Ration Card-ರೇಷನ್ ಕಾರ್ಡದಾರರೇ ಗಮನಿಸಿ: ಇ-ಕೆವೈಸಿ ಕಡ್ಡಾಯ, ಕಾರ್ಡಿನ ಸದಸ್ಯರ ಆಧಾರದ ಮೇಲೆ ಅಕ್ಕಿ ಮತ್ತು ಜೋಳ!

July 10, 2026 | Siddesh
Ration Card-ರೇಷನ್ ಕಾರ್ಡದಾರರೇ ಗಮನಿಸಿ: ಇ-ಕೆವೈಸಿ ಕಡ್ಡಾಯ, ಕಾರ್ಡಿನ ಸದಸ್ಯರ ಆಧಾರದ ಮೇಲೆ ಅಕ್ಕಿ ಮತ್ತು ಜೋಳ!
Share Now:

ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ(Food Department) ಇಲಾಖೆಯು ಪಡಿತರ ಚೀಟಿದಾರರಿಗೆ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ಸೇರಿದಂತೆ ರಾಜ್ಯಾದ್ಯಂತ ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ಸರ್ಕಾರಿ ಸೌಲಭ್ಯಗಳನ್ನು ಹಾಗೂ ಪಡಿತರ ವಸ್ತುಗಳನ್ನು ನಿರಂತರವಾಗಿ ಪಡೆಯಲು ತಕ್ಷಣವೇ ಇ-ಕೆವೈಸಿ (E-KYC) ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ.

ಇ-ಕೆವೈಸಿ ಮಾಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪಡಿತರ ವಿತರಣೆ ಸ್ಥಗಿತಗೊಳ್ಳುವ ಭೀತಿ ಎದುರಾಗಲಿದ್ದು, ಪಡಿತರ ಚೀಟಿಯು ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇರುತ್ತದೆ. ವಿಳಂಬ ಮಾಡದೆ ನಿಗದಿತ ಅವಧಿಯೊಳಗೆ ಇ-ಕೆವೈಸಿ(e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇದನ್ನೂ ಓದಿ: KSOU Admission-2026-ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ವಿವಿಧ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಅತ್ಯಂತ ಹಿಂದುಳಿದ ವರ್ಗಗಳಿಗಾಗಿ 'ಅಂತ್ಯೋದಯ ಪಡಿತರ ಚೀಟಿ (AAY)' ಯೋಜನೆ ಅಡಿಯಲ್ಲಿ ಸಬ್ಸಿಡಿ ದರದಲ್ಲಿ ಅಕ್ಕಿ ಹಾಗೂ ಜೋಳ (ಅಥವಾ ರಾಗಿ) ವಿತರಣೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಪಡಿತರ ಚೀಟಿಯಲ್ಲಿರುವ ಒಟ್ಟು ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಅಕ್ಕಿಯ ಪ್ರಮಾಣವನ್ನು ನಿಗದಿಪಡಿಸಲಾಗಿದೆ.

ಜೋಳ ಅಥವಾ ರಾಗಿ ಪ್ರಮಾಣವನ್ನು ಸ್ಥಿರವಾಗಿ ಕಾಯ್ದಿರಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡುವ ಮುನ್ನ ಸಾರ್ವಜನಿಕರು ತಮ್ಮ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‌ ಅನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕೆಂದು ಇಲಾಖೆ ತಿಳಿಸಿದೆ.

ವಿಜಯನಗರ ಜಿಲ್ಲೆಯಲ್ಲಿ ಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು ಮತ್ತು ಹರಪನಹಳ್ಳಿ ತಾಲೂಕುಗಳು ಸೇರಿದಂತೆ ಒಟ್ಟು 26,262 ಪಡಿತರ ಚೀಟಿದಾರರು ಇನ್ನೂ ಇ-ಕೆವೈಸಿ ಮಾಡಿಸುವುದು ಬಾಕಿ ಉಳಿದಿದೆ. ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರವು ನ್ಯಾಯಬೆಲೆ ಅಂಗಡಿಗಳು, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳು ಹಾಗೂ ತಾಲೂಕು ಕಚೇರಿಗಳಲ್ಲಿ ವ್ಯವಸ್ಥೆ ಕಲ್ಪಿಸಿದೆ. ಸಾರ್ವಜನಿಕರು ಕೊನೆಯ ದಿನಾಂಕದವರೆಗೆ ಕಾಯದೆ ತಕ್ಷಣವೇ ಇ-ಕೆವೈಸಿ ಮಾಡಿಸಿಕೊಂಡು ತಮ್ಮ ಪಡಿತರ ಹಕ್ಕನ್ನು ಕಾಯ್ದುಕೊಳ್ಳಲು ಕೋರಲಾಗಿದೆ.

ಇದನ್ನೂ ಓದಿ: Sasya Santhe 2026-ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಜುಲೈ 10 ರಿಂದ ಮೂರು ದಿನಗಳ ಕಾಲ ‘ಸಸ್ಯ ಸಂತೆ’

ಪ್ರಮುಖ ವಿವರಗಳುಮಾಹಿತಿ ವಿವರಣೆ
ಕಡ್ಡಾಯ ಪ್ರಕ್ರಿಯೆರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ
ಕೊನೆಯ ದಿನಾಂಕಜುಲೈ 15, 2026
ಇ-ಕೆವೈಸಿ ಮಾಡಿಸುವ ಸ್ಥಳಗಳುನ್ಯಾಯಬೆಲೆ ಅಂಗಡಿಗಳು, ಗ್ರಾಮ ಒನ್, ಕರ್ನಾಟಕ ಒನ್ ಮತ್ತು ತಾಲೂಕು ಕಚೇರಿ
ಅಗತ್ಯವಿರುವ ದಾಖಲೆಗಳುಪಡಿತರ ಚೀಟಿ (Ration Card) ಮತ್ತು ಆಧಾರ್ ಕಾರ್ಡ್
ಮಾಡಿಸದಿದ್ದರೆ ಆಗುವ ಪರಿಣಾಮಪಡಿತರ ವಿತರಣೆ ಸ್ಥಗಿತ ಹಾಗೂ ರೇಷನ್ ಕಾರ್ಡ್ ನಿಷ್ಕ್ರಿಯ (Inactive) ಆಗಬಹುದು

ಇದನ್ನೂ ಓದಿ: Karnataka Dam Level-ರಾಜ್ಯದ ಡ್ಯಾಂ ಗಳಿಗೆ ಹೆಚ್ಚಿದ ಒಳ ಹರಿವು!ಇಲ್ಲಿದೆ ಡ್ಯಾಂವಾರು ಇಂದಿನ ನೀರಿನ ಮಟ್ಟದ ವಿವರ!

AAY Ration Card-ಅಂತ್ಯೋದಯ ಪಡಿತರ ಚೀಟಿ (AAY) - ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಸಿಗುವ ಆಹಾರ ಧಾನ್ಯಗಳ ವಿವರ:

ಸದಸ್ಯರ ಸಂಖ್ಯೆಸಿಗುವ ಅಕ್ಕಿಯ ಪ್ರಮಾಣ (ಕೆ.ಜಿ. ಯಲ್ಲಿ)ಜೋಳದ ಪ್ರಮಾಣ (ಕೆ.ಜಿ. ಯಲ್ಲಿ)ಒಟ್ಟು ಆಹಾರ ಧಾನ್ಯ (ಕೆ.ಜಿ. ಯಲ್ಲಿ)
1 ರಿಂದ 3 ಸದಸ್ಯರು14 ಕೆ.ಜಿ.21 ಕೆ.ಜಿ.35 ಕೆ.ಜಿ.
04 ಸದಸ್ಯರು19 ಕೆ.ಜಿ.21 ಕೆ.ಜಿ.40 ಕೆ.ಜಿ.
05 ಸದಸ್ಯರು29 ಕೆ.ಜಿ.21 ಕೆ.ಜಿ.50 ಕೆ.ಜಿ.
06 ಸದಸ್ಯರು39 ಕೆ.ಜಿ.21 ಕೆ.ಜಿ.60 ಕೆ.ಜಿ.
07 ಸದಸ್ಯರು49 ಕೆ.ಜಿ.21 ಕೆ.ಜಿ.70 ಕೆ.ಜಿ.
08 ಸದಸ್ಯರು59 ಕೆ.ಜಿ.21 ಕೆ.ಜಿ.80 ಕೆ.ಜಿ.
09 ಸದಸ್ಯರು69 ಕೆ.ಜಿ.21 ಕೆ.ಜಿ.90 ಕೆ.ಜಿ.
10 ಸದಸ್ಯರು79 ಕೆ.ಜಿ.21 ಕೆ.ಜಿ.100 ಕೆ.ಜಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: