Ambedkar Nigama Yojana-ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸ್ವಂತ ಉದ್ದಿಮೆ ಆರಂಭಿಸಲು ₹1.0 ಲಕ್ಷ ಆರ್ಥಿಕ ನೆರವು!

November 24, 2026 | Siddesh
Ambedkar Nigama Yojana-ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸ್ವಂತ ಉದ್ದಿಮೆ ಆರಂಭಿಸಲು ₹1.0 ಲಕ್ಷ ಆರ್ಥಿಕ ನೆರವು!
Share Now:

ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವುದ್ದಿಗಾಗಿ 2026-2027 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದ ಅಡಿಯಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿಯ ವರ್ಗದವರಿಗೆ ₹1 ಲಕ್ಷ ಆರ್ಥಿಕ ಸಹಾಯ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಒಟ್ಟು ₹1,00,000 ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಹಾಗೂ ₹50,000 ಸಹಾಯಧನ (ಸಬ್ಸಿಡಿ) ಹಾಗೂ ₹50,000 ಸಾಲದ ರೂಪದಲ್ಲಿ ದೊರೆಯುತ್ತದೆ. ಅಂದರೆ, ಸ್ವಂತ ಉದ್ಯೋಗ ಆರಂಭಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಸರ್ಕಾರದ ವತಿಯಿಂದ ಆರ್ಥಿಕ ಬೆಂಬಲ ನೀಡುವುದರ ಜೊತೆಗೆ ಉದ್ಯಮ ಬೆಳೆಸಿಕೊಳ್ಳಲು ಉತ್ತಮ ಅವಕಾಶವನ್ನು ಒದಗಿಸಿಕೊಡಲಾಗಿದೆ.

ಇದನ್ನೂ ಓದಿ: Gold Loan-ಬ್ಯಾಂಕ್ ನಲ್ಲಿ ಗೋಲ್ಡ್ ಲೋನ್ ತೆಗೆದುಕೊಂಡವರು ತಪ್ಪದೇ ಈ ಮಾಹಿತಿ ನೋಡಿ!

ಈ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಯಾರೆಲ್ಲ ಅರ್ಹರಿರುತ್ತಾರೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿ ಸಲ್ಲಿಸಲು ಯಾವೆಲ್ಲಾ ಕ್ರಮಗಳನ್ನು ಪಾಲಿಸಬೇಕು? ಇನ್ನಿತರ ಹೆಚ್ಚಿನ ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ನವೆಂಬರ್ 2026

ಈ ಯೋಜನೆಯಡಿಯಲ್ಲಿ ಒದಗುವ ಸಹಾಯಧನದ ವಿವರ ಈ ಕೆಳಗಿದೆ :

ಈ ಯೋಜನೆಯಡಿ ಪ್ರತಿ ಅರ್ಹ ಫಲಾನುಭವಿಗೆ ಒಟ್ಟು ₹1 ಲಕ್ಷದವರೆಗೆ ಆರ್ಥಿಕ ಸಹಾಯಧನ ಪಡೆಯಬಹುದು ಅದರಲ್ಲಿ

ಸಬ್ಸಿಡಿ ಮೊತ್ತ: ₹50,000
ಸಾಲದ ಮೊತ್ತ: ₹50,000

ಇದನ್ನೂ ಓದಿ: Namma Mane Yojane-ಮುಖ್ಯಮಂತ್ರಿ ನಮ್ಮ ಮನೆ ಯೋಜನೆ: ಅರ್ಹ ಕುಟುಂಬಗಳಿಗೆ ಉಚಿತ ನಿವೇಶನ!

ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

  • ಆಧಾರ್ ಕಾರ್ಡ್.
  • ಜಾತಿ ಪ್ರಮಾಣಪತ್ರ.
  • ಆದಾಯ ಪ್ರಮಾಣಪತ್ರ.
  • ನಿವಾಸದ ಪ್ರಮಾಣಪತ್ರ.
  • ಬ್ಯಾಂಕ್ ಪಾಸ್‌ಬುಕ್ ಪ್ರತಿ.
  • ಫೋಟೋ.
  • ಮೊಬೈಲ್ ನಂಬರ್.

ಇದನ್ನೂ ಓದಿ: Beat Forester Job-ಅರಣ್ಯ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ! 355 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

ವಿಶೇಷ ಸೂಚನೆ- ಈ ಯೋಜನೆಯನ್ನು ಹೊರತುಪಡಿಸಿ ಇನ್ನು ವಿವಿಧ ಯೋಜನೆಯಡಿಯಲ್ಲಿ ಸಹಾಯಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ambedkar nigama yojanegalu

ಇದನ್ನೂ ಓದಿ: Negila Yogi Scheme-ಕೃಷಿ ಇಲಾಖೆಯಿಂದ ನೇಗಿಲಯೋಗಿ ಯೋಜನೆಯಡಿ ಗರಿಷ್ಥ 4500/- ಪ್ರೋತಾಹಧನ!

ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಗಿರಬೇಕು.
  • ಅರ್ಜಿದಾರರು ಸಣ್ಣ ಅಥವಾ ಅತಿಸಣ್ಣ ರೈತರ ವರ್ಗಕ್ಕೆ ಸೇರಿದವರಗಿರಬೇಕು.
  • ಸಾಮಾನ್ಯವಾಗಿ ಅರ್ಜಿದಾರರು 1 ಎಕರೆ ಯಿಂದ 5 ಎಕರೆ ಒಳಗೆ ಜಮೀನನ್ನು ಹೊಂದಿರಬೇಕು.

ಇದನ್ನೂ ಓದಿ: Bsc Nursing Scholarship-ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ!ಈಗಲೇ ಅರ್ಜಿ ಸಲ್ಲಿಸಿ!

ಯೋಜನೆಯಡಿಯಲ್ಲಿ ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಅರ್ಜಿದಾರ ಅಭ್ಯರ್ಥಿಯು ನಿಮ್ಮ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್/ಕರ್ನಾಟಕ ಒನ್ ಸೇವಾ ಕೇಂದ್ರಗಳಿಗೆ ನೇರವಾಗಿ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.ಅಥವಾ ಸೇವಾಸಿಂಧು ವೆಬ್ಸೈಟ್ ಅಲ್ಲಿ ಅಗತ್ಯ ದಾಖಲಾತಿ ಹಾಗೂ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

ಸೇವಾಸಿಂದು ವೆಬ್ಸೈಟ್ ಲಿಂಕ್ : Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: