Pension Scheme-14 ಲಕ್ಷ ಜನರ ಮಾಸಿಕ ಪಿಂಚಣಿ ಸ್ಥಗಿತ! ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ!

June 4, 2026 | Siddesh
Pension Scheme-14 ಲಕ್ಷ ಜನರ ಮಾಸಿಕ ಪಿಂಚಣಿ ಸ್ಥಗಿತ! ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ!
Share Now:

ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಹಯೋಗದಲ್ಲಿ ಸಾರ್ವಜನಿಕರ ಆರ್ಥಿಕ ಭದ್ರತೆಗಾಗಿ ಜಾರಿಗೆ ತಂದಿರುವ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ(Pension Schemes) ಯೋಜನೆಗಳ ಅಡಿಯಲ್ಲಿ ಸದ್ಯ ಕರ್ನಾಟಕದಲ್ಲಿ ಸುಮಾರು 82.9 ಲಕ್ಷ ಅರ್ಹ ಫಲಾನುಭವಿಗಳು ಪ್ರತಿ ತಿಂಗಳು ಮಾಸಿಕ ಪಿಂಚಣಿಯನ್ನು(Pichani Yojane) ಪಡೆಯುತ್ತಿದ್ದಾರೆ. ಆದರೆ, ಇತ್ತೀಚಿನ ನಿಯಮಾವಳಿಗಳ ಪರಿಶೀಲನೆ ಹಾಗೂ ವಿಳಾಸ ದೃಡೀಕರಣ ಪ್ರಕ್ರಿಯೆಯಲ್ಲಿ ಉಂಟಾದ ಲೋಪದೋಷಗಳಿಂದಾಗಿ ರಾಜ್ಯಾದ್ಯಂತ ಬರೋಬ್ಬರಿ 14 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಮಾಸಿಕ ಪಿಂಚಣಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಇದು ಪಿಂಚಣಿಯನ್ನೇ ನಂಬಿಕೊಂಡಿದ್ದ ಅನೇಕ ಜನರಲ್ಲಿ ಆತಂಕ ಮೂಡಿಸಿದ್ದು, ಇದನ್ನು ಸರಿಪಡಿಸಿಕೊಳ್ಳಲು ಸರ್ಕಾರ ಮುಕ್ತ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.

ಪಿಂಚಣಿ ಜಮೆಯಾಗುವುದು ದಿಢೀರ್ ಸ್ಥಗಿತಗೊಳ್ಳಲು ಸರ್ಕಾರ ಮುಖ್ಯವಾಗಿ ಅರ್ಹತಾ ನಿಯಮಗಳ ಉಲ್ಲಂಘನೆ ಮತ್ತು ದಾಖಲೆಗಳ ಕೊರತೆಯನ್ನು ಕಾರಣವಾಗಿ ನೀಡಿದೆ. ಅರವತ್ತು ವರ್ಷ ತುಂಬುವ ಮುನ್ನವೇ ಸುಳ್ಳು ಮಾಹಿತಿ ನೀಡಿ ಪಿಂಚಣಿ(Pichani Status) ಪಡೆಯುತ್ತಿರುವುದು, ನಿಖರವಾದ ವಿಳಾಸ ನೀಡದೆ ಇರುವುದು ಮತ್ತು ವಿಳಾಸ ದೃಡೀಕರಣ ಮಾಡಿಸದೇ ಇರುವುದು ತನಿಖೆಯ ವೇಳೆ ಪತ್ತೆಯಾಗಿದೆ. ಇದರೊಂದಿಗೆ, ಸರ್ಕಾರಿ ನೌಕರರ ಕುಟುಂಬದವರು, ಆದಾಯ ತೆರಿಗೆ ಪಾವತಿದಾರರು ಹಾಗೂ ಜಿಎಸ್.ಟಿ (GST) ವ್ಯಾಪ್ತಿಗೆ ಬರುವ ಅನರ್ಹ ವ್ಯಕ್ತಿಗಳು ಈ ಯೋಜನೆಗಳ ಲಾಭ ಪಡೆಯುತ್ತಿರುವುದನ್ನು ಗುರುತಿಸಿ ಅವರ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮಾಡುವುದನ್ನು ಕಂದಾಯ ಇಲಾಖೆ ತಡೆದಿದೆ.

ಇದನ್ನೂ ಓದಿ: Beauty Parlour Training-ಮಹಿಳೆಯರಿಗೆ 35 ದಿನದ ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

ಒಂದು ವೇಳೆ ನೀವು ಪಿಂಚಣಿ(Government pension scheme) ಪಡೆಯಲು ಅರ್ಹರಾಗಿದ್ದರೂ ಸಹ ತಾಂತ್ರಿಕ ಕಾರಣಗಳಿಂದ ನಿಮ್ಮ ಹಣ ಸ್ಥಗಿತಗೊಂಡಿದ್ದರೆ, ಗಾಬರಿಯಾಗುವ ಅಗತ್ಯವಿಲ್ಲ. ಫಲಾನುಭವಿಗಳು ತಕ್ಷಣವೇ ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ನಿವಾಸಿ ದೃಡೀಕರಣ ಪತ್ರ (ಶಾಲಾ ದಾಖಲಾತಿ ಅಥವಾ ಆದಾಯ ಪ್ರಮಾಣ ಪತ್ರ) ಮತ್ತು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಸಿದ್ಧಪಡಿಸಿಕೊಳ್ಳಬೇಕು. ಬಳಿಕ ನಿಮ್ಮ ಹಳ್ಳಿಯ ಗ್ರಾಮ ಆಡಳಿತ ಅಧಿಕಾರಿಗಳನ್ನು (Village Administrative Officer) ನೇರವಾಗಿ ಭೇಟಿ ಮಾಡಿ, ಈ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ನಿಮ್ಮ ಸ್ಥಗಿತಗೊಂಡಿರುವ ಪಿಂಚಣಿಯನ್ನು ಅತ್ಯಂತ ಸುಲಭವಾಗಿ ಮರುಪಡೆಯಬಹುದು.

ಸ್ಥಗಿತವಾಗಲು ಪ್ರಮುಖ ಕಾರಣಗಳು:

ವಿವಿಧ ಪಿಂಚಣಿ ಯೋಜನೆಯಡಿ ರಾಜ್ಯದಲ್ಲಿ 14 ಲಕ್ಷ ಜನರ ಪಿಂಚಣಿ ನೇರ ನಗದು ವರ್ಗವಾಣೆ ಮೂಲಕ ಜಮಾ ಅಗುವುದು ಸ್ಥಗಿತವಾಗಲು ಪ್ರಮುಖ ಕಾರಣಗಳ ಪಟ್ಟಿಯನ್ನು ಕೆಳಗೆ ತಿಳಿಸಲಾಗಿದೆ.

  • 60 ವರ್ಷ ಪೂರ್ಣಗೊಳದೇ ಇರವಾಗಲೇ ಅರ್ಜಿ ಸಲ್ಲಿಸಿ ಪಿಂಚಣಿ ಪಡೆಯುತ್ತಿರುವವರ ಫಲಾನುಭವಿಗಳನ್ನು ಗುರುತಿಸಿ ಸ್ಥಗಿತ ಮಾಡಲಾಗಿದೆ.
  • ಸರಿಯಾದ ವಿಳಾಸವನ್ನು ನೀಡದೇ ಅಸಮರ್ಪಕ ವಿಳಾಸ ನಮೂದಿಸಿದವರನ್ನು ಪಿಂಚಣಿ ಗುರುತಿಸಿ ಸ್ಥಗಿತ ಮಾಡಲಾಗಿದೆ.
  • ವಿಳಾಸ ದೃಡೀಕರಿಸದೇ ಇರುವಂತಹ ಅರ್ಜಿಯನ್ನು ಸ್ಥಗಿತ ಮಾಡಲಾಗಿದೆ.
  • ಸರಕಾರಿ ನೌಕರ ಕುಟುಂಬದವರು, ಆದಾಯ ತೆರಿಗೆ ಮತ್ತು ಜಿಎಸ್.ಟಿ ಪಾವತಿದಾರರ ಫಲಾನುಭವಿಗಳಿಗೆ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: Aadhaar History-ನಿಮ್ಮ ಗಮನಕ್ಕೆ ಬಾರದೆ ನಿಮ್ಮ ಆಧಾರ್ ಎಲ್ಲೆಲ್ಲಿ ಬಳಕೆಯಾಗಿದೆ? 2 ನಿಮಿಷದಲ್ಲಿ ಹೀಗೆ ಪತ್ತೆ ಹಚ್ಚಿ!

How To Apply-ಅರ್ಜಿ ಸರಿಪಡಿಸಿಕೊಳ್ಳುವುದು ಹೇಗೆ?

ಕೇಲವು ಜಿಲ್ಲೆಗಳಲ್ಲಿ ಮಾರ್ಗಸೂಚಿ ಪ್ರಕಾರ ಅರ್ಹರಿದ್ದರು ಸಹ ಅನೇಕ ಜನರಿಗೆ ಪ್ರತಿ ತಿಂಗಳು ಬರುತ್ತಿದ್ದ ಪಿಂಚಣಿ ಹಣ ಸ್ಥಗಿತವಾಗಿದ್ದು ಇಂತಹ ಫಲಾನುಭವಿಗಳು ಕೂಡಲೇ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹಳ್ಳಿಯ ಗ್ರಾಮ ಆಡಳಿತ ಅಧಿಕಾರಿ ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.

Documents For Application-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಸ್ಥಿಗಿತವಾಗಿರುವ ಪಿಂಚಣಿಯನ್ನು ಮತ್ತೆ ಬರುವಂತೆ ಮಾಡಲು ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕು.

  • ಅರ್ಜಿದಾರರ ಆಧಾರ್ ಕಾರ್ಡ
  • ನಿವಾಸಿ ದೃಡೀಕರಣ(ಶಾಲಾ ದಾಖಲಾತಿ/ಆದಾಯ ಪ್ರಮಾಣ ಪತ್ರ)
  • ಮೊಬೈಲ್ ನಂಬರ್

ಇದನ್ನೂ ಓದಿ: Veterinary Diploma-ಪಶುಸಂಗೋಪನೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ! ತಿಂಗಳಿಗೆ ರೂ 1,000 ಶಿಷ್ಯವೇತನ!

Pension Schemes In Karnataka-ರಾಜ್ಯದ ವಿವಿಧ ಯೋಜನೆಗಳು ಹಾಗೂ ಮಾಸಿಕ ಪಿಂಚಣಿ ವಿವರ

ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಅವುಗಳ ಅಡಿಯಲ್ಲಿ ಸಿಗುವ ಮಾಸಿಕ ಪಿಂಚಣಿಯ ಮೊತ್ತದ ಪಟ್ಟಿ ಈ ಕೆಳಗಿನಂತಿದೆ:

ಯೋಜನೆಯ ಹೆಸರುಮಾಸಿಕ ಪಿಂಚಣಿ ಮೊತ್ತ (ರೂಪಾಯಿಗಳಲ್ಲಿ)
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ / ಸಂಧ್ಯಾ ಸುರಕ್ಷಾ₹800/- ರಿಂದ ₹1,200/-
ವಿಧವಾ ಪಿಂಚಣಿ ಯೋಜನೆ₹800/-
ಮೈತ್ರಿ ಯೋಜನೆ₹800/-
ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರ ಪಿಂಚಣಿ₹800/-
ಆಸಿಡ್ ದಾಳಿಗೆ ಒಳಗಾದ ಮಹಿಳೆಯರ ಪಿಂಚಣಿ₹10,000/-
ಎಂಡೋಸಲ್ಫಾನ್ ಸಂತ್ರಸ್ತರ ಮಾಸಿಕ ಪಿಂಚಣಿ₹2,000/- ರಿಂದ ₹4,000/- ವರೆಗೆ
ಅಂಗವಿಕಲರ ಪಿಂಚಣಿ₹1,400/- ರಿಂದ ₹2,000/- ವರೆಗೆ
ಮನಸ್ವಿನಿ ಯೋಜನೆ₹800/-

ಇದನ್ನೂ ಓದಿ: Pump Set Repair Training-30 ದಿನದ ಉಚಿತ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಮತ್ತು ಪಂಪಸೆಟ್ ರಿಪೇರಿ ತರಬೇತಿಗೆ ಅರ್ಜಿ!

Pension Amount Status Check-ನಿಮ್ಮ ಪಿಂಚಣಿ ಹಣ ಜಮೆಯಾಗಿದೆಯೇ? ಮೊಬೈಲ್‌ನಲ್ಲೇ ಚೆಕ್ ಮಾಡಿ!

ನಿಮ್ಮ ಖಾತೆಗೆ ಪ್ರತಿ ತಿಂಗಳು ಪಿಂಚಣಿ ಹಣ ಜಮೆಯಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು DBT Karnataka ಮೊಬೈಲ್ ಅಪ್ಲಿಕೇಶನ್ ಮೂಲಕ ಕೇವಲ ಎರಡು ನಿಮಿಷಗಳಲ್ಲಿ ಪರಿಶೀಲಿಸಬಹುದು.

ಹಂತ-1: ಮೊದಲಿಗೆ Pension Status Check ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್‌ಗೆ (Google Play Store) ಭೇಟಿ ನೀಡಿ "DBT Karnataka" ಅಧಿಕೃತ ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.

ಹಂತ-2: ಆಪ್ ಓಪನ್ ಮಾಡಿದ ನಂತರ, ಫಲಾನುಭವಿಯ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ಆಗ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ 6 ಅಂಕಿಯ OTP ಬರುತ್ತದೆ, ಅದನ್ನು ಹಾಕಿ ದೃಢೀಕರಿಸಿ.

ಹಂತ-3: ಮುಂದೆ ಲಾಗಿನ್ ಆಗಲು 4 ಅಂಕಿಯ ರಹಸ್ಯ ಪಾಸ್‌ವರ್ಡ್ (MPIN) ರಚಿಸಿಕೊಳ್ಳಿ. ಪ್ರೊಫೈಲ್‌ನಲ್ಲಿ ನಿಮ್ಮ ಹೆಸರು, ಫೋಟೋ ವಿವರಗಳನ್ನು ಪರಿಶೀಲಿಸಿ ಮೊಬೈಲ್ ಸಂಖ್ಯೆ ನಮೂದಿಸಿ 'ಸರಿ' ಕ್ಲಿಕ್ ಮಾಡಿ.

ಹಂತ-4: ಈಗ ಲಾಗಿನ್ ಪೇಜ್‌ನಲ್ಲಿ ನಿಮ್ಮ ಪಾಸ್‌ವರ್ಡ್ ಹಾಕಿ ಆಪ್ ಒಳಗೆ ಹೋಗಿ. ಮುಖಪುಟದಲ್ಲಿ ಕಾಣುವ "ಪಾವತಿ ಸ್ಥಿತಿ / Payment Status" ಬಟನ್ ಒತ್ತಿ, ನಿಮ್ಮ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿದರೆ, ಯುಟಿಆರ್ (UTR) ನಂಬರ್ ಸೇರಿದಂತೆ ನಿಮ್ಮ ಖಾತೆಗೆ ಜಮೆಯಾದ ಸಂಪೂರ್ಣ ಇತಿಹಾಸ ಕಾಣಿಸುತ್ತದೆ.

Pension Scheme Beneficiary List-ನಿಮ್ಮ ಗ್ರಾಮದ ಪಿಂಚಣಿದಾರರ ಪಟ್ಟಿ ವೀಕ್ಷಿಸುವ ವಿಧಾನ

ನಿಮ್ಮ ಗ್ರಾಮ ಅಥವಾ ವಾರ್ಡ್‌ನಲ್ಲಿ ಯಾರೆಲ್ಲಾ ಪಿಂಚಣಿ ಪಡೆಯುತ್ತಿದ್ದಾರೆ ಎಂಬ ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನು ಕಂದಾಯ ಇಲಾಖೆಯ ವೆಬ್‌ಸೈಟ್ ಮೂಲಕ ನೋಡಬಹುದು:

Step-1: Pension Beneficiary List ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯಡಿ ಕಾರ್ಯನಿರ್ವಹಿಸುವ ಪಿಂಚಣಿ ನಿರ್ದೇಶನಾಲಯದ ಅಧಿಕೃತ ಜಾಲತಾಣಕ್ಕೆ (Pension Beneficiary List Web) ಭೇಟಿ ನೀಡಿ.

Step-2: ಮುಖಪುಟದಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಹಾಗೂ ಗ್ರಾಮ ಅಥವಾ ನಗರದ ಹೆಸರನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಿ.

Step-3: ಕೊನೆಯಲ್ಲಿ ಸ್ಕ್ರೀನ್ ಮೇಲೆ ಕಾಣಿಸುವ ಕ್ಯಾಪ್ಚಾ (Captcha) ಕೋಡ್ ಅನ್ನು ನಿಖರವಾಗಿ ನಮೂದಿಸಿ 'Search' ಬಟನ್ ಮೇಲೆ ಕ್ಲಿಕ್ ಮಾಡಿ.

Step-4: ಈಗ ನಿಮ್ಮ ಕಣ್ಣಮುಂದೆ ನಿಮ್ಮ ಗ್ರಾಮದ ಒಟ್ಟು ಅರ್ಹ ಪಿಂಚಣಿದಾರರ ಸಂಪೂರ್ಣ ವಿವರವಾದ ಪಟ್ಟಿ ಲಭ್ಯವಾಗುತ್ತದೆ.

    WhatsApp Group Join Now
    Telegram Group Join Now
    Siddesh

    Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

    Visit Website
    Share Now: