Adike Bele Vime-ಅಡಿಕೆ ಸೇರಿ ವಿವಿಧ ಬೆಳೆಗಳಿಗೆ ವಿಮೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

July 6, 2026 | Siddesh
Adike Bele Vime-ಅಡಿಕೆ ಸೇರಿ ವಿವಿಧ ಬೆಳೆಗಳಿಗೆ ವಿಮೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!
Share Now:

ಬೆಂಗಳೂರು: ರಾಜ್ಯದ ಅಡಿಕೆ ಹಾಗೂ ಇತರೆ ಪ್ರಮುಖ ತೋಟಗಾರಿಕಾ ಬೆಳೆಗಾರರಿಗೆ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. 2026-27ನೇ ಸಾಲಿನ ಮುಂಗಾರು ಹಂಗಾಮಿನ ‘ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ’ (RWBCIS) ಅಡಿಯಲ್ಲಿ ವಿವಿಧ ಜಿಲ್ಲೆಗಳ ಅಧಿಸೂಚಿತ ಬೆಳೆಗಳಿಗೆ(Arecanut Insurance) ರೈತರ ನೋಂದಣಿಯ ಅಂತಿಮ ದಿನಾಂಕವನ್ನು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ ಈ ಹಿಂದೆ ಅರ್ಜಿ ಸಲ್ಲಿಸಲು ಜೂನ್ 30, 2026 ಕೊನೆಯ ದಿನಾಂಕವಾಗಿತ್ತು, ಆದರೆ ರೈತರ ಹಿತದೃಷ್ಟಿಯಿಂದ ಈಗ ಇದನ್ನು ಜುಲೈ 15, 2026 ರವರೆಗೆ ವಿಸ್ತರಿಸಲಾಗಿದೆ.

ಹವಾಮಾನ ವೈಪರೀತ್ಯ, ಅಕಾಲಿಕ ಮಳೆ, ತೀವ್ರ ತರಹದ ಗಾಳಿ ಅಥವಾ ಕೀಟಬಾಧೆಗಳಿಂದಾಗಿ ತೋಟಗಾರಿಕಾ ಬೆಳೆಗಳು(Horticulture Crops) ನಾಶವಾದರೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಈ ವಿಮೆ ಸಹಕಾರಿಯಾಗಿದೆ. ಸರ್ಕಾರದ ಹೊಸ ಆದೇಶದ ಪ್ರಕಾರ, ದಾವಣಗೆರೆ ಜಿಲ್ಲೆಯಲ್ಲಿ ಹೆಚ್.ಡಿ.ಎಫ್.ಸಿ ಅರ್ಗೋ (HDFC ERGO) ಜನರಲ್ ಇನ್ಶೂರೆನ್ಸ್ ಕಂಪನಿ ಹಾಗೂ ಉಡುಪಿ, ಹಾಸನ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ (AIC) ಮೂಲಕ ವಿಮೆ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಅಡಿಕೆ ಮಾತ್ರವಲ್ಲದೆ ಕರಿಮೆಣಸು, ದಾಳಿಂಬೆ, ವೀಳ್ಯದೆಲೆ, ಪರಂಗಿ (ಪಪಾಯ) ಮತ್ತು ನಿಂಬೆ ಬೆಳೆಗಳಿಗೂ ಈ ವಿಸ್ತರಣೆ ಅನ್ವಯಿಸುತ್ತದೆ.

ಇದನ್ನೂ ಓದಿ: SIR In Karnataka-ನಿಮ್ಮ ಮತದಾನದ ಹಕ್ಕನ್ನು ಇಂದೇ ಭದ್ರಪಡಿಸಿಕೊಳ್ಳಿ! ಇಂದೇ ನಮೂನೆ ಭರ್ತಿ ಮಾಡಿ!

ನಿಗದಿತ ಅವಧಿಯೊಳಗೆ ರೈತರು ತಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್(Gram One) ಕೇಂದ್ರಗಳಿಗೆ ಭೇಟಿ ನೀಡಿ ನಿಗದಿತ ಪ್ರಿಮಿಯಂ ಪಾವತಿಸುವ ಮೂಲಕ ತಮ್ಮ ಬೆಳೆಗಳಿಗೆ ರಕ್ಷಣೆ ಪಡೆದುಕೊಳ್ಳಬಹುದು. ಈ ಯೋಜನೆಯಡಿ ರಿಸ್ಕ್ ಅವಧಿಯ ಪ್ರಾರಂಭದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದ್ದರಿಂದ ತೋಟಗಾರಿಕಾ ರೈತರು ಕೊನೆಯ ದಿನದವರೆಗೂ ಕಾಯದೆ ತಕ್ಷಣವೇ ವಿಮೆ ಮಾಡಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

Crop Insurance Application-ಬೆಳೆ ವಿಮೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ರೈತರು ತಮ್ಮ ವ್ಯಾಪ್ತಿಯ ಹತ್ತಿರದ 'ಕರ್ನಾಟಕ ಒನ್', 'ಬೆಂಗಳೂರು ಒನ್' ಮತ್ತು 'ಗ್ರಾಮ ಒನ್' ನಾಗರಿಕ ಸೇವಾ ಕೇಂದ್ರಗಳಿಗೆ ನೇರವಾಗಿ ಅಗತ್ಯ ದಾಖಲೆಗಳ ಸಮೇತ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Documents For Crop Insurance-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು?

ಕೃಷಿಕರು ವಿಮೆ ನೋಂದಣಿಗಾಗಿ ಪ್ರಮುಖವಾಗಿ ಒದಗಿಸಬೇಕಾದ ಪ್ರಮುಖ ಮತ್ತು ಅಗತ್ಯ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

  • ಜಮೀನಿನ ಆರ್.ಟಿ.ಸಿ (ಪಹಣಿ/RTC),
  • ರೈತರ ಆಧಾರ್ ಕಾರ್ಡ್ ನಕಲು
  • ಬ್ಯಾಂಕ್ ಪಾಸ್‌ಬುಕ್ ನಕಲು (ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಸ್ಪಷ್ಟವಾಗಿರಬೇಕು)
  • ಫ್ರೂಟ್ಸ್ ಐಡಿ (FID Number) ಸಂಖ್ಯೆ ಆಗಿರಬೇಕು.

ಇದನ್ನೂ ಓದಿ: Beauty Parlour Training-ನಿರುದ್ಯೋಗಿ ಮಹಿಳೆಯರಿಗೆ ಸುವರ್ಣಾವಕಾಶ: ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಅಹ್ವಾನ!

Crop Insurance Premium-ಒಂದು ಎಕರೆಗೆ ಎಷ್ಟು ಪ್ರಿಮಿಯಂ ಪಾವತಿ ಮಾಡಬೇಕು?

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ತೋಟಗಾರಿಕಾ ಬೆಳೆಗಳಿಗೆ (ಅಡಿಕೆ) ರೈತರು ಪಾವತಿಸಬೇಕಾದ ಪ್ರಿಮಿಯಂ ಮೊತ್ತವು ಒಟ್ಟು ವಿಮಾ ಮೊತ್ತದ ಗರಿಷ್ಠ ಶೇಕಡಾ 5 ರಷ್ಟಿರುತ್ತದೆ. ಉಳಿದ ಹೆಚ್ಚಿನ ಪಾಲಿನ ಪ್ರಿಮಿಯಂ ಅನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಬ್ಸಿಡಿ ರೂಪದಲ್ಲಿ ಭರಿಸುತ್ತವೆ.

Arecanut Insurance Last Date

ಇದನ್ನೂ ಓದಿ: District Ministers-ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ!

Arecanut Insurance Amount-ನಿಮ್ಮ ಜಿಲ್ಲೆಯಲ್ಲಿ ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದು? ಪ್ರಿಮಿಯಂ ಮೊತ್ತದ ವಿವರ ಪಡೆಯುವ ವಿಧಾನ:

ರೈತರು ತಮ್ಮ ಮೊಬೈಲ್ ನಲ್ಲೇ ಕೇವಲ ಒಂದೆರಡು ಕ್ಲಿಕ್ ನಲ್ಲಿ ರಾಜ್ಯ ಸರ್ಕಾರದ ಬೆಳೆ ವಿಮೆ ಯೋಜನೆಯ ಅಧಿಕೃತ www.samrakshane.karnataka.gov.in ಜಾಲತಾಣವನ್ನು ಪ್ರವೇಶ ಮಾಡಿ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಜಿಲ್ಲೆಯಲ್ಲಿ ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದು? ಒಂದು ಎಕರೆಗೆ ಎಷ್ಟು ಪ್ರಿಮಿಯಂ ಪಾವತಿಸಬೇಕು? ಹಾಗೇ ಒಂದು ಎಕರೆಗೆ ಎಷ್ಟು ಬೆಳೆ ವಿಮೆ ಪರಿಹಾರ ಪಡೆಯಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು:

Step-1: ಕೃಷಿಕರು ಮೊದಲಿಗೆ ಈ Insurance Amount Check ಲಿಂಕ್ ಮೇಲೆ ಕ್ಲಿಕ್ ಮಾಡಿ ಬೆಳೆ ವಿಮೆ ಯೋಜನೆಯ ಅಧಿಕೃತ ಸಂರಕ್ಷಣೆ(www.samrakshane.karnataka.gov.in) ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

ವಿಶೇಷ ಸೂಚನೆ: ಈ ಪುಟದ ಬಲಬದಿಯಲ್ಲಿ ಮೇಲೆ ಕನ್ನಡ/english ಎರಡು ಅಯ್ಕೆಗಳು ಇದ್ದು ಕನ್ನಡ ಆಯ್ಕೆಯನ್ನು ಮಾಡಿಕೊಂಡು ಕನ್ನಡದಲ್ಲಿ ವಿಕ್ಷೀಸಬಹುದು.

Step-2: ನಂತರ ಈ ಪುಟದಲ್ಲಿ "ವರ್ಷ-2026-27" "ಹಂಗಾಮು-Kharif" ಎಂದು ಆಯ್ಕೆ ಮಾಡಿಕೊಂಡು ಮುಂದಿನ ಪೇಜ್ ಪ್ರವೇಶ ಮಾಡಬೇಕು.

Step-3: ಈ ಪೇಜ್ ನಲ್ಲಿ ಕೆಳಗೆ "Farmers" ವಿಭಾಗದಲ್ಲಿ ಮೊದಲಿಗೆ ಕಾಣಿಸುವ "Premium Calculator" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲುಕು,ಹೋಬಳಿ, ಹಳ್ಳಿ, ಮತ್ತು ಬೆಳೆಯ ಹೆಸರನ್ನು ಆಯ್ಕೆ ಮಾಡಿಕೊಂಡು ನಿಮ್ಮ ಜಮೀನಿನ ಒಟ್ಟು ವಿಸ್ತೀರ್ಣವನ್ನು ಎಕರೆ ಮತ್ತು ಗುಂಟೆಯಲ್ಲಿ ಕಾಲಂ ನಲ್ಲಿ ನಮೂದಿಸಿ "Show Premium" ಬಟನ್ ಮೇಲೆ ಕ್ಲಿಕ್ ಮಾಡಿ.

Step-4: ಇಲ್ಲಿ Farmer Share/ರೈತನ ಪಾಲು ವಿಭಾಗದಲ್ಲಿ ಒಂದು ಎಕರೆಗೆ ಎಷ್ಟು ಪ್ರಿಮಿಯಂ ಪಾವತಿ ಮಾಡಬೇಕು ಎಂದು(ಅಡಿಕೆಗೆ: 2590/-) ವಿಮಾ ಮೊತ್ತ ವಿಭಾಗದಲ್ಲಿ ಒಂದು ಎಕರೆ ಎಷ್ಟು ವಿಮೆ ಸಿಗುತ್ತದೆ? (ಅಡಿಕೆ-51801/-)ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೋಡಬಹುದು.

ಇದನ್ನೂ ಓದಿ: Gruhajyothi New Update-ಗೃಹಜ್ಯೋತಿ ಯೋಜನೆ ಉಚಿತ ವಿದ್ಯುತ್ ಪಡೆಯಲು ತಪ್ಪದೇ ಈ ಮಾಹಿತಿ ತಿಳಿಯಿರಿ!

Crop Insurance Benefits-ಅಡಿಕೆ ಬೆಳೆಗೆ ಬೆಳೆ ವಿಮೆ ಮಾಡಿಸುವುದರಿಂದ ರೈತರಿಗೆ ಆಗುವ ಪ್ರಯೋಜನಗಳೇನು?

ಅನಾವೃಷ್ಟಿ (ಬರಗಾಲ), ಅತಿವೃಷ್ಟಿ, ನಿರಂತರ ಮಳೆ ಕೊರತೆ, ಅತಿ ಹೆಚ್ಚು ತಾಪಮಾನ ಅಥವಾ ಕೀಟಬಾಧೆಯಿಂದಾಗಿ ಅಡಿಕೆ ಬೆಳೆ ಹಾನಿಗೊಳಗಾದರೆ ರೈತರಿಗೆ ಆಗುವ ಆರ್ಥಿಕ ನಷ್ಟವನ್ನು ಈ ವಿಮೆ ಸರಿದೂಗಿಸುತ್ತದೆ. ಸಾಲ ಪಡೆದ ಮತ್ತು ಸಾಲ ಪಡೆಯದ ಇಬ್ಬರೂ ರೈತರಿಗೆ ಇದು ಸಮಾನ ರಕ್ಷಣೆ ನೀಡಲಿದ್ದು, ಬೆಳೆ ನಷ್ಟದ ಸಮಯದಲ್ಲಿ ರೈತರ ಕೈ ಹಿಡಿದು ಅವರ ಆದಾಯದ ಸ್ಥಿರತೆಯನ್ನು ಕಾಪಾಡಲು ನೆರವಾಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: