Gruhajyothi New Update-ಗೃಹಜ್ಯೋತಿ ಯೋಜನೆ ಉಚಿತ ವಿದ್ಯುತ್ ಪಡೆಯಲು ತಪ್ಪದೇ ಈ ಮಾಹಿತಿ ತಿಳಿಯಿರಿ!

July 3, 2026 | Siddesh
Gruhajyothi New Update-ಗೃಹಜ್ಯೋತಿ ಯೋಜನೆ ಉಚಿತ ವಿದ್ಯುತ್ ಪಡೆಯಲು ತಪ್ಪದೇ ಈ ಮಾಹಿತಿ ತಿಳಿಯಿರಿ!
Share Now:

ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ "ಗೃಹಜ್ಯೋತಿ(Gruha Jyothi Scheme)" ಯೋಜನೆಯ ಫಲಾನುಭವಿಗಳಿಗೆ ಇದೀಗ ಪ್ರಮುಖ ಅಪ್‌ಡೇಟ್ ಒಂದಿದೆ. ಯೋಜನೆ ಜಾರಿಗೆ ಬಂದು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬೆನ್ನಲ್ಲೇ, ಇದೀಗ ಅರ್ಹ ಫಲಾನುಭವಿಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಜುಲೈ 1 ರಿಂದ ರಾಜ್ಯಾದ್ಯಂತ ಎಲ್ಲಾ ಎಸ್ಕಾಂಗಳ (ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಸೆಸ್ಕ್) ವ್ಯಾಪ್ತಿಯಲ್ಲಿ ಗ್ರಾಹಕರ ಮನೆ-ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಮರು ಪರಿಶೀಲಿಸುವ ಬೃಹತ್ ಕಾರ್ಯಕ್ಕೆ ಇಂಧನ ಇಲಾಖೆ ಚಾಲನೆ ನೀಡಿದೆ.

ಈ ಮಹತ್ವದ ಪುನರ್ ಪರಿಶೀಲನಾ ಪ್ರಕ್ರಿಯೆಗಾಗಿ ಎಸ್ಕಾಂಗಳ ಮೀಟರ್ ರೀಡರ್‌ಗಳು ಹಾಗೂ ಸಿಬ್ಬಂದಿಗಳು(Gruha Jyothi) ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಭೇಟಿ ನೀಡಲಿದ್ದಾರೆ. ಅವರು ಫಲಾನುಭವಿಗಳ ಅಗತ್ಯ ದಾಖಲೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ, ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಬಳಿಕ ವಿಶೇಷ ಮೊಬೈಲ್ ಆ್ಯಪ್ ಹಾಗೂ ಘೋಷಣಾ ಪತ್ರದ ಮೂಲಕ ಅರ್ಜಿಯ ಮರು ಭರ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ. ಇದು ಕೇವಲ ಅರ್ಹ ಗೃಹ ಬಳಕೆದಾರರಿಗೆ ಮಾತ್ರ ಯೋಜನೆಯ ಲಾಭ ತಲುಪುವಂತೆ ಮಾಡುವ ಸರ್ಕಾರದ ಒಂದು ಪಾರದರ್ಶಕ ಹೆಜ್ಜೆಯಾಗಿದೆ.

ಇದನ್ನೂ ಓದಿ: NMMS ವಿದ್ಯಾರ್ಥಿವೇತನ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ!

ಈ ವಿಶೇಷ ಮರು ಪರಿಶೀಲನಾ ಕಾರ್ಯಕ್ಕೆ ಮೀಟರ್ ರೀಡರ್‌ಗಳನ್ನು ನಿಯೋಜಿಸಿರುವುದರಿಂದ, ಜುಲೈ ತಿಂಗಳಿನಲ್ಲಿ ಎಂದಿನಂತೆ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ. ಬದಲಿಗೆ, ಗ್ರಾಹಕರಿಗೆ ಕಳೆದ ಮೂರು ತಿಂಗಳ ಬಳಕೆಯ ಆಧಾರದ ಮೇಲೆ "ಸರಾಸರಿ ಬಿಲ್" ಅನ್ನು ಎಸ್‌ಎಂಎಸ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗುತ್ತದೆ. ಆಗಸ್ಟ್ ತಿಂಗಳಿನಿಂದ ಎಂದಿನಂತೆ ನೈಜ ಬಳಕೆಯ ಬಿಲ್ಲಿಂಗ್ ಆರಂಭವಾಗಲಿದ್ದು, ಜುಲೈ ಬಿಲ್‌ನಲ್ಲಿ ಯಾವುದೇ ವ್ಯತ್ಯಾಸವಿದ್ದಲ್ಲಿ ಅದನ್ನು ಮುಂದಿನ ತಿಂಗಳ ಬಿಲ್‌ನಲ್ಲಿ ಸೂಕ್ತವಾಗಿ ಹೊಂದಾಣಿಕೆ ಮಾಡಲಾಗುವುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

Required Documents For Gruha Jyothi Verification-ಪರಿಶೀಲನೆಗೆ ನೀಡಬೇಕಾದ ಅಗತ್ಯ ದಾಖಲೆಗಳು:

ಎಸ್ಕಾಂ ಸಿಬ್ಬಂದಿ ನಿಮ್ಮ ಮನೆಗೆ ಭೇಟಿ ನೀಡಿದಾಗ ಈ ಕೆಳಗಿನ ಮೂಲ ದಾಖಲೆಗಳು ಅಥವಾ ಜೆರಾಕ್ಸ್ ಪ್ರತಿಗಳನ್ನು ಸಿದ್ಧವಾಗಿಟ್ಟುಕೊಂಡು ಸಹಕರಿಸಲು ವಿನಂತಿಸಲಾಗಿದೆ:

  • ಆಧಾರ್ ಕಾರ್ಡ್/Adhar Card
  • ಮತದಾರರ ಗುರುತಿನ ಚೀಟಿ (ವೋಟರ್ ಐಡಿ)/Voter Id
  • ಪಾನ್ ಕಾರ್ಡ್/Pan Card
  • ರೇಷನ್ ಕಾರ್ಡ್ (ಇದ್ದಲ್ಲಿ)/Ration Card
  • ಬಾಡಿಗೆ ಒಪ್ಪಂದದ ಪತ್ರ (ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಮಾತ್ರ)/Rental agreement

ಇದನ್ನೂ ಓದಿ: Voter list-2026: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ತಪ್ಪದೇ ಈ ಮಾಹಿತಿ ತಿಳಿಯಿರಿ!

Gruhajyothi New Update

Gruha Jyothi Eligibility-ಯೋಜನೆಯ ಪ್ರಮುಖ ನಿಯಮಗಳು ಮತ್ತು ಅರ್ಹತೆಗಳು:

ಗೃಹ ಬಳಕೆದಾರರಿಗೆ ಮಾತ್ರ: ಈ ಉಚಿತ ವಿದ್ಯುತ್ ಸೌಲಭ್ಯ ಕೇವಲ ಮನೆ ಬಳಕೆಗೆ ಮಾತ್ರ ಸೀಮಿತವಾಗಿದ್ದು, ವಾಣಿಜ್ಯ ಉದ್ದೇಶದ ಮಳಿಗೆಗಳು ಅಥವಾ ಅಂಗಡಿಗಳಿಗೆ ಅನ್ವಯಿಸುವುದಿಲ್ಲ.

ಕರ್ನಾಟಕ ನಿವಾಸಿಗಳಿಗೆ ಅವಕಾಶ: ಸೌಲಭ್ಯ ಪಡೆಯುವವರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು (ಬಾಡಿಗೆದಾರರಿಗೂ ಇದು ಅನ್ವಯಿಸುತ್ತದೆ).

ಒಂದು ಆಧಾರ್-ಒಂದು ಮೀಟರ್: ಒಬ್ಬ ವ್ಯಕ್ತಿಯ ಒಂದು ಆಧಾರ್ ಕಾರ್ಡ್ ಸಂಖ್ಯೆಗೆ ಕೇವಲ ಒಂದು ವಿದ್ಯುತ್ ಮೀಟರ್‌ಗೆ ಮಾತ್ರ ರಿಯಾಯಿತಿ ಸಿಗುತ್ತದೆ.

ಇದನ್ನೂ ಓದಿ: District Ministers-ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ!

Gruha Jyothi Scheme-ಉಚಿತ ವಿದ್ಯುತ್ ಲೆಕ್ಕಾಚಾರ ಹೇಗೆ?

ಗೃಹಜ್ಯೋತಿ ಯೋಜನೆಯಡಿ ನೇರವಾಗಿ 200 ಯೂನಿಟ್ ಉಚಿತವಾಗಿ ಸಿಗುವುದಿಲ್ಲ. ಅದರ ಲೆಕ್ಕಾಚಾರ ಹೀಗಿದೆ:

ಗ್ರಾಹಕರ 2022-23ರ ಹಿಂದಿನ ಒಂದು ವರ್ಷದ ಮಾಸಿಕ ವಿದ್ಯುತ್ ಬಳಕೆಯ ಸರಾಸರಿಯನ್ನು ತೆಗೆದುಕೊಳ್ಳಲಾಗುತ್ತದೆ.

ಆ ಸರಾಸರಿ ಬಳಕೆಗೆ ಹೆಚ್ಚುವರಿ ಶೇಕಡಾ 10 ರಷ್ಟು ಯೂನಿಟ್‌ಗಳನ್ನು ಸೇರಿಸಿ ನಿಮ್ಮ ಮಾಸಿಕ ಉಚಿತ ವಿದ್ಯುತ್ ಮಿತಿಯನ್ನು ನಿಗದಿಪಡಿಸಲಾಗುತ್ತದೆ (ಉದಾಹರಣೆಗೆ: ನಿಮ್ಮ ಸರಾಸರಿ ಬಳಕೆ 100 ಯೂನಿಟ್ ಆಗಿದ್ದರೆ, ನಿಮಗೆ 110 ಯೂನಿಟ್‌ವರೆಗೆ ಉಚಿತ ಇರುತ್ತದೆ).

ಆದರೆ, ಯಾವುದೇ ತಿಂಗಳಲ್ಲಿ ನಿಮ್ಮ ಒಟ್ಟು ಬಳಕೆ 200 ಯೂನಿಟ್‌ಗಿಂತ ಹೆಚ್ಚಾದರೆ, ನೀವು ಆ ತಿಂಗಳ ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಗೃಹಜ್ಯೋತಿ ಯೋಜನೆ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹತ್ತಿರದ ಎಸ್ಕಾಂ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: