Free Zig Zag Machine-ಉಚಿತ ಜಿಗ್‌ಜಾಗ್ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

November 25, 2026 | Siddesh
Free Zig Zag Machine-ಉಚಿತ ಜಿಗ್‌ಜಾಗ್ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!
Share Now:

ಮಹಿಳೆಯರಿಗೆ ಸಿಹಿ ಸುದ್ದಿ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ(Vishwakarma Nigama) ಸ್ವಂತ ಉದ್ಯಮವನ್ನು ನೆಡೆಸಲು ಆಸಕ್ತಿ ಇರುವ ಮಹಿಳೆಯರಿಗೆ 2026-2027 ನೇ ಸಾಲಿನಲ್ಲಿ ಜಾರಿಗೆ ತಂದಿರುವ ಉಚಿತ ಜಿಗ್ ಜಾಗ್(Zig-Zag)ಹೊಲಿಗೆ ಯಂತ್ರವನ್ನು ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇಂದಿನ ದಿನಗಳಲ್ಲಿ ಮಹಿಳೆಯರು(Free Zig-Zag Machine) ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮದೇ ಅದ ಪ್ರತಿಭೆ ಮತ್ತು ಗುರುತನ್ನು ಮೂಡಿಸಿರುತ್ತಾರೆ. ಕೇವಲ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವುದಷ್ಟೇ ಅಲ್ಲದೆ, ಆರ್ಥಿಕವಾಗಿಯೂ ಸ್ವತಂತ್ರವಾಗಿ ಬದುಕುವ ಆಸಕ್ತಿ ಹೊಂದಿದ್ದಾರೆ. ಅದರಲ್ಲೂ ಹೊಲಿಗೆ ವೃತ್ತಿಯು ಮಹಿಳೆಯರಿಗೆ ಮನೆಯಲ್ಲಿಯೇ ಕುಳಿತು ಆದಾಯ ಗಳಿಸಲು ಉತ್ತಮ ಅವಕಾಶವಾಗಿದೆ.

ಇದನ್ನೂ ಓದಿ: Agriculture Machinery Subsidy-ಪವರ್ ಸ್ಪ್ರ‍ೇಯರ್, ಪಂಪ್ ಸೆಟ್ ಸೇರಿದಂತೆ ವಿವಿಧ ಉಪಕರಣಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಅರ್ಜಿ ಆಹ್ವಾನ!

ಈ ಯೋಜನೆಯು ವಿಶೇಷವಾಗಿ ಸ್ವಂತ ಕೆಲಸದಲ್ಲಿ ಸ್ವಾವಲಂಬಿಯಾಗಿ ಜೀವನ ನಡೆಸಲು ಬಯಸುವ ಮಹಿಳೆಯರಿಗೆ ಹೊಲಿಗೆ ಯಂತ್ರಗಳು ಉತ್ತಮ ಉದ್ಯೋಗ ನೆಡೆಸಿ ಆದಾಯಗಳಿಸಲು ಉತ್ತಮ ದಾರಿಯಾಗಿದೆ.

ಈ ಯೋಜನೆಯ ಅಡಿಯಲ್ಲಿ ಉಚಿತ ಯಂತ್ರವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳನ್ನು ಲಗತ್ತಿಸಬೇಕು? ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಯಾವುದು? ಅರ್ಜಿ ಸಲ್ಲಿಸಲು ಯಾವೆಲ್ಲಾ ಹಂತಗಳನ್ನು ಪಾಲಿಸಬೇಕು? ಇನ್ನಿತರೆ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Application Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಡಿಸಂಬರ್ 2026

Who Can Apply-ಅರ್ಜಿ ಸಲ್ಲಿಸಲು ಯಾವೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು?

ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ಸರ್ಕಾರದ ಆದೇಶ ಸಂಖ್ಯೆ ಸಕಇ 225 ಬಿಸಿಎ 2000, ದಿನಾಂಕ 30-03-2002ರನ್ವಯ ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪಜಾತಿಗಳಿಗೆ ಸೇರಿದವರಾಗಿರಬೇಕು.
ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಕ್ಕೆ ಸೇರಿದವರಾಗಿರಬೇಕು.
ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳಿಂದ ಗರಿಷ್ಠ 55 ವರ್ಷಗಳ ಒಳಗಿರಬೇಕು.
ಕುಟುಂಬದ ಒಬ್ಬರಿಗೆ ಮಾತ್ರ ನಿಗಮದ ಸೌಲಭ್ಯ ಒದಗಿಸಲಾಗುವುದು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಗರಿಷ್ಠ ₹98,000 ಇರಬೇಕು. ನಗರ ಪ್ರದೇಶದ ಅಭ್ಯರ್ಥಿಗಳಿಗೆ ಗರಿಷ್ಠ ₹1,20,000 ಮೀರಿರಬಾರದು.

ಇದನ್ನೂ ಓದಿ: Gold Loan-ಬ್ಯಾಂಕ್ ನಲ್ಲಿ ಗೋಲ್ಡ್ ಲೋನ್ ತೆಗೆದುಕೊಂಡವರು ತಪ್ಪದೇ ಈ ಮಾಹಿತಿ ನೋಡಿ!

ಉಚಿತ ಜಿಗ್‌ಜಾಗ್ ಹೊಲಿಗೆ ಯಂತ್ರ ಕುರಿತು ನಿಗಮದ ಅಧಿಕೃತ ಪತ್ರಿಕಾ ಪ್ರಕಟಣೆ:

Vishwakarma Nigama Scheme 2026

ಇದನ್ನೂ ಓದಿ: Bsc Nursing Scholarship-ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ!ಈಗಲೇ ಅರ್ಜಿ ಸಲ್ಲಿಸಿ!

Required Documents-ಉಚಿತ ಯಂತ್ರ ಪಡೆಯಲು ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್/Adhar Card
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste And Income Certificate
  • BPL ಪಡಿತರ ಚೀಟಿ/Ration Crad
  • ಬ್ಯಾಂಕ್ ಪಾಸ್‌ಬುಕ್/Bank Pass Book
  • ನಿವಾಸ ಪ್ರಮಾಣ ಪತ್ರ
  • ಫೋಟೋ/Photto
  • ಮೊಬೈಲ್ ನಂಬರ್/Mobile Number

ಇದನ್ನೂ ಓದಿ: Namma Mane Yojane-ಮುಖ್ಯಮಂತ್ರಿ ನಮ್ಮ ಮನೆ ಯೋಜನೆ: ಅರ್ಹ ಕುಟುಂಬಗಳಿಗೆ ಉಚಿತ ನಿವೇಶನ!

How To Apply-ಅರ್ಜಿ ಸಲ್ಲಿಸುವುದು ಹೇಗೆ?

Step-1: ಅರ್ಹ ಅಭ್ಯರ್ಥಿಗಳು ಮೊದಲಿಗೆ ಇಲ್ಲಿ ನೀಡಿರುವ ಲಿಂಕ್ ಮೇಲೆ "Apply Now" ಕ್ಲಿಕ್ ಮಾಡಿ ಸೇವಾ ಸಿಂಧು ಪೋರ್ಟಲ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
⁠
Step-2: ನಂತರ ಇಲ್ಲಿ ಅಗತ್ಯ ವಿವರವನ್ನು ಭರ್ತಿ ಮಾಡಿ ಲಾಗಿನ್ ಅಗಿ ಮುಂದೆ ವೆಬ್‌ಸೈಟ್‌ನಲ್ಲಿ ಕಾಣುವ 2026-27ನೇ ಸಾಲಿನ ಯೋಜನೆಗಳ ಅರ್ಜಿ ಸಲ್ಲಿಕೆ ಅಥವಾ ಸಂಬಂಧಿಸಿದ ಪ್ರಕಟಣೆಯಲ್ಲಿ ಜಿಗ್‌ಜಾಗ್ ಹೊಲಿಗೆ ಯಂತ್ರ ಯೋಜನೆಗೆ ಸಂಬಂಧಿಸಿದ ಅರ್ಜಿಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Step-3: ಬಳಿಕ ಅರ್ಜಿಯಲ್ಲಿ ಕೇಳಿರುವ ಎಲ್ಲಾ ವೈಯಕ್ತಿಕ ವಿವರಗಳು, ವಿಳಾಸ, ಜಾತಿ, ಆದಾಯ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.

Step-4: ಕೊನೆಯಲ್ಲಿ ಅರ್ಜಿಯಲ್ಲಿರುವ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿದ ನಂತರ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ ಸ್ವೀಕೃತಿಯನ್ನು ಪಡೆಯಿರಿ.

ಇದನ್ನೂ ಓದಿ: Beat Forester Job-ಅರಣ್ಯ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ! 355 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

For More Information-ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿಯಲು:

  • Vishwakarma Nigama Website-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಗಮದ ಅಧಿಕೃತ ವೆಬ್‌ಸೈಟ್: Click Here
  • Vishwakarma Nigama Helpline-ಸಹಾಯವಾಣಿ ಸಂಖ್ಯೆ- 7899899039

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: