡಿಲಿಕೆಯನ್ನು ಮಾಡಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದ್ದು ಇದರ ಮುಂದುವರಿದ ಭಾಗವಾಗಿ ಈ ಲೇಖನದಲ್ಲಿ ಇ-ಸ್ವತ್ತು ಪಡೆಯಲು ಯಾವೆಲ್ಲ ದಾಖಲೆಗಳು ಕಡ್ಡಾಯವಾಗಿ ಸಲ್ಲಿಸಬೇಕು ಎನ್ನುವುದ ಬಗ್ಗೆ ತಿಳಿಸಲಾಗಿದೆ.

ನಮ್ಮ ರಾಜ್ಯದಲ್ಲಿ ಕೃಷಿ ಜಮೀನಿನಲ್ಲಿ ಮನೆ ಮತ್ತು ಇನ್ನಿತರೆ ಉದ್ದೇಶಕ್ಕಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿ ಅನೇಕ ವರ್ಷಗಳಿಂದ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಅಧಿಕೃತ ಇ-ಸ್ವತ್ತು ದಾಖಲೆಯನ್ನು ಪಡೆಯಲು ಸಾದ್ಯವಾಗದೇ ಇರುವವರು ದೊಡ್ಡ ಸಂಖ್ಯೆಯಲ್ಲಿ ಇದ್ದು ಈ ತಾಂತ್ರಿಕ ತೊಂದರೆಗಳನ್ನು ನಿವಾರಣೆ ಮಾಡಲು ಪ್ರಸ್ತುತ ಗ್ರಾಮ ಪಂಚಾಯಿತಿಯಿಂದ ಇ-ಸ್ವತ್ತು ದಾಖಲೆಯನ್ನು ವಿತರಣೆ ಮಾಡಲು ಇರುವ ನಿಯಮದಲ್ಲಿ ಸಡಿಲಿಕೆಯನ್ನು ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: Ration Card KYC-ರೇಶನ್ ಕಾರ್ಡದಾರರಿಗೆ ಮಹತ್ವದ ಸುದ್ದಿ! ಇ-ಕೆವೈಸಿಯಲ್ಲಿ ನೂತನ ಬದಲಾವಣೆ ಜಾರಿ!

ಅನೇಕ ಜನರು ಈ ಬಗ್ಗೆ ಅಂಕಣವನ್ನು ವಿವಿಧ ಮಾಧ್ಯಮದಲ್ಲಿ ನೋಡಿ ತಿಳಿದಿದ್ದು ಅದರೆ ಈ ಯೋಜನೆಯ ಪ್ರಯೋಜನವನ್ನು ಪಡೆಯುವುದು ಹೇಗೆ? ಇದಕ್ಕಾಗಿ ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು? ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ ಎಂದು ಹಲವು ಪ್ರಶ್ನೆಗಳನ್ನು ಕೇಳಿದ್ದು ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.

Required Documents For e-swathu: ಇ-ಸ್ವತ್ತು ಪಡೆಯಲು ಒದಗಿಸಬೇಕಾದ ದಾಖಲೆಗಳು:

ಗ್ರಾಮೀಣ ಪ್ರದೇಶಗಳಲ್ಲಿ ಸ್ವಂತ ಕೃಷಿ ಜಮೀನು ಹೊಂದಿದ್ದು, ಅದರಲ್ಲಿ ಮನೆ ಅಥವಾ ಕಟ್ಟಡ ನಿರ್ಮಿಸಿಕೊಂಡಿರುವ ಮಾಲೀಕರಿಗೆ ಮಹತ್ವದ ಮಾಹಿತಿ. ಇಂತಹ ಕಟ್ಟಡಗಳ ಆಸ್ತಿ ದಾಖಲೆಗಳನ್ನು ಕ್ರಮಬದ್ಧಗೊಳಿಸಿ ಇ-ಸ್ವತ್ತು ಪಡೆಯಲು ಇದೀಗ ಅವಕಾಶವಿದ್ದು, ಅರ್ಹ ಆಸ್ತಿ ಮಾಲೀಕರು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಮುಖ್ಯವಾಗಿದೆ.

ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳ ಆಸ್ತಿ ಮಾಲೀಕರಿಗೆ ಆಸ್ತಿಯ ಅಧಿಕೃತ ದಾಖಲೆಗಳನ್ನು ಒದಗಿಸುವ ನಿಟ್ಟಿನಲ್ಲಿ ಭೂ ಗ್ಯಾರಂಟಿ ಯೋಜನೆಯಡಿ ಗ್ರಾಮೀಣ ಆಸ್ತಿಗಳಿಗೆ ಇ-ಸ್ವತ್ತು ವಿತರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹಂಚಿಕೊಳ್ಳಲಾಗಿದೆ. ವಿಶೇಷವಾಗಿ ಕೃಷಿ ಜಮೀನಿನಲ್ಲಿ ಮನೆ ಅಥವಾ ಕಟ್ಟಡ ನಿರ್ಮಿಸಿಕೊಂಡಿರುವವರು ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಇದನ್ನೂ ಓದಿ: BPL Ration Card-ಪ್ರತಿ ತಿಂಗಳು ರೇಶನ್ ಪಡೆಯಲು ನ್ಯಾಯಬೆಲೆ ಅಂಗಡಿ ಆಯ್ಕೆಗೆ ನೂತನ ವ್ಯವಸ್ಥೆ ಜಾರಿ!

1) ಕೃಷಿ ಭೂಮಿಯಲ್ಲಿ ನಿರ್ಮಾಣವಾಗಿರುವ ಕಟ್ಟಡ/ಮನೆಗೆ ಅಗತ್ಯವಿರುವ ದಾಖಲೆಗಳು:

  • RTC (ಪಹಣಿ) ಪ್ರತಿ: ಕೃಷಿ ಜಮೀನಿಗೆ ಸಂಬಂಧಿಸಿದ ಇತ್ತೀಚಿನ ಪಹಣಿ ದಾಖಲೆಯನ್ನು ಒದಗಿಸಬೇಕು.
  • ನೋಂದಾಯಿತ ಕ್ರಯ ಪತ್ರ(ಲಭ್ಯವಿದ್ದಲ್ಲಿ ಮಾತ್ರ)
  • ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.
  • ವಿದ್ಯುತ್ ಬಿಲ್(07/04/2025ರಿಂದ ಪಾವತಿಸಿದ ವಿದ್ಯುತ್ ಬಿಲ್‌ಗಳನ್ನು ಸಲ್ಲಿಸಬೇಕು)
  • ಮಾಲೀಕರ ಪೋಟೋ.
  • ತೆರಿಗೆ ಪಾವತಿ ರಸೀದಿ(ಆಸ್ತಿಗೆ ಸಂಬಂಧಿಸಿದ ತೆರಿಗೆ ಪಾವತಿಸಿರುವ ರಸೀದಿಯನ್ನು ಒದಗಿಸಬೇಕು ಲಭ್ಯವಿದ್ದಲ್ಲಿ)
  • ಆಸ್ತಿ ಉದ್ದಳತೆ ಮತ್ತು ಚಕ್ಕುಬಂದಿ ವಿವರ(ಕಟ್ಟಡ ಇರುವ ಜಮೀನಿನ ಅಳತೆ ಹಾಗೂ ಅದರ ಗಡಿಗಳ ವಿವರಗಳನ್ನು ಒದಗಿಸಬೇಕು)

ಇದನ್ನೂ ಓದಿ: Agriculture Subsidy Scheme-ಕೃಷಿ ಇಲಾಖೆಯಿಂದ ವಿವಿಧ ಯಂತ್ರಗಳ ಖರೀದಿಗೆ ಶೇ 50% ಸಬ್ಸಿಡಿ!ಇಲ್ಲಿದೆ ಸಂಪೂರ್ಣ ಮಾಹಿತಿ!

2) ಗ್ರಾಮಠಾಣಾ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ಅಗತ್ಯವಿರುವ ದಾಖಲೆಗಳು:

  • ಆಧಾರ್ ಕಾರ್ಡ್.
  • ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.
  • 07/04/2025ರಿಂದ ಪಾವತಿಸಿದ ವಿದ್ಯುತ್ ಬಿಲ್.
  • ವಂಶವೃಕ್ಷ (ಮೂಲ ಮಾಲೀಕರು ಮರಣ ಹೊಂದಿದ್ದಲ್ಲಿ).
  • ಮರಣ ಪ್ರಮಾಣ ಪತ್ರ (ಮೂಲ ಮಾಲೀಕರು ಮರಣ ಹೊಂದಿದ್ದಲ್ಲಿ).
  • ಮಾಲೀಕರ ಪೋಟೋ
  • ತೆರಿಗೆ ಪಾವತಿ ರಸೀದಿ.
  • ಆಸ್ತಿ ಉದ್ದಳತೆ ಮತ್ತು ಚಕ್ಕುಬಂದಿ ವಿವರ.

ಇದನ್ನೂ ಓದಿ: Janaushadhi Kendra-ಜನೌಷಧಿ ಕೇಂದ್ರ ತೆರೆಯಲು ಅರ್ಜಿ ಆಹ್ವಾನ! ಸ್ವಂತ ಉದ್ಯಮ ಆರಂಭಿಸಲು ಸುವರ್ಣಾವಕಾಶ!

e-Swathu Application-ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ?

ಇ-ಸ್ವತ್ತು ದಾಖಲೆಯನ್ನು ಪಡೆಯಲು ಆಸ್ತಿಯ ಮಾಲೀಕರು ತಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಯನ್ನು ನೇರವಾಗಿ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು ಬಳಿಕ ಅರ್ಜಿಯನ್ನು ಪರಿಶೀಲಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ಭೇಟಿ ಮಾಡಿ ಅಗತ್ಯ ವಿವರಗಳನ್ನು ಪಡೆದು ಬಳಿಕ ನಿಮ್ಮ ಆಸ್ತಿಯ ವಿವರವನ್ನು ಇ-ಸ್ವತ್ತು ತಂತ್ರಾಂಶದಲ್ಲಿ ದಾಖಲಿಸಿ ಡಿಜಿಟಲ್ ಸಹಿಯನ್ನು ಮಾಡಿ ನಿಗದಿತ ಶುಲ್ಕವನ್ನು ಪಾವತಿಸಿದ ನಂತರ 45-60 ದಿನದ ಒಳಗಾಗಿ ನಿಮಗೆ ಇ-ಸ್ವತ್ತು ದಾಖಲೆಯನ್ನು ಒದಗಿಸುತ್ತಾರೆ.

ಇದನ್ನೂ ಓದಿ: Anganwadi Worker-ಅಂಗನವಾಡಿಯಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದು ಹೇಗೆ! ಇಲ್ಲಿದೆ ಸಂಪೂರ್ಣ ಮಾಹಿತಿ!

e-Swathu Website-ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಉಪಯುಕ್ತ ವಿವರ:

  • ಅಧಿಕೃತ ಇ-ಸ್ವತ್ತು ವೆಬ್ಸೈಟ್-Click Here
  • ಸಹಾಯವಾಣಿ- 9483476000

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: