PM-Kisan Amount-ರಾಜ್ಯದಲ್ಲಿ 6 ಲಕ್ಷ ರೈತರಿಗೆ ಬಂದಿಲ್ಲ ಪಿಎಂ ಕಿಸಾನ್ ಹಣ!ತಪ್ಪದೇ ಈ ಮಾಹಿತಿ ತಿಳಿಯಿರಿ!

July 7, 2026 | Siddesh
PM-Kisan Amount-ರಾಜ್ಯದಲ್ಲಿ 6 ಲಕ್ಷ ರೈತರಿಗೆ ಬಂದಿಲ್ಲ ಪಿಎಂ ಕಿಸಾನ್ ಹಣ!ತಪ್ಪದೇ ಈ ಮಾಹಿತಿ ತಿಳಿಯಿರಿ!
Share Now:

ಬೆಂಗಳೂರು: ತಾಂತ್ರಿಕ ಕಾರಣಗಳಿಂದಾಗಿ ಕರ್ನಾಟಕ ರಾಜ್ಯದ 6 ಲಕ್ಷಕ್ಕೂ ಅಧಿಕ ರೈತರು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (PM-Kisan) ಯೋಜನೆಯ 23ನೇ ಕಂತಿನ ಹಣದಿಂದ ವಂಚಿತರಾಗಿದ್ದಾರೆ. ಭೂಮಿ ಹೊಂದಿರುವ ಅರ್ಹ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂಪಾಯಿಗಳಂತೆ ವರ್ಷಕ್ಕೆ ಒಟ್ಟು 6,000 ರೂಪಾಯಿಗಳ ಆರ್ಥಿಕ ನೆರವು ನೀಡುವ ಈ ಯೋಜನೆಯಡಿ, ಈಗಾಗಲೇ 22 ಕಂತುಗಳು ಯಶಸ್ವಿಯಾಗಿ ಬಿಡುಗಡೆಯಾಗಿದ್ದವು. ಆದರೆ ಇತ್ತೀಚೆಗೆ ಜೂನ್ 20 ರಂದು ನೇರ ನಗದು ವರ್ಗಾವಣೆ (DBT) ಮೂಲಕ ಜಮೆಯಾದ 23ನೇ ಕಂತಿನ ಹಣವು ರಾಜ್ಯದ ಲಕ್ಷಾಂತರ ಅನ್ನದಾತರ ಕೈಸೇರದೆ ಇರುವುದು ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಒಟ್ಟು 46,69,841 ರೈತರು ಅರ್ಹರಾಗಿದ್ದಾರೆ. ಆದರೆ ಇವರಲ್ಲಿ ಅಂದಾಜು 3,80,428 ರೈತರು ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಕಾರಣ ಮತ್ತು 2,27,384 ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿಸದೇ ಇರುವುದರಿಂದ ಈ ಬಾರಿಯ ಆರ್ಥಿಕ ಸಹಾಯದಿಂದ ವಂಚಿತರಾಗಿದ್ದಾರೆ. ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ ಬೆಳಗಾವಿ ಜಿಲ್ಲೆಯಲ್ಲಿ 41,459 ರೈತರು ಹಾಗೂ ತುಮಕೂರು ಜಿಲ್ಲೆಯಲ್ಲಿ 41,082 ರೈತರು ಈ ಯೋಜನೆಯ ಲಾಭ ಪಡೆಯಲು ವಿಫಲರಾಗಿದ್ದು, ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದ್ದಾರೆ. ಬೀದರ್ ಜಿಲ್ಲೆಯಲ್ಲೂ ಸುಮಾರು 29,910 ರೈತರಿಗೆ ಹಣ ಸಂದಾಯವಾಗಿಲ್ಲ.

ಇದನ್ನೂ ಓದಿ: Adike Bele Vime-ಅಡಿಕೆ ಸೇರಿ ವಿವಿಧ ಬೆಳೆಗಳಿಗೆ ವಿಮೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

ಕೆಲವು ತಾಂತ್ರಿಕ ಕಾರಣಗಳಿಂದ ದೊಡ್ಡ ಸಂಖ್ಯೆಯ ರೈತರಿಗೆ ಪಿಎಂ ಕಿಸಾನ್(Kisan Samman Nidhi) ಯೋಜನೆಯ ಆರ್ಥಿಕ ನೆರವು ವರ್ಗಾವಣೆ ಅಗಿಲ್ಲದೇ ಇರುವುದರಿಂದ ಇಂತಹ ರೈತರು ಕೂಡಲೇ ತಮ್ಮ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸರಿಪಡಿಸಿಕೊಳ್ಳವಂತೆ ಕೃಷಿ ಇಲಾಕೆಯಿಂದ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ. ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

PM-Kisan Scheme-ಪಿಎಂ ಕಿಸಾನ್ ಹಣ ಜಮಾ ಅಗದಿರಲು ಪ್ರಮುಖ ಕಾರಣಗಳು:

  • ರೈತರು ಅಗತ್ಯ ದಾಖಲೆ ಸಲ್ಲಿಸಿ ಇ-ಕೆವೈಸಿ ಮಾಡಿಸದೇ ಇರುವುದು.
  • ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗದೇ ಇರುವುದು.
  • ಪಹಣಿ/RTC ಅಲ್ಲಿರುವ ಹೆಸರಿಗೂ ಆಧಾರ್ ಕಾರ್ಡ ನಲ್ಲಿರುವ ಹೆಸರಿಗೂ ಹೊಂದಾಣಿಕೆ ಆಗದೇ ಇದ್ದಲ್ಲಿ ಆರ್ಥಿಕ ನೆರವು ಜಮಾ ಅಗಿರುವುದಿಲ್ಲ.

How To Apply-ಅರ್ಜಿ ಸರಿಪಡಿಸುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಸಾಧ್ಯವಾಗದೇ ಆರ್ಥಿಕ ನೆರವನ್ನು ಪಡೆಯದೇ ಇರುವವರು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ ತಮ್ಮ ಅರ್ಜಿಯನ್ನು ಸರಿಪಡಿಸಿಕೊಳ್ಳಬೇಕು.

ಇದನ್ನೂ ಓದಿ: SIR In Karnataka-ನಿಮ್ಮ ಮತದಾನದ ಹಕ್ಕನ್ನು ಇಂದೇ ಭದ್ರಪಡಿಸಿಕೊಳ್ಳಿ! ಇಂದೇ ನಮೂನೆ ಭರ್ತಿ ಮಾಡಿ!

e-KYC-ಇ-ಕೆವೈಸಿ ಮಾಡಿಸಿ:

ರೈತರು ತಮ್ಮ ಆಧಾರ್ ಕಾರ್ಡ, ಪಹಣಿ/RTC, ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡನಲ್ಲಿರುವ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ OTP ಆಧಾರಿತ ಕೆವೈಸಿಯನ್ನು ಮಾಡಿಸಿ.

Bank Account Adhar Link-ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿ:

ರೈತರು ತಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಗೆ ನೇರವಾಗಿ ಭೇಟಿ ಮಾಡಿ ಆಧಾರ್ ಕಾರ್ಡ, ಪೋಟೋ, ಬ್ಯಾಂಕ್ ಪಾಸ್ ಬುಕ್ ಅನ್ನು ಸಲ್ಲಿಸಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಮಾಡಿಸಿ.

RTC And Adhar Name-ಪಹಣಿ-RTC ಹೆಸರು ಹೊಂದಾಣಿಕೆ ಆಗಬೇಕು:

ಆಧಾರ್ ಕಾರ್ಡನಲ್ಲಿರುವ ಹೆಸರು ಹಾಗೂ ಪಹಣಿ/RTC ನಲ್ಲಿ ಹೆಸರು ಒಂದೇ ಅಗಿರಬೇಕು ಪ್ರಸ್ತುತು ಪಹಣಿಯಲ್ಲಿ ಹೆಸರು ಬದಲಾವಣೆ ಮಾಡಿರುವ ರೈತರು ಈ ನವೀಕರಣವನ್ನು ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಅಪ್ಡೇಟ್ ಮಾಡಿಸಬೇಕು.

ಇದನ್ನೂ ಓದಿ: Beauty Parlour Training-ನಿರುದ್ಯೋಗಿ ಮಹಿಳೆಯರಿಗೆ ಸುವರ್ಣಾವಕಾಶ: ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಅಹ್ವಾನ!

6 ಲಕ್ಷಕ್ಕೂ ಹೆಚ್ಚು ರೈತರಿಗೆ ತಪ್ಪಿದ ಪಿಎಂ ಕಿಸಾನ್ ನೆರವು:

ತಾಂತ್ರಿಕ ದೋಷ ಹಾಗೂ ನಿಯಮಗಳ ಪಾಲನೆಯಾಗದ ಕಾರಣ ಕರ್ನಾಟಕದ 6 ಲಕ್ಷಕ್ಕೂ ಹೆಚ್ಚು ಅರ್ಹ ರೈತರ ಖಾತೆಗಳಿಗೆ ಕಿಸಾನ್ ಸಮ್ಮಾನ್ ಯೋಜನೆಯ 23ನೇ ಕಂತಿನ ಹಣ ಜಮೆಯಾಗಿಲ್ಲ.

ಇ-ಕೆವೈಸಿ ಮತ್ತು ಆಧಾರ್ ಲಿಂಕ್ ಕಡ್ಡಾಯ:

ರಾಜ್ಯದಲ್ಲಿ ಒಟ್ಟು 3.80 ಲಕ್ಷ ರೈತರು ಇ-ಕೆವೈಸಿ ಮಾಡಿಸದ ಕಾರಣ ಮತ್ತು 2.27 ಲಕ್ಷಕ್ಕೂ ಹೆಚ್ಚು ರೈತರು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದ ಕಾರಣ ಹಣದಿಂದ ವಂಚಿತರಾಗಿದ್ದಾರೆ.

ಇದನ್ನೂ ಓದಿ: District Ministers-ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ!

ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಾಕಿ:

ರಾಜ್ಯದಲ್ಲೇ ಅತಿ ಹೆಚ್ಚು ಹಾನಿ ಅನುಭವಿಸಿದ ಜಿಲ್ಲೆಗಳಲ್ಲಿ ಬೆಳಗಾವಿ (41,459 ರೈತರು) ಪ್ರಥಮ ಸ್ಥಾನದಲ್ಲಿದ್ದರೆ, ತುಮಕೂರು (41,082 ರೈತರು) ದ್ವಿತೀಯ ಸ್ಥಾನದಲ್ಲಿದೆ.

ಸುಲಭವಾಗಿ ಇ-ಕೆವೈಸಿ ಮಾಡಲು ಮೂರು ವಿಧಾನಗಳು:

ರೈತರು ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿ ಒಟಿಪಿ ಮೂಲಕ, ಹತ್ತಿರದ ಗ್ರಾಮಾ ಒನ್/ನಾಗರಿಕ ಸೇವಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಮೂಲಕ ಅಥವಾ ಮೊಬೈಲ್ ಆಪ್‌ನಲ್ಲಿ ಮುಖಚಹರೆ (Face Recognition) ಗುರುತಿಸುವಿಕೆಯ ಮೂಲಕ ಇ-ಕೆವೈಸಿ ಮಾಡಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: