Fish Farming Subsidy-ಮೀನು ಸಾಕಾಣಿಕೆ ಮಾಡಲು ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

July 11, 2026 | Siddesh
Fish Farming Subsidy-ಮೀನು ಸಾಕಾಣಿಕೆ ಮಾಡಲು ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
Share Now:

2026-2027 ನೇ ಸಾಲಿನ ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಅಡಿಯಲ್ಲಿ ಮೀನು ಮರಿ(Fingerlings/Fish Seed) ಖರೀದಿ ಹಾಗೂ ಮೀನುಗಾರಿಕೆ ಸಲಕರಣೆಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇಂದಿನ ದಿನಗಳಲ್ಲಿ ಮೀನು ಸಾಕಾಣಿಕೆ ಒಂದು ಕೃಷಿಗೆ ಪೂರಕವಾದ ಉತ್ತಮ ಆದಾಯವನ್ನು ಸಹ ಗಳಿಸುವ ಮೂಲಗಳಲ್ಲಿ(Fish Farming Loan and Subsidy) ಇದು ಒಂದಾಗಿದೆ ಎಂದರೆ ತಪ್ಪಾಗದು. ಅತ್ಯಂತ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವ ಅವಕಾಶವೂ ಸಹ ಇರುತ್ತದೆ. ಇದಲ್ಲದೆ ಈ ಯೋಜನೆಯ ಅಡಿಯಲ್ಲಿ ಮೀನು ಮರಿ ಖರೀದಿಗೆ ಸಹಾಯಧನ ನೀಡುವುದರಿಂದ ಹೊಸದಾಗಿ ಮೀನು ಸಾಕಾಣಿಕೆ ಪ್ರಾರಂಭ ಮಾಡುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಇದನ್ನೂ ಓದಿ: PUC Scholorship-ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ₹30,000 ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

ಸರ್ಕಾರದಿಂದ ಸಹಾಯಧನವನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು? ಯಾವೆಲ್ಲ ಯೋಜನೆಗಳಿಗೆ ಅನ್ವಯಿಸುತ್ತದೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು? ಯಾವ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬೇಕು? ಇನ್ನಿತರ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Purpose Of This Scheme-ಈ ಯೋಜನೆಯ ಉದ್ದೇಶವೇನು?

ಎಲ್ಲಾ ಪ್ರದೇಶಗಳಲ್ಲಿ ಮೀನಿನ ಉತ್ಪಾದನೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಉದ್ಯೋಗದ ಅವಕಾಶವನ್ನು ನೀಡಲು ಸಹಾಯಕಾರಿಯಾಗಿದೆ.
ರೈತರಿಗೆ ಕೃಷಿಗೆ ಅಷ್ಟೇ ಸೀಮಿತವಲ್ಲದೆ ಹೆಚ್ಚಿನ ಆದಾಯವನ್ನು ಗಳಿಸಬಹುದು.
ವೈಜ್ಞಾನಿಕ ಮೀನು ಸಾಕಾಣಿಕೆಯ ಪದ್ಧತಿಯನ್ನು ಪ್ರೋತ್ಸಾಹಕ್ಕೆ ಉತ್ತೇಜನ ನೀಡುವುದು.

ಇದನ್ನೂ ಓದಿ: Ration Card-ರೇಷನ್ ಕಾರ್ಡದಾರರೇ ಗಮನಿಸಿ: ಇ-ಕೆವೈಸಿ ಕಡ್ಡಾಯ, ಕಾರ್ಡಿನ ಸದಸ್ಯರ ಆಧಾರದ ಮೇಲೆ ಅಕ್ಕಿ ಮತ್ತು ಜೋಳ!

ಯಾವ ಯಾವ ಜಲಮೂಲಗಳಿಗೆ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು?

ಈ ಕೆಳಗೆ ನೀಡಿರುವ ಜಲಮೂಲಗಳಲ್ಲಿ ಮೀನು ಸಾಕಾಣಿಕೆಗೆ ಸಹಾಯಧನ ಪಡೆಯಬಹುದು:

ಕೃಷಿ ಹೊಂಡ (Farm Pond)
ನೀರಿನ ಸಂಗ್ರಹಣಾ ಕೊಳ
ಖಾಸಗಿ ಕೆರೆ
ಇತರೆ ಇಲಾಖೆಯಿಂದ ಅನುಮೋದಿತ ಜಲಮೂಲಗಳು

Who Can Apply-ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು?

ಎಲ್ಲಾ ವರ್ಗದ ರೈತರು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಖಾಸಗಿ ಕೆರೆ, ಕೃಷಿ ಹೊಂಡ ಹೊಂದಿರುವ ರೈತರು ಅರ್ಜಿ ಸಲ್ಲಿಸಬಹುದು.
ಈಗಾಗಲೆ ಮೀನು ಸಾಕಾಣಿಕೆ ಮಾಡುವ ಅಭ್ಯರ್ಥಿಗಳು.
ಸ್ವಸಹಾಯ ಸಂಘಗಳು, ಸಹಕಾರಿ ಸಂಘಗಳು, ರೈತರ ಉತ್ಪಾದಕರ ಸಂಸ್ಥೆಗಳು (FPO) ಅರ್ಜಿಸಲ್ಲಿಸಲು ಅರ್ಹರು.

ಇದನ್ನೂ ಓದಿ: KSOU Admission-2026-ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ವಿವಿಧ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ!

What Are The Documents-ಅರ್ಜಿಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

ಅಭ್ಯರ್ಥಿಯ ಆಧಾರ್ ಕಾರ್ಡ್
ಭೂ ದಾಖಲೆ (RTC/ಪಹಣಿ)
ಜಲಮೂಲ ಮಾಲೀಕತ್ವದ ದಾಖಲೆ
ಮೊಬೈಲ್ ಸಂಖ್ಯೆ
ಜಾತಿ ಹಾಗೂ ಆದಾಯ ಪ್ರಮಾಣಪತ್ರ( ಅಗತ್ಯವಿದ್ದಲ್ಲಿ)
ಬ್ಯಾಂಕ್ ಪಾಸ್‌ಬುಕ್ ಪ್ರತಿ
ಇತ್ತೀಚಿನ ಭಾವಚಿತ್ರ

ಇದನ್ನೂ ಓದಿ: Sasya Santhe 2026-ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಜುಲೈ 10 ರಿಂದ ಮೂರು ದಿನಗಳ ಕಾಲ ‘ಸಸ್ಯ ಸಂತೆ’

ಇದನ್ನೂ ಓದಿ: Karnataka Dam Level-ರಾಜ್ಯದ ಡ್ಯಾಂ ಗಳಿಗೆ ಹೆಚ್ಚಿದ ಒಳ ಹರಿವು!ಇಲ್ಲಿದೆ ಡ್ಯಾಂವಾರು ಇಂದಿನ ನೀರಿನ ಮಟ್ಟದ ವಿವರ!

How To Apply-ಸಹಾಯಧನವನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಹಂತ-೧: ಆಸಕ್ತ ಅರ್ಹ ಅಭ್ಯರ್ಥಿಗಳು ನಿಮ್ಮ ತಾಲೂಕು ಅಥವಾ ಜಿಲ್ಲೆಯಲ್ಲಿರುವ ಮೀನುಗಾರಿಕೆ ಇಲಾಖೆಯ ಕಚೇರಿಯನ್ನು ನೇರವಾಗಿ ಭೇಟಿ ಮಾಡಬೇಕು.

ಹಂತ-೨: ಮೀನು ಮರಿ ಖರೀದಿಯ ಸಹಾಯಧನ ಯೋಜನೆಯ ಅರ್ಜಿ ಫಾರಂ ಅನ್ನು ಪಡೆದುಕೊಂಡು ಅಲ್ಲಿ ಕೇಳಿರುವ ಎಲ್ಲಾ ವಿವರವನ್ನು ಭರ್ತಿ ಮಾಡಬೇಕು.

ಹಂತ-೩: ಬಳಿಕೆ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ನೀಡಿ ಯೋಜನೆಗೆ ಸಂಭದಿಸಿದ ಅಧಿಕಾರಿಗಳಿಗೆ ನೀಡಬೇಕು.

ಇದನ್ನೂ ಓದಿ: PM-Kisan Amount-ರಾಜ್ಯದಲ್ಲಿ 6 ಲಕ್ಷ ರೈತರಿಗೆ ಬಂದಿಲ್ಲ ಪಿಎಂ ಕಿಸಾನ್ ಹಣ!ತಪ್ಪದೇ ಈ ಮಾಹಿತಿ ತಿಳಿಯಿರಿ!

fishery deparment-ಮೀನುಗಾರಿಕೆ ಇಲಾಖೆಯ ಯೋಜನೆಯ ಮಾಹಿತಿಯನ್ನು ಪಡೆಯಲು ಇಲಾಖೆಯ ಅಧಿಕೃತ ವೆಬ್ಸೈಟ್- Click Here
Helpline Number-ಸಹಾಯವಾಣಿ-8277200300

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: