Namma Mane Yojane-ಮುಖ್ಯಮಂತ್ರಿ ನಮ್ಮ ಮನೆ ಯೋಜನೆ: ಅರ್ಹ ಕುಟುಂಬಗಳಿಗೆ ಉಚಿತ ನಿವೇಶನ!

November 23, 2026 | Siddesh
Namma Mane Yojane-ಮುಖ್ಯಮಂತ್ರಿ ನಮ್ಮ ಮನೆ ಯೋಜನೆ: ಅರ್ಹ ಕುಟುಂಬಗಳಿಗೆ ಉಚಿತ ನಿವೇಶನ!
Share Now:

ಕರ್ನಾಟಕ ರಾಜ್ಯದ ಸ್ವಂತ ಮನೆ ಹಾಗೂ ನಿವೇಶನ ಹೊಂದಿರದ ಬಡ ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ 15 ಲಕ್ಷ ಉಚಿತ ವಸತಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಮುಖ್ಯಮಂತ್ರಿ ನಮ್ಮ ಮನೆ ಯೋಜನೆ (ಭೂಗ್ಯಾರಂಟಿ ಯೋಜನೆ) ಅಡಿಯಲ್ಲಿ ವಸತಿ ನಿವೇಶನ ಇಲ್ಲದ ಕುಟುಂಬಗಳಿಗೆ ಸ್ವಂತ ನಿವೇಶನ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ನವೆಂಬರ್ 19, 2026ರಂದು ನಡೆದ ರಾಜ್ಯ ಸಚಿವ ಸಂಪುಟದ 26ನೇ ಸಭೆಯಲ್ಲಿ ಈ ಯೋಜನೆಗೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: Bsc Nursing Scholarship-ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ!ಈಗಲೇ ಅರ್ಜಿ ಸಲ್ಲಿಸಿ!

ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ಅಭಿವೃದ್ಧಿಪಡಿಸಲು ₹1,000 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ಅರ್ಹ ಕುಟುಂಬಗಳಿಗೆ ಈ ಯೋಜನೆಯ ಪ್ರಯೋಜನ ತಲುಪಿಸುವ ಉದ್ದೇಶವಿದೆ. ಯೋಜನೆಯಡಿ ಒಂದೇ ಬಾರಿಗೆ ಎಲ್ಲಾ ಮನೆಗಳನ್ನು ನಿರ್ಮಾಣ ಮಾಡುವುದಿಲ್ಲ ಹಂತ ಹಂತವಾಗಿ ಮನೆ ನಿರ್ಮಾಣ ಮಾಡಿ ಅರ್ಹ ಕುಟುಂಬಗಳಿಗೆ ಹಂಚಿಕೆ ಮಾಡುವ ಯೋಜನೆಯನ್ನು ಸರ್ಕಾರದಿಂದ ರೂಪಿಸಲಾಗಿದೆ.

ಈ ಯೋಜನೆಯಡಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಕುಟುಂಬದ ವಾರ್ಷಿಕ ಆದಾಯ ಎಷ್ಟಿರಬೇಕು? ನಿವೇಶನ ಪಡೆಯಲು ಯಾವ ವರ್ಗದವರಿಗೆ ಆದ್ಯತೆ ನೀಡಲಾಗುತ್ತದೆ? ಅರ್ಜಿ ಸಲ್ಲಿಸುವ ವಿಧಾನ ಮತ್ತು ಅಗತ್ಯ ದಾಖಲೆಗಳ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.

ಇದನ್ನೂ ಓದಿ: VB-G RAM G Scheme: ಕುರಿ-ಮೇಕೆ ಮತ್ತು ಕೋಳಿ ಶೆಡ್ ನಿರ್ಮಾಣಕ್ಕೆ ₹83,000 ಹಾಗೂ ₹66,000 ನೆರವು! ಇಂದೇ ಅರ್ಜಿ ಸಲ್ಲಿಸಿ!

Namma Mane Scheme In Karnataka-ಯೋಜನೆಯಡಿ ಎಷ್ಟು ನಿವೇಶನ ಹಂಚಿಕೆ ಮಾಡಲಾಗುತ್ತದೆ?

ರಾಜ್ಯಾದ್ಯಂತ ಒಟ್ಟು 15 ಲಕ್ಷ ಉಚಿತ ವಸತಿ ನಿವೇಶನಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.

  • ಗ್ರಾಮೀಣ ಪ್ರದೇಶದಲ್ಲಿ 9 ಲಕ್ಷ ನಿವೇಶನಗಳ ಅಭಿವೃದ್ಧಿ.
  • ನಗರ ಪ್ರದೇಶದಲ್ಲಿ 5 ಲಕ್ಷ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ.
  • ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳ ಅಭಿವೃದ್ಧಿ.
  • ಮೊದಲ ಹಂತದ ಯೋಜನೆಗೆ ₹1,000 ಕೋಟಿ ಅಂದಾಜು ವೆಚ್ಚ.
    ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 45,000 ಎಕರೆ ಭೂಮಿಯನ್ನು ಮೀಸಲಿಡುವ ಉದ್ದೇಶವಿದೆ. ನಗರ ಪ್ರದೇಶಗಳಲ್ಲಿ G+3 ಮಾದರಿಯಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ.

ಇದನ್ನೂ ಓದಿ: Negila Yogi Scheme-ಕೃಷಿ ಇಲಾಖೆಯಿಂದ ನೇಗಿಲಯೋಗಿ ಯೋಜನೆಯಡಿ ಗರಿಷ್ಥ 4500/- ಪ್ರೋತಾಹಧನ!

Namma Mane Yojane

ಇದನ್ನೂ ಓದಿ: Beat Forester Job-ಅರಣ್ಯ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ! 355 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

Who Can Apply For Namma Mane Scheme-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಈ ಯೋಜನೆಯಡಿ ನಿವೇಶನ ಪಡೆಯಲು ರಾಜ್ಯ ಸರಕಾರದಿಂದ ಮಾರ್ಗಸೂಚಿಯನ್ನು ನಿಗದಿಪಡಿಸಲಾಗಿದ್ದು ಇದರ ವಿವರ ಹೀಗಿದೆ:

  1. ಅರ್ಜಿದಾರರ ಕುಟುಂಬಕ್ಕೆ ಸ್ವಂತ ವಸತಿ ನಿವೇಶನ ಇರಬಾರದು.
  2. ಆದ್ಯತಾ ಕುಟುಂಬ ಪಡಿತರ ಚೀಟಿ (PHH) ಅಥವಾ ಅಂತ್ಯೋದಯ ಅನ್ನ ಯೋಜನೆ (AAY) ಪಡಿತರ ಚೀಟಿ ಹೊಂದಿರಬೇಕು.
  3. ಗ್ರಾಮೀಣ ಪ್ರದೇಶದ ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷ ಮೀರಬಾರದು.
  4. ನಗರ ಪ್ರದೇಶದ ಕುಟುಂಬದ ವಾರ್ಷಿಕ ಆದಾಯ ₹2 ಲಕ್ಷ ಮೀರಬಾರದು.
  5. ಪ್ರತಿ ಅರ್ಹ ಕುಟುಂಬಕ್ಕೆ ಒಂದು ನಿವೇಶನ ಮಾತ್ರ ನೀಡಲಾಗುತ್ತದೆ.

ಇದನ್ನೂ ಓದಿ: Scholarship Application-ಪಿಯುಸಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

ಗಂಡ ಮತ್ತು ಹೆಂಡತಿ ಇಬ್ಬರೂ ಜೀವಂತವಾಗಿದ್ದರೆ ಜಂಟಿಯಾಗಿ ಅರ್ಜಿ ಸಲ್ಲಿಸಬೇಕು. ಅಂತಹ ಸಂದರ್ಭದಲ್ಲಿ ನಿವೇಶನದ ಮಾಲೀಕತ್ವದ ದಾಖಲೆಯನ್ನು ಇಬ್ಬರ ಹೆಸರಿನಲ್ಲಿ ನೀಡಲಾಗುತ್ತದೆ.

ವಿಧವೆಯರು, ವಿಧುರರು, ವಿಚ್ಛೇದಿತರು, ಒಂಟಿ ತಾಯಂದಿರು, ಅಂಗವಿಕಲರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಪ್ರಸ್ತಾವನೆಯನ್ನು ಸರ್ಕಾರವು ಹೊಂದಿದೆ.

Namma Mane Yojane Application-ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆಯಡಿ ಹೊಸದಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲು ಸರ್ಕಾರ ಉದ್ದೇಶಿಸಿದೆ.

ಅರ್ಜಿ ಸಲ್ಲಿಸಲು ಪ್ರಸ್ತಾಪಿಸಿರುವ ಕೇಂದ್ರಗಳು:

  1. ನಾಡಕಚೇರಿ.
  2. ಬಾಪೂಜಿ ಸೇವಾ ಕೇಂದ್ರ.
  3. ಗ್ರಾಮ ಒನ್ ಕೇಂದ್ರ.
  4. ಕರ್ನಾಟಕ ಒನ್ ಕೇಂದ್ರ.

ಈ ಕೇಂದ್ರಗಳ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಉದ್ದೇಶವಿದೆ. ಅರ್ಜಿದಾರರ ಆಧಾರ್ ವಿವರಗಳನ್ನು ಆಧರಿಸಿ ಇ-ಕೆವೈಸಿ ನಡೆಸಲಾಗುತ್ತದೆ.

ಆದರೆ ಅರ್ಜಿ ಸಲ್ಲಿಕೆ ಆರಂಭವಾಗಿರುವ ದಿನಾಂಕ, ಅಧಿಕೃತ ವೆಬ್‌ಸೈಟ್ ಮತ್ತು ಕೊನೆಯ ದಿನಾಂಕವನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ.

ಇದನ್ನೂ ಓದಿ: Dairy Farming-ಉಚಿತ ಕುರಿ-ಆಡು ಸಾಕಾಣಿಕೆ ಜೊತೆ ಹೈನುಗಾರಿಕೆಗೆ ತರಬೇತಿ!ಇಂದೇ ಅರ್ಜಿ ಸಲ್ಲಿಸಿ!

Required Documents-ಅರ್ಜಿ ರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು?

  • ಆಧಾರ್ ಕಾರ್ಡ್.
  • ಆದ್ಯತಾ ಕುಟುಂಬ (PHH) ಅಥವಾ ಅಂತ್ಯೋದಯ (AAY) ಪಡಿತರ ಚೀಟಿ.
  • ಆದಾಯ ಪ್ರಮಾಣಪತ್ರ.
  • ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ).
  • ವಾಸಸ್ಥಳದ ಪುರಾವೆ.
  • ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
  • ಗಂಡ ಮತ್ತು ಹೆಂಡತಿಯ ಆಧಾರ್ ಕಾರ್ಡ್‌ಗಳು (ಜಂಟಿ ಅರ್ಜಿಗೆ).
  • ವಿಧವಾ ಪ್ರಮಾಣಪತ್ರ (ಅನ್ವಯಿಸಿದರೆ).
  • ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ).
  • ಮಾಜಿ ಸೈನಿಕರ ಗುರುತಿನ ದಾಖಲೆ (ಅನ್ವಯಿಸಿದರೆ).

Vasathi Yojane-ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಆದ್ಯತೆ:

ಈ ಹಿಂದೆ 2018ರಿಂದ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಸುಮಾರು 5.8 ಲಕ್ಷ ಗ್ರಾಮೀಣ ಪ್ರದೇಶದ ನಿವೇಶನ ಅರ್ಜಿಗಳು ಬಾಕಿ ಉಳಿದಿವೆ.

ಈ ಅರ್ಜಿಗಳನ್ನು ಮರುಪರಿಶೀಲನೆ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ಈಗಾಗಲೇ ಹಳೆಯ ಪಟ್ಟಿಯಲ್ಲಿ ಹೆಸರು ಹೊಂದಿರುವ ಅರ್ಹ ಫಲಾನುಭವಿಗಳು ಹೊಸದಾಗಿ ಅರ್ಜಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಅವರನ್ನು ಪಟ್ಟಿಯಿಂದ ಕೈಬಿಡುವುದಿಲ್ಲ. ಕ್ಷೇತ್ರ ಪರಿಶೀಲನೆ ನಡೆಸಿ ಅವರ ಅರ್ಹತೆಯನ್ನು ದೃಢೀಕರಿಸಲಾಗುತ್ತದೆ.

ಅರ್ಜಿದಾರರ ಮಾಹಿತಿಯನ್ನು ಕುಟುಂಬ, ಆಶ್ರಯ, ಇ-ಸ್ವತ್ತು, ಇ-ಆಸ್ತಿ ಸೇರಿದಂತೆ ವಿವಿಧ ಸರ್ಕಾರಿ ದತ್ತಾಂಶಗಳೊಂದಿಗೆ ಹೋಲಿಕೆ ಮಾಡಿ ಪರಿಶೀಲಿಸಲಾಗುತ್ತದೆ. ಈಗಾಗಲೇ ವಸತಿ ಸೌಲಭ್ಯ ಪಡೆದಿರುವ ಕುಟುಂಬಗಳು ಹಾಗೂ ನಕಲಿ ಅರ್ಜಿಗಳನ್ನು ಗುರುತಿಸಲು ಈ ಕ್ರಮ ಕೈಗೊಳ್ಳಲಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: