Agriculture Machinery Subsidy-ಪವರ್ ಸ್ಪ್ರ‍ೇಯರ್, ಪಂಪ್ ಸೆಟ್ ಸೇರಿದಂತೆ ವಿವಿಧ ಉಪಕರಣಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಅರ್ಜಿ ಆಹ್ವಾನ!

November 25, 2026 | Siddesh
Agriculture Machinery Subsidy-ಪವರ್ ಸ್ಪ್ರ‍ೇಯರ್, ಪಂಪ್ ಸೆಟ್ ಸೇರಿದಂತೆ ವಿವಿಧ ಉಪಕರಣಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಅರ್ಜಿ ಆಹ್ವಾನ!
Share Now:

ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ ಅನುದಾನ ಲಭ್ಯತೆಯ ಆಧಾರದ ಮೇಲೆ ಕೃಷಿ ಇಲಾಖೆಯಿಂದ(Agriculture Department) ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಗಳ(RSK) ಮೂಲಕ ಆಯಾ ಹೋಬಳಿ ವ್ಯಾಪ್ತಿಯಲ್ಲಿರುವ ಹಳ್ಳಿಯ ರೈತರಿಗೆ ಸಹಾಯಧನದಲ್ಲಿ ವಿವಿಧ ಕೃಷಿ ಯಂತ್ರ/ಉಪಕರಣಗಳನ್ನು ವಿತರಣೆಯನ್ನು ಮಾಡಲಾಗುತ್ತದೆ ಪ್ರಸ್ತುತ ಕೆಲವು ಪರಿಕರಗಳನ್ನು ಸಬ್ಸಿಡಿ ಒದಗಿಸುತ್ತಿದ್ದು ಈ ಕುರಿತು ಅಗತ್ಯ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಸ್ತುತ ದಿನಗಳಲ್ಲಿ ಕೃಷಿ ಚಟುವಟಿಕೆಯನ್ನು ಕೈಗೊಳ್ಳಲು ಕಾರ್ಮಿಕ ಕೊರತೆ ದೊಡ್ಡ ಮಟ್ಟದ ಸವಾಲಾಗಿದ್ದು ಇದನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ಕೃಷಿಯಲ್ಲಿ ಯಂತ್ರೋಪಕರಣಗಳ(Agriculture Equipments) ಬಳಕೆ ಅತೀ ಅವಶ್ಯಕವಾಗಿದೆ ಈ ನಿಟ್ಟಿನಲ್ಲಿ ಸಣ್ಣ ಮತ್ತು ಅತೀ ಸಣ್ಣ ಹಿಡುವಳಿಯನ್ನು ಹೊಂದಿರುವ ರೈತರಿಗೆ ವಿವಿಧ ಕೃಷಿ ಯಂತ್ರೋಪಕಣಗಳನ್ನು ಸಬ್ಸಿಡಿಯಲ್ಲಿ ಕೃಷಿ ಇಲಾಖೆಯಿಂದ ವಿತರಣೆ ಮಾಡುವ ಯೋಜನೆಯು ರಾಜ್ಯಾದ್ಯಂತ ಜಾರಿಯಲ್ಲಿದ್ದು ಇದರ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಲ್ಲಿ ತಿಳಿಸಿದ್ದೇವೆ.

ಇದನ್ನೂ ಓದಿ: Gold Loan-ಬ್ಯಾಂಕ್ ನಲ್ಲಿ ಗೋಲ್ಡ್ ಲೋನ್ ತೆಗೆದುಕೊಂಡವರು ತಪ್ಪದೇ ಈ ಮಾಹಿತಿ ನೋಡಿ!

ಪ್ರಸ್ತುತ ಈ ಅಂಕಣದಲ್ಲಿ ಕೆಲವು ಉಪಕರಣಗಳ(Farm Mechanization Scheme) ಸಬ್ಸಿಡಿ ಮೊತ್ತವೇಷ್ಟು? ರೈತರು ಎಷ್ಟು ಹಣವನ್ನು ಪಾವತಿ ಮಾಡಬೇಕಾಗುತ್ತದೆ? ಅರ್ಜಿ ಸಲ್ಲಿಸುವ ವಿಧಾನ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು ಯಾವುವು? ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Agriculture Machinery Subsidy Amount-ಉಪಕರಣವಾರು ಸಬ್ಸಿಡಿ ಮೊತ್ತ ಹೀಗಿದೆ:

1) ಪವರ್ ಸ್ಪ್ರ‍ೇಯರ್(Knapsack power sprayer 2 Stroke petrol engine):

ಪೂರ್ಣ ಮೊತ್ತ: ₹10500
ರಿಯಾಯಿತಿ : ₹4688
ರೈತರ ವಂತಿಕೆ : ₹5812

2) 10 hp ನೀರಾವರಿ ಪಂಪ್ ಸೆಟ್ಸ್(Company : Kirloskar, Model: E-DM-10 P- VA2+, Diesel engine):

ಪೂರ್ಣ ಮೊತ್ತ: ₹65000
ರಿಯಾಯಿತಿ : ₹20000
ರೈತರ ವಂತಿಕೆ : ₹45000

ಇದನ್ನೂ ಓದಿ: Namma Mane Yojane-ಮುಖ್ಯಮಂತ್ರಿ ನಮ್ಮ ಮನೆ ಯೋಜನೆ: ಅರ್ಹ ಕುಟುಂಬಗಳಿಗೆ ಉಚಿತ ನಿವೇಶನ!

3) ಶೇ. 50 ರ ರಿಯಾಯಿತಿಯಲ್ಲಿ 5 hp ನೀರಾವರಿ ಪಂಪ್ ಸೆಟ್(Company : Greaves, Model: E-5520 P-CNL-2, Diesel Engine): .

ಪೂರ್ಣ ಮೊತ್ತ: ₹50000
ರಿಯಾಯಿತಿ : ₹17500
ರೈತರ ವಂತಿಕೆ : ₹32500

4) ಶೇ. 50ರ ರಿಯಾಯಿತಿಯಲ್ಲಿ 3 htp power sprayer(Company : Ratnagiri Impex pvt ltd , Model: AgriMate -22K - 4 Stroke petrol engine, 163cc, 3600 RPM):

ಪೂರ್ಣ ಮೊತ್ತ: ₹23000
ರಿಯಾಯಿತಿ : ₹11500
ರೈತರ ವಂತಿಕೆ : ₹11500

ಇದನ್ನೂ ಓದಿ: Beat Forester Job-ಅರಣ್ಯ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ! 355 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

5) 13 hp ಪವರ್ ಟಿಲ್ಲರ್ (Company : VST Shakti Model: 130 DI -- 4 Stroke Diesel engine):

ಪೂರ್ಣ ಮೊತ್ತ: ₹2,12,000
ರಿಯಾಯಿತಿ : ₹92,500
ರೈತರ ವಂತಿಕೆ : ₹1,19,500

Documents For Subsidy Application-ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳು:

1) ಆಧಾರ್ ಕಾರ್ಡ್ ಪ್ರತಿ/ಆಧಾರ್ ಕಾರ್ಡ್
2) ಪಹಣಿ/RTC
3) ಬ್ಯಾಂಕ್ ಪಾಸ್ ಬುಕ್ ಪ್ರತಿ/Bank Pass Book
4) ಫಲಾನುಭವಿ ಪೋಟೋ-1
5) Rs. 100/- ಬಾಂಡ್ ಪೇಪರ್/e-stamp affidavit
6) ಜಮೀನಿನ ಮಾಲೀಕರು ಜಂಟಿ ಖಾತೆ ಇದ್ದಲ್ಲಿ ಒಪ್ಪಿಗೆ ಪ್ರಮಾಣ ಪತ್ರ.

ಇದನ್ನೂ ಓದಿ: Bsc Nursing Scholarship-ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ!ಈಗಲೇ ಅರ್ಜಿ ಸಲ್ಲಿಸಿ!

How To Apply-ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಅರ್ಹ ಮತ್ತು ಆಸಕ್ತ ರೈತರು ತಮ್ಮ ಹಳ್ಳಿ ವ್ಯಾಪ್ತಿಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಕಚೇರಿ ಸಮಯದಲ್ಲಿ ಭೇಟಿ ಮಾಡಿ ಅರ್ಜಿ ಸಲ್ಲಿಸಿ ವಿವಿಧ ಯಂತ್ರಗಳನ್ನು ಸಹಾಯಧನದಲ್ಲಿ ಪಡೆಯಬಹುದು.

Farm Mechanization Scheme In Karnataka-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

  • ಅರ್ಜಿದಾರರ ಹೆಸರಲ್ಲಿ ಕೃಷಿ ಜಮೀನನ್ನು ಹೊಂದಿರುವುದು ಕಡ್ಡಾಯ.
  • ಕೃಷಿ ಯಂತ್ರೋಪಕರಣ ಯೋಜನೆಯಡಿ ಒಮ್ಮೆ ಸಬ್ಸಿಡಿಯನ್ನು ಪಡೆದ ಬಳಿಕ 7 ವರ್ಷ ಪೂರ್ಣಗೊಳಿಸಿದ್ದರೆ ಮಾತ್ರ ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  • ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಮೊದಲ ಆದ್ಯತೆ ಇರುತ್ತದೆ.

ವಿಷೇಶ ಸೂಚನೆ: ಬಹುತೇಕ ರಾಜ್ಯದ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಯಂತ್ರೀಕರಣ ಯೋಜನೆಯಡಿ ವಿವಿಧ ಯಂತ್ರಗಳನ್ನು ಖರೀದಿ ಮಾಡಲು ಸಹಾಯಧನವನ್ನು ಒದಗಿಸಲಾಗುತ್ತದೆ ಅದರೆ ಅನುದಾನ ಲಭ್ಯತೆಯ ಅನುಗುಣವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಉಪಕರಣಗಳನ್ನು ನೀಡಲಾಗುತ್ತದೆ ಆದ್ದರಿಂದ ರೈತರು ನಿಮ್ಮ ಹೋಬಳಿಯ ರೈತ ಸಂಪರ್ಕಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಅನುದಾನ ಲಭ್ಯತೆಯ ಬಗ್ಗೆ ಖತರಿಪಡಿಸಿಕೊಳ್ಳಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: