Ration Card KYC-ರೇಶನ್ ಕಾರ್ಡದಾರರಿಗೆ ಮಹತ್ವದ ಸುದ್ದಿ! ಇ-ಕೆವೈಸಿಯಲ್ಲಿ ನೂತನ ಬದಲಾವಣೆ ಜಾರಿ!

November 19, 2026 | Siddesh
Ration Card KYC-ರೇಶನ್ ಕಾರ್ಡದಾರರಿಗೆ ಮಹತ್ವದ ಸುದ್ದಿ! ಇ-ಕೆವೈಸಿಯಲ್ಲಿ ನೂತನ ಬದಲಾವಣೆ ಜಾರಿ!
Share Now:

ನಮ್ಮ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರೇಶನ್ ಕಾರ್ಡದಾರರಿಗೆ ಇ-ಕೆವೈಸಿ ಮಾಡಿಸಿಕೊಳ್ಳವ ನಿಯಮದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯನ್ನು ಮಾಡಿದ್ದು ಈ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.

6 ವರ್ಷದ ಮಕ್ಕಳ ಇ-ಕೆವೈಸಿಗೆ OTP ಸೌಲಭ್ಯವನ್ನು ಜಾರಿಗೆ ತರಲಾಗಿದೆ ಜೊತೆಗೆ ಕೆವೈಸಿ ಮಾಡಿಕೊಳ್ಳಲು ಕೊನೆಯ ದಿನಾಂಕ ಮುಂದೂಡಿಕೆ ಮಾಡಲಾಗಿದ್ದು ಅದಲ್ಲೇ ಮನೆಯಲ್ಲೇ ಕುಳಿತು ಕೆವೈಸಿಯನ್ನು ಪೂರ್ಣಗೊಳಿಸಲು ಅನ್ನಸೇವ(Anna Seva Mobile App)ಮೊಬೈಲ್ ಅಪ್ಲಿಕೇಶನ್ ಅನ್ನು ಈಗಾಗಲೇ ಬಿಡುಗಡೆ ಮಾಡಿದ್ದು ಈ ಕುರಿತು ಅವಶ್ಯಕ ಮತ್ತು ಉಪಯುಕ್ತ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: BPL Ration Card-ಪ್ರತಿ ತಿಂಗಳು ರೇಶನ್ ಪಡೆಯಲು ನ್ಯಾಯಬೆಲೆ ಅಂಗಡಿ ಆಯ್ಕೆಗೆ ನೂತನ ವ್ಯವಸ್ಥೆ ಜಾರಿ!

ಹಾಗಾದರೆ ಇ-ಕೆವೈಸಿ ಮಾಡಲು ಕೊನೆಯ ದಿನಾಂಕ ಯಾವುದು? ಮೊಬೈಲ್ ಮೂಲಕ ಹೇಗೆ ಮಾಡಿಸಬೇಕು? ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಮಾಡಿಸಲು ಯಾವ ದಾಖಲೆಗಳು ಬೇಕು? ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಸೌಲಭ್ಯಕ್ಕೆ ಏನಾದರೂ ತೊಂದರೆಯಾಗುತ್ತದೆಯೇ? ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ತಿಳಿಯೋಣ.

Ration Card KYC Last Date-ಇ-ಕೆವೈಸಿ ಮಾಡಲು ಕೊನೆಯ ದಿನಾಂಕ ಮುಂದೂಡಿಕೆ:

ರಾಜ್ಯದ ಪಡಿತರ ಚೀಟಿದಾರರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಹಾರ ಇಲಾಖೆಯು ನವೆಂಬರ್ 30, 2026ರವರೆಗೆ ಕಾಲಾವಕಾಶ ನೀಡಿದೆ. ಈ ಹಿಂದೆ ನವೆಂಬರ್ 10 ಕೊನೆಯ ದಿನಾಂಕವಾಗಿತ್ತು. ಆದರೆ ಇನ್ನೂ ಲಕ್ಷಾಂತರ ಫಲಾನುಭವಿಗಳ ಇ-ಕೆವೈಸಿ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.

ಹೀಗಾಗಿ ಎಪಿಎಲ್, ಬಿಪಿಎಲ್ ಸೇರಿದಂತೆ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಅರ್ಹ ಫಲಾನುಭವಿಗಳು ತಮ್ಮ ಇ-ಕೆವೈಸಿ ಪೂರ್ಣಗೊಂಡಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಕೊನೆಯ ದಿನದವರೆಗೆ ಕಾಯದೆ ಆದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ: Agriculture Subsidy Scheme-ಕೃಷಿ ಇಲಾಖೆಯಿಂದ ವಿವಿಧ ಯಂತ್ರಗಳ ಖರೀದಿಗೆ ಶೇ 50% ಸಬ್ಸಿಡಿ!ಇಲ್ಲಿದೆ ಸಂಪೂರ್ಣ ಮಾಹಿತಿ!

Ration Card e-KYC Importance-ಇ-ಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ?

ಆಹಾರ ಇಲಾಖೆಯಿಂದ ಕಳೆದ 2 ತಿಂಗಳಿನಿಂದ ಸತತ ಪ್ರಚಾರದ ನಡುವೆಯು ಸಹ ಅನೇಕ ರೇಶನ್ ಕಾರ್ಡದಾರರು ದೊಡ್ಡ ಸಂಖ್ಯೆಯಲ್ಲಿ ಇನ್ನು ಸಹ ಇ-ಕೆವೈಸಿಯನ್ನು ಮಾಡಿರುವುದಿಲ್ಲ ಕೆವೈಸಿ ಮಾಡಿಸದ್ದಿದಲ್ಲಿ ಸಾರ್ವಜನಿಕರು ಹಲವು ಸರ್ಕಾರಿ ಯೋಜನೆಯ ಪ್ರಯೋಜನ ಪಡೆಯಲು ಅನರ್ಹರಾಗುತ್ತಾರೆ.

ಈ ಸಂಬಂಧ ಪಡಿತರ ಚೀಟಿಯಲ್ಲಿರುವ ಅರ್ಹ ಫಲಾನುಭವಿಗಳ ಇ-ಕೆವೈಸಿ ಪೂರ್ಣಗೊಳಿಸುವುದು ಬಹಳ ಮುಖ್ಯವಾಗಿದೆ. ನಿಗದಿತ ಅವಧಿಯೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಇದರಿಂದ ಪಡಿತರ ವಿತರಣೆಯಲ್ಲಿ ಅಥವಾ ಅನ್ನಭಾಗ್ಯ ಯೋಜನೆಯ ಸೌಲಭ್ಯಗಳು ಸ್ಥಗಿತವಾಗುತ್ತವೆ.

ಆದ್ದರಿಂದ ನಿಮ್ಮ ಕುಟುಂಬದ ಪ್ರತಿಯೊಬ್ಬ ಅರ್ಹ ಸದಸ್ಯರ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಿ ಬಾಕಿ ಇದ್ದರೆ ಕೂಡಲೇ ಪೂರ್ಣಗೊಳಿಸಿಕೊಳ್ಳಿ.

ಇದನ್ನೂ ಓದಿ: Janaushadhi Kendra-ಜನೌಷಧಿ ಕೇಂದ್ರ ತೆರೆಯಲು ಅರ್ಜಿ ಆಹ್ವಾನ! ಸ್ವಂತ ಉದ್ಯಮ ಆರಂಭಿಸಲು ಸುವರ್ಣಾವಕಾಶ!

How To Apply For Ration Card eKYC-ಇ-ಕೆವೈಸಿಯನ್ನು ಎಲ್ಲಿ ಮಾಡಿಸಬೇಕು?

ಪಡಿತರ ಚೀಟಿದಾರರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಎರಡು ವಿಧಾನಗಳಿವೆ.

ವಿಧಾನ-1: ಅನ್ನ ಸೇವೆ ಮೊಬೈಲ್ ಆ್ಯಪ್ ಮೂಲಕ(Anna Seva App):

ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶವಿದೆ. ಇದಕ್ಕಾಗಿ ಅಧಿಕೃತ Anna Seve ಮೊಬೈಲ್ ಅಪ್ಲಿಕೇಶನ್ ಬಳಸಬಹುದು. ಆ್ಯಪ್‌ನಲ್ಲಿ ಅಗತ್ಯ ವಿವರಗಳನ್ನು ನಮೂದಿಸಿ OTP ದೃಢೀಕರಣ ಹಾಗೂ ಫೇಸ್ ಅಥೆಂಟಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

Anna Seva App Download Link- Download Now

ವಿಧಾನ-2: ನ್ಯಾಯಬೆಲೆ ಅಂಗಡಿ ಮೂಲಕ:

ಮೊಬೈಲ್ ಮೂಲಕ ಇ-ಕೆವೈಸಿ ಮಾಡಲು ಸಾಧ್ಯವಾಗದವರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಬಹುದು. ಅಲ್ಲಿ ಆಹಾರ ಇಲಾಖೆಯ AHARA ತಂತ್ರಾಂಶದ ಮೂಲಕ ಅಗತ್ಯ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು.

ಇದನ್ನೂ ಓದಿ: Anganwadi Worker-ಅಂಗನವಾಡಿಯಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದು ಹೇಗೆ! ಇಲ್ಲಿದೆ ಸಂಪೂರ್ಣ ಮಾಹಿತಿ!

Ration Card eKYC Documents-ಇ-ಕೆವೈಸಿ ಮಾಡಲು ಅಗತ್ಯವಿರುವ ದಾಖಲೆಗಳು ಯಾವುವು?

ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಮಾನ್ಯವಾಗಿ ಈ ಕೆಳಗಿನ ದಾಖಲೆಗಳು ಮತ್ತು ವಿವರಗಳು ಅತ್ಯವಶ್ಯಕ.

  • ಕುಟುಂಬದ ಪಡಿತರ ಚೀಟಿ/ರೇಷನ್ ಕಾರ್ಡ್.
  • ಸದಸ್ಯರ ಆಧಾರ್ ಕಾರ್ಡ್.
  • ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.
  • OTP ಸ್ವೀಕರಿಸಲು ಮೊಬೈಲ್ ಫೋನ್.

ಅನ್ನ ಸೇವೆ ಆ್ಯಪ್ ಮೂಲಕ ಮಾಡುವುದಾದರೆ ಅಗತ್ಯವಿರುವ ಮೊಬೈಲ್ ಮತ್ತು ಫೇಸ್ ದೃಢೀಕರಣ ನೀಡಬೇಕಾಗುತ್ತದೆ.

Ahara Website-ಇನ್ನು ಹೆಚ್ಚಿನ ವಿವರ ತಿಳಿಯಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: