Dairy Farmers App-ರೈತರು ಪ್ರತಿ ನಿತ್ಯ ಡೈರಿಗೆ ಹಾಕುವ ಹಾಲಿನ ಸಂಪೂರ್ಣ ಮಾಹಿತಿಯನ್ನು ಮೊಬೈಲ್ ನಲ್ಲೇ ಪಡೆಯಬಹುದು!

June 29, 2026 | Siddesh
Dairy Farmers App-ರೈತರು ಪ್ರತಿ ನಿತ್ಯ ಡೈರಿಗೆ ಹಾಕುವ ಹಾಲಿನ ಸಂಪೂರ್ಣ ಮಾಹಿತಿಯನ್ನು ಮೊಬೈಲ್ ನಲ್ಲೇ ಪಡೆಯಬಹುದು!
Share Now:

ಹೈನುಗಾರಿಕೆಯು ನಮ್ಮ ದೇಶದ ರೈತಾಪಿ ವರ್ಗದಲ್ಲಿ ಒಂದು ಉತ್ತಮ ಸ್ಥಿರ ಆದಾಯವನ್ನು ತರುವ ಉಪಕಸುಬು ಆಗಿದ್ದು ರೈತರು KMF ಡೈರಿಗಳಿಗೆ ಪ್ರತಿ ನಿತ್ಯ ಪೂರೈಕೆ ಮಾಡುವ ಹಾಲಿನ ಪ್ರಮಾಣ ಎಷ್ಟು? ಪಾವತಿ ಮೊತ್ತ, ಪ್ಯಾಟ್ ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ರೈತರು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಲು ಅವಕಾಶವಿದ್ದು ಈ ಬಗ್ಗೆ ಒಂದಿಷ್ಟು ಅಗತ್ಯ ಮತ್ತು ಉಪಯುಕ್ತ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ ವತಿಯಿಂದ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ತಂತ್ರಜ್ಞಾನದ ನೆರವನ್ನು ಒದಗಿಸಲು "Automatic Milk Collection System” (AMCS) ತಾಂತ್ರಿಕತೆಯ ಆಧಾರದ ಮೇಲೆ AMCS Farmer’s App ಅಭಿವೃದ್ಧಿಪಡಿಸಿದ್ದು ರೈತರು ಗೂಗಲ ಪ್ಲೈ ಸ್ಟೋರ್ ಪ್ರವೇಶ ಮಾಡಿ ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಕೇವಲ ಒಂದೆರ ಕ್ಲಿಕ್ ನಲ್ಲಿ ರೈತರು ಪ್ರತಿ ನಿತ್ಯ ಕೆ.ಎಂ.ಎಫ್ ಡೈರಿಗೆ ಹಾಕುವ ಹಾಲಿನ ಸಂಪೂರ್ಣ ವಿವರವನ್ನು ಇಲ್ಲಿ ಚೆಕ್ ಮಾಡಬಹುದು.

ಇದನ್ನೂ ಓದಿ: Pulse Polio Campaign-5 ವರ್ಷದೊಳಗಿನ ಪ್ರತಿ ಮಗುವಿಗೆ ಪೋಲಿಯೋ ಲಸಿಕೆ!ಯಾವುದೇ ನಿರ್ಲಕ್ಷ್ಯ ಮಾಡಬೇಡಿ!

ಈ ಲೇಖನದಲ್ಲಿ AMCS Farmer’s App ಎಂದರೇನು? AMCS Farmer’s App ಹೇಗೆ ಕೆಲಸ ಮಾಡುತ್ತದೆ? ರೈತರಿಗೆ AMCS Farmer’s App ನಿಂದ ಆಗುವ ಪ್ರಯೋಜನಗಳೇನು? AMCS Farmer’s App ಉಪಯೋಗಿಸುವುದು ಹೇಗೆ? ಈ ಎಲ್ಲಾ ವಿಷಯಗಳ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

AMCS Farmer’s App ಎಂದರೇನು?

ಹಸುಗಳನ್ನು ಸಾಕಾಣಿಕೆಯನ್ನು ಮಾಡಿರುವ ರೈತರು ಪ್ರತಿ ನಿತ್ಯ ಉತ್ಪಾದನೆ ಆಗುವ ಹಾಲನ್ನು ತಮ್ಮ ಹಳ್ಳಿಯಲ್ಲಿರುವ KMF ಡೈರಿಗಳಿಗೆ ಹಾಕುತ್ತಾರೆ ಅಲ್ಲಿ ರೈತರು ಎಷ್ಟು ಪ್ರಮಾಣದ ಹಾಲನ್ನು ಈ ದಿನ ಹಾಕಿದ್ದಾರೆ ಪ್ಯಾಟ್ ಎಷ್ಟು ಬಂದಿದ್ದೆ? ಇದಕ್ಕೆ ಒಟ್ಟು ಮೊತ್ತದ ವಿವರವುಳ್ಳ ಚೀಟಿಯನ್ನು ನೀಡಲಾಗುತ್ತದೆ. ಈ ಎಲ್ಲಾ ಮಾಹಿತಿಯನ್ನು ರೈತರು AMCS Farmer’s App ಮೊಬೈಲ್ ಅಪ್ಲಿಕೇಶನ್ ಅನ್ನು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನೋಡಬಹುದು.

AMCS Farmer’s App ಹೇಗೆ ಕೆಲಸ ಮಾಡುತ್ತದೆ?

ರೈತರು ಡೈರಿಗಳಿಗೆ ಹಾಲನ್ನು ಹಾಕುತ್ತಾರೆ ಈ ಡೈರಿಯಲ್ಲಿರುವ ಕಾರ್ಯದರ್ಶಿ ಮತ್ತು ಹಾಲನ್ನು ಪ್ರತಿ ನಿತ್ಯ ಅಳಸುವ ಸಿಬ್ಬಂದಿಗಳು ರೈತರು ಆ ದಿನ ಎಷ್ಟು ಪ್ರಮಾಣದ ಹಾಲನ್ನು ಹಾಕಿದ್ದರು ಇದರ ಸಂಪೂರ್ಣ ವಿವರವನ್ನು ತಂತ್ರಾಂಶದಲ್ಲಿ ನಮೂದಿಸಿ ರೈತರಿಗೆ ಚೀಟಿ ನೀಡುತ್ತಾರೆ. ಈ ವಿವರವು ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ ಅಭಿವೃದ್ಧಿಪಡಿಸಿರುವ "Automatic Milk Collection System” ನಲ್ಲಿ ದಾಖಲಾಗಿ AMCS Farmer’s App ಮೂಲಕ ರೈತರಿಗೆ ನೋಡಲು ಲಭ್ಯವಾಗುತ್ತದೆ.

ಇದನ್ನೂ ಓದಿ: District Ministers-ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ!

AMCS Farmer’s App ಉಪಯೋಗಿಸುವುದು ಹೇಗೆ?

ಕೃಷಿಕರು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ AMCS Farmer’s App ಅನ್ನು ಡೌನ್ಲೋಡ್ ಮಾಡಿಕೊಂಡು ಕೇವಲ ಒಂದೆರಡು ಕ್ಲಿಕ್ ನಲ್ಲಿ ಪ್ರತಿ ನಿತ್ಯ ನೀವು ಡೈರಿಗೆ ಹಾಕುವ ಹಾಲಿನ ಸಂಪೂರ್ಣ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಬಹುದು.

Step-1: ರೈತರು ಮೊದಲಿಗೆ ತಮ್ಮ ಮೊಬೈಲ್ ನಲ್ಲಿ ಈ "Download Now" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ನೇರವಾಗಿ ಗೂಗಲ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ AMCS Farmers App ಎಂದು ಸರ್ಚ್ ಮಾಡಿಯು ಸಹ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

AMCS Farmers App

Step-2: ಇದಾದ ಬಳಿಕ "Install" ಬಟನ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಸದಸ್ಯತ್ವ ಗುರುತಿನ ಸಂಖ್ಯೆ ಉದಾಹರಣೆಗೆ 32 ನಂಬರ್ ಇದ್ದರೆ 0032 ಎಂದು ನಮೂದಿಸಿ ಒಟ್ಟು ನಾಲ್ಕು ಅಗಿಯನ್ನು ನಮೂದಿಸಬೇಕು ನಂತರ OTP ಅನ್ನು ಹಾಕಿ ಲಾಗಿನ್ ಅಗಿ.

Step-3: ಲಾಗಿನ್ ಅದ ಬಳಿಕ settings ವಿಭಾಗದಲ್ಲಿ ಕ್ಲಿಕ್ ಮಾಡಿ "ಕನ್ನಡ/English"ಎರಡು ಆಯ್ಕೆಗಳಿದ್ದು ನಿಮಗೆ ಅಗತ್ಯವಿರುವ ಭಾಷೆಯನ್ನು ಆಯ್ಕೆ ಮಾಡಿಕೊಂಡು ಮುಖಪುಟದಲ್ಲಿ ಕಾಣಿಸುವ ದಿನಾಂಕವಾರು ಆಯ್ಕೆಯ ಮೇಲೆ ಕ್ಲಿಕ್ ಮಾಡಿ ದಿನನಿತ್ಯ ಡೈರಿಗೆ ಪೂರೈಸಿರುವ ಹಾಲಿನ ಪ್ರಮಾಣ ಇನ್ನಿತರೆ ಸಂಪೂರ್ಣ ವಿವರವನ್ನು ಇಲ್ಲಿ ಪಡೆಯಬಹುದು.

ಇದನ್ನೂ ಓದಿ: Crop Insurance Status-ಬೆಳೆ ವಿಮೆ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!

ರೈತರಿಗೆ AMCS Farmer’s App ನಿಂದ ಆಗುವ ಪ್ರಯೋಜನಗಳೇನು?

AMCS (Automatic Milk Collection System) Farmer’s App ಎನ್ನುವುದು ಹೈನುಗಾರಿಕೆ (ಡೈರಿ) ಮಾಡುವ ರೈತರಿಗಾಗಿ ರೂಪಿಸಲಾದ ಒಂದು ಅತ್ಯಂತ ಉಪಯುಕ್ತ ಮೊಬೈಲ್ ಅಪ್ಲಿಕೇಶನ್ ಆಗಿದೆ. NDDB (ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ) ಹಾಗೂ ಪ್ರಮುಖ ಡೈರಿ ಸಹಕಾರ ಸಂಘಗಳ (ಉದಾಹರಣೆಗೆ ಅಮುಲ್) ಸಹಯೋಗದಲ್ಲಿ ಬಳಕೆಯಲ್ಲಿರುವ ಈ ಆಪ್, ಹಾಲು ಉತ್ಪಾದಕ ರೈತರಿಗೆ ತಂತ್ರಜ್ಞಾನದ ನೇರ ಲಾಭವನ್ನು ಒದಗಿಸುತ್ತದೆ.

1) ನಿಖರತೆ ಮತ್ತು ಪಾರದರ್ಶಕತೆ (Transparency):

ಸ್ವಯಂಚಾಲಿತ ದಾಖಲಾತಿ: ರೈತರು ಡೈರಿಗೆ ಹಾಕಿದ ಹಾಲಿನ ಪ್ರಮಾಣ (Quantity), ಹಾಲಿನ ಜಿಡ್ಡಿನಾಂಶ (Fat) ಮತ್ತು ಎಸ್‌ಎನ್‌ಎಫ್ (SNF) ವಿವರಗಳು ಯಾವುದೇ ಮ್ಯಾನುಯಲ್ ಎಂಟ್ರಿ ಇಲ್ಲದೆ ಆಪ್‌ನಲ್ಲಿ ನೇರವಾಗಿ ದಾಖಲಾಗುತ್ತವೆ.

ವಂಚನೆಗೆ ಬ್ರೇಕ್: ಹಾಲಿನ ಗುಣಮಟ್ಟ ಮತ್ತು ತೂಕದಲ್ಲಿ ಯಾವುದೇ ಮಾನವ ತಪ್ಪುಗಳು (Manual errors) ಅಥವಾ ಅವ್ಯವಹಾರಗಳು ನಡೆಯದಂತೆ ಇದು ಸಂಪೂರ್ಣ ಪಾರದರ್ಶಕತೆ ಕಾಪಾಡುತ್ತದೆ.

ರಿಯಲ್-ಟೈಮ್ ನೋಟಿಫಿಕೇಶನ್ ಮತ್ತು ಡಿಜಿಟಲ್ ಸ್ಲಿಪ್: ಹಾಲನ್ನು ಡೇರಿಗೆ ಸುರಿದ ತಕ್ಷಣ, ಆ ಶಿಫ್ಟ್‌ನ ಹಾಲಿನ ಪ್ರಮಾಣ ಮತ್ತು ಅದರ ಮೌಲ್ಯದ ಡಿಜಿಟಲ್ ಸ್ಲಿಪ್ (Notification) ರೈತರ ಮೊಬೈಲ್‌ಗೆ ಬರುತ್ತದೆ. ನಿಖರವಾದ ಹಣದ ವಿವರಗಳಿರುತ್ತವೆ.

ಇದನ್ನೂ ಓದಿ: EPF Passbook -ಪಿಎಫ್ ಖಾತೆದಾರರಿಗೆ ಸಿಹಿ ಸುದ್ದಿ ಮೊಬೈಲ್ ನಲ್ಲೇ ಬ್ಯಾಲೆನ್ಸ್ ಚೆಕ್ ಮಾಡಲು ಅವಕಾಶ!

2) ಆದಾಯದ ಮುನ್ಸೂಚನೆ ಮತ್ತು ದರ ಪಟ್ಟಿ (Rate Chart):

ದರ ಪರಿಶೀಲನೆ: ಡೈರಿ ಮಂಡಳಿಯು ನಿಗದಿಪಡಿಸಿದ ಪ್ರಸ್ತುತ ಹಾಲಿನ ದರ ಪಟ್ಟಿಯನ್ನು (Rate Chart) ರೈತರು ಆಪ್‌ನಲ್ಲೇ ನೋಡಬಹುದು.

ಲಾಭದ ಅಂದಾಜು: ಪ್ರಸ್ತುತ ಫ್ಯಾಟ್ ಮತ್ತು ಎಸ್‌ಎನ್‌ಎಫ್ ಆಧಾರದ ಮೇಲೆ ತಮಗೆ ಬರಲಿರುವ ಆದಾಯವನ್ನು ರೈತರು ಮುಂಚಿತವಾಗಿಯೇ ಲೆಕ್ಕಾಚಾರ ಮಾಡಿಕೊಳ್ಳಬಹುದು.

3) ಡಿಜಿಟಲ್ ಪಾಸ್‌ಬುಕ್ ಮತ್ತು ಹಳೆಯ ದಾಖಲೆಗಳು:

ಹಣಕಾಸಿನ ಟ್ರ್ಯಾಕಿಂಗ್: ರೈತರ ಬ್ಯಾಂಕ್ ಖಾತೆಗೆ ಜಮೆಯಾದ ಹಾಲಿನ ಹಣದ (Remuneration) ಸಂಪೂರ್ಣ ವಿವರಗಳು ಡಿಜಿಟಲ್ ಪಾಸ್‌ಬುಕ್ ರೂಪದಲ್ಲಿ ಲಭ್ಯವಿರುತ್ತವೆ.

ವರದಿಗಳು: ರೈತರು ದಿನದ, ತಿಂಗಳ ಅಥವಾ ವರ್ಷದ ಒಟ್ಟು ಹಾಲಿನ ಸಂಗ್ರಹಣೆ ಮತ್ತು ಅದರಿಂದ ಬಂದ ಲಾಭದ ಅಂಕಿ-ಅಂಶಗಳನ್ನು ಹೋಲಿಕೆ ಮಾಡಿ ನೋಡಬಹುದು. ಇದು ಹೈನುಗಾರಿಕೆಯ ಆರ್ಥಿಕ ಪ್ರಗತಿಯನ್ನು ತಿಳಿಯಲು ಸಹಾಯ ಮಾಡುತ್ತದೆ.

4) ನಗದು ರಹಿತ ನೇರ ಪಾವತಿ (Cashless Direct Payment):

ಆಪ್ ಮೂಲಕ ರೈತರ ಬ್ಯಾಂಕ್ ಖಾತೆಗೆ ಹಾಲಿನ ಹಣವು ನೇರವಾಗಿ ಜಮೆಯಾಗುತ್ತದೆ. ಬ್ಯಾಂಕ್ ವಹಿವಾಟು ಯಶಸ್ವಿಯಾದ ತಕ್ಷಣ ಆಪ್‌ನಲ್ಲಿ ಅಪ್‌ಡೇಟ್ ಸಿಗುವುದರಿಂದ ರೈತರು ಹಣಕ್ಕಾಗಿ ಕಾಯುವ ಅಥವಾ ಡೈರಿಗಳಿಗೆ ಅಲೆಯುವ ಅವಶ್ಯಕತೆ ಇರುವುದಿಲ್ಲ.

ಈ ಆಪ್‌ನಲ್ಲಿ ಒಂದೇ ಕುಟುಂಬದ ಅಥವಾ ಸಂಬಂಧಿಕರ ಹಲವು ರೈತರ ಖಾತೆಗಳನ್ನು (Multiple Accounts) ಒಂದೇ ಮೊಬೈಲ್‌ನಲ್ಲಿ ನಿರ್ವಹಿಸುವ ಅವಕಾಶವೂ ಇರುತ್ತದೆ. ಒಟ್ಟಾರೆಯಾಗಿ, AMCS Farmer’s App ಹಾಲಿನ ಗುಣಮಟ್ಟಕ್ಕೆ ತಕ್ಕ ಸರಿಯಾದ ಬೆಲೆಯನ್ನು ರೈತರಿಗೆ ತಲುಪಿಸುವಲ್ಲಿ ಮತ್ತು ಹೈನುಗಾರಿಕೆಯನ್ನು ಡಿಜಿಟಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: