Prize Money Scholarship-ಸಮಾಜ ಕಲ್ಯಾಣ ಇಲಾಖೆ ಬಿಗ್ ಅಪ್ಡೇಟ್: ವಿವಿಧ ತರಗತಿಗಳಲ್ಲಿ ಪಾಸಾದ SC/ST ವಿದ್ಯಾರ್ಥಿಗಳಿಗೆ ₹35,000 ವರೆಗೆ ಸಿಗಲಿದೆ ಪ್ರೋತ್ಸಾಹಧನ!

May 20, 2026 | Siddesh
Prize Money Scholarship-ಸಮಾಜ ಕಲ್ಯಾಣ ಇಲಾಖೆ ಬಿಗ್ ಅಪ್ಡೇಟ್: ವಿವಿಧ ತರಗತಿಗಳಲ್ಲಿ ಪಾಸಾದ SC/ST ವಿದ್ಯಾರ್ಥಿಗಳಿಗೆ ₹35,000 ವರೆಗೆ ಸಿಗಲಿದೆ ಪ್ರೋತ್ಸಾಹಧನ!
Share Now:

ಬೆಂಗಳೂರು: ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ರಾಜ್ಯದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. 2026ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೋಮಾ ಹಾಗೂ ವಿವಿಧ ಪದವಿ ತರಗತಿಗಳಲ್ಲಿ ಪ್ರಥಮ ಪ್ರಯತ್ನದಲ್ಲೇ (First Attempt) ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ಪ್ರೋತ್ಸಾಹ ಧನಕ್ಕಾಗಿ (Prize Money) ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಸರ್ಕಾರದ ಈ ಯೋಜನೆಯ ಸದುಪಯೋಗ ಪಡೆದುಕೊಂಡು ತಮ್ಮ ಮುಂದಿನ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಿಕೊಳ್ಳಬಹುದಾಗಿದೆ.

ಶಿಕ್ಷಣಕ್ಕೆ ಆರ್ಥಿಕ ಸಂಕಷ್ಟ ಎದುರಾಗಬಾರದು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಈ ಯೋಜನೆಯಡಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ (ಶೇಕಡಾ 60 ಕ್ಕಿಂತ ಹೆಚ್ಚು ಅಂಕ) ಪಾಸಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ(Prize Money Scholarship) ವಿಶೇಷ ಆದ್ಯತೆ ನೀಡಲಾಗಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿಯೂ ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಯಾದ ವಿದ್ಯಾರ್ಥಿಗಳು ಆನ್‌ಲೈನ್ ಪೋರ್ಟಲ್ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Life Insurance-₹456 ಇದ್ದರೆ ಸಾಕು ಕುಟುಂಬಕ್ಕೆ ₹4 ಲಕ್ಷದ ಭದ್ರತೆ! ಈ ವಿಮಾ ಯೋಜನೆಯ ಬಗ್ಗೆ ತಪ್ಪದೇ ತಿಳಿಯಿರಿ!

ಅರ್ಹ ಅಭ್ಯರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಆನ್‌ಲೈನ್‌ನಲ್ಲಿ(Prize Money Scholarship Online Application) ನೊಂದಣಿ ಮಾಡಿಕೊಳ್ಳಬಹುದು. ವಿವಿಧ ಶಿಕ್ಷಣದ ಅರ್ಹತೆಗೆ ಅನುಗುಣವಾಗಿ ಕನಿಷ್ಠ 15,000 ರೂಪಾಯಿಗಳಿಂದ ಗರಿಷ್ಠ 35,000 ರೂಪಾಯಿಗಳವರೆಗೆ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಪ್ರೋತ್ಸಾಹಧನ ಪಡೆಯಲು ಅವಕಾಶವಿರುತ್ತದೆ.

Class Wise Prize Money Amount-ಯಾವ ತರಗತಿಗೆ ಎಷ್ಟು ಪ್ರೋತ್ಸಾಹಧನ ಸಿಗಲಿದೆ? (ವಿದ್ಯಾರ್ಹತೆ ಮತ್ತು ಮೊತ್ತ)

ವಿದ್ಯಾರ್ಹತೆ (ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣ)ಪ್ರೋತ್ಸಾಹಧನ ಮೊತ್ತ
ಎಸ್‌ಎಸ್‌ಎಲ್‌ಸಿ (SSLC)₹ 15,000 /-
ಪಿಯುಸಿ (PUC) / 3 ವರ್ಷದ ಡಿಪ್ಲೋಮಾ₹ 20,000 /-
ಯಾವುದೇ ಪದವಿ (Undergraduate Degree)₹ 25,000 /-
ಯಾವುದೇ ಸ್ನಾತಕೋತ್ತರ ಪದವಿ (Postgraduate)₹ 30,000 /-
ಅಗ್ರಿ, ಇಂಜಿನಿಯರಿಂಗ್, ವೆಟರನರಿ, ಮೆಡಿಸಿನ್ ಇತ್ಯಾದಿ₹ 35,000 /-

ಇದನ್ನೂ ಓದಿ: Free Hostel Admission-2026: ಉಚಿತ ಹಾಸ್ಟೇಲ್ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Prize Money Scholarship Online Application-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ತಮ್ಮ ಮೊಬೈಲ್ ಮೂಲಕ ಈ ಕೆಳಗಿನ ವಿಧಾನವನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step-1: ಅರ್ಜಿ ಸಲ್ಲಿಸಲು ಅರ್ಹ ವಿದ್ಯಾರ್ಥಿಗಳು ಮೊದಲಿಗೆ ಈ "Prize Money Scholarship Online Application" ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: Property Registration-ಬಿ ಖಾತಾದಾರರಿಗೆ ಎ ಖಾತಾ ವಿತರಣೆಗೆ ರಾಜ್ಯ ಸರ್ಕಾರದಿಂದ ಅಭಿಯಾನ!

Prize Money Scholarship Application

Step-2: ಬಳಿಕ ಇಲ್ಲಿ SSLC/Postmetric ಎರಡು ಆಯ್ಕೆಯಲ್ಲಿ ಒಂದನ್ನು ಕ್ಲಿಕ್ ಮಾಡಿ Validate Aadhaar ಬಟನ್ ಮೇಲೆ ಕ್ಲಿಕ್ ಮಾಡಿ ವಿದ್ಯಾರ್ಥಿಯ ಆಧಾರ್ ನಂಬರ್ ಅನ್ನು ಹಾಕಿ OTP ಆಯ್ಕೆಯ ಮೇಲೆ ಒತ್ತಿ ಒಟಿಪಿ ಅನ್ನು ನಮೂದಿಸಿ ಮುಂದಿನ ಪೇಜ್ ಭೇಟಿ ಮಾಡಿ.

Step-3: ನಂತರ ಇಲ್ಲಿ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ವಿವರ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: Vasati Yojane-ವಸತಿ ಯೋಜನೆ-2026: ಸ್ವಂತ ಮನೆ ಕನಸು ನನಸು ಮಾಡಿಕೊಳ್ಳಲು ಸುವರ್ಣಾವಕಾಶ; ಇಂದೇ ಅರ್ಜಿ ಸಲ್ಲಿಸಿ!

Important Documents-ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು:

  • ಅಂಕಪಟ್ಟಿ (Marks Card): ಎಸ್‌ಎಸ್‌ಎಲ್‌ಸಿ / ಪಿಯುಸಿ ಅಥವಾ ಆಯಾ ತರಗತಿಯ ಉತ್ತೀರ್ಣರಾದ ಅಂಕಪಟ್ಟಿ.
  • ಜಾತಿ ಮತ್ತು ಆದಾಯ ಪ್ರಮಾಣಪತ್ರ (Caste & Income Certificate).
  • ಆಧಾರ್ ಕಾರ್ಡ್ (Aadhaar Card).
  • ಬ್ಯಾಂಕ್ ಪಾಸ್ ಬುಕ್ (Bank Passbook): ಆಧಾರ್ ಕಾರ್ಡ್‌ಗೆ ಕಡ್ಡಾಯವಾಗಿ ಜೋಡಣೆಯಾಗಿರುವ (Aadhaar Seeded) ಬ್ಯಾಂಕ್ ಖಾತೆ ಸಂಖ್ಯೆ.
  • ಮೊಬೈಲ್ ಸಂಖ್ಯೆ: ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಸಕ್ರಿಯ ಮೊಬೈಲ್ ಸಂಖ್ಯೆ.
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (Photo).

ಇದನ್ನೂ ಓದಿ: Ration Card News-ರೇಶನ್ ಕಾರ್ಡ್‌ದಾರರಿಗೆ ಸಿಹಿ ಸುದ್ದಿ: ಅಕ್ಕಿಯೊಂದಿಗೆ ಈಗ ರಾಗಿ ಮತ್ತು ಜೋಳ ವಿತರಣೆ!

ಪ್ರಮುಖ ಸೂಚನೆಗಳು:

  • ಈ ಯೋಜನೆಯು ಕೇವಲ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
  • ವಿದ್ಯಾರ್ಥಿಗಳು ಕಡ್ಡಾಯವಾಗಿ ಪ್ರಥಮ ಪ್ರಯತ್ನದಲ್ಲೇ (First Attempt) ಉತ್ತೀರ್ಣರಾಗಿರಬೇಕು.
  • ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದು ಅತ್ಯಂತ ಕಡ್ಡಾಯವಾಗಿದೆ, ಇಲ್ಲದಿದ್ದರೆ ಹಣ ಜಮೆಯಾಗುವುದಿಲ್ಲ.

ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ:

ವಿದ್ಯಾರ್ಥಿಗಳು ಯಾವುದೇ ಗೊಂದಲಗಳಿದ್ದಲ್ಲಿ ಇಲಾಖೆಯ 24X7 ಸಹಾಯವಾಣಿ ಸಂಖ್ಯೆ: 94823 00400 ಅನ್ನು ಸಂಪರ್ಕಿಸಬಹುದಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: