Pump Set Repair Training-30 ದಿನದ ಉಚಿತ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಮತ್ತು ಪಂಪಸೆಟ್ ರಿಪೇರಿ ತರಬೇತಿಗೆ ಅರ್ಜಿ!

May 31, 2026 | Siddesh
Pump Set Repair Training-30 ದಿನದ ಉಚಿತ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಮತ್ತು ಪಂಪಸೆಟ್ ರಿಪೇರಿ ತರಬೇತಿಗೆ ಅರ್ಜಿ!
Share Now:

ಹಾವೇರಿ: ಎಸ್‌ಎಸ್‌ಎಲ್‌ಸಿ, ಪಿಯುಸಿ ಅಥವಾ ಪದವಿ ಮುಗಿಸಿ ಮುಂದೇನು ಮಾಡಬೇಕೆಂದು ಚಿಂತಿಸುತ್ತಿರುವ ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (RSETI) ಹಾವೇರಿ ಇವರಿಂದ ಒಂದು ಅತ್ಯುತ್ತಮ ಸುವರ್ಣಾವಕಾಶವನ್ನು(Free Motor Rewinding Training) ಕಲ್ಪಿಸಿಕೊಡಲಾಗಿದೆ. ಗ್ರಾಮೀಣ ಭಾಗದ ಯುವಕರು ಸ್ವಾವಲಂಬಿ ಜೀವನ ನಡೆಸಲು ಮತ್ತು ಸ್ವಯಂ ಉದ್ಯೋಗವನ್ನು ಪ್ರಾರಂಭಿಸಲು ಅನುಕೂಲವಾಗುವಂತೆ 'ಉಚಿತ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್‌ಸೆಟ್ ರಿಪೇರಿ' ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

ಈ ತರಬೇತಿ ಕಾರ್ಯಕ್ರಮದ ವಿಶೇಷತೆಯೆಂದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಪೂರ್ಣವಾಗಿ ಉಚಿತವಾಗಿ(Free Pump Set Repair Course) ಊಟ ಮತ್ತು ವಸತಿ ಸೌಕರ್ಯದೊಂದಿಗೆ ತರಬೇತಿಯನ್ನು ನೀಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಪಂಪ್‌ಸೆಟ್‌ಗಳು ಹಾಗೂ ಗೃಹ ಬಳಕೆಯ ಎಲೆಕ್ಟ್ರಿಕಲ್ ಮೋಟಾರ್‌ಗಳ ರಿಪೇರಿಗೆ ಭಾರಿ ಬೇಡಿಕೆ ಇರುವುದರಿಂದ, ಈ ತರಬೇತಿಯು ಯುವಕರಿಗೆ ಸ್ವಂತ ಉದ್ಯೋಗ ಉದ್ಯಮವನ್ನು ಪ್ರಾರಂಭಿಸಲು ಹೊಸ ದಾರಿಯನ್ನು ತೋರಿಸಲಿದೆ. ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ಜ್ಞಾನ ಎರಡನ್ನೂ ಒಳಗೊಂಡಿರುವ ಈ ತರಬೇತಿಯ ಸದುಪಯೋಗವನ್ನು ಅರ್ಹ ಅಭ್ಯರ್ಥಿಗಳು ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.

ಇದನ್ನೂ ಓದಿ: Tissue Culture Banana-ತೋಟಗಾರಿಕೆ ಇಲಾಖೆಯಿಂದ ರಿಯಾಯಿತಿ ದರದಲ್ಲಿ 'ಅಂಗಾಂಶ ಕೃಷಿ' ಬಾಳೆ ಸಸಿ ವಿತರಣೆ!

ಯುವ ಜನತೆ ಬೇರೆಯವರ ಬಳಿ ಕೆಲಸಕ್ಕೆ ಸೇರಿ ಕಡಿಮೆ ಸಂಬಳಕ್ಕೆ ದುಡಿಯುವುದಕ್ಕಿಂತ, ಈ ತರಬೇತಿಯ ಮೂಲಕ ಸ್ವಾವಲಂಬಿ ಕೌಶಲ್ಯಗಳನ್ನು ಕಲಿತು ತಮ್ಮದೇ ಆದ ಸ್ವಂತ ಉದ್ಯಮವನ್ನು ಆರಂಭಿಸಬಹುದು. ಈ ಮೂಲಕ ಸ್ವಯಂ ಉದ್ಯೋಗಿಯಾಗಿ ಆರ್ಥಿಕವಾಗಿ ಸಬಲರಾಗಲು ಇದೊಂದು ಅಪೂರ್ವ ಅವಕಾಶವಾಗಿದ್ದು, ಹಾವೇರಿ ಜಿಲ್ಲೆಯ ಮತ್ತು ಇತರೆ ಜಿಲ್ಲೆಯ ಆಸಕ್ತ ಯುವಕರು ಇದರ ಲಾಭವನ್ನು ಪಡೆದುಕೊಳ್ಳಬಹುದು.

Who can participate in the training-ಯಾರೆಲ್ಲ ತರಬೇತಿಯಲ್ಲಿ ಭಾಗವಹಿಸಬಹುದು?

  • ಅಭ್ಯರ್ಥಿಗಳ ವಯಸ್ಸು ಕಡ್ಡಾಯವಾಗಿ 18 ರಿಂದ 50 ವರ್ಷದೊಳಗಿರಬೇಕು.
  • ಕನ್ನಡ ಓದಲು ಮತ್ತು ಬರೆಯಲು ಕಡ್ಡಾಯವಾಗಿ ಬರಬೇಕು.
  • ತರಬೇತಿಯ ನಂತರ ಸ್ವ-ಉದ್ಯೋಗ (ಸ್ವಂತ ಉದ್ಯಮ) ಪ್ರಾರಂಭಿಸಲು ಸಂಪೂರ್ಣ ಸಿದ್ಧರಿರಬೇಕು.
  • SSLC/PUC/DEGREE ನಂತರ ಮುಂದೇನು ಎನ್ನುವ ನಿರುದ್ಯೋಗಿಗಳಿಗೆ ಆದ್ಯತೆ.

ಇದನ್ನೂ ಓದಿ: Student Bus Pass-ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

Training Topics-ತರಬೇತಿಯಲ್ಲಿ ಯಾವೆಲ್ಲ ವಿಷಯದ ಬಗ್ಗೆ ಕಲಿಸಿಕೊಡಲಾಗುತ್ತದೆ?

30 ದಿನಗಳ ಈ ತರಬೇತಿಯಲ್ಲಿ ಅಭ್ಯರ್ಥಿಗಳಿಗೆ ಎಲೆಕ್ಟ್ರಿಕಲ್ ಮೋಟಾರ್‌ಗಳ ಸಿಂಗಲ್ ಫೇಸ್ ಹಾಗೂ 3-ಫೇಸ್ ರಿವೈಂಡಿಂಗ್ ಮಾಡುವುದು, ವಿವಿಧ ಮಾದರಿಯ ಸಬ್‌ಮರ್ಸಿಬಲ್ ಹಾಗೂ ಓಪನ್ ವೆಲ್ ಪಂಪ್‌ಸೆಟ್‌ಗಳ ರಿಪೇರಿ, ಗೃಹ ಬಳಕೆಯ ಫ್ಯಾನ್ ಹಾಗೂ ಮಿಕ್ಸಿಗಳ ದುರಸ್ತಿ, ಸ್ಟಾರ್ಟರ್ ಮತ್ತು ಕಂಟ್ರೋಲ್ ಪ್ಯಾನಲ್ ಬೋರ್ಡ್‌ಗಳ ವೈರಿಂಗ್ ಹಾಗೂ ಫಾಲ್ಟ್ ಪತ್ತೆ ಹಚ್ಚುವಿಕೆ ಸೇರಿದಂತೆ ಸ್ವಯಂ ಉದ್ಯೋಗ ನಿರ್ವಹಣೆಗೆ ಬೇಕಾಗುವ ಉದ್ಯಮಶೀಲತಾ ಕೌಶಲ್ಯಗಳ (Entrepreneurship Skills) ಬಗ್ಗೆ ಸಂಪೂರ್ಣ ಪ್ರಾಯೋಗಿಕ ಮಾಹಿತಿ ನೀಡಲಾಗುತ್ತದೆ.

How To participate in the training-ತರಬೇತಿಯಲ್ಲಿ ಭಾಗವಹಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂಸ್ಥೆಗೆ ನೇರವಾಗಿ ಭೇಟಿ ನೀಡಿ ಅಥವಾ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ತಮ್ಮ ಹೆಸರನ್ನು ಉಚಿತವಾಗಿ ನೊಂದಾಯಿಸಿಕೊಳ್ಳಬಹುದು. ಸೀಟುಗಳು ಸೀಮಿತವಾಗಿರುವುದರಿಂದ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.

ಇದನ್ನೂ ಓದಿ: Free Fast Food Training-ಸ್ವಂತ ಫಾಸ್ಟ್ ಫುಡ್ ಬಿಸಿನೆಸ್ ಮಾಡುವ ಕನಸೇ? ಇಲ್ಲಿದೆ ಉಚಿತ ತರಬೇತಿಯ ಸುವರ್ಣಾವಕಾಶ!

Pump Set Repair Training Date-ತರಬೇತಿ ಪ್ರಾರಂಭ ದಿನಾಂಕ ಮತ್ತು ಅವಧಿ:

ತರಬೇತಿ ಅವಧಿ: ಒಟ್ಟು 30 ದಿನಗಳು (ಊಟ ಮತ್ತು ವಸತಿಯೊಂದಿಗೆ ಉಚಿತ).

ಪ್ರಾರಂಭವಾಗುವ ದಿನಾಂಕ: 08.06.2026 ರಿಂದ ತರಬೇತಿ ತರಗತಿಗಳು ಅಧಿಕೃತವಾಗಿ ಆರಂಭಗೊಳ್ಳಲಿವೆ.

Documents-ತರಬೇತಿಯಲ್ಲಿ ಭಾಗವಹಿಸಲು ಅವಶ್ಯಕ ದಾಖಲೆಗಳು:

  • ಆಧಾರ್ ಕಾರ್ಡ್ ನಕಲು
  • ರೇಷನ್ ಕಾರ್ಡ್ ನಕಲು
  • ಶೈಕ್ಷಣಿಕ ಅಂಕಪಟ್ಟಿಗಳು (Marks Card)
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು

ಇದನ್ನೂ ಓದಿ: Free Photography Training-ಕೆನರಾ ಬ್ಯಾಂಕ್ ಆರ್‌ಸೆಟಿ ಸಂಸ್ಥೆಯಿಂದ ಉಚಿತ ಫೋಟೋಗ್ರಫಿ ತರಬೇತಿ! ಜೂನ್ 3 ರೊಳಗೆ ಅರ್ಜಿ ಸಲ್ಲಿಸಿ!

Pump Set Repair Training Benefits-ತರಬೇತಿ ಪಡೆಯುವುದರಿಂದ ಯಾವೆಲ್ಲ ಪ್ರಯೋಜನಗಳಿವೆ?

ಈ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದರಿಂದ ಸ್ವಂತ ಉದ್ಯೋಗ ಪ್ರಾರಂಭಿಸಲು ಬ್ಯಾಂಕುಗಳಿಂದ ರಿಯಾಯಿತಿ ದರದ ಮುದ್ರಾ ಸಾಲ ಅಥವಾ ಇತರೆ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ತಾವೇ ಸ್ವಂತ ಶಾಪ್ ಇಟ್ಟುಕೊಂಡು ತಿಂಗಳಿಗೆ ಉತ್ತಮ ಆದಾಯ ಗಳಿಸಿ ಸ್ವಾವಲಂಬಿಗಳಾಗಬಹುದು.

"ಗ್ರಾಮೀಣ ಭಾಗದ ಯುವ ಜನತೆಯಲ್ಲಿ ಕೌಶಲ್ಯಾಭಿವೃದ್ಧಿ ಮೂಡಿಸಿ, ಅವರಲ್ಲಿ ಸ್ವಾವಲಂಬನೆ ಮತ್ತು ಉದ್ಯಮಶೀಲತೆಯನ್ನು ಬೆಳೆಸುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಹಾವೇರಿ ಜಿಲ್ಲೆಯ ಮತ್ತು ಇತರೆ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳದೇ, ನಿಗದಿತ ದಿನಾಂಕದೊಳಗಾಗಿ ಉಚಿತ ವಸತಿ ಸಹಿತ ತರಬೇತಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಕೇಂದ್ರದ ನಿರ್ದೇಶಕರು, ಹಾವೇರಿ"

ಇದನ್ನೂ ಓದಿ: Guest Teachers Recruitment-ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ ಪ್ರಕಟ!

📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8660219375
ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (RSETI), ಹಾವೇರಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: